ಬಣ್ಣಗಳ ಹಬ್ಬ ಹೋಳಿ ಬಂದ್ರೇನೆ ಹಬ್ಬ. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಹೋಳಿ ಹಬ್ಬ ಅಚ್ಚುಮೆಚ್ಚು. ಈ ಬಾರಿಯೂ ಎಲ್ಲರೂ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಣ್ಣದ ಓಕುಳಿಯಲ್ಲಿ ಮಿಂದೇಳೋ ಈ ಹಬ್ಬವನ್ನು ಸಿನಿಮಾ ಮಂದಿ ಕೂಡ ತಮ್ಮದೇ ಸ್ಟೈಲ್ನಲ್ಲಿ ಆಡಿ ಸಂಭ್ರಮಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟ- ನಟಿಯರು ಹೋಳಿ ಆಡಿದ ಫೋಟೋಗಳು ವೈರಲ್ ಆಗಿದ್ದು, ನೆಚ್ಚಿನ ನಟಿ-ನಟಿಯರ ಹೋಳಿ ಸಂಭ್ರಮ ಕಂಡು ಅಭಿಮಾನಿಗಳು ಖುಷಿ ಪಟ್ಟದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ರಿಯಲ್ ಸ್ಟಾರ್ ಉಪೇಂದ್ರ(Upendra) ಸೇರಿದಂತೆ ಸ್ಯಾಂಡಲ್ ವುಡ್ ಹಲವು ತಾರೆಯರು ಸ್ನೇಹಿತರು, ಫ್ಯಾಮಿಲಿ ಜೊತೆ ಸೇರಿ ಹೋಳಿ ಆಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸ್ವೀಟಿ ರಾಧಿಕ ಕುಮಾರ್ ಸ್ವಾಮಿ(Radhika Kumar Swamy) ಕೂಡ ಹೋಳಿ ಆಡಿದ್ದಾರೆ. ಕೊಂಚ ಡಿಫ್ರೆಂಟ್ ಆಗಿಯೇ ಹೋಳಿ ಆಡಿರುವ ಸ್ವೀಟಿ ಈ ಬಾರಿ ಹೋಳಿಗಾಗಿ ಸಮುದ್ರದೆಡೆಗೆ ಸಾಗಿದ್ದಾರೆ. ಸಮುದ್ರ ತೀರದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಹಿರಿಯ ನಟಿ ಸುಧಾರಾಣಿ(Sudha Rani) ಕೂಡ ಹೋಳಿ ಆಡಿ, ಡಾನ್ಸ್ ಮಾಡಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ತಮ್ಮ ತಂಡದ ಜೊತೆ ಹೋಳಿ ಆಡಿ ಎಲ್ಲರಿಗೂ ಹೋಳಿಯ ಶುಭಾಶಯ ತಿಳಿಸಿದ್ದಾರೆ. ವಿಜಯ ದೇವರಕೊಂಡ(Vijay Deverakonda), ರಾಮ್ ಚರಣ್(Ram Charan), ಮೊನ್ನೆ ಮೊನ್ನೆಯಷ್ಟೇ ನವ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೇಡಗಿ ಕೃತಿ ಕರಬಂಧ, ಸಿದ್ದಾರ್ಥ್ ಮಲ್ಹೋತ್ರ(Sidharth Malhotra- ಕಿಯಾರ ಅಡ್ವಾನಿ(Kiara Advani) ದಂಪತಿ, ಅಮಿತಾಭ್ ಬಚ್ಚನ್ ಫ್ಯಾಮಿಲಿ ಸೇರಿದಂತೆ ಹಲವು ತಾರೆಯರು ಹೋಳಿಯ ಸಂಭ್ರಮವನ್ನು ಆಚರಿಸಿದ್ದಾರೆ.