ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ರಿಲೀಸ್ ನಂತರ ಸ್ಟಾರ್ ಮೇಕರ್ ಪ್ರಶಾಂತ್ ನೀಲ್ `ಕೆಜಿಎಫ್-3′ ಕೈಗೆತ್ತಿಕೊಳ್ತಾರೆ ಎನ್ನುವ ಸುದ್ದಿ ಇತ್ತೀಚೆಗಷ್ಟೇ ಜೋರಾಗಿ ಕೇಳಿಬಂದಿತ್ತು. ಕೆಜಿಎಫ್ ಚಾಪ್ಟರ್-3ನೇ ಯಶ್-19 ಸಿನಿಮಾವಾಗಲಿದೆ ಎನ್ನುವ ತಾಜಾ ಸಮಾಚಾರ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆದ್ರೀಗ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಿಂದ ಹೊರಬಿದ್ದಿರುವ ಬ್ಲಾಕ್ಬಸ್ಟರ್ ನ್ಯೂಸ್ ಎಲ್ಲಾ ಅಂತೆಕಂತೆಗಳಿಗೂ ತೆರೆಎಳೆದಿದೆ. `ಸಲಾರ್’ ಬಿಡುಗಡೆಯ ನಂತರ ನಿರ್ದೇಶಕ ಪ್ರಶಾಂತ್ ನೀಲ್ `ಎನ್ಟಿಆರ್-31′ ಸಿನಿಮಾ ಕೈಗೆತ್ತಿಕೊಳ್ಳೋದು ಪಕ್ಕಾ ಆಗಿದೆ. ಇನ್ನೂ ಡಿಸೆಂಬರ್ 22ರಂದು `ಸಲಾರ್’ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇಂಟ್ರೆಸ್ಟಿಂಗ್ ಅಂದರೆ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ `ಸಲಾರ್’ನಲ್ಲಿ ಯಂಗ್ ಟೈಗರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸ್ಪೆಷಲ್ ಎಂಟ್ರಿ ಇರುವುದಾಗಿ ಸುದ್ದಿಯಾಗ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನೀಡಿರುವ ಬಿಗ್ ಅಪ್ಡೇಟ್ ಪ್ರಕಾರ 2024 ಏಪ್ರಿಲ್ನಿಂದ `ಎನ್ಟಿಆರ್-31′ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಸದ್ಯಕ್ಕಿನ್ನು ಈ ಚಿತ್ರಕ್ಕೆ ಹೆಸರಿಟ್ಟಿಲ್ಲ ಹೀಗಾಗಿ `ಎನ್ಟಿಆರ್-31′ ಹೆಸರಿನಿಂದ ಕರೆಯಲಾಗ್ತಿದೆ. ಈ ಸಿನಿಮಾಗಾಗಿ ಬರೀ ಸೌತ್ ಮಾತ್ರವಲ್ಲ ಇಡೀ ವಿಶ್ವ ಸಿನಿದುನಿಯಾವೇ ಕಣ್ಣರಳಿಸಿದೆ. ಕೆಜಿಎಫ್ ಕ್ಯಾಪ್ಟನ್ ಆ್ಯಕ್ಷನ್ ಕಟ್ ಹೇಳ್ತಿರುವ ಸಿನಿಮಾ ಎನ್ನುವುದು ಒಂದು ಕಾರಣವಾದರೆ, ಗ್ಲೋಬಲ್ ಸ್ಟಾರ್ ಯಂಗ್ ಟೈಗರ್ ನಟನೆಯ ಚಿತ್ರವೆಂಬುದು ಬೆಟ್ಟದಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಸದ್ಯ, ತಾರಕ್ `ದೇವರ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜನತಾ ಗ್ಯಾರೇಜ್ ಚಿತ್ರದ ನಂತರ ನಿರ್ದೇಶಕ ಕೊರಟಾಲ ಶಿವ ಜೊತೆಗೆ ಕೈ ಜೋಡಿಸಿದ್ದು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಔಟ್ ಅಂಟ್ ಔಟ್ ಆ್ಯಕ್ಷನ್ ಡ್ರಾಮವನ್ನೊಳಗೊಂಡಿರುವ ದೇವರ ಎರಡು ಭಾಗಗಳಲ್ಲಿ ತಯಾರಾಗ್ತಿದೆ. 2024 ಏಪ್ರಿಲ್ 05ರಂದು `ದೇವರ’ ಫಸ್ಟ್ ಪಾರ್ಟ್ ವಲ್ರ್ಡ್ ವೈಡ್ ತೆರೆಗೆ ಅಪ್ಪಳಿಸಲಿದ್ದು, ಏಪ್ರಿಲ್ ಸೆಕೆಂಡ್ ವೀಕ್ನಲ್ಲಿ ನೀಲ್ ಜೊತೆ ಅಖಾಡಕ್ಕೆ ಧುಮ್ಕಲಿದ್ದಾರೆ ಜ್ಯೂ.ಎನ್ಟಿಆರ್
ಅಂದ್ಹಾಗೇ, ಕಳೆದ ವರ್ಷ ತಾರಕ್ ಬರ್ತ್ಡೇಗೆ `ಎನ್ಟಿಆರ್-31′ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಕಣ್ಣಲ್ಲೇ ಕಿಚ್ಚು ಹಚ್ಚುವ ಕೊಮರಮ್ ಭೀಮ್ ರಗಡ್ ಲುಕ್ಕು ಕಲಾಭಿಮಾನಿಗಳನ್ನು ಹುಚ್ಚೇಳುವಂತೆ ಮಾಡಿತ್ತು. ಫೈನಲೀ, ಶೂಟಿಂಗ್ ಶುರು ಮಾಡುವುದಕ್ಕೆ ಸಮಯ ಸನ್ನಿಹಿತವಾಗ್ತಿದೆ. `ಎನ್ಟಿಆರ್-31′ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡ್ತಿದ್ದು, ಎನ್ಟಿಆರ್ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬೋ ಸಿನಿಮಾ ನಿರ್ಮಾಣಗೊಳ್ಳಲಿದೆ. ಬಹುಕೋಟಿ ವೆಚ್ಚದ ಈ ಚಿತ್ರ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಂಚ್ ಮಾರ್ಕ್ ಆಗುವ ಭರವಸೆಯನ್ನಿಟ್ಕೊಂಡಿದೆ ನಿರ್ಮಾಣ ಸಂಸ್ಥೆ. ಆ ಭರವಸೆಯನ್ನ ಕೆಜಿಎಫ್ ಸರಣಿ ಸಿನಿಮಾಗಳ ಸಾರಥಿ ಈಡೇರಿಸುತ್ತಾರೆನ್ನುವ ನಂಬಿಕೆ ಅಭಿಮಾನಿಗಳಲ್ಲಿದೆ. ಟಿಟೌನ್ ಸೂಪರ್ ಸ್ಟಾರ್, ಯಂಗ್ ಟೈಗರ್ ಗೆ ಆ್ಯಕ್ಷನ್ ಕಟ್ ಹೇಳಬೇಕು ಎನ್ನುª ಪ್ರಶಾಂತ್ ನೀಲ್ ಅವರ ಬಹುವರ್ಷದ ಕನಸು ಈಡೇರುವ ಗಳಿಗೆ ಹತ್ತಿರವಾಗ್ತಿದೆ.






