ಕಿಂಗ್ ಖಾನ್ ಶಾರುಖ್ ಅಭಿನಯದ `ಜವಾನ್’ ಚಿತ್ರ ಜಯಭೇರಿ ಬಾರಿಸಿದೆ. ವಿಶ್ವದಾದ್ಯಂತ ತೆರೆಕಂಡು ಒಂದು ವಾರದೊಳಗೆ ಭರ್ತಿ 300 ಕೋಟಿ ದುಡ್ಡು `ಜವಾನ್’ ಜೇಬಿಗೆ ಕ್ರೆಡಿಟ್ ಆಗಿದೆ. ಫಾಸ್ಟೆಸ್ಟ್ ಕಲೆಕ್ಷನ್ ಫಿಲ್ಮ್ ಅನ್ನೋ ಖ್ಯಾತಿಗೆ ಪಾತ್ರವಾಗಿರೋ ಜವಾನ್ ಚಿತ್ರ, ವಲ್ಡ್ ವೈಡ್ ಬಾಕ್ಸ್ ಆಫೀಸ್‍ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ಹೀಗಿರುವಾಗಲೇ ಲೇಡಿಸೂಪರ್ ಸ್ಟಾರ್ ನಯನತಾರಾ ಸಂಭಾವನೆ ಏರಿಸಿಕೊಂಡಿರುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬಾಲಿವುಡ್ ಬಾದ್‍ಷಾ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟ ಸೂಪರ್ ಚೆಲುವೆಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಕೋಟಿಗಳ ಲೆಕ್ಕದಲ್ಲಿ ರೆಮ್ಯೂನರೇಷನ್ ಎಕ್ಸ್ ಪೆಕ್ಟ್ ಮಾಡ್ತಿರುವ ಸುದ್ದಿ ಸೌತ್ ಟು ನಾರ್ತ್ ಚಾಯ್‍ಪೇ ಚರ್ಚೆಯಾಗಿದೆ.
ಅಂದ್ಹಾಗೇ, ನಯನತಾರಾ ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನಾಯಕರಿಗೆ ಸೆಡ್ಡು ಹೊಡೆದಂತಹ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಆರಂಭದಲ್ಲಿ ಯಾವ್ ರೀತಿ ಕ್ರೇಜ್ ಇತ್ತೋ ಅದೇ ಕ್ರೇಜ್‍ನ ಇವತ್ತಿಗೆ ಉಳಿಸಿಕೊಂಡಿದ್ದಾರೆ. ವರ್ಷಕ್ಕೆ 10 ಜನ ಹೊಸ ನಾಯಕಿಯರು ಬಂದ್ರೂ ಕೂಡ ಅವರಿಗೆಲ್ಲಾ ಕಾಂಪಿಟೇಷನ್ ಕೊಟ್ಟು ಈಗ್ಲೂ ತನ್ನದೇ ಆದ ಹವಾ ಮೆಂಟೇನ್ ಮಾಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಬೆವರಿಳಿಸೋ ನಯನ್ ಲೇಡಿ ಸೂಪರ್ ಸ್ಟಾರ್ ಪಟ್ಟ ಕಟ್ಟಿಸಿಕೊಂಡು ವಿರಾಜಮಾನವಾಗಿ ಹೊಳೆಯುತ್ತಿದ್ದಾರೆ.

ಇಲ್ಲಿತನಕ ನಯನ್ ನಟನೆಯ ತಾಕತ್ತೇನು ಎಂಬುದು ಬರೀ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮಾತ್ರ ಗೊತ್ತಿತ್ತು. ಇದೀಗ `ಜವಾನ್’ ಸಿನಿಮಾದಿಂದ ಉತ್ತರ ಭಾರತಕ್ಕೆಲ್ಲಾ ತಿಳಿದಿದೆ. ಗ್ಲಾಮರ್ ಜೊತೆಗೆ ಆ್ಯಕ್ಷನ್ ಕಿಕ್ ಕೊಟ್ಟ ಬಿಗಿಲ್ ಹೀರೋಯಿನ್ ನೋಡಿ, ಪ್ಯಾನ್ ಇಂಡಿಯಾ ಮಂದಿ ಚಪ್ಪಾಳೆ ಹೊಡೆಯುತ್ತಿದ್ದಾರೆ. ಇದನ್ನ ನೋಡಿ ಬೆಕ್ಕಸ ಬೆರಗಾಗಿರೋ ಬಿಟೌನ್ ಮಂದಿ ಹೇಗಾದ್ರೂ ಮಾಡಿ ಲೇಡಿ ಸೂಪರ್ ಸ್ಟಾರ್ ಕಾಲ್‍ಶೀಟ್ ಗಿಟ್ಟಿಸಿಕೊಳ್ಳಬೇಕು ಅಂತ ಕ್ಯೂ ಹಚ್ಚವ್ರಂತೆ. ಹೀಗಾಗಿ, ನಯನ್ ಸರ್ರನೇ ತಮ್ಮ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆನ್ನುವ ಸುದ್ದಿ ಸೌತ್ ಹಾಗೂ ನಾರ್ತ್ ಗಾಸಿಪ್ ಅಂಗಳದಲ್ಲಿ ಜೋರಾಗಿ ಕೇಳಿಬರ್ತಿದೆ.

ಅಚ್ಚರಿ ಅಂದರೆ `ಜವಾನ್’ ಚಿತ್ರಕ್ಕೆ ನಯನ್ 11 ಕೋಟಿ ರೆಮ್ಯೂನರೇಷನ್ ಪಡೆದಿದ್ದರು. ಈಗ ಅಷ್ಟೇ ಸಂಭಾವನೆಯನ್ನ ಎಲ್ಲಾ ಸಿನಿಮಾಗಳಿಂದಲೂ ನಿರೀಕ್ಷೆ ಮಾಡ್ತಿದ್ದಾರಂತೆ. 10 ಕೋಟಿ ರೆಮ್ಯೂನರೇಷನ್ ಪ್ಲಸ್ 1 ಕೋಟಿ ಜಿಎಸ್‍ಟಿ ಸೇರಿಸಿ ಒಟ್ಟು 11 ಕೋಟಿ ಕೊಟ್ಟರೆ ಕಾಲ್‍ಶೀಟ್ ಫಿಕ್ಸು ಅಂತಿದ್ದಾರಂತೆ. ಇದಕ್ಕೆ ಬಾಲಿವುಡ್‍ನ ಕೆಲ ನಿರ್ಮಾಪಕರು ಒಪ್ಕೊಂಡಿದ್ದಾರೆನ್ನುವ ಸುದ್ದಿಯಿದೆ. ಜೊತೆಗೆ ತಮಿಳು, ತೆಲುಗು ಪ್ರೊಡ್ಯೂಸರ್ಸ್ ದಿಸ್ ಈಸ್ ಟು ಮಚ್ ಎನ್ನುತ್ತಾ ಆಕಾಶ ನೋಡ್ತಾವ್ರೆನ್ನುವ ನ್ಯೂಸ್ ಪ್ಯಾಂಟು-ಟೋಪಿ ಹಾಕ್ಕೊಂಡು ಕುಣಿತಾಯಿದೆ. ಅದೇನೇ ಇರಲಿ, ನಯನ್ ಸೌತ್ ಇಂಡಿಯಾದ ಹೈಯೆಸ್ಟ್ ಪೇಯ್ಡ್ ಹೀರೋಯಿನ್ ಪಟ್ಟಕ್ಕೇರಿಬಿಟ್ಟರು. ಮದುವೆ ಆದ್ಮೇಲೆ ಬೇಡಿಕೆ ಕಡಿಮೆಯಾಗುತ್ತೆನ್ನುವ ಮಾತನ್ನ ಸುಳ್ಳುಮಾಡಿ ಸುನಾಮಿ ಎಬ್ಬಿಸಿಬಿಟ್ಟರು. 40 ಆದ್ಮೇಲೆ ತೆರೆಮರೆಗೆ ಸರಿಯುವ ನಾಯಕಿಯರ ಮಧ್ಯೆ ಡಬಲ್ ಡಿಜಿಟ್ ರೆಮ್ಯೂನರೇಷನ್ ಪಡೆಯೋ ಮೂಲಕ ಬ್ರೇಕಿಂಗ್ ನ್ಯೂಸ್ ಆಗಿದ್ದಾರೆ. ಚಿತ್ರರಂಗದಲ್ಲಿ 20 ವರ್ಷ ಸ್ಟಾರ್ ನಾಯಕಿಯಾಗಿ ರೂಲ್ ಮಾಡಿದ್ಮೇಲೂ ನಂ1 ನಟಿ ಪಟ್ಟದಿಂದ ಕೆಳಗಿಳಿಯದೇ ಕಮಾಲ್ ಮಾಡುತ್ತಿದ್ದಾರೆ. ಇದಕ್ಕೆ ಒನ್ ಅಂಡ್ ಓನ್ಲೀ ರೀಸನ್ನು ಏನಪ್ಪಾ ಅಂದರೆ ನಯನ್ ವರ್ಸಟ್ಯಾಲಿಟಿ. ಯಾವುದೇ ಪಾತ್ರ ಕೊಟ್ಟರೂ ನುಂಗಿ ನೀರು ಕುಡಿಯೋ ಕ್ಯಾಪ್ಯಾಸಿಟಿ





