ಮೆಗಾ ಪವರ್ ಸ್ಟಾರ್ ರಾಮ್ಚರಣ್ ತೇಜಾ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ `ಗೇಮ್ ಚೇಂಜರ್’. ಆರ್ ಆರ್ ಆರ್ ನಂತರ ಮಗಧೀರ ಕೈಗೆತ್ತಿಕೊಂಡಿರೋ ಈ ಸಿನಿಮಾಗಾಗಿ ಆಲ್ ಓವರ್ ಇಂಡಿಯಾ ಫ್ಯಾನ್ಸ್ ಮಾತ್ರವಲ್ಲ ವಿಶ್ವ ಸಿನಿದುನಿಯಾದ ಪ್ರೇಕ್ಷಕರು ಕೂಡ ಕಾದು ಕುಳಿತಿದ್ದಾರೆ. ಲೆಜೆಂಡರಿ ಡೈರೆಕ್ಟರ್ ಶಂಕರ್ ಷಣ್ಮುಗಂ ಸಾರಥ್ಯದಲ್ಲಿ ತಯಾರಾಗುತ್ತಿರುವ ಗೇಮ್ ಚೇಂಜರ್ ಗೆ ಬೇಡಿಕೆ ಹೆಚ್ಚಿದ್ದು, ದುಬಾರಿ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಸೇಲಾಗಿದೆ. ಐವತ್ತಲ್ಲ… ನೂರಲ್ಲ… ಭರ್ತಿ 270 ಕೋಟಿ ಕೊಟ್ಟು `ಗೇಮ್ ಚೇಂಜರ್’ ಥಿಯರಿಟಿಕಲ್ ರೈಟ್ಸ್ ನ `ಜೀ 5′ ಸಂಸ್ಥೆ ಕೊಂಡುಕೊಂಡಿರುವುದಾಗಿ ಸುದ್ದಿಯಾಗಿದೆ. ಸಿನಿಮಾ ರಿಲೀಸ್ ಆದ್ಮೇಲೆ `ಜೀ 5′ ನಲ್ಲಿ `ಗೇಮ್ ಚೇಂಜರ್’ ಸ್ಟ್ರೀಮಿಂಗ್ ಆಗುವ ಬಗ್ಗೆ ನ್ಯೂಸ್ ಹಬ್ಬಿದೆ

`ಗೇಮ್ ಚೇಂಜರ್’ ಬಹುಕೋಟಿ ವೆಚ್ಚದ ಸಿನಿಮಾ. ನಿರ್ಮಾಪಕ ದಿಲ್ ರಾಜು ಈ ಚಿತ್ರಕ್ಕಾಗಿ ಭರ್ತಿ 170 ಕೋಟಿ ಬಂಡವಾಳ ಸುರಿದಿದ್ದಾರೆ. ಅದ್ದೂರಿ ಮೇಕಿಂಗ್ಗೆ ಹೆಸರುವಾಸಿಯಾಗಿರುವ ಎಸ್. ಶಂಕರ್ ಅವರು ಭರ್ಜರಿಯಾಗಿ `ಗೇಮ್ ಚೇಂಜರ್’ ಚಿತ್ರ ತೆಗೆಯುತ್ತಿದ್ದಾರೆ. ರಾಜಕೀಯದ ಚದುರಂಗದಾಟದಲ್ಲಿ ಮಗಧೀರ ಹೇಗೆ ‘ಗೇಮ್ ಚೇಂಜರ್’ ಆಗುತ್ತಾನೆ ಅನ್ನೋದನ್ನ ತೋರಿಸೋದಕ್ಕೆ ಹೊರಟಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಮಗಧೀರ ರಾಮ್ಚರಣ್ ತೇಜಾ ಡಬಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಐಎಎಸ್ ಆಫೀಸರ್ ಹಾಗೂ ಪೊಲಿಟಿಷಿಯನ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ.
ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಚೆರ್ರಿಗೆ ಜೋಡಿಯಾಗಿದ್ದಾಳೆ. ಅಂಜಲಿ, ಜಯರಾಂ, ಸುನಿಲ್, ಶ್ರೀಕಾಂತ್, ಎಸ್.ಜೆ.ಸೂರ್ಯ, ನಾಸರ್, ಸಮುದ್ರಕಣಿ ಸೇರಿದಂತೆ ಅತೀದೊಡ್ಡ ತಾರಾಬಳಗ ಚಿತ್ರದಲ್ಲಿದೆ. ನ್ಯೂಜಿಲ್ಯಾಂಡ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಹಲವೆಡೆ `ಗೇಮ್ ಚೇಂಜರ್’ ಕ್ಯಾಪ್ಚರ್ ಆಗ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡಿಗೆ ಬರೋಬ್ಬರಿ 90 ಕೋಟಿ ಎತ್ತಿಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ನಿರ್ದೇಶಕ ಶಂಕರ್ ಬಿಗ್ ಬಜೆಟ್ ಮತ್ತು ಅದ್ಧೂರಿ ಮೇಕಿಂಗ್ ಸಿನಿಮಾಗಳಿಂದಲೇ ಹೆಸರುವಾಸಿ ಹಾಗಾಗಿ, ಒಂದು ಹಾಡಿಗೆ 90 ಕೋಟಿ ಬಜೆಟ್ ಅನ್ನು ಚಿತ್ರತಂಡ ಖರ್ಚು ಮಾಡಿದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬಂದಿತ್ತು.ಆದರೆ ಇಲ್ಲಿಯವರೆಗೆ ‘ಗೇಮ್ ಚೇಂಜರ್’ ಚಿತ್ರತಂಡ ಮಾತ್ರ ಈ ಸುದ್ದಿಯ ಬಗ್ಗೆ ತುಟಿಬಿಚ್ಚಿಲ್ಲ. ಹಾಗೇನಾದರೂ ಈ ಸುದ್ದಿ ನಿಜವೇ ಆಗಿದ್ದರೆ, ರಾಮ್ ಚರಣ್ ಸಿನಿಮಾ ಹೊಸ ದಾಖಲೆ ಬರೆಯೋದರಲ್ಲಿ ಅನುಮಾನವಿಲ್ಲ. ಎನಿವೇ, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗೇಮ್ ಚೇಂಜರ್ ರೆಡಿಯಾಗ್ತಿದ್ದು 2024 ಕೊನೆಯ ತಿಂಗಳು ಅಥವಾ 2025 ಜನವರಿಯಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.





