ಈ ಜಗತ್ತಿನ ಜೀವ ಚಕ್ರದಲ್ಲಿ ಒಂದೇ ಒಂದು ಕೀಟ ಪ್ರಬೇಧ ಅವಸಾನ ಹೊಂದಿದರೂ ಕೂಡಾ ಒಟ್ಟಾರೆ ಆಹಾರ ಚಕ್ರದಲ್ಲಿಯೇ ಬದಲಾವಣೆಗಳಾಗುತ್ತವೆ. ಇಲ್ಲಿ ಯಾವ ಕೀಟಗಳೂ ಕೂಡಾ ನಗಣ್ಯವಲ್ಲ. ದುರಂತವೆಂದರೆ, ಕೀಟಗಳೆಂದರೆ ಅತ್ಯಂತ ಹಗುರವಾಗಿ ಕಾಣುವ ಮನಃಸ್ಥಿತಿ ಮನುಷ್ಯ ಪ್ರಾಣಿಗಳನ್ನು ಆವರಿಸಿಕೊಂಡಿದೆ. ಈ ಕಾರಣದಿಂದಲೇ ನಾಶವಾದರೆ, ಒಂದಿಡೀ ಜೀವಸಂಕುಲವೇ ಅವಸಾನ ಹೊಂದುವ ಅಪಾಯವಿರುವಂಥಾ ಅನೇಕ ಕೀಟಗಳಿಂದು ಅಪಾಯದ ಅಂಚಿನಲ್ಲಿವೆ. ಅದರಲ್ಲಿಯೂ ವಿಶೇಷವಾಗಿ ಪರಾಗಸ್ಪರ್ಶದ ಮೂಲಕ ಸಕಲ ಬೆಳೆಗಳಲ್ಲಿಯೂ, ಸಸ್ಯ ವಿಕಾದಲ್ಲಿಯೂ ಪ್ರಧಾನ ಪಾತ್ರ ವಹಿಸುವ ಜೇನುಗಳೇ ಇಂದು ಅವಸಾನದಂಚಿನಲ್ಲಿವೆ. ಒಂದು ವೇಢಳೆ ಜೇನಿನ ಸಂತತಿ ಇದೇ ರೀತಿ ಸಾವಿನತ್ತ ಮುಖ ಮಾಡಿದರೆ ಖಂಡಿತವಾಗಿಯೂ ಮನುಷ್ಯ ಮಾತ್ರರಿಗೆಲ್ಲ ಸಾವೊಂದೇ ಅಂತಿಕ ಆಯ್ಕೆಯಾಗಿ ಉಳಿದುಕೊಳ್ಳುತ್ತೆ!
ಹಾಗೆ ನೋಡಿದರೆ, ಈ ಜೇನುಗಳ ಸಂತತಿ ಸಂಕೀರ್ಣವಾದ, ಇಂಟರೆಸ್ಟಿಂಗ್ ಆದ ಜೀವನ ಕ್ರಮವನ್ನು ಒಳಗೊಂಡಿದೆ. ಅವುಗಳ ಜೀವನ ಕ್ರಮವನ್ನು ಸಾಕಷ್ಟು ಅಧ್ಯಯನಗಳ ಮೂಲಕ ಪತ್ತೆ ಹಚ್ಚಲಾಗಿದೆ. ಈಗಂತೂ ಜೇನು ಸಾಕಣೆ ಅನ್ನೋದು ಟ್ರೆಂಡ್ ಆಗಿ ಬಿಟ್ಟಿದೆ. ಈ ಮೂಲಕ ಜೇನು ಕುಟುಂಬಗಳನ್ನು ಸಾಕುಉತ್ತಾ, ಅವುಗಳೊಂದಿಗೆ ಬೆರೆಯುತ್ತಾ ಜೇನುಗಳ ಕೆಲಸಗಾರಿಕೆ, ಶ್ರಮದ ಬದುಕನ್ನು, ಶಿಸ್ತನ್ನು ಕಂಡು ಎಲ್ಲರೂ ಅಚ್ಚರಿಗೊಳ್ಳುತ್ತಿದ್ದಾರೆ. ಇಂಥಾ ಜೇನುಗ್ಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಅದೆಲ್ಲದರಲ್ಲಿಯೂ ಕೊಂಚ ಸಾಮ್ಯತೆ ಮತ್ತು ಸಾಕಷ್ಟು ವೈವಿಧ್ಯತೆಗಳು ಕಾಣ ಸಿಗುತ್ತವೆ. ಈ ಜೇನು ಪ್ರಬೇಧಗಳ ಬಗ್ಗೆ ತಿಳಿದುಕೊಳ್ಳೋದೇ ನಿಜವಾಗಿಯೂ ಥ್ರಿಲ್ಲಿಂಗ್ ವಿಚಾರ. ಅದು ಬಗೆದಷ್ಟೂ ಅಚ್ಚರಿಒಗಳ ಜೇನನ್ನು ಉಣಬಡಿಸುತ್ತಾ ಅಚ್ಚರಿಗೀಡು ಮಾಡುತ್ತವೆ.
ಇದು ಪಾಪದ ಜೇನು
ಈ ಜೇನುಗಳು ಪ್ರದೇಶದಿಂದ ಪ್ರದೇಶಕ್ಕೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತವೆ. ಸೊಳ್ಳೆಗಳ ಗಾತ್ರಕ್ಕಿಂತ ತುಸು ದಪ್ಪಕಿರುತ್ತವೆ. ಇವು ಸಾಮಾನ್ಯವಾಗಿ ಹಳೆಯಕಲ್ಲಿನ ಗೋಡೆಗಳ ಸಂದುಗಳಲ್ಲಿ, ಕೆಲವು ವಿಶೇಷ ಬೆಟ್ಟಗುಡ್ಡಗಳಲ್ಲಿ, ಶಿಲಾ ರಚನೆಗಳಲ್ಲಿ ಗೂಡುಕಟ್ಟುತ್ತಾವೆ.ಇವು ಸಂಖ್ಯಾ ದೃಷ್ಟಿಯಿಂದ ಕಡಿಮೆಯ ಸಂಖ್ಯೆ ಇದ್ದು ಬೇಕರಿಯ ಚೌಕಾಕಾರದ ಒಂದೋ ಎರಡೋ ಬ್ರೆಡ್ಡನ್ನು ನಿಧಾನವಾಗಿ ಸೇರಿಸಿದರೆ ಯಾವ ಆಕಾರ ಪಡೆಯಬಹುದೋ ಆ ರೀತಿಯಾಗಿ ಅವು ಗೂಡು ಕಟ್ಟಿದ ಸ್ಥಳದ ಆಕಾರಕ್ಕನುಗುಣವಾಗಿ ಕಟ್ಟುತ್ತವೆ.ಆ ಗೂಡಿನಲ್ಲಿ ಹದಿನೈದು ಇಪ್ಪತ್ತು ಶೈಶವಾವಸ್ಥೆಯ ಕೋಶಗಳು, ಮೇಲಿನ ಕೆಲವು ಕೋಶಗಳಲ್ಲಿ ನೀರಿನ ಹನಿಯಂತ ತುಪ್ಪವೂ ಕಂಡು ಬಂತು.ಕೈಯಲ್ಲಿ ಹಿಚುಕಿಹಾಕಿದರೂ ಕಚ್ಚದೇ ಇರುವ ಅಮಾಯಕ ಪಾಪಿ ನೋಣಗಳಿವು.ಇವು ಇತರ ಜೇನುಗಳಂತೆ ಸಾವಿರಾರು ಸಂಖ್ಯೆಯಲ್ಲಿರದೇ ಇವುಗಳ ಕುಟುಂಬದಲ್ಲಿ ಸದಸ್ಯ ಹುಳುಗಳೇ ಕಡಿಮೆ ಸಂಖ್ಯೆಯಲ್ಲಿ ಇರುತ್ತಾವೆ. ನಿಸರ್ಗದಲ್ಲಿ ಈ ಪ್ರಭೇದದ ಹುಳುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದಾವೆ. ಅರಣ್ಯಗಳಿಲ್ಲದೇ ಕಾಡು ಪ್ರಾಣಿಗಳು ಇರಲು ಹೇಗೆ ಸಾದ್ಯವಿಲ್ಲವೋ ಹಾಗೆ ಕೆಲವು ಕ್ರಿಮಿ ಕೀಟ ಜೀವಿಗಳಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಧಕ್ಕೆ ಬಂದಿದ್ದರಿಂದ ಉಳಿದಿರುವ ಅನೇಕ ಜೀವ ಸಂಕುಲವೇ ಇಂದು ಅಪಾಯದ ಹಂಚಿನಲ್ಲಿರುವ ಜೀವಿಗಳಾಗಿವೆ. ಇನ್ನೂ ಕೆಲವು ಜೀವಸಂಕುಲ ಈಗಾಗಲೇ ನಾಮಾವಶೇಷವಾಗಿ ಉಳಿದುಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ.
ಮೊಜೆಂಟಿ ಜೇನು ಹುಳುಗಳು ಹೆಚ್ಚಿನ ಪ್ರಮಾಣದಲ್ಲಿ ಇರ ಬೇಕಿತ್ತು. ಸಾಮಾನ್ಯವಾಗಿ ಇದನ್ನು ತಿನ್ನುವ ಅಭ್ಯಾಸ ಕಡಿಮೆ ಇರುವುದರಿಂದ ಇವುಗಳ ಪರಿಚಯ ಬಹಳ ಜನಗಳಿಗೆ ಇಲ್ಲ.ಅಲ್ಲದೇ ಜನರ ಕೈಗೆ ಅಷ್ಟು ಸುಲಭವಾಗಿ ಸಿಗದೇ ಇರುವುದು ಮತ್ತೊಂದು ಕಾರಣ.ಮಾನವನ ಪ್ರತ್ಯಕ್ಷ ಕ್ರೌರ್ಯಕ್ಕೆ ಇವು ಒಳಗಾಗಿಲ್ಲ. ನಿಸರ್ಗದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೆ siಟಿgಟe siಟಿgಟe ಹುಳುಗಳು ಅನೇಕ ತೆರನಾದ ಹೂಗಳ ಮೇಲೆ ಅಲ್ಲಲ್ಲಿ ಕಾಣಬಹುದಾದರೂ ಇವೇ ‘ಮಿಸುರಿ ಜೇನು’ಹುಳು ಎಂದು ಗುರುತಿಸುವ ಬುದ್ಧಿವಂತರು ನಮ್ಮಲ್ಲಿ ತೀರಕಡಿಮೆ.ಯಾವುದೋ ನೊಣ ಎಂದಷ್ಟೇ ನಾವು ಭಾವಿಸಿ ಸುಮ್ಮನಾಗುತ್ತೇವೆ.ಅಪರೂಪಕ್ಕೆ ಈ ಮಿಸುರಿ ಜೇನನ್ನು ಸಾಕುವವರೂ ಇದ್ದಾರೆ. ಔಷಧೀಯವಾಗಿ ಇದರ ತುಪ್ಪ ಮತ್ತು ಮಕರಂದಕ್ಕೆ ವಿಶೇಷವಾದ ಬೇಡಿಕೆ ಇದೆ.ಆದರೆ ಇಂದಿನ ಆಧುನಿಕ ವೈದ್ಯಕೀಯ ವ್ಯಾಪಕ ದಂದೆಯ ಬಲೆಯನಡುವೆ ಇವುಗಳನ್ನು ಕೊಳ್ಳುವವರಾಗಲೀ, ಇವುಗಳ ಮಹತ್ವ ಬಲ್ಲವರಾಗಲಿ, ಪೋಷಿಸುವವರಾಗಲಿ ಇಲ್ಲ.ಅಲ್ಲದೇ ಈ ಹುಳಗಳ ಸಂತಾನ ಇತರೆ ಜೇನುಹುಳುಗಳಂತೆ ಅಪರಿಮಿತವಾಗಿ ಇಲ್ಲ..ಇವು ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲೇ ಇದ್ದು ಅಲ್ಲಿಯೇ ವಾಸಮಾಡುತ್ತಿರುತ್ತಾವೆ.ಅಥವಾ ಇವುಗಳ ಜೀವೀತಾವಧಿ ಬಹಳ ಕಡಿಮೆ ಇರಬಹುದು.ಆದ್ದರಿಂದಲೇ ಸುಮಾರು ವರ್ಷಗಳ ಕಾಲ ನಾನು ವೀಕ್ಷಣೆ ಮಾಡಿರುವುದರಿಂದ ಇವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದುದನ್ನು ಕಂಡಿಲ್ಲ. ಆದ್ದರಿಂದಲೇ ಇವು ಹೇರಳವಾಗಿ ಕಂಡು ಬರದೇ ಬಹಳ ವೀರಳವಾಗಿ ಅಲ್ಲಲ್ಲಿ ಕಂಡುಬರುತ್ತಾವೆ.
ಇಂಟರೆಸ್ಟಿಂಗ್ ಜೇನು
ಮೊದಲೇ ಹೇಳಿದಂತೆ ಜೇನುಗಳಲ್ಲಿ ವೈವಿಧ್ಯತೆಯಿದೆ. ಈ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇರುತ್ತವೆ. ಇವು ನೇತಾಡುವ ಗಿಡ, ಪೊದೆ, ಬಳ್ಳಿ, ಗೊಡೆ ಸಂದು, ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಅಂದಾಜು ಇನ್ನೂರು ಮುನ್ನೂರರಿಂದ ಎಂಟುನೂರು ಸಾವಿರದ ವರೆಗೆ ಇರಬಹುದು. ಇದು ಒಂಥರಾ ವಿಭಕ್ತ ಕುಟುಂಬದಂತಿದ್ದು ಸಂತಾನೋತ್ಪತ್ತಿ ಕಾರ್ಯಕ್ಕಾಗಿಯೇ ಶ್ರದ್ಧೆಯಿಂದ ಕುಟುಂಬವನ್ನು ನೋಡಿಕೊಳ್ಳುತ್ತಾವೆ. ಉಷ್ಣವಲಯದ ಎಲ್ಲಾ ಭಾಗದಲ್ಲೂ ಕಂಡು ಬರುವ ಇವು ಕೋಲು ಜೇನಿನಂತೆಯೇ ಇದರ ತುಪ್ಪವು ಇರುತ್ತದೆ. ಒಂದೇ ವ್ಯತ್ಯಾಸ ಮಿತ ಕುಟುಂಬ ಸದಸ್ಯರು ಮತ್ತು ಜೇನು ಗೂಡು ಕಟ್ಟವಾಗ ಅವಿರಬಹುದಾದ ಒಟ್ಟಾರೆ ತೂಕದ ಪ್ರಮಾಣವನ್ನು ಹೊರಬಹುದಾದ ಸಣ್ಣ ಕಡ್ಡಿಗಳಿಗೆ ಅಂಟು ಅಂಟಿಸಿ ಗೂಡು ಕಟ್ಟುತ್ತಾವೆ.
ಬಹುಶಃ ಇವೇ ಕುಟುಂಬಗಳಿಗೆ ಉತ್ತಮ ಸಂತಾನೋತ್ಪತ್ತಿ ಕಾರ್ಯ ಮಾಡಿ ಪೋಷಣೆ ಮಾಡಿಕೊಂಡು ಬಂದರೆ ಸದಸ್ಯರು ಹೆಚ್ಚಿ ಇದೇ ಕೋಲುಜೇನಾಗುತ್ತದೆ. ಇನ್ನೂ ಕೆಲವೊಮ್ಮೆ ಕೋಲು ಜೇನುಗಳಲ್ಲಿ ವಿಭಜನೆಯಾಗಿ ಕೆಲವೊಮ್ಮೆ ಒಂದು ಗುಂಪಿಗೆ ಹೆಚ್ಚು ಹುಳುಗಳು ಬೇರ್ಪಟ್ಟು ಇನ್ನೊಂದು ಗುಂಪಿನಲ್ಲಿ ಉಳಿಯುವ ಕಡಿಮೆ ಪ್ರಮಾಣದ ಹುಳುಗಳೇ ಈ ಪಿಟ್ ಜೇನು ಎಂದು ನನ್ನ ಅನಿಸಿಕೆ.. ಆದರೆ ಮೂಲತಃ ಕಿರುಜೇನು ಕಚ್ಚುವುದಿಲ್ಲ. ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿಸುತ್ತಾವೆ. ಇದರಲ್ಲಿ ತುಪ್ಪ ಗರಿಷ್ಠ ಇನ್ನೂರು ಗ್ರಾಂ ವರೆಗೂ ಸಿಗುತ್ತದೆ.ಈ ಕಿರುಜೇನುಗಳ ಸರಾಸರಿ ಸಂಖ್ಯೆಯಲ್ಲಿ ಕಡಿಮೆಯೇ ಎಂದು ಹೇಳಬಹುದು.ಇದರಿಂದ ಕೆಲವೊಮ್ಮೆ ಬಹಳ ಕಡಿಮೆ ಪ್ರಮಾಣದ ತುಪ್ಪ ಲಭ್ಯವಿರುವ ಕಾರಣ ಜೇನು ತೆಗೆಯಲು ಕಡಿಮೆ ಅಸಕಿ ತೋರಿಸಲಾಗುತ್ತಿದೆ. ಈ ಕಾರಣದಿಂದಲೇ ಈ ಪ್ರಬೇಧ ಕೂಡಾ ಅಳಿವಿನಂಚಿನಲ್ಲಿದೆ.
ಉಷ್ಣ ವಲಯದ ಜೇನು
ಇವು ಜೇನು ಸಂಕುಲದಲ್ಲಿಯೇ ಅತ್ಯಂತ ಅಪರೂಪದ ಗುಣ ಹೊಂದಿರುವ ಹುಳುಗಳು. ಒಂದಷ್ಟು ಉದ್ದನೆಯ ಕಾಂಡಕ್ಕೆ ಗೂಡುಕಟ್ಟಿ ಒಂದು ಗೇಣಿನಿಂದ ಎರಡು ಅಡಿಯಷ್ಟು ಅಗಲ ಕೋಲಿನ ಬೆಂಬಲದಲ್ಲಿ ಗೂಡು ಕಟ್ಟವ ಹುಳುಗಳನ್ನು ಕೋಲುಜೇನು ಎಂದು ಗುರುತಿಸಲಾಗುತ್ತೆ. ಇವು ನಮ್ಮ ಉಷ್ಣವಲಯದ ಎಲ್ಲಾ ರೀತಿಯ ಅರಣ್ಯ ಪ್ರಕಾರಗಳಲ್ಲಿ ಹೆಚ್ಚು ಕಂಡು ಬರುತ್ತವೆ. ತಮ್ಮ ಗೂಡಿಗೆ ಏನಾದರೂ ಅಪಾಯಕಾರಿ ಎಂಬ ಸಂದೇಹ ಬಂದರೂ ಅವು ಅಲ್ಲಿಂದ ಸ್ಥಳ ಬದಲಾಯಿಸಿ ಅಲ್ಲಿಯೇ ಎಲ್ಲಿಯಾದರೂ ಗೂಡುಕಟ್ಟುವವು. ಎಲ್ಲಿಯಾದರೂ ಜೇನು ಹೊಸ ಸ್ಥಳದಲ್ಲಿ ಕುಳಿತುಕೊಂಡ ಕೆಲವೇ ಸಮಯದಲ್ಲಿ ತುಪ್ಪ ಇದೆಯೇ ಎಂದು ನೋಡಿದಾಗ ಅಪಾಯ ಅರಿತ ಅವುಗಳು ಸ್ಥಳ ಬದಲಾಯಿಸಿದ ಹತ್ತಾರು ಉದಾಹರಣೆಗಳಿವೆ. ಆದರೆ ಎರಡ್ಮೂರು ದಿನಗಳು ಗೂಡು ಕಟ್ಟುವ ಕೆಲಸ ಆರಂಭಿಸಿ ಮೊಟ್ಟೆಗಳನ್ನು ಇಟ್ಟ ನಂತರ ಅಪಾಯಕಾರಿ ಎಂದೆನಿಸಿದರೂ ಅವು ಗೂಡು ಬದಲಾಯಿಸದೇ ಶತೃವಿನ ವಿರುದ್ಧ ಹೋರಾಡುತ್ತವೆ. ಆನಂತರದ ದಿನಗಳಲ್ಲಿ ಜೇನಿನ ರಚನೆಯನ್ನೇ ನೋಡಿ ಇದರ ಸಾಧಾರಣ ವಯಸ್ಸನ್ನು ಅಂದಾಜಿಸಬಹುದು.
ಇವುಗಳು ಕಚ್ಚುದ ತೀವ್ರತೆ ಕೋಲು ಜೇನುಗಳಿಗಿಂತ ಅಧಿಕ. ಹೆಜ್ಜೇನುಗಳಿಗಿಂತ ಕಡಿಮೆ. ಉರಿ ಮತ್ತು ಬಾವು ಮದ್ಯಮ ರೀತಿಯಲ್ಲಿ ಇರುತ್ತದೆ. ಇವೇ ತುಡುವೇ ಜೇನು. ಇವುಗಳನ್ನೇ ಪಳಗಿಸಿ ಅವುಗಳಿಗೆ ಪೆಟ್ಟಿಗೆ ಇಟ್ಟು ಇಂದು ಜೇನು ಕೃಷಿಮಾಡುತ್ತಿರುವುದು. ಇಂದು ಎಲ್ಲಾ ಅಂಗಡಿ ಮಾರುಕಟ್ಟೆಗಳಲ್ಲಿ ದೊರಕುವ ಜೇನುತುಪ್ಪ ಇದೇ ತುಡುವೇ ಜೇನಿನಿಂದ ಆದದ್ದು. ಹಿಂದೆ ಈ ಜೇನುಗಳು ಹುತ್ತ ಮರದ ಪೊಟರೆಗಳಲ್ಲಿ ಕತ್ತಾಳಿ ಗುಮ್ಮಿಗಳಲ್ಲಿ ಬೆಟ್ಟಗುಡ್ಡಗಳ ಸಂದುಗಳಲ್ಲಿ ಕೋಟೆ ಕೊತ್ತಲಗಳ ಸಂದುಗಳಲ್ಲಿ ಗೂಡುಕಟ್ಟುತ್ತಿದ್ದವು. ಏಳು ತಲೆ ಜೇನು ಎಂತಲೂ ಕರೆಯುತ್ತಿದ್ದರು.ಎಂಟತ್ತು ಪದರಗಳಲ್ಲಿ ಎರಿಗಳನ್ನು ಸಾಲಿಗೆ ಕಟ್ಟಿ ತುಪ್ಪವನ್ನು ಶೇಖರಿಸುತ್ತಾ ಸಂತಾನೋತ್ಪತ್ತಿ ಮಾಡುತ್ತಾವೆ. ಕೋಲು ಜೇನುಗಳಲ್ಲಿ ಮತ್ತು ಹೆಜ್ಜೇನುಗಳಲ್ಲಿ ತಲೆಯ ಭಾಗದಲ್ಲಿ ಮಾತ್ರ ತುಪ್ಪ ಸೇಖರಿಸುತ್ತಾವೆ. ಆದರೆ ತುಡುವೆ ಜೇನು ಜೇನು ರೊಟ್ಟಿಯ ತುಂಬೆಲ್ಲಾ ಎರಡೂ ಸೈಡ್ ತುಪ್ಪ ಸಂಗ್ರಹಿಸುವುದು ವಿಶೇಷ. ಅದಕ್ಕಾಗಿಯೇ ಇವುಗಳನ್ನು ಕೃಷಿಲಾಭಕ್ಕೆ ಬಳಸಿಕೊಳ್ಳುತ್ತಿರುವುದು.ಕೋಲು ಜೇನು ಮತ್ತು ಹೆಜ್ಜೇನಿಗೆ ಹೋಲಿಸಿದರೆ ಇವುಗಳ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯೇ. ಇವು ಕಾಡು, ಅಡವಿಯಲ್ಲಿರುವವು Wiಟಜ ಆಗಿಯೇ ಇರುತ್ತಾವೆ. ತರಬೇತಿ ಇಲ್ಲದೇ ಜೇನು ಕೀಳುವವರು ಗಂಭೀರ ಸ್ವರೂಪದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಚ್ಚರಿಕೆಯಿಂದ ಇರುವುದು ಒಳಿತು.
ಇದು ಡೇಂಜರಸ್ ಜೇನು
ಜೇನು ಸಂತತಿಯಲ್ಲಿಯೇ ಅತ್ಯಂತ ಅಪಾಯಕಾರಿ ಅಂತ ಗುರುತಿಸಿಕೊಂಡಿರುವವರು ಹೆಜ್ಜೇನುಗಳು. ಈ ಹುಳುಗಳು ಗಾತ್ರದಲ್ಲಿ ದೊಡ್ಡವು. ಇವು ಸಾಮಾನ್ಯವಾಗಿ ಎತ್ತರದ ಮರ, ಕಟ್ಟಡ, ಗುಡ್ಡದ ಬಂಡೆಗಲ್ಲುಗಳ ಅಂಚಿಗೆ ಗೂಡುಕಟ್ಟುತ್ತವೆ. ಇವು ಶತೃಗಳ ದಾಳಿಯಾದಾಗ ರೋಷದೊಂದಿಗೆ ಶತಗತಾಯ ಕಚ್ಚಲೇಬೇಕೆಂದು ದಾಳಿ ಮಾಡುತ್ತವೆ. ಇವುಗಳು ಕಚ್ಚಿದರೆ ಅಪಾಯ ಹೆಚ್ಚು. ವರ್ಷಕ್ಕೆ ಹತ್ತಾರು ಜನ ಹೆಜ್ಜೇನು ದಾಳಿಯಿಂದ ಮರಣಹೊಂದಿದ ಸುದ್ದಿಗಳನ್ನು ನಾವು ಆಗಾಗ ಸುದ್ದಿ ಸಮಾಚಾರಗಳಲ್ಲಿ ಕೇಳುತ್ತಿರುತ್ತೇವೆ. ಇವು ಯಮಸ್ವರೂಪಿ ಹುಳುಗಳು. ಹೆಜ್ಜೇನುಗಳು ದಾಳಿ ಮಾಡಿದರೆ ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ಅವಕಾಶವೂ ಇಲ್ಲ. ಬಾವಿ ಕೆರೆ ನೀರಿಗೆ ಹಾರಿದರೂ ಶತೃವನ್ನು ಕಾದಿದ್ದು ಕಚ್ಚಿ ಬರುತ್ತಾವೆ. ಆದರೂ ಹೆಜ್ಜೇನುಗಳನ್ನು ಬೆಂಕಿ, ಹೊಗೆ ಹಾಕಿ ಹಿಂಸಿಸಿ ಕೆಲವು ಪ್ರಳಯಾಂತಕರು ತುಪ್ಪ ತೆಗೆಯುತ್ತಾರೆ. ಇದರ ತುಪ್ಪ ಇತರ ಜೇನು ತುಪ್ಪಗಳಿಗಿಂತ ಮಧುರ, ಮೃದುವಾಗಿ ಇರದೇ ಗಟ್ಟಿಯಾಗಿದ್ದು, ತುಪ್ಪ ಸ್ವಲ್ಪ ಕಾರ ಮತ್ತು ಗರಂಮಸಾಲ ಮಿಕ್ಸ್ ಆದಂತೆ ಘಾಟು ಇರುತ್ತದೆ.
ಹೆಚ್ಚುತಿಂದರೆ ಹೊಟ್ಟೆಯಲ್ಲಿ ಸಂಕಟವಾಗುವುದು. ಈ ಜೇನುಗಳಲ್ಲಿ ಹತ್ತು ಇಪ್ಪತ್ತು ಕೆಜಿ ತುಪ್ಪ ಸಿಗುವುದು.ಆದರೆ ಇವುಗಳನ್ನು ಬಿಡಿಸಲು ವಿಶೇಷ ತರಬೇತಿ ಮತ್ತು ರಕ್ಷಣಾ ಉಪಕರಣಗಳು ಅಗತ್ಯ. ಹೆಜ್ಜೇನು ಗೂಡುಗಳಿಗೆ ಬೆಂಕಿ ಹಾಕಿ ಅವುಗಳನ್ನು ಸುಟ್ಟು ಜೇನು ತೆಗೆಯುವುದು ಸಾಮಾನ್ಯ. ಕೋಲು ಜೇನಿನಲ್ಲಿ ಹಾಲಿನಂತಹ ಬಾಲ ಹುಳುಗಳ ರೊಟ್ಟಿಯನ್ನು ತಿನ್ನುವ ಹಾಗೆ ಹೆಜ್ಜೇನುಗಳ ರೊಟ್ಟಿಯನ್ನು ತಿನ್ನಲು ಬಾರದು. ಇದರ ಕೋಶಗಳನ್ನು ಬಹಳ ಗಡುಸಾದ ಒರಟು ಮೇಣದಿಂದ ನಿರ್ಮಿಸಿರುತ್ತಾವೆ. ಇದರ ಗೂಡುಗಳನ್ನು ಸುಟ್ಟು ಹಾಕಿದ್ದರಿಂದಲೇ ಹೆಜ್ಜೇನಿನ ಪ್ರಮಾಣ ಕಡಿಮೆಯಾಗಿರುವುದು. ಹೆಜ್ಜೇನುಗಳು ಸಾಂಘಿಕವಾಗಿ ಹತ್ತಾರು ಮನೆಗಳನ್ನು ಒಂದೇ ಕಡೆ ನಿರ್ಮಿಸಿ ಗ್ರಾಮ ನಿರ್ಮಿಸಿಕೊಳ್ಳುವ ಹಾಗೆ ಒಂದೇ ಮರದಲ್ಲಿ ಐವತ್ತು -ನೂರು ಹೆಜ್ಜೇನು ಗೂಡು ಕಟ್ಟಿರುವುದನ್ನು ಬೆಂಗಳೂರಿನ ಲಾಲ್ ಬಾಗ್ ಮತ್ತು ಕುದುರೆಮುಖ ಅರಣ್ಯಗಳಲ್ಲಿ,ಹಾಗೂ ಚನ್ನಗಿರಿ ಭದ್ರಾವತಿಯ ಮದ್ಯದ ಅರಣ್ಯಗಳಲ್ಲಿ ಮಲೆನಾಡು ಭಾಗದಲ್ಲಿ ಇದರ ಸಂತತಿ ಹೆಚ್ಚಿದೆ.
ಅಮೇಜಾನ್ ಜೇನುಗಳ ಅಡ್ಡೆ
ಜೇನುಗಳ ಹುಟ್ಟು ದಕ್ಷಿಣ ಆಫ್ರಿಕಾ ಅಮೇಜಾನ ನಂತಹ ಬೃಹತ್ ಕಾಡಿನಲ್ಲಿ ನಾವು ಇದುವರೆಗೂ ಕೇಳಿರದ ಕಂಡಿರದ ಜೇನು ಸಮೂಹ ಇದ್ದಾವೆ. ಬಹುಶಃ ಇಲ್ಲನವರೂ ಆಕಡೆ ಹೋಗಿ ಅವುಗಳನ್ನು ಪತ್ತೆ ಮಾಡಿಲ್ಲ. ಅಲ್ಲಿನ ವಾತಾವರಣ ಬಿಟ್ಟು ಅವೂ ಬೇರೆ ಕಡೆ ಬರದೇ ನಿಗೂಢವಾಗಿಯೇ ಉಳಿದಿವೆ. ಸಾಮಾನ್ಯವಾಗಿ ಜೇನು ಹುಳುಗಳು ತೊಂದರೆ ಕೊಟ್ಟರೆ ಅಟ್ಟಾಡಿಸಿಕೊಂಡು ಕಚ್ಚುವವು. ಆದರೆ ಅಮೇಜಾನ್ ನ ಕೆಲವು ಜಾತಿಯ ಜೇನುಹುಳುಗಳು ಅವುಗಳಿಗೆ ತೊಂದರೆ ಕೊಡದಿದ್ದರೂ ಅವುಗಳಿಗೆ ಶತೃಗಳೆಂದು ಸಂದೇಹ ಬಂದರೂ ದಾಳಿ ಮಾಡಿ ಮಾರಣಾಂತಿಕವಾಗಿ ಕಚ್ಚುವಂತಹ ಜೇನು ಹುಳುಗಳೂ ಇದ್ದಾವೆ. ಈ ಜಗತ್ತನ್ನ ತುಂಬಿಕೊಂಡಿರೋ ಬೆರಗುಗಳು ನಿಜಕ್ಕೂ ಅಕ್ಷಯಪಾತ್ರೆಯಂಥವು. ನಾವು ತಿಳಿದುಕೊಂಡೆವೆಂದು ಬೀಗೋ ಮುನ್ನವೇ ತಿಳಿಯದೇ ಉಳಿದ ನಿಗೂಢಗಳು ಅಣಿಕಿಸುತ್ವೆ. ಅಂಥಾ ಅನ್ವೇಷಣೆಯ ಕಾಲುದಾರಿಯಲ್ಲಿ ಹೆಜ್ಜೆಯಿಟ್ರೆ ಅದು ಸೀದಾ ಹೆದ್ದಾರಿಗೇ ಕರೆದೊಯ್ದು ತಬ್ಬಿಬ್ಬುಗೊಳಿಸುತ್ತೆ. ಒಟ್ಟಾರೆಯಾಗಿ ಈ ಜಗತ್ತಿನ ಬೆರಗುಗಳು ಮೊಗೆದು ಮುಗಿಯುವಂಥವುಗಳಲ್ಲ. ಅದರಲ್ಲೊಂದು ಅಚ್ಚರಿಯ ಹನಿ ನಮಗೆಲ್ಲ ತೀರಾ ಪರಿಚಿತವಾಗಿರೋ ಜೇನು ನೊಣಗಳ ಬಗೆಗಿದೆ.
ಜೇನು ನೊಣಗಳ ಜೀವನಕ್ರಮ, ಅವುಗಳ ಬದುಕಿನ ರೀತಿ ನಿಜಕ್ಕೂ ಅಚ್ಚರಿ. ಅವು ಗೂಡು ಕಟ್ಟೋ ಶಿಸ್ತು, ಅದರ ಇಂಜಿನೀರಿಂಗು, ಜೀವನ ಕ್ರಮಗಳೆಲ್ಲವೂ ಅಪರಿಮಿತ ಆನಂದ ಮೂಡಿಸುತ್ತೆ. ಈಗ ಹೇಳ ಹೊರಟಿರೋದು ಅವುಗಳ ಮತ್ತೊಂದು ಬಗೆಯ ಸಮ್ಮೋಹಕ ಸಾಮಥ್ರ್ಯದ ಬಗ್ಗೆ. ನಮ್ಮ ದೇಶದ ವೈಚಿತ್ರ್ಯಗಳ ಆಗರದಂತಿರೋ ಮೌಂಟ್ ಎವರೆಸ್ಟ್ ಜಗತ್ತಿನ ಅತೀ ಎತ್ತರದ ಪರ್ವತ. ನಮ್ಮ ಕಣ್ಣಿಗೆ ತುಂಬಾ ಪುಟ್ಟದಾಗಿ ಕಾಣಿಸೋ ಜೇನ್ನೊಣಗಳು ಮೌಂಟ್ ಎವರೆಸ್ಟಿಗಿಂತಲೂ ಎತ್ತರಕ್ಕೆ ಹಾರುತ್ತವೆ ಅಂದ್ರೆ ಅದೇನು ಸುಮ್ಮನೆ ಮಾತಲ್ಲ.
ಲಾಗಾಯ್ತಿನಿಂದಲೂ ಜೇನು ನೊಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಭಾಗವಾಗಿಯೇ ಅವುಗಳ ಮಹಾ ಶಕ್ತಿಯೂ ಅನಾವರಣಗೊಂಡಿದೆ. ಭಾರತದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಬಗೆಯ ಜೇನ್ನೊಣಗಳಿವೆ ಅಂತ ಅಂದಾಜಿಸಲಾಗಿದೆ. ಅದರಲ್ಲಿ ಜಂಬಲ್ಬೀ ಅನ್ನೋ ವರ್ಗ ಅತ್ಯಂತ ಅಪರೂಪದ ಪ್ರಬೇಧವಾಗಿ ಗುರುತಿಸಿಕೊಂಡಿದೆ. ಇದೀಗ ಅಳಿವಿನಂಚಿನಲ್ಲಿರೋ ಜಂಬಲ್ಬೀ ಜಾತಿಯ ಜೇನ್ನೊಣಗಳಿಗೆ ಮೌಂಟ್ ಎವರೆಸ್ಟನ್ನು ಮೀರಿ ಹಾರೋ ಅದ್ಭುತ ಸಾಮರ್ಥ್ಯ ಜೇನುಗಳಿಗೆ ಇದೆಯಂತೆ. ಆದರೆ ಮನುಷ್ಯರ ರಾಕ್ಷಸತ್ವದ ಮುಂದೆ ಅದೆಲ್ಲವೂ ಗೌಣವಾಗಿದೆ. ಈ ಕಾರಣದಿಂದಲೇ ಜೇನು ಸಂತತಿ ನಾಮಾವಶೇಷಗೊಂಡಿದೆ!
ಜೇನಿನ ಮಹತ್ವ
ಹೀಗೆ ಮರೆಯಾಗುತ್ತಿರುವ ಜೇನು ತುಪ್ಪದ ಮಹತ್ವವೇನು ಸಾಮಾನ್ಯದ್ದಲ್ಲ. ಅದು ಇಂದು ವೈದ್ಯಕೀಯ, ವೈಜ್ಞಾನಿಕ ಸಂಶೋಧನೆಯ ಕೇಂದ್ರಬಿಂದುವಾಗಿದೆ. ನಮ್ಮ ಪೂರ್ವಜರು ಈಗಾಗಲೇ ನಿತ್ಯಜೀವನದಲ್ಲಿ ಅನ್ವಯಿಸಿಕೊಂಡ ಜೇನುತುಪ್ಪದ ಹಲವು ಉಪಯೋಗಗಳನ್ನು ಇದು ಸಂಶೋಧನೆಗಳ ಮೂಲಕ ದೃಢಪಡಿಸಿದೆ. ಬಹುಶಃ ಭಾರತೀಯರಷ್ಟು ಆಳವಾಗಿ ಜೇನುತುಪ್ಪದ ಪ್ರಯೋಜನಗಳನ್ನು ಯಾರೂ ಅನ್ವೇಷಣೆ ಮಾಡಿಲ್ಲ. ಜೇನುತುಪ್ಪವನ್ನು ಮನುಕುಲಕ್ಕೆ ಪ್ರಕೃತಿಯ ಉಡುಗೊರೆಯೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಅಡುಗೆಮನೆಯಲ್ಲಿಯೂ ಜೇನುತುಪ್ಪ ಅಗತ್ಯವಾದ ಪದಾರ್ಥವೆಂದು ಇಂದಿಗೂ ಆಚರಣೆಯಲ್ಲಿದೆ. ಜೇನುತುಪ್ಪ ಪೂರ್ವಸಿದ್ಧ ಆಹಾರವಾಗಿ ಮನುಷ್ಯರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆಯುರ್ವೇದ ಮತ್ತು ಸಿದ್ಧ ಎರಡರಲ್ಲೂ ಔಷಧ ಗಳ ಮಾಧ್ಯಮವಾಗಿರುವುದು ಜೇನುತುಪ್ಪದ ಒಂದು ವಿಶೇಷ. ಜೇನುತುಪ್ಪದೊಂದಿಗೆ ಇತರ ಔಷಧಿಗಳನ್ನು ಬೆರೆಸಿದಾಗ, ಔಷಧಿಗಳನ್ನು ದೇಹ ಸುಲಭವಾಗಿ ಮತ್ತು ಶೀಘ್ರವಾಗಿ ಹೀರಿಕೊಳ್ಳುತ್ತದೆ ಹಾಗೂ ರಕ್ತದ ಪರಿಚಲನೆಯ ಮೂಲಕ ನರವ್ಯವಸ್ಥೆಯಲ್ಲಿ ಹರಡುತ್ತವೆ.
ನೈಸರ್ಗಿಕ ಜೇನು ಹಲವಾರು ರೋಗ ಶಮನಕಾರಿ ಗುಣಗಳನ್ನು ಒಳಗೊಂಡಿದೆ. ಆಹಾರದಿಂದ-ಹರಡುವ ರೋಗಗಳ ವ್ಯಾಧಿಜನಕಗಳನ್ನು ಜೇನುತುಪ್ಪ ನಾಶಪಡಿಸಬಹುದು ಎಂದು ವೈದ್ಯಕೀಯ ಸಂಶೋಧನೆಯು ತೋರಿಸಿದೆ. ಪ್ರತಿಜೀವಕಗಳಿಗೆ ಪ್ರತಿರೋಧವನ್ನು ವೃದ್ಧಿಪಡಿಸಿಕೊಂಡಿರುವ ಬ್ಯಾಕ್ಟೀರಿಯಾದ ತಳಿಗಳನ್ನು ಎದುರಿಸುವಲ್ಲಿ ಜೇನುತುಪ್ಪದ ಪ್ರಯೋಗ ಭರವಸೆ ಮೂಡಿಸಿದೆ. ಹಲವು ರೋಗಗಳಿಗೆ ಜೇನುತುಪ್ಪ ಪರಿಣಾಮಕಾರಿ ಔಷಧ ಎಂಬುದನ್ನು ಸಂಶೋಧನೆಯು ಮನದಟ್ಟು ಮಾಡಿಸಿದೆ. ಹೀಗೆ ಜೇನುತುಪ್ಪದ ಉಪಯೋಗಗಳನ್ನು ದೊಡ್ಡದಿದೆ. ಕಣ್ಣಿನ ಚಿಕಿತ್ಸೆ, ಚರ್ಮ ಖಾಯಿಲೆಗಳು, ವಾತ ಪಿತ್ತ, ಕಫ, ಮಲಬದ್ದತೆ, ಹೃದಯರೋಗಗಳು ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳವರೆಗೆ ಇದು ಪರಿಣಾಮಕಾರಿ ಔಷಧವೆಂಬುದನ್ನು ಈಗಾಗಲೇ ಋಉಜುವಾತುಪಡಿಸಿದೆ. ಇನ್ನುಳಿದಂತೆ ದಟ್ಟವಾದ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪ ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ. ಇಂಥಾ ಜೇನುತುಪ್ಪ ಜೇನುನೊಣಗಳು ವೈವಿಧ್ಯಮಯ ಗಿಡಮರಗಳು ,ಎಲ್ಲಾ ರೀತಿಯ ಹೂವುಗಳ ಮಕರಂದವನ್ನು ಸಂಗ್ರಹಿಸಿರುವುದರಿಂದ ಈ ಜೇನುತುಪ್ಪ ವೈದ್ಯಕೀಯವಾಗಿ ಅತ್ಯಂತ ಮಹತ್ವ ಹೊಂದಿದೆ.
ಆದರೆ ಇಂಥಾ ಜೇನುಗಳು ಮೂಲ ಪ್ರಮಾಣದಲ್ಲಿ ಈಗ ಇಲ್ಲ. ಜೇನುನೊಣಗಳಿಂದಲೇ ನೈಸರ್ಗಿಕವಾಗಿ ಹೂವಿನಿಂದ ಹೂವಿಗೆ ಮಕರಂದ ಹೀರಲು ಹೋಗುವ ಪ್ರಕ್ರಿಯೆ ಪರಾಗಸ್ಪರ್ಶ. ಈ ಪರಾಗಸ್ಪರ್ಶ ಕ್ರಿಯೆ ನೈಸರ್ಗಿಕವಾಗಿ ಆಗುವುದರಿಂದಲೇ ರೈತರ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ಜೇನು ಸಾಕಾಣಿಕೆ ಮಾಡಿರುವ ತೋಟಗಳ ಸುತ್ತಾಮುತ್ತಾ ಅಲ್ಲಿನ ತೆಂಗು, ಅಡಿಕೆ ಹುಣಸೇಮರಗಳೂ ಸೇರಿದಂತೆ ಹೆಚ್ಚು ಇಳುವರಿ ಕಂಡಿದ್ದಾರೆ. ಭೂಮಿಯ ಮೇಲೆ ಜೇನುಹುಳಗಳೆಂಬ ಕೀಟಗಳು ಇರುವುದರಿಂದಲೇ ಇಂದಿಗೂ ಸಕಲ ಜೀವರಾಶಿಗೆ ಆಹಾರ ಉತ್ಪಾದನೆ ಆಗುತ್ತಿದೆ. ಪ್ರಕೃತಿಯಲ್ಲಿ ಎಲ್ಲವೂ ಪೂರಕ ಸಂಬಂಧ ಹೊಂದಿವೆ. ಜಗತ್ತಿನಲ್ಲಿ ಸುಮಾರು ಹದಿನಾಲಕ್ಕು ಸಾವಿರ ಬಗೆಯ ಜೇನು ಹುಳುಗಳು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಮನುಷ್ಯನ ಅತೀ ಶೋಷಣೆ ಮತ್ತು ಕಾಡ್ಗಿಚ್ಚಿನಿಂದಾಗಿ ಇವುಗಳಲ್ಲಿ ಅನೇಕ ಜಾತಿಯ ಹುಳುಗಳು ಅಪಾಯದ ಅಂಚಿನಲ್ಲಿದೆ. ಕೃಷಿಯಲ್ಲಿ ಉತ್ಪಾದನೆಯ ಸ್ಪರ್ಧೆಗೆ ಇಳಿದು ಅತಿಯಾಸೆಗೆ ಬಿದ್ದ ಮಾನವ ಯಾವು ಯಾವೋ ಅಪಾಯಕಾರಿ ಕೀಟನಾಶಕಗಳನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡುತ್ತಾ ಬಂದಿದ್ದಾನೆ. ಇದರಿಂದಾಗಿಯೇ ಜೇನು ಪ್ರಬೇಧಗಳೆಲ್ಲ ನಾಶವಾಗುವ ಹಂತದಲ್ಲಿವೆ. ಅದನ್ನು ತಡೆಗಟ್ಟದಿದ್ದರೆ ಘೋರ ದುರಂತ ಕಟ್ಟಿಟ್ಟ ಬುತ್ತಿ!