ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ ಕರಿಯರ್ ಗೆ ಹೊಸ ಇಮೇಜ್ ಫ್ಲಸ್ ಮೈಲೇಜ್ ತಂದು ಕೊಟ್ಟಿದ್ದು ಪುಷ್ಪ ಸಿನಿಮಾ..ಪುಷ್ಪ ಅಂದ್ರೆ ಫ್ಲವರ್ ಅಲ್ಲ ಫೈಯರ್ ಅಂತಾ ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಉತ್ತರದಿಂದ ದಕ್ಷಿಣದತ್ತ ಹೊರಟ ಪುಷ್ಪರಾಜ್ ಬಾಲಿವುಡ್ ಬಾಕ್ಸಾಫೀಸ್ ಚಿಂದಿ ಊಡಾಯಿಸಿ ಬಿಟ್ಟಿದ್ದ…..ಆಂಧ್ರಪ್ರದೇಶದ ಶೇಷಾಚಲಂ ರಕ್ತಚಂದನ ಕಥೆ ಭಾಷೆ ಗಡಿ ಗುಡಿ ದಾಟಿ ಪ್ರೇಕ್ಷಕರನ್ನು ಚಿತ್ರಮಂದಿರತ್ತ ಮುಖ ಮಾಡುವಂತೆ ಮಾಡಿತ್ತು. ಕೋವಿಡ್ ಬಳಿಕ ಸೌತ್ ಸಿನಿರಂಗದ ಮಾರುಕಟ್ಟೆ ವಿಸ್ತರಿಸಿಕೊಂಡು ತಗ್ಗೋದೆ ಇಲ್ಲ ಅಂತಾ ಅಬ್ಬರಿಸಿದ್ದ ಅಲ್ಲುಗಾರು ಬರೋಬ್ಬರಿ 400 ಕೋಟಿಗೂ ಅಧಿಕ ಹಣ ಬಾಚಿ ಗಹಗಹಿಸಿದ್ದರು. ಪುಷ್ಪ ಮೊದಲ ಅಧ್ಯಾಯದ ಯಶಸ್ಸು ಫ್ಲಸ್ ಸಕ್ಸಸ್ ಕಂಡಿರುವ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಗಾರು ಚಾಪ್ಟರ್ 2 ಕಥೆಯನ್ನು ತಿದ್ದಿ ತೀಡಿ ಹೊಸರೂಪಕ್ಕಿಳಿಸಿ ಶೂಟಿಂಗ್ ಅಖಾಡದಲ್ಲೀಗ ಬ್ಯುಸಿಯಾಗಿದ್ದಾರೆ.

ಪುಷ್ಪ 2 ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಐದೈದು ಭಾಷೆಯಲ್ಲಿ ಟೀಸರ್ ಬಿಟ್ಟು ಹುಬ್ಬೇರಿಸುವಂತೆ ಮಾಡಿರುವ ಸುಕುಮಾರ್ ಗಾರು ನನ್ನದೇ ರೂಲ್ ಎನ್ನುತ್ತಿರುವ ಪುಷ್ಪರಾಜನ ಕಥೆಯನ್ನು ಪ್ರೇಕ್ಷಕರ ಎದುರು ಪ್ರಸ್ತುತಪಡಿಸುವಲ್ಲಿ ನಿರತರಾಗಿದ್ದಾರೆ. ಮುಂದಿನ ವರ್ಷ ಸ್ವಾತಂತ್ರ್ಯ ದಿನದಂದು ಬೆಳ್ಳಿಭೂಮಿಯಲ್ಲಿ ಮೆರವಣಿಗೆ ಹೊರಡಲಿರುವ ಸಿನ್ಮಾಗಾಗಿ ಹಗಲು ರಾತ್ರಿ ಶ್ರಮಿಸ್ತಿದ್ದಾರೆ. ಕೆಜಿಎಫ್ ಸರಣಿ ಸಿನ್ಮಾಗಳನ್ನು ಮೀರಿದ್ದು ನಾವು ಮಾಡೇ ಮಾಡ್ತೀನಿ ಅಂತಾ ಮಿಸ್ಟರ್ ಅಲ್ಲುಗಾರು ಹಾಗೂ ಸುಕುಮಾರ್ ಗಾರು ಶಪಥ ಮಾಡಿ ಶೂಟಿಂಗ್ ಅಖಾಡದಲ್ಲೀಗ ಮಗ್ನರಾಗಿದ್ದಾರೆ. ಹೀಗಿರುವಾಗ್ಲೇ ಪುಷ್ಪ ಅಂಗಳದಲ್ಲಿ ಹೊರಬಿದ್ದಿರುವ ಬಡಾ ಖಬರ್ ವೊಂದು ತೆಲುಗು ಮಂದಿಯ ನಿರ್ಮಾಪಕರನ್ನು ಬಾಯ್ ಮೇಲೆ ಕೈ ಇಡುವಂತೆ ಮಾಡಿದೆ.
ನಾವು ಮೊದ್ಲೇ ಹೇಳಿದಂಗೆ ಪುಷ್ಪ ಮೊದಲ ಅಧ್ಯಾಯಕ್ಕಿಂತ ಪುಷ್ಪ ಎರಡನೇ ಅಧ್ಯಾಯವನ್ನು ಹತ್ತು ಪಟ್ಟು ದೊಡ್ಡದಾಗಿ ನಿರ್ಮಾಣ ಮಾಡಲಾಗ್ತಿದೆ. ಮೇಕಿಂಗ್ ಕಥೆ ಅಭಿನಯ ಯಾವುದೇ ವಿಚಾರದಲ್ಲಿಯೂ ನೋ ಕಂಪ್ರೊಮೈಸ್ ಎಂದಿರುವ ಅಲ್ಲು ಅರ್ಜುನ್ ಪುಷ್ಪ ಸೀಕ್ವೆಲ್ ಸಂಭಾವನೆ ಬೇಡ ಎಂದಿದ್ದಾರಂತೆ. ಅರೇ..ಫ್ರೀಯಾಗಿ ಪುಷ್ಪರಾಜ್ ಸಿನ್ಮಾಗಾಗಿ ದುಡಿಯುತ್ತಿದ್ದಾರೆ? ಅದ್ಯಾಕೆ ಸಂಭಾವನೆ ಒಲ್ಲೆ ಎಂದಿಬಿಟ್ರು? ವೇಟ್ ವೇಟ್ ಅಲ್ಲು ಅರ್ಜುನ್ ಪುಷ್ಪ ಸಂಭಾವನೆ ಪಡೆಯುತ್ತಿಲ್ಲ. ನಿಜವೇ ಹಾಗಂತ ಅವ್ರು ಪೇಮೆಂಟ್ ಬೇಡ ಎಂದಿಲ್ಲ. ಶೇರ್ ರೂಪದಲ್ಲಿ ಅದನ್ನು ಪಡೆಯುತ್ತಿದ್ದಾರೆ ಎನ್ನುವ ಬಿಸಿಬಿಸಿ ಸುದ್ದಿ ತೆಲುಗು ಸಿನಿ ಬಜಾರ್ ನಲ್ಲಿ ಹರಿದಾಡ್ತಿದ್ದಾರೆ. ರಾಕಿಭಾಯ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸಂಭಾವನೆ ಬದಲು ಲಾಭದ ಶೇರ್ ಪಡೆದುಕೊಂಡಿದ್ದರು. ಥೇಟ್ ರಾಕಿಯಂತೀಗ ಪುಷ್ಪರಾಜ್ ನೋ ರೆಮ್ಯೂನರೇಷನ್..ಒನ್ಲಿ ಶೇರಿಂಗ್ ಎಂದಿದ್ದಾರಂತೆ.
ಪುಷ್ಪ ಚಾಪ್ಟರ್ 2 ಸಿನಿಮಾದ ಕ್ರೇಜ್ ಜೋರಾಗಿದೆ. ಬಾಲಿವುಡ್ ನವರೂ ಅಲ್ಲು ಚಿತ್ರವನ್ನು ರತ್ನಕಂಬಳಿ ಹಾಸಿ ಸ್ವಾಗತಿಸ್ತಿದ್ದಾರೆ. ಈಗಾಗ್ಲೇ ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಬಿಕರಿಯಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗೀಗಾ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿದೆಯಂತೆ. ಇನ್ನೇನೂ ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಲೂಟಿ ಮಾಡ್ತಿರುವ ಪುಷ್ಪ ಸೀಕ್ವೆಲ್ ಈ ಬಾರಿ ಸಾವಿರ ಕೋಟಿ ಕ್ಲಬ್ ಸೇರಲಿದೆ ಎಂಬ ಲೆಕ್ಕಚಾರ ಶುರುವಾಗಿದೆ.

ಒಂದ್ ವೇಳೆ ಪುಷ್ಪ-2 ಸಿನಿಮಾ ಸಾವಿರ ಕೋಟಿ ರೂಪಾಯಿ ಬಾಚಿಕೊಂಡ್ರೆ ಅಲ್ಲುಗೆ ಸಿಗುವ ಸಂಭಾವನೆ ಎಷ್ಟು ಸಿಗುತ್ತೇ? ಆ ಲೆಕ್ಕಾಚಾರ ಕೇಳಿದ್ರೆ ನಿಮ್ಮ ತಲೆ ತಿರುವುದು ಗ್ಯಾರೆಂಟಿ…ಮೂಲಗಳ ಪ್ರಕಾರ ಸಿನಿಮಾದ ಕಲೆಕ್ಷನ್ ನಲ್ಲಿ 33 ಪರ್ಸೆಂಟ್ ಹಣವನ್ನು ನೀಡುವಂತೆ ಒಪ್ಪಂದವಾಗಿದೆಯಂತೆ. ಈ ವಿಷ್ಯ ನಿಜವೇ ಆಗಿದ್ದಲ್ಲಿ ಸ್ಟೈಲೀಶ್ ಸ್ಟಾರ್ ಬರೋಬ್ಬರಿ 333 ಕೋಟಿ ಹಣವನ್ನು ಜೇಬಿಸಿಕೊಳ್ಳಲಿದ್ದಾರೆ. ಹಾಗ್ ನೋಡಿದ್ರೀಗ ಸೂಪರ್ ಸ್ಟಾರ್ಸ್ ಗಳ ಸಂಭಾವನೆ 100 ಕೋಟಿ ಮೀರಿದೆ. ಬಟ್ ಒಬ್ಬ ಸ್ಟಾರ್ಸ್ ಗೆ 300 ಕೋಟಿಗೂ ಅಧಿಕ ಪೇಮೆಂಟ್ ಕೊಡುವುದು ಅಂದ್ರೆ ಸುಮ್ಮನೇನಾ? ಇನ್ನೊಂದು ಮಾಹಿತಿ ಪ್ರಕಾರ ಪುಷ್ಪ-2 1000 ಕೋಟಿ ಕಲೆಕ್ಷನ್ ಮಾಡಿದ್ರೆ, ವಿತರಕ ಕಡೆಯಿಂದ ಶೇರ್ ಅಂತಾ 500 ಕೋಟಿ ಬರುತ್ತದೆ. ಅದ್ರಲ್ಲಿ ಟ್ಯಾಕ್ಸ್ ಕಟ್ ಆಗಿ 100 ಕೋಟಿ ಹೋದ್ರೂ 450 ಕೋಟಿಯಂತೂ ಸಿಗಲಿದೆ. ಅದ್ರಲ್ಲಿ 33 ಪರ್ಸೆಂಟ್ ಶೇರ್ ಅಂದ್ರೆ 150 ಕೋಟಿ ಅಲ್ಲು ಅರ್ಜುನ್ ಅಕೌಂಟ್ ಸೇರಲಿದೆ. ಅಲ್ಲು ಅರ್ಜುನ್ 1000 ಕೋಟಿ ಕಲೆಕ್ಷನ್ ನಲ್ಲಿ ಶೇರ್ ರೂಪದಲ್ಲಿ 333 ಕೋಟಿ ಹಣ ಪಡೆದುಕೊಂಡ್ರೆ ರಜನಿಕಾಂತ್, ಶಾರುಖ್ ಖಾನ್, ಪ್ರಭಾಸ್ ನಂತಹ ಸೂಪರ್ ಸ್ಟಾರ್ಸ್ ಮೀರಿಸಿದಂಗೆ ಗುರು..ಅದಕ್ಕೆ ಉತ್ತರ ಸಿಗಬೇಕು ಅಂದ್ರೆ ಮೊದ್ಲೋ ಪುಷ್ಪ ಎರಡನೇ ಅಧ್ಯಾಯದ ದರ್ಶನವಾಗಬೇಕು. ಆಮೇಲೆ 1000 ಕೋಟಿ ಕ್ಲಬ್ ಸೇರ್ಬೇಕು. ಆ ನಂತ್ರವೇ ತಾನೇ ಈ ಲೆಕ್ಕಾಚಾರಗಳು.. ಸಂಭಾವನೆ ವಿಷ್ಯಗಳು.. ಅಲ್ಲಿವರೆಗೂ ನಿಮ್ಮ ಕಾತುರವನ್ನು ಜಸ್ಟ್ ಹೋಲ್ಡ್ ಮಾಡಿ..





