ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ವಿದೇಶದಲ್ಲಿ ನಡೀತಿದ್ಯಾ `ಯಶ್-19′ ಶೂಟಿಂಗ್….! ಏಕ್ದಮ್ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ ರಾಕಿಭಾಯ್?

Vishalakshi Pby Vishalakshi P
16/11/2023
in Majja Special
Reading Time: 1 min read
ವಿದೇಶದಲ್ಲಿ ನಡೀತಿದ್ಯಾ `ಯಶ್-19′ ಶೂಟಿಂಗ್….! ಏಕ್ದಮ್ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ ರಾಕಿಭಾಯ್?

`ಮೀನಿನ ಹೆಜ್ಜೆನಾ ಬೇಕಾದರೆ ಕಂಡು ಹಿಡಿಯಬಹುದು, ಆದರೆ, ರಾಕಿಭಾಯ್ ಹೆಜ್ಜೆ ಗುರುತನ್ನು ಕಂಡುಹಿಡಿಯುವುದಕ್ಕೆ ಸಾಧ್ಯನೇ ಇಲ್ಲ’ ಈ ಮಾತನ್ನು ನಾವು ಪದೇ ಪದೇ ಹೇಳುವಂತೆ ಮಾಡುತ್ತಲೇ ಇದ್ದಾರೆ ಮಾನ್ಸ್ಟರ್. ಯಸ್, ಸದ್ಯಕ್ಕೆ ಯಶ್ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಸಿನಿಮಾ ತಯ್ಯಾರಿ ಎಲ್ಲಿಗೆ ಬಂತು? `ಯಶ್-19′ ಅನೌನ್ಸ್ ಮೆಂಟ್ ಯಾವಾಗ? ಯಾರ್ ಜೊತೆ ಕೈ ಜೋಡಿಸಿದ್ದಾರೆ? ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾದ ಸಾರಥಿ ಯಾರಾಗ್ತಾರೆ? ಇಂಡಿಯನ್ ಬಾಕ್ಸ್ ಆಫೀಸ್ ಸಿಇಐಗೆ ಬಂಡವಾಳ ಯಾರು ಸುರಿಯುತ್ತಿದ್ದಾರೆ? ಹೀಗೆ ನೂರೆಂಟು ಪ್ರಶ್ನೆಗಳು ಕಾಡುತ್ತಿರುವ ಬೆನ್ನಲ್ಲೇ ಆಲ್ ಓವರ್ ಇಂಡಿಯಾ ಸಿನಿಮಾ ಪ್ರೇಮಿಗಳು ಹುಚ್ಚೇಳುವಂತಹ ತಾಜಾ ಸಮಾಚಾರವೊಂದು ಕೇಳಿಬರ್ತಿದೆ. ರಾಕಿಂಗ್ ಸ್ಟಾರ್ ಯಶ್ ಸದ್ದಿಲ್ಲದೇ ಫಾರಿನ್ ಗೆ ಹೋಗಿದ್ದು, ಸದ್ಯ ಲಂಡನ್‍ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ `ಯಶ್-19′ ಸಿನಿಮಾ ಶೂಟಿಂಗ್ ಸೈಲೆಂಟಾಗಿ ಕ್ಯಾಪ್ಚರ್ ಆಗ್ತಿದೆ ಎನ್ನುವ ಬಡಾ ಖಬರ್ ಬಜಾರ್‍ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. 

`ಯಶ್-19’ಗಾಗಿ ಇಡೀ ಚಿತ್ರಜಗತ್ತು ಚಾತಕ ಪಕ್ಷಿಯಂತೆ ಕಾಯುತ್ತಿದೆ. ಧೀರ ಸುಲ್ತಾನ ಘೋಷಿಸಲಿರುವ ಅಪ್ ಕಮ್ಮಿಂಗ್ ಸಿನಿಮಾಗಾಗಿ ಕಣ್ಣರಳಿಸಿ ಕೂತಿದೆ. ಸೆಲ್ಫ್ ಮೇಡ್ ಷೆಹಜಾದನ ಮುಂದಿನ ಸಿನಿಮಾ ಹೇಗಿರಬಹುದು? ಅದ್ಯಾರ ಜೊತೆ ಕೈ ಜೋಡಿಸಬಹುದು? ಅದೆನಿಂತಾ ಸಿನಿಮಾ ಮಾಡಬಹುದು ಅಂತ ಬೆರಗುಗಣ್ಣಿನಿಂದ ನೋಡುತ್ತಲೇ ಒಂದೂವರೆ ವರ್ಷ ಕಳೆದಿದ್ದಾರೆ. ಮಾನ್ ಸ್ಟರ್ ಮೊದಲ ನೋಟ ಕಣ್ತುಂಬಿಕೊಳ್ಳಲು ಕಣ್ಣಿಗೆ ಎಣ್ಣೆಬಿಟ್ಟುಕೊಳ್ಳುತ್ತಲೇ ಇದ್ದಾರೆ. ಯುಗಾದಿ, ವರಮಹಾಲಕ್ಮಿ, ಗೌರಿ ಗಣೇಶ, ದಸರಾ, ದೀಪಾವಳಿ ಎಲ್ಲಾ ಹಬ್ಬಗಳು ಮುಗಿದ್ವು. ಇನ್ಯಾವ ಹಬ್ಬಕ್ಕೆ ರಾಕಿಂಗ್ ಸ್ಟಾರ್ ರಾಕಿಂಗ್ ಸುದ್ದಿ ಕೊಡಬಹುದು ಎನ್ನುವ ಪ್ರಶ್ನೆ ಹಾಕ್ಕೊಂಡು ಬೇಸರಗೊಳ್ಳುತ್ತಿರುವ ಹೊತ್ತಲ್ಲೇ  ಕಾದು ಕುಳಿತಿರುವ ಚಿತ್ರಪ್ರೇಮಿಗಳಿಗೆ ಕುತೂಹಲ ತಣಿಸಲು ಕೋಟಿ ಕನಸುಗಳ ಸರದಾರ ಸನ್ನದ್ದರಾಗಿದ್ದಾರೆ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ದುಬೈ, ಶ್ರೀಲಂಕಾ, ಮಲೇಷಿಯಾ ಸುತ್ತಿಬಂದ ಸುಲ್ತಾನ ಸದ್ಯ ಲಂಡನ್ ನಲ್ಲಿ ಟೆಂಟ್ ಹಾಕಿದ್ದಾರೆನ್ನುವ ಸುದ್ದಿ ಫ್ಲೈಟ್ ಹತ್ಕೊಂಡು ಬಂದು ಗಾಂಧಿನಗರ ಮುಟ್ಟಿದೆ.

ಲಂಡನ್ ಎಂದಾಕ್ಷಣ ಆ ಎರಡು ದೃಶ್ಯಗಳು ಕಣ್ಣಮುಂದೆ ಬರುತ್ತವೆ. ಈ ಹಿಂದೆ ಎರಡು ಭಾರಿ ರಾಕಿಭಾಯ್ ಲಂಡನ್‍ಗೆ ಭೇಟಿಕೊಟ್ಟಿದ್ದರು. ಹಾಲಿವುಡ್‍ನ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿಯವರನ್ನ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲೇ ಸುಲ್ತಾನ್ ಕಡೆಯಿಂದ ಸೂಚನೆ ಸಿಕ್ಕಿತ್ತು. ಮಾನ್ ಸ್ಟರ್ ಮುಂದಿನ ಸಿನಿಮಾದಲ್ಲಿ ಪೆರ್ರಿ ಅಪಿಯರೆನ್ಸ್ ಇರುವ ಬಗ್ಗೆ ಅನುಮಾನ ಮೂಡಿತ್ತು. ಅದು ಎರಡನೇ ಭಾರಿ ಕನ್ಫರ್ಮ್ ಆದಂತೆ ಕಂಡಿತ್ತು. ಇದೀಗ, ಲಂಡನ್‍ನಿಂದ ಬಂದಿರೋ ರೂಮರ್ ಸುದ್ದಿ ಹಾಲಿವುಡ್ ಟೆಕ್ನಿಷಿಯನ್‍ಗಳ ಕೈಚಳಕದಲ್ಲಿ `ಯಶ್-19′ ರೋಲ್ ಆಗ್ತಿರೋ ಸುಳಿವು ನೀಡ್ತಾಯಿದೆ. ದೀಪಾವಳಿ ಹಬ್ಬಕ್ಕೆ ಯಶ್ ಕುಟುಂಬದಿಂದ ದೂರ ಉಳಿದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರೋದನ್ನ ನೋಡಿದರೆ ಯಶ್ ಫಾರಿನ್‍ನಲ್ಲಿರೋದು, ಸೈಲೆಂಟಾಗಿ ಸಿನಿಮಾ ಶೂಟಿಂಗ್ ನಡೀತೀರೋದು ನಿಜ ಅನ್ಸುತ್ತೆ.

ಅಂದ್ಹಾಗೇ, `ಯಶ್-19′ ಸಿನಿಮಾ ಡ್ರಗ್ ಮಾಫಿಯಾ ಕುರಿತಾಗಿರುವ ಬಗ್ಗೆ ಸುದ್ದಿಯಾಗ್ತಿದೆ. ಕಡಲ ತಡಿಯ ಪುಟ್ಟ ದ್ವೀಪದಲ್ಲಿ ನಡೆಯುವ ದಂಧೆಯನ್ನು ಬಯಲು ಮಾಡಲು ಕೋಲಾರ್ ಗೋಲ್ಡ್ ಕಿಂಗ್ ಶಪಥ ಕೈಗೊಂಡಿದ್ದು, ಗೋವಾದಿಂದ ಎಲ್ಲೆಲ್ಲಿಗೆ ಡ್ರಗ್ಸ್ ಸಪ್ಲೈ ಆಗ್ತಿದೆಯೋ ಅಲ್ಲೆಲ್ಲಾ ಕಡೆ ಚಿತ್ರೀಕರಣ ನಡೆಸಬೇಕು ಅಂತ ಪ್ಲ್ಯಾನ್ ಮಾಡಿದ್ದಾರಂತೆ. ಹೀಗಾಗಿಯೇ ಯಶ್ ಆಸ್ಟ್ರೇಲಿಯಾದಿಂದ ಮಲೇಷಿಯಾ ತನಕ ಫಾರಿನ್ ಟ್ರಿಪ್ ಮಾಡಿದ್ದು ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಫ್ಯಾಮಿಲಿ ಟ್ರಿಪ್ ಎನಿಸಿದರೂ ಕೂಡ ಲೋಕೇಷನ್ ಹಂಟಿಂಗ್ ರಹಸ್ಯ ರಾಕಿಂಗ್ ವಿದೇಶಿ ಪಯಣದಲ್ಲಿ ಅಡಗಿದೆಯಂತೆ. ಇದಕ್ಕೆ ಸಾಕ್ಷಿಯಾಗಿ ಹಿಂದೊಮ್ಮೆ ಶ್ರೀಲಂಕಾ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ದಿನೇಶ್ ವೀರಕ್ಕೋಡಿಯವರ ಟ್ವೀಟು ವೈರಲ್ ಆಗಿತ್ತು. ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಯಶ್ ಅನುಮತಿ ಪಡೆದಿದ್ದಾರೆನ್ನುವ ಮ್ಯಾಟ್ರು ಹಲ್ಚಲ್ ಎಬ್ಬಿಸಿತ್ತು. ಇದೀಗ ಒಂದಕ್ಕೊಂದು ಲಿಂಕ್ ಸಿಗುತ್ತಿದೆ. ಗೋವಾ ಸಿಎಂ ಅವ್ರನ್ನ ಭೇಟಿಯಾಗಿದ್ದು, ಗ್ಲೋಬಲ್ ಸ್ಟಾರ್ ಆದ್ಮೇಲೆ ಇಡೀ ಜಗತ್ತು ಸುತ್ತಿಬಂದಿದ್ದು, ಗೋವಾದ ಕಡಲತಡಿಯಿಂದಲೇ ತೂಫಾನ್ ಎಬ್ಬಿಸಲಿಕ್ಕಾ ಎನ್ನುವ ಅನುಮಾನ ಈಗೀಗ ದಟ್ಟವಾಗುತ್ತಿದೆ.

`ಯಶ್-19′ ಚಿತ್ರಕ್ಕೆ ಮಲೆಯಾಳಂ ನಿರ್ದೇಶಕಿ ಆ್ಯಕ್ಷನ್ ಕಟ್ ಹೇಳಿರೋದು ಪಕ್ಕಾ ಎನಿಸ್ತಿದೆ. ಜೆಜೆ ಪೆರ್ರಿ ಆ್ಯಕ್ಷನ್ ಬ್ಲಾಕ್ ಕಂಪೋಸ್ ಮಾಡ್ತಾರೆನ್ನುವುದಕ್ಕೆ ಲಂಡನ್ ಭೇಟಿಯ ಫೋಟೋವೇ ಸಾಕ್ಷಿಯಾಗ್ತಿದೆ.  ಕೆವಿಎನ್ ಸಂಸ್ಥೆ ಜೊತೆ ಈ ಭಾರಿ ನಿರ್ಮಾಣಕ್ಕೂ ಕೈ ಜೋಡಿಸುವ ಮೂಲಕ ಪ್ರೊಡ್ಯೂಸರ್ ಕಮ್ ಆ್ಯಕ್ಟರ್ ಆಗಿ ಕಣಕ್ಕಿಳಿದಿದ್ದಾರಂತೆ. ಒಟ್ನಲ್ಲಿ ನಾನೆಲ್ಲೂ ಹೋಗಲ್ಲ, ಎಲ್ಲರನ್ನೂ ಇಲ್ಲಿಯೇ ಕರೆಸ್ತೀನಿ ಎಂದಿರುವ ಅಣ್ತಮ್ಮ, ಯಾರ್ಯಾರನ್ನ ಎಲ್ಲೆಲ್ಲಿಂದ ಕರೆಸಿ ಲಂಡನ್‍ನಲ್ಲಿ ಶೂಟಿಂಗ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ, ಚಿತ್ರೀಕರಣ ಶುರು ಎನ್ನುತ್ತಿದೆ ಗಾಸಿಪ್ ಲೋಕ. ಒಂದ್ವೇಳೆ ಈ ಸುದ್ದಿ ನಿಜವಾದರೆ ಲಕ್ಕಿ ತಿಂಗಳು ಡಿಸೆಂಬರ್‍ನಲ್ಲಿ `ಯಶ್-19′ ಘೋಷಣೆಯಾಗಬಹುದು. ಟೀಸರ್ ಜೊತೆಗೆ ಟೈಟಲ್ ಹೊರಬೀಳಬಹುದು. ಇಲ್ಲವೇ ಶೂಟಿಂಗ್ ಮುಗಿಸಿ ನೇರವಾಗಿ ಸಿನಿಮಾ ರಿಲೀಸ್ ಡೇಟ್‍ನ ಅನೌನ್ಸ್ ಮಾಡಬಹುದು. ಅಣ್ತಮ್ಮನ ಹುಟ್ಟುಹಬ್ಬಕ್ಕೆ ಸಿನಿಮಾ ಪ್ಯಾನ್ ವಲ್ರ್ಡ್ ಲಗ್ಗೆ ಇಡಬಹುದು. ಈ ಎಲ್ಲಾ ಕುತೂಹಲಕ್ಕೆ ಕೆಜಿಎಫ್ ಕಿಂಗ್ ಉತ್ತರ ಕೊಡಬೇಕು. ಈ ಬಗ್ಗೆ ಸ್ವತಃ ಯಶ್ ಅವ್ರೇ ಮಾತನಾಡಬೇಕು. `ಯಶ್-19′ ಬಗ್ಗೆ ಕಂಪ್ಲೀಟ್ ಪಿಕ್ಚರ್ ಅವರೇ ಕೊಡಬೇಕು. ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ವೈವಾಹಿಕ ಜೀವನಕ್ಕೆ ಕಾಲಿಟ್ಟ ವಾಸುಕಿ… ಮನಮೆಚ್ಚಿದ ಹುಡುಗಿಯ ಜೊತೆ ವೈಭವ್ ಕಲ್ಯಾಣ!

ವೈವಾಹಿಕ ಜೀವನಕ್ಕೆ ಕಾಲಿಟ್ಟ ವಾಸುಕಿ... ಮನಮೆಚ್ಚಿದ ಹುಡುಗಿಯ ಜೊತೆ ವೈಭವ್ ಕಲ್ಯಾಣ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.