ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ವಿನಯ್ ರಾಜ್ ಕುಮಾರ್ ಹಾಗೂ ದೇವನೂರು ಚಂದ್ರು ಕಾಂಬಿನೇಷನ್‌ನಲ್ಲಿ ಮೂಡಿಬರ್ತಿರುವ ಗ್ರಾಮಾಯಣ ಟೀಮ್ ಬೆಳಕಿನ ಹಬ್ಬಕ್ಕೆ ವಿಶೇಷ ವಿಡಿಯೋ ಹಂಚಿಕೊಂಡಿದೆ. ಅಣ್ಣಾವ್ರು ಹುಟ್ಟಿ ಬೆಳೆದ ಗಾಜನೂರಿನ ಮನೆಯಲ್ಲಿ, ದೀಪಾವಳಿ ಹಬ್ಬವನ್ನ ಪಕ್ಕಾ ಹಳ್ಳಿ ಶೈಲಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.. ಈ ವಿಡಿಯೋವನ್ನ ಲಹರಿ ಮ್ಯೂಸಿಕ್‌ನಲ್ಲಿ ಹಂಚಿಕೊಳ್ಳಲಾಗಿದೆ.. ಕೊನೆಯಲ್ಲಿ ಹಬ್ಬದ ದೀಪ, ಗಂಧದ ದೂಪ, ಮನೆ ಹಿರಿಯರೇ ದೇವರ ರೂಪ ಅಂತ ವಿಶೇಷವಾದ ಕ್ಯಾಪ್ಷನ್ ಕೊಟ್ಟಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.





