ಟಾಲಿವುಡ್ ಅಂಗಳದಲ್ಲಿ ಸರ ಪಟಾಕಿ ಹಚ್ಚಿರುವ ಕಿಸ್ ಕುವರಿ ಶ್ರೀಲೀಲಾ ಕ್ರೇಜ್ ಬಗ್ಗೆ ಬಿಡಿಸಿ ಹೇಳ್ಬೇಕಿಲ್ಲ. ಬಾಲಯ್ಯನ ಜೊತೆ ಭಗವಂತ್ ಕೇಸರಿ ಸಿನಿಮಾದಲ್ಲಿ ಧಮಾಕ ಎಬ್ಬಿಸಿರುವ ಲೀಲಾ , ಮಹೇಶ್ ಬಾಬು, ಅಲ್ಲು ಅರ್ಜುನ್ ನಂತ ಸ್ಟಾರ್ ಹೀರೋಗಳ ಚಿತ್ರದಲ್ಲಿಯೂ ನಟಿಸ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡ್ತಿರುವ ಈ ಸುಂದ್ರಿ ಪೇಮೆಂಟ್ ವಿಷ್ಯವಾಗಿ ಮತ್ತೆ ಚಾಲ್ತಿಗೆ ಬಂದಿದ್ದಾರೆ. ಶ್ರೀಲೀಲಾಗೆ ಡಿಮ್ಯಾಂಡ್ ಹೆಚ್ಚಿದೆ. ಡಿಮ್ಯಾಂಡ್ ಇದ್ಮೇಲೆ ಸಂಭಾವನೆ ಹೆಚ್ಚಾಗಾದೇ ಇರುತ್ತಾ? ಆಫ್ ಕೋರ್ಸ್..ಭರಾಟೆ ಬ್ಯೂಟಿ ಪೇಮೆಂಟ್ ಕೇಳಿ ಟಾಲಿವುಡ್ ನಿರ್ಮಾಪಕರು ಬಾಯ್ ಮೇಲೆ ಬೆರಳಿಡ್ತಿದ್ದಾರೆ. ಒಂದು ಗಂಟೆ ನಟನೆಗೆ 4 ಲಕ್ಷ ಪಡೆಯುವ ಶ್ರೀಲೀಲಾ ಭಗವಂತ್ ಕೇಸರಿ ಸಿನಿಮಾಗಾಗಿ ಬರೋಬ್ಬರಿ 1.5 ಕೋಟಿ ಪಡೆದಿದ್ದರು ಎನ್ನಲಾಗ್ತಿದೆ. ಈಗ ಹೊಸ ಸಿನಿಮಾಗಳಿಗೆ 3 ಕೋಟಿ ಕೊಟ್ರೆ ನಾನು ಕುಣಿಯೋದು, ನಟಿಸೋದು ಎನ್ನುತ್ತಿದ್ದಾಳಂತೆ ಕಿಸ್ ಚೆಲುವೆ.