ಶನಿವಾರ, ಜುಲೈ 18, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಡಿವೋರ್ಸ್ ಕೊಟ್ಟಿದ್ರೂ ಹೆಂಡ್ತಿನಾ ಎಷ್ಟು ಕೇರ್ ಮಾಡ್ತಾರೆ ನೋಡ್ರಿ ಆಮೀರ್ ಖಾನ್ !

Vishalakshi Pby Vishalakshi P
14/09/2023
in Majja Special
Reading Time: 1 min read
ಡಿವೋರ್ಸ್ ಕೊಟ್ಟಿದ್ರೂ ಹೆಂಡ್ತಿನಾ ಎಷ್ಟು ಕೇರ್ ಮಾಡ್ತಾರೆ ನೋಡ್ರಿ ಆಮೀರ್ ಖಾನ್ !

ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮಾಜಿ ಪತ್ನಿ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ವಿಚ್ಚೇದನ ನೀಡಿದ್ಮೇಲೆ ಸಾರ್ವಜನಿಕವಾಗಿ ಮೊದಲ ಪತ್ನಿ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ನಿನ್ನೆ ಮೊದಲ ಪತ್ನಿ ರೀನಾ ದತ್ತಾ ಜೊತೆ ಮುಂಬೈ ಅಂಗಳದಲ್ಲಿ ಮಿಂಚಿದ್ದಾರೆ. ಖಾಸಗಿ ಆಭರಣ ಮಳಿಗೆಯೊಂದರ ಮುಂಭಾಗ ಒಟ್ಟಿಗೆ ನಿಂತುಕೊಂಡು ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ. ನಂತರ ಅಲ್ಲಿಂದ ಹೊರಡುವಾಗ ಪತ್ನಿ ರೀನಾರನ್ನ ಆಮೀರ್ ಕೇರ್ ಮಾಡಿದ ರೀತಿ ಇದೆಯಲ್ಲ ಅದು ಎಲ್ಲರನ್ನೂ ಬೆರಗುಗೊಳಿಸಿದೆ. ಡಿವೋರ್ಸ್ ನೀಡಿದ್ಮೇಲೂ ಖಾನ್ ಕಾಳಜಿ ಮಾಡೋದನ್ನ ನೋಡಿದರೆ ಕೆಲವರಿಗೆ ಖುಷಿ ಇನ್ನೂ ಕೆಲವರಿಗೆ ಸಂಕಟ. ಹೀಗೆ ಸಂಕಟ ಪಟ್ಟುಕೊಂಡವರು ಹಾಗೂ ಕೆಲ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಹಾಕ್ತಿದ್ದಾರೆ. ಈ ಸಂಪತ್ತಿಗೆ ಡಿವೋರ್ಸ್ ಯಾಕ್ ತಗೋತ್ತೀರಾ ಅಂತ ಪ್ರಶ್ನೆ ಮಾಡುವ ನೆಟಿಜನ್ಸ್ ಗೆ `ಕೆಲವೊಮ್ಮೆ ಸ್ನೇಹ ಸಂಬಂಧಗಳನ್ನೂ ಮೀರಿಸುತ್ತೆ’ ಅಂತ ಆಮೀರ್ ಹಾಗೂ ರೀನಾರನ್ನು ಪ್ರೀತಿಸುವ ಅಭಿಮಾನಿಗಳು ರಿಪ್ಲೈ ಕೊಡ್ತಿದ್ದಾರೆ.

ಅಷ್ಟಕ್ಕೂ, ಆಮೀರ್ ಹಾಗೂ ರೀನಾ ನಡುವೆ ಪ್ರೀತಿ ಜೀವಂತವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇವರಿಬ್ಬರ ನಡುವಿನ ಸ್ನೇಹಕ್ಕಂತೂ ಸಾವಿಲ್ಲ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಅಂದ್ಹಾಗೇ, ಪರಸ್ಪರ ಪ್ರೀತಿಸಿ 1986 ರಲ್ಲಿ ಮದುವೆಯಾಗಿದ್ದ ಈ ಕ್ಯೂಟ್ ಕಪಲ್ಸ್, ಭರ್ತಿ 16 ವರ್ಷಗಳ ಕಾಲ ಸುಖ ಸಂಸಾರ ಸಾಗಿಸಿದ್ದರು. ತಮ್ಮ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಜುನೈದ್ ಹಾಗೂ ಇರಾ ಖಾನ್‍ಗೆ ಜನ್ಮ ನೀಡಿದ್ದರು. ಕಾಲಕ್ರಮೇಣ ಈ ಜೋಡಿಯ ಮಧ್ಯೆ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ತಲೆದೂರಿದ್ರಿಂದ ತಮ್ಮ 16 ವರ್ಷಗಳ ವೈವಾಹಿಕ ಬದುಕಿಗೆ 2002ರಲ್ಲಿ ಇತಿಶ್ರೀ ಹಾಡಬೇಕಾಗಿ ಬಂತು. ತದ ನಂತರ 2005ರಲ್ಲಿ ಆಮೀರ್ ಕಿರಣ್ ರಾವ್ ಅವ್ರನ್ನ ಕೈಹಿಡಿದರು. ಸರೋಗೆಸಿ ಮೂಲಕ ಪುತ್ರ ಆಜಾದ್‍ರನ್ನು ಪಡೆದುಕೊಂಡರು. 15 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ ಈ ಜೋಡಿ 2021ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಘೋಷಿಸಿಕೊಂಡರು.

ಅಂದ್ಗಾಗೇ, ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡಲ್ಲೂ ಸಾಕಷ್ಟು ಏಳುಬೀಳುಗಳನ್ನ ಕಂಡಿರುವ ಘಜಿನಿ, ಗೊತ್ತೋ-ಗೊತ್ತಿಲ್ಲದೆಯೋ ಹಲವು ಭಾರಿ ಎಡವಿದ್ದಾರೆ. ಆ ಎಡವಿದ್ದರ ಪರಿಣಾಮ ಎಷ್ಟು ಘೋರ ಎಂಬುದನ್ನ ಸೀಕ್ರೇಟ್ ಸೂಪರ್ ಸ್ಟಾರ್ ಬಹಳ ಚೆನ್ನಾಗಿಯೇ ಅರಿತುಕೊಂಡಿದ್ದಾರೆಂಬುದಕ್ಕೆ, ಮೊನ್ನೆ ಮಾಜಿ ಪತ್ನಿ ರೀನಾ ದತ್ತಾ ಜೊತೆಗೆ ಕಾಣಿಸಿಕೊಂಡಾಗ,  ಆಕೆ ಎಲ್ಲಿ ಎಡವಿಬೀಳ್ತಾಳೋ ಅಂತ ಕಾರು ಹತ್ತಿಸುವವರೆಗೂ ಕಾಳಜಿ ಮಾಡಿದ್ದೇ ಸಾಕ್ಷಿ ಎನ್ನಬಹುದೇನೋ. ಒಟ್ನಲ್ಲಿ ಬಹಳ ವರ್ಷಗಳಾದ್ಮೇಲೆ ಪಬ್ಲಿಕ್‍ನಲ್ಲಿ ಮಾಜಿ ಪತ್ನಿ ಜೊತೆಗೆ ಕಾಣಿಸಿಕೊಂಡು
ಕೊನೆಗೆ ಒಂದೇ ಕಾರಿನಲ್ಲಿ ಕುಳಿತು ಖುಷಿಖುಷಿಯಾಗಿ ಮನೆಕಡೆ ಹೊರಟ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

https://fb.watch/n2wcrAalG_/

ಈ ವಿಡಿಯೋ ನೋಡಿದ್ಮೇಲೆ ಕೆಲವರನ್ನ ಕಾಡ್ತಿರುವ ಪ್ರಶ್ನೆ ಏನಂದರೆ? ಡಿವೋರ್ಸ್ ತಗೊಂಡ್ಮೇಲೆ ದಂಪತಿಗಳು ಒಬ್ಬರ ಮುಖ ಒಬ್ಬರು ನೋಡುವುದಕ್ಕೂ ಇಷ್ಟಪಡುವಿದಿಲ್ಲ. ಅಂತ್ರದಲ್ಲಿ, ಈ ಸೆಲೆಬ್ರಿಟಿಗಳು ವಿಚ್ಚೇದನ ಪಡೆದ್ಮೇಲೂ ಒಟ್ಟೊಟ್ಟಿಗೆ ಓಡಾಡ್ತಾರೆ, ಖುಷಿಖುಷಿಯಾಗಿ ಸಾರ್ವಜನಿಕ ವಲಯದಲ್ಲೂ ಕಾಣಿಸಿಕೊಳ್ತಾರೆ. ಇದ್ಹೇಗೆ ಸಾಧ್ಯ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ, ಬಾಲಿವುಡ್‍ನ ಹಲವು ತಾರಾಜೋಡಿಗಳು ಉತ್ತರ ಕೊಟ್ಟಿದ್ದಾರೆ. ಎರೆಡೆರಡು ಭಾರೀ ಡಿವೋರ್ಸ್ ನೀಡಿರುವ ಆಮೀರ್ ಖಾನ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆಯಲು ಮೂರನೇ ವ್ಯಕ್ತಿಗಳು ಕಾರಣ ಅಲ್ಲ . ‘ನಾನು ರೀನಾ ಅವರಿಗೆ ವಿಚ್ಛೇದನ ನೀಡಿದಾಗ ನನ್ನ ಬದುಕಿನಲ್ಲಿ ಬೇರೆ ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ನಾನು ಕಿರಣ್​ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದೆ ಅಂತ ಜನರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ನಾನು ಕಿರಣ್​ ಅವರನ್ನು ‘ಲಗಾನ್​’ ಶೂಟಿಂಗ್​ ಸಮಯದಲ್ಲಿ ಭೇಟಿಯಾಗಿದ್ದು ನಿಜ. ಆದ್ರೂ ಪರಸ್ಪರರ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ಸೆಟ್​ನಲ್ಲಿ ಇದ್ದ 300 ಜನರಲ್ಲಿ ಕಿರಣ್​ ಕೂಡ ಒಬ್ಬರಾಗಿದ್ದರು’ ‘ಕಿರಣ್​ ಮತ್ತು ನನ್ನ ನಡುವೆ ಪ್ರೀತಿ ಇದೆ. ಪರಸ್ಪರ ಗೌರವ ಇದೆ. ಈ ಸಂಬಂಧವನ್ನು ಜನರು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಯಾಕೆಂದರೆ ಬೇರ್ಪಟ್ಟ ಬಳಿಕ ಯಾವುದೇ ಜೋಡಿಯ ನಡುವೆ ಈ ರೀತಿ ಸಂಬಂಧ ಇರುವುದಿಲ್ಲ. ಗಂಡ-ಹೆಂಡತಿ ರೂಪದಲ್ಲಿ ನಮ್ಮ ಸಂಬಂಧ ಇಲ್ಲ. ಆದರೆ ನಾವು ಒಂದೇ ಕುಟುಂಬದವರ ರೀತಿ ಇದ್ದೇವೆ. ಅವರು ನಮ್ಮದೇ ಬಿಲ್ಡಿಂಗ್​ನ ಇನ್ನೊಂದು ಫ್ಲೋರ್​ನಲ್ಲಿ ವಾಸವಾಗಿದ್ದಾರೆ’ .

‘ನಾನು ತುಂಬ ಲಕ್ಕಿ. ಯಾಕಂದ್ರೆ, ನನ್ನ ಮೊದಲ ಹೆಂಡತಿ ರೀನಾ ಮತ್ತು ನಾನು ಆ ಸಮಯದಲ್ಲಿ ಚಿಕ್ಕವರಾಗಿದ್ದೆವು. ಇಬ್ಬರೂ ಜೊತೆಯಾಗಿ ಬೆಳೆದೆವು. ಪರಸ್ಪರ ಬೇರೆ ಆದ ಬಳಿಕವೂ ನಾವು ಜೊತೆಯಾಗಿ ಇದ್ದೇವೆ’ ಹೀಗಂತ ಲಾಲ್‍ಸಿಂಗ್ ಛಡ್ಡಾ ಸಿನಿಮಾ ಪ್ರಚಾರದ ವೇಳೆ ಆಮೀರ್ ಸ್ಟೇಟ್‍ಮೆಂಟ್ ನೀಡಿದ್ದರು. ಅದಕ್ಕೆ ಸಾಕ್ಷಿ ಈಗ ಸಿಕ್ಕಿದೆ. ನಿನ್ನೆಯಷ್ಟೇ ಆಮೀರ್ ಮೊದಲ ಪತ್ನಿ ರೀನಾ ದತ್ತಾ ಜೊತೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್‍ರ ಇಬ್ಬರು ಪತ್ನಿಯರು ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರೀನಾದತ್ತಾ ಹಾಗೂ ಕಿರಣ್ ರಾವ್ ಇಬ್ಬರು ಮನಸಾರೆ ನಕ್ಕು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಇನ್ನೂ, ಆಮೀರ್ ತನ್ನ ಮೊದಲ ಪತ್ನಿ ಮಗ ಜುನೈದ್ ಜೊತೆ ಪಾಪರಾಜಿಗಳ ಮುಂದೆ ಬಂದು ನಿಂತರು. ಅದರ ವಿಡಿಯೋ ಲಿಂಕ್ ಕೆಳಗೆ ಲಭ್ಯವಿದೆ ನೋಡಿ

<https://www.instagram.com/reel/CwNilOOpSe6/?utm_source=ig_embed&ig_rid=1f43052f-8007-466b-929e-733419eff0dc> 

<https://www.instagram.com/p/CwN038psZSV/?utm_source=ig_embed&utm_campaign=embed_video_watch_again>

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಜಯಮಾಲಾ ಕೈಯಲ್ಲಿ ‘ಜಲಪಾತ’ ಸಿನಿಮಾದ ಲವ್ ಸಾಂಗ್ ರಿಲೀಸ್!

ಜಯಮಾಲಾ ಕೈಯಲ್ಲಿ ‘ಜಲಪಾತ’ ಸಿನಿಮಾದ ಲವ್ ಸಾಂಗ್ ರಿಲೀಸ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.