-ಎಂತೆಂಥಾ ಜೇನು ನೊಣಗಳಿವೆ ಗೊತ್ತಾ?
-ಆ ಜೇನು ಕಚ್ಚಿದ್ರೆ ಬದುಕೋದೇ ಡೌಟು!
ಈ ಜಗತ್ತಿನ ಜೀವ ಚಕ್ರದಲ್ಲಿ ಒಂದೇ ಒಂದು ಕೀಟ ಪ್ರಬೇಧ ಅವಸಾನ ಹೊಂದಿದರೂ ಕೂಡಾ ಒಟ್ಟಾರೆ ಆಹಾರ ಚಕ್ರದಲ್ಲಿಯೇ ಬದಲಾವಣೆಗಳಾಗುತ್ತವೆ. ಇಲ್ಲಿ ಯಾವ ಕೀಟಗಳೂ ಕೂಡಾ ನಗಣ್ಯವಲ್ಲ. ದುರಂತವೆಂದರೆ, ಕೀಟಗಳೆಂದರೆ ಅತ್ಯಂತ ಹಗುರವಾಗಿ ಕಾಣುವ ಮನಃಸ್ಥಿತಿ ಮನುಷ್ಯ ಪ್ರಾಣಿಗಳನ್ನು ಆವರಿಸಿಕೊಂಡಿದೆ. ಈ ಕಾರಣದಿಂದಲೇ ನಾಶವಾದರೆ, ಒಂದಿಡೀ ಜೀವಸಂಕುಲವೇ ಅವಸಾನ ಹೊಂದುವ ಅಪಾಯವಿರುವಂಥಾ ಅನೇಕ ಕೀಟಗಳಿಂದು ಅಪಾಯದ ಅಂಚಿನಲ್ಲಿವೆ. ಅದರಲ್ಲಿಯೂ ವಿಶೇಷವಾಗಿ ಪರಾಗಸ್ಪರ್ಶದ ಮೂಲಕ ಸಕಲ ಬೆಳೆಗಳಲ್ಲಿಯೂ, ಸಸ್ಯ ವಿಕಾದಲ್ಲಿಯೂ ಪ್ರಧಾನ ಪಾತ್ರ ವಹಿಸುವ ಜೇನುಗಳೇ ಇಂದು ಅವಸಾನದಂಚಿನಲ್ಲಿವೆ. ಒಂದು ವೇಢಳೆ ಜೇನಿನ ಸಂತತಿ ಇದೇ ರೀತಿ ಸಾವಿನತ್ತ ಮುಖ ಮಾಡಿದರೆ ಖಂಡಿತವಾಗಿಯೂ ಮನುಷ್ಯ ಮಾತ್ರರಿಗೆಲ್ಲ ಸಾವೊಂದೇ ಅಂತಿಕ ಆಯ್ಕೆಯಾಗಿ ಉಳಿದುಕೊಳ್ಳುತ್ತೆ!
ಹಾಗೆ ನೋಡಿದರೆ, ಈ ಜೇನುಗಳ ಸಂತತಿ ಸಂಕೀರ್ಣವಾದ, ಇಂಟರೆಸ್ಟಿಂಗ್ ಆದ ಜೀವನ ಕ್ರಮವನ್ನು ಒಳಗೊಂಡಿದೆ. ಅವುಗಳ ಜೀವನ ಕ್ರಮವನ್ನು ಸಾಕಷ್ಟು ಅಧ್ಯಯನಗಳ ಮೂಲಕ ಪತ್ತೆ ಹಚ್ಚಲಾಗಿದೆ. ಈಗಂತೂ ಜೇನು ಸಾಕಣೆ ಅನ್ನೋದು ಟ್ರೆಂಡ್ ಆಗಿ ಬಿಟ್ಟಿದೆ. ಈ ಮೂಲಕ ಜೇನು ಕುಟುಂಬಗಳನ್ನು ಸಾಕುಉತ್ತಾ, ಅವುಗಳೊಂದಿಗೆ ಬೆರೆಯುತ್ತಾ ಜೇನುಗಳ ಕೆಲಸಗಾರಿಕೆ, ಶ್ರಮದ ಬದುಕನ್ನು, ಶಿಸ್ತನ್ನು ಕಂಡು ಎಲ್ಲರೂ ಅಚ್ಚರಿಗೊಳ್ಳುತ್ತಿದ್ದಾರೆ. ಇಂಥಾ ಜೇನುಗ್ಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಅದೆಲ್ಲದರಲ್ಲಿಯೂ ಕೊಂಚ ಸಾಮ್ಯತೆ ಮತ್ತು ಸಾಕಷ್ಟು ವೈವಿಧ್ಯತೆಗಳು ಕಾಣ ಸಿಗುತ್ತವೆ. ಈ ಜೇನು ಪ್ರಬೇಧಗಳ ಬಗ್ಗೆ ತಿಳಿದುಕೊಳ್ಳೋದೇ ನಿಜವಾಗಿಯೂ ಥ್ರಿಲ್ಲಿಂಗ್ ವಿಚಾರ. ಅದು ಬಗೆದಷ್ಟೂ ಅಚ್ಚರಿಒಗಳ ಜೇನನ್ನು ಉಣಬಡಿಸುತ್ತಾ ಅಚ್ಚರಿಗೀಡು ಮಾಡುತ್ತವೆ.
ಇದು ಪಾಪದ ಜೇನು

ಈ ಜೇನುಗಳು ಪ್ರದೇಶದಿಂದ ಪ್ರದೇಶಕ್ಕೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತವೆ. ಸೊಳ್ಳೆಗಳ ಗಾತ್ರಕ್ಕಿಂತ ತುಸು ದಪ್ಪಕಿರುತ್ತವೆ. ಇವು ಸಾಮಾನ್ಯವಾಗಿ ಹಳೆಯಕಲ್ಲಿನ ಗೋಡೆಗಳ ಸಂದುಗಳಲ್ಲಿ, ಕೆಲವು ವಿಶೇಷ ಬೆಟ್ಟಗುಡ್ಡಗಳಲ್ಲಿ, ಶಿಲಾ ರಚನೆಗಳಲ್ಲಿ ಗೂಡುಕಟ್ಟುತ್ತಾವೆ.ಇವು ಸಂಖ್ಯಾ ದೃಷ್ಟಿಯಿಂದ ಕಡಿಮೆಯ ಸಂಖ್ಯೆ ಇದ್ದು ಬೇಕರಿಯ ಚೌಕಾಕಾರದ ಒಂದೋ ಎರಡೋ ಬ್ರೆಡ್ಡನ್ನು ನಿಧಾನವಾಗಿ ಸೇರಿಸಿದರೆ ಯಾವ ಆಕಾರ ಪಡೆಯಬಹುದೋ ಆ ರೀತಿಯಾಗಿ ಅವು ಗೂಡು ಕಟ್ಟಿದ ಸ್ಥಳದ ಆಕಾರಕ್ಕನುಗುಣವಾಗಿ ಕಟ್ಟುತ್ತವೆ.ಆ ಗೂಡಿನಲ್ಲಿ ಹದಿನೈದು ಇಪ್ಪತ್ತು ಶೈಶವಾವಸ್ಥೆಯ ಕೋಶಗಳು, ಮೇಲಿನ ಕೆಲವು ಕೋಶಗಳಲ್ಲಿ ನೀರಿನ ಹನಿಯಂತ ತುಪ್ಪವೂ ಕಂಡು ಬಂತು.ಕೈಯಲ್ಲಿ ಹಿಚುಕಿಹಾಕಿದರೂ ಕಚ್ಚದೇ ಇರುವ ಅಮಾಯಕ ಪಾಪಿ ನೋಣಗಳಿವು.ಇವು ಇತರ ಜೇನುಗಳಂತೆ ಸಾವಿರಾರು ಸಂಖ್ಯೆಯಲ್ಲಿರದೇ ಇವುಗಳ ಕುಟುಂಬದಲ್ಲಿ ಸದಸ್ಯ ಹುಳುಗಳೇ ಕಡಿಮೆ ಸಂಖ್ಯೆಯಲ್ಲಿ ಇರುತ್ತಾವೆ. ನಿಸರ್ಗದಲ್ಲಿ ಈ ಪ್ರಭೇದದ ಹುಳುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದಾವೆ. ಅರಣ್ಯಗಳಿಲ್ಲದೇ ಕಾಡು ಪ್ರಾಣಿಗಳು ಇರಲು ಹೇಗೆ ಸಾದ್ಯವಿಲ್ಲವೋ ಹಾಗೆ ಕೆಲವು ಕ್ರಿಮಿ ಕೀಟ ಜೀವಿಗಳಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಧಕ್ಕೆ ಬಂದಿದ್ದರಿಂದ ಉಳಿದಿರುವ ಅನೇಕ ಜೀವ ಸಂಕುಲವೇ ಇಂದು ಅಪಾಯದ ಹಂಚಿನಲ್ಲಿರುವ ಜೀವಿಗಳಾಗಿವೆ. ಇನ್ನೂ ಕೆಲವು ಜೀವಸಂಕುಲ ಈಗಾಗಲೇ ನಾಮಾವಶೇಷವಾಗಿ ಉಳಿದುಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ.
ಮೊಜೆಂಟಿ ಜೇನು ಹುಳುಗಳು ಹೆಚ್ಚಿನ ಪ್ರಮಾಣದಲ್ಲಿ ಇರ ಬೇಕಿತ್ತು. ಸಾಮಾನ್ಯವಾಗಿ ಇದನ್ನು ತಿನ್ನುವ ಅಭ್ಯಾಸ ಕಡಿಮೆ ಇರುವುದರಿಂದ ಇವುಗಳ ಪರಿಚಯ ಬಹಳ ಜನಗಳಿಗೆ ಇಲ್ಲ.ಅಲ್ಲದೇ ಜನರ ಕೈಗೆ ಅಷ್ಟು ಸುಲಭವಾಗಿ ಸಿಗದೇ ಇರುವುದು ಮತ್ತೊಂದು ಕಾರಣ.ಮಾನವನ ಪ್ರತ್ಯಕ್ಷ ಕ್ರೌರ್ಯಕ್ಕೆ ಇವು ಒಳಗಾಗಿಲ್ಲ. ನಿಸರ್ಗದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೆ siಟಿgಟe siಟಿgಟe ಹುಳುಗಳು ಅನೇಕ ತೆರನಾದ ಹೂಗಳ ಮೇಲೆ ಅಲ್ಲಲ್ಲಿ ಕಾಣಬಹುದಾದರೂ ಇವೇ ‘ಮಿಸುರಿ ಜೇನು’ಹುಳು ಎಂದು ಗುರುತಿಸುವ ಬುದ್ಧಿವಂತರು ನಮ್ಮಲ್ಲಿ ತೀರಕಡಿಮೆ.ಯಾವುದೋ ನೊಣ ಎಂದಷ್ಟೇ ನಾವು ಭಾವಿಸಿ ಸುಮ್ಮನಾಗುತ್ತೇವೆ.ಅಪರೂಪಕ್ಕೆ ಈ ಮಿಸುರಿ ಜೇನನ್ನು ಸಾಕುವವರೂ ಇದ್ದಾರೆ. ಔಷಧೀಯವಾಗಿ ಇದರ ತುಪ್ಪ ಮತ್ತು ಮಕರಂದಕ್ಕೆ ವಿಶೇಷವಾದ ಬೇಡಿಕೆ ಇದೆ.ಆದರೆ ಇಂದಿನ ಆಧುನಿಕ ವೈದ್ಯಕೀಯ ವ್ಯಾಪಕ ದಂದೆಯ ಬಲೆಯನಡುವೆ ಇವುಗಳನ್ನು ಕೊಳ್ಳುವವರಾಗಲೀ, ಇವುಗಳ ಮಹತ್ವ ಬಲ್ಲವರಾಗಲಿ, ಪೋಷಿಸುವವರಾಗಲಿ ಇಲ್ಲ.ಅಲ್ಲದೇ ಈ ಹುಳಗಳ ಸಂತಾನ ಇತರೆ ಜೇನುಹುಳುಗಳಂತೆ ಅಪರಿಮಿತವಾಗಿ ಇಲ್ಲ..ಇವು ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲೇ ಇದ್ದು ಅಲ್ಲಿಯೇ ವಾಸಮಾಡುತ್ತಿರುತ್ತಾವೆ.ಅಥವಾ ಇವುಗಳ ಜೀವೀತಾವಧಿ ಬಹಳ ಕಡಿಮೆ ಇರಬಹುದು.ಆದ್ದರಿಂದಲೇ ಸುಮಾರು ವರ್ಷಗಳ ಕಾಲ ನಾನು ವೀಕ್ಷಣೆ ಮಾಡಿರುವುದರಿಂದ ಇವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದುದನ್ನು ಕಂಡಿಲ್ಲ. ಆದ್ದರಿಂದಲೇ ಇವು ಹೇರಳವಾಗಿ ಕಂಡು ಬರದೇ ಬಹಳ ವೀರಳವಾಗಿ ಅಲ್ಲಲ್ಲಿ ಕಂಡುಬರುತ್ತಾವೆ.
ಇಂಟರೆಸ್ಟಿಂಗ್ ಜೇನು

ಮೊದಲೇ ಹೇಳಿದಂತೆ ಜೇನುಗಳಲ್ಲಿ ವೈವಿಧ್ಯತೆಯಿದೆ. ಈ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇರುತ್ತವೆ. ಇವು ನೇತಾಡುವ ಗಿಡ, ಪೊದೆ, ಬಳ್ಳಿ, ಗೊಡೆ ಸಂದು, ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಅಂದಾಜು ಇನ್ನೂರು ಮುನ್ನೂರರಿಂದ ಎಂಟುನೂರು ಸಾವಿರದ ವರೆಗೆ ಇರಬಹುದು. ಇದು ಒಂಥರಾ ವಿಭಕ್ತ ಕುಟುಂಬದಂತಿದ್ದು ಸಂತಾನೋತ್ಪತ್ತಿ ಕಾರ್ಯಕ್ಕಾಗಿಯೇ ಶ್ರದ್ಧೆಯಿಂದ ಕುಟುಂಬವನ್ನು ನೋಡಿಕೊಳ್ಳುತ್ತಾವೆ. ಉಷ್ಣವಲಯದ ಎಲ್ಲಾ ಭಾಗದಲ್ಲೂ ಕಂಡು ಬರುವ ಇವು ಕೋಲು ಜೇನಿನಂತೆಯೇ ಇದರ ತುಪ್ಪವು ಇರುತ್ತದೆ. ಒಂದೇ ವ್ಯತ್ಯಾಸ ಮಿತ ಕುಟುಂಬ ಸದಸ್ಯರು ಮತ್ತು ಜೇನು ಗೂಡು ಕಟ್ಟವಾಗ ಅವಿರಬಹುದಾದ ಒಟ್ಟಾರೆ ತೂಕದ ಪ್ರಮಾಣವನ್ನು ಹೊರಬಹುದಾದ ಸಣ್ಣ ಕಡ್ಡಿಗಳಿಗೆ ಅಂಟು ಅಂಟಿಸಿ ಗೂಡು ಕಟ್ಟುತ್ತಾವೆ.
ಬಹುಶಃ ಇವೇ ಕುಟುಂಬಗಳಿಗೆ ಉತ್ತಮ ಸಂತಾನೋತ್ಪತ್ತಿ ಕಾರ್ಯ ಮಾಡಿ ಪೋಷಣೆ ಮಾಡಿಕೊಂಡು ಬಂದರೆ ಸದಸ್ಯರು ಹೆಚ್ಚಿ ಇದೇ ಕೋಲುಜೇನಾಗುತ್ತದೆ. ಇನ್ನೂ ಕೆಲವೊಮ್ಮೆ ಕೋಲು ಜೇನುಗಳಲ್ಲಿ ವಿಭಜನೆಯಾಗಿ ಕೆಲವೊಮ್ಮೆ ಒಂದು ಗುಂಪಿಗೆ ಹೆಚ್ಚು ಹುಳುಗಳು ಬೇರ್ಪಟ್ಟು ಇನ್ನೊಂದು ಗುಂಪಿನಲ್ಲಿ ಉಳಿಯುವ ಕಡಿಮೆ ಪ್ರಮಾಣದ ಹುಳುಗಳೇ ಈ ಪಿಟ್ ಜೇನು ಎಂದು ನನ್ನ ಅನಿಸಿಕೆ.. ಆದರೆ ಮೂಲತಃ ಕಿರುಜೇನು ಕಚ್ಚುವುದಿಲ್ಲ. ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿಸುತ್ತಾವೆ. ಇದರಲ್ಲಿ ತುಪ್ಪ ಗರಿಷ್ಠ ಇನ್ನೂರು ಗ್ರಾಂ ವರೆಗೂ ಸಿಗುತ್ತದೆ.ಈ ಕಿರುಜೇನುಗಳ ಸರಾಸರಿ ಸಂಖ್ಯೆಯಲ್ಲಿ ಕಡಿಮೆಯೇ ಎಂದು ಹೇಳಬಹುದು.ಇದರಿಂದ ಕೆಲವೊಮ್ಮೆ ಬಹಳ ಕಡಿಮೆ ಪ್ರಮಾಣದ ತುಪ್ಪ ಲಭ್ಯವಿರುವ ಕಾರಣ ಜೇನು ತೆಗೆಯಲು ಕಡಿಮೆ ಅಸಕಿ ತೋರಿಸಲಾಗುತ್ತಿದೆ. ಈ ಕಾರಣದಿಂದಲೇ ಈ ಪ್ರಬೇಧ ಕೂಡಾ ಅಳಿವಿನಂಚಿನಲ್ಲಿದೆ.
ಉಷ್ಣ ವಲಯದ ಜೇನು









