ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ವಿಷ್ಣು ಮಂಚು ಹುಟ್ಟುಹಬ್ಬಕ್ಕೆ ‘ಕಣ್ಣಪ್ಪ’ ಫಸ್ಟ್ ಲುಕ್ ಪೋಸ್ಟರ್ ಗಿಫ್ಟ್!

Vishalakshi Pby Vishalakshi P
23/11/2023
in Majja Special
Reading Time: 1 min read
ವಿಷ್ಣು ಮಂಚು ಹುಟ್ಟುಹಬ್ಬಕ್ಕೆ ‘ಕಣ್ಣಪ್ಪ’ ಫಸ್ಟ್ ಲುಕ್ ಪೋಸ್ಟರ್ ಗಿಫ್ಟ್!

ಮೋಹನ್‍ ಬಾಬು, ಮೋಹನ್‍ ಲಾಲ್‍, ಶಿವರಾಜಕುಮಾರ್, ಪ್ರಭಾಸ್‍ ಮುಂತಾದ ಈ ದೇಶದ ಪ್ರತಿಭಾವಂತ ಕಲಾವಿದರ ನಡುವೆ ‘ಕಣ್ಣಪ್ಪ’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವವರು ಟಾಲಿವುಡ್‍ ನಟ ವಿಷ್ಣು ಮಂಚು. ಇಂದು ತಮ್ಮ ಹುಟ್ಟುಹಬ್ಬವನ್ನು ವಿಷ್ಣು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಅವರ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ಅದ್ದೂರಿಯಾಗಿಸುವುದರ ಜೊತೆಗೆ ನೆನಪಿನಲ್ಲುಳಿಯುವಂತೆ ಮಾಡಿದೆ.

ಮುಕೇಶ್‍ ಕುಮಾರ್ ಸಿಂಗ್‍ ನಿರ್ದೇಶನದ ‘ಕಣ್ಣಪ್ಪ’ ಚಿತ್ರದ ಶೇ.80ರಷ್ಟು ಚಿತ್ರೀಕರಣ ನ್ಯೂಜಿಲ್ಯಾಂಡ್‍ನ ರಮಣೀಯ ಪ್ರದೇಶಗಳಲ್ಲಿ ನಡೆದಿದ್ದು, ಹಾಲಿವುಡ್‍ ಛಾಯಾಗ್ರಾಹಕ ಶೆಲ್ಡನ್‍ ಚಾವ್‍, ಈ ಸುಂದರ ಪರಿಸರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ‘ಕಣ್ಣಪ್ಪ’ ಚಿತ್ರದ ಕುರಿತು ಮಾತನಾಡುವ ವಿಷ್ಣು ಮಂಚು, ‘ಈ ಚಿತ್ರವು ಬರೀ ಕನಸುಗಳಿಂದಲ್ಲ, ನಮ್ಮೆಲ್ಲರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ನಿರ್ಮಾಣವಾಗುತ್ತಿದೆ. ಒಬ್ಬ ನಾಸ್ತಿಕ, ಶಿವನ ಅಪ್ರತಿಮ ಭಕ್ತನಾದ ಕಥೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.

ದೃಶ್ಯ ವೈವಿಧ್ಯತೆ, ಆಧುನಿಕ ತಂತ್ರಜ್ಞಾನ ಮತ್ತು ಮೈನವಿರೇಳಿಸುವ ಆ್ಯಕ್ಷನ್‍ ದೃಶ್ಯಗಳು ಈ ಚಿತ್ರದ ಹೈಲೈಟ್‍ ಆಗಿದ್ದು, ಸದ್ಯ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದೆ. ವಿಷ್ಣು ಮಂಚು ತಮ್ಮ ನಟನಾ ಸಾಮರ್ಥ್ಯ ಮತ್ತು ಸಮರ್ಪಣಾ ಭಾವವನ್ನು ಈ ಚಿತ್ರಕ್ಕಾಗಿ ಧಾರೆ ಎದರೆದಿದ್ದು, ಪ್ರೇಕ್ಷಕರ ಪಾಲಿಗೆ ಇದೊಂದು ಅದ್ಭುತ ಸಿನಿಮೀಯ ಅನುಭವವಾಗಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಸಿನಿದುನಿಯಾ ಥಂಡಾ ಹೊಡೆಸಲು `ಥಂಡಲ್’ ಮೂಲ್ಕ ಬರ್ತಿದ್ದಾರೆ ಚೈತನ್ಯ !

ಸಿನಿದುನಿಯಾ ಥಂಡಾ ಹೊಡೆಸಲು `ಥಂಡಲ್' ಮೂಲ್ಕ ಬರ್ತಿದ್ದಾರೆ ಚೈತನ್ಯ !

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.