ಹೆಡ್‌ಲೈನ್ಸ್ ನೋಡಿದ್ಮೇಲೆ ರಶ್ಮಿಕಾ ಅಭಿಮಾನಿಗಳು ಆತಂಕಕ್ಕೊಳಗಾಗೋದು ಸಹಜ. ಏನಾಯ್ತು ತಮ್ಮ ನಟಿಗೆ, ಈಗ ಹೇಗಿದ್ದಾರೆ ನಾವೆಲ್ಲ ಆರಾಧಿಸೋ ನಟಿ ಅಂತ ಗಾಬರಿಗೊಳಪಡ್ತಾರೆ. ಆದರೆ, ಭಯಪಡುವ ಅಗತ್ಯವಿಲ್ಲ. ರಶ್ಮಿಕಾ ಸೇಫ್ ಆಗಿದ್ದಾರೆ. ಸಾವಿನಿಂದ ಪಾರಾಗಿದ್ದರ ಬಗ್ಗೆ ಖುದ್ದು ಸಾನ್ವಿಯೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅವ್ರು ಏನ್ ಹೇಳಿದ್ರು ಅನ್ನೋದನ್ನ ತೋರಿಸೋ ಮೊದಲು ರಶ್ಮಿಕಾ ಡಿಮ್ಯಾಂಡ್ ಬಗ್ಗೆ ಕೊಂಚ ಹೇಳಿಬಿಡ್ತೀವಿ ಕೇಳಿ

ರಶ್ಮಿಕಾ ಬಹುಬೇಡಿಕೆಯ ನಟಿ ಅನ್ನೋದನ್ನ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಅನಿಮಲ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆದ್ಮೇಲೆ ಬಾಲಿವುಡ್‌ನಲ್ಲೂ ಗೀತಾಂಜಲಿಗೆ ಬೇಡಿಕೆ ಹೆಚ್ಚಿದೆ. ರಣಬೀರ್ ಪಾಲಿಗೆ ಲಕ್ಕಿ ಚಾರ್ಮ್ ಆದ ರಶ್ಮಿಕಾನ ಹಾಕ್ಕೊಂಡು ಪಿಕ್ಚರ್ ಮಾಡೋದಕ್ಕೆ ಹಲವು ನಿರ್ಮಾಪಕರು, ನಿರ್ದೇಶಕರು ಮುಂದೆ ಬರುತ್ತಿದ್ದಾರೆ. ಹೀಗಾಗಿ, ಸಾನ್ವಿ ಬೆಂಗಳೂರು, ಹೈದ್ರಬಾದ್, ಮುಂಬೈ, ಚೆನ್ನೈ ಅಂತ ಫ್ಲೈಟ್ ನಲ್ಲಿ ಓಡಾಡೋದು ಹೆಚ್ಚಾಗಿದೆ. ಅದರಂತೇ, ನಿನ್ನೆ ಮುಂಬೈ ನಿಂದ ತಮ್ಮ ಸಿನಿಮಾ ಕೆಲಸ ಮುಗಿಸಿಕೊಂಡು ಫ್ಲೈಟ್ ಏರಿ ಹೈದ್ರಬಾದ್ ಕಡೆ ಹೊರಟಿದ್ದಾರೆ. ಈ ವೇಳೆ ಸಾನ್ವಿ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶಗೊಂಡು ಆತಂಕದ ವಾತಾವರಣ ಸೃಷ್ಟಿಮಾಡಿತ್ತಂತೆ.

ಹೌದು, ಮುಂಬೈನಿಂದ ಫ್ಲೈಟ್ ಟೇಕಾಫ್ ಆಗಿ ಇನ್ನೂ 30 ನಿಮಿಷವೂ ಕಳೆದಿರಲಿಲ್ವಂತೆ. ಆದರೆ, ಟೆಕ್ನಿಕಲ್ ಎರರ್ ಕಾಣಿಸಿಕೊಂಡಿದ್ದರಿಂದ ಏಕ್ದಮ್ ಫ್ಲೈಟ್‌ನ ಲ್ಯಾಂಡ್ ಮಾಡುವ ಪರಿಸ್ಥಿತಿ ಬಂದಿದೆ. ವಿಚಾರ ಗೊತ್ತಿಲ್ಲದೇ ನಟಿ ರಶ್ಮಿಕಾ, ಬಾಲಿವುಡ್ ನಟಿ ಶ್ರದ್ಧಾ ದಾಸ್ ಸೇರಿದಂತೆ ಇಡೀ ವಿಮಾನದಲ್ಲಿದ್ದವರೆಲ್ಲರೂ ಗಾಬರಿಗೊಂಡು ನಡುಗಿದ್ದಾರೆ. ಆ ಕ್ಷಣಕ್ಕೆ ಒಂದು ಫೋಟೋ ಕ್ಲಿಕ್ಕಿಸಿಕೊಂಡ ನಟಿ ರಶ್ಮಿಕಾ, ಆತಂಕದ ಕ್ಷಣದ ಬಗ್ಗೆ ಮಾಹಿತಿ ಕೊಟ್ಟು ಸಾವಿನಿಂದ ಬಚಾವ್ ಆದೆ ಅಂತ ತಮ್ಮ ಸೋಷಿಯಲ್ ಪುಟದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಫ್ಲೈಟ್‌ನಲ್ಲಿದ್ದ ಯಾರೊಬ್ಬರಿಗೂ ಯಾವುದೇ ರೀತಿಯ ಸಮಸ್ಯೆಗಳಾಗಿಲ್ಲ. ಟೆಕ್ನಿಕಲ್ ಸಮಸ್ಯೆಯಿಂದ ಫ್ಲೈಟ್‌ನ ಲ್ಯಾಂಡ್ ಮಾಡಲೇಬೇಕಾಗಿ ಬಂತೆನ್ನಲಾಗಿದೆ. ಸದ್ಯ ರಶ್ಮಿಕಾ ಕೈಯಲ್ಲಿ 4 ಸಿನಿಮಾಗಳಿವೆ. ಪುಷ್ಪ-2 ಚಿತ್ರದ ಶೂಟಿಂಗ್ ಜೊತೆಗೆ ರೈನ್ ಬೋ, ದಿ ಗರ್ಲ್ ಫ್ರೆಂಡ್, ಚಾವ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.





