ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಸಲಾರ್’ಗೆ ಹೆದರಿ ಹಿಂದೆ ಸರಿಯೋ ಮಾತೇಯಿಲ್ಲ! ಫಿಕ್ಸಾದ ಡೇಟ್‍ಗೆ ಅಖಾಡಕ್ಕಿಳಿಯಲಿದ್ದಾರಂತೆ ಕಿಂಗ್‍ಖಾನ್?

Vishalakshi Pby Vishalakshi P
13/10/2023
in Majja Special
Reading Time: 2 mins read
`ಸಲಾರ್’ಗೆ ಹೆದರಿ ಹಿಂದೆ ಸರಿಯೋ ಮಾತೇಯಿಲ್ಲ!  ಫಿಕ್ಸಾದ ಡೇಟ್‍ಗೆ ಅಖಾಡಕ್ಕಿಳಿಯಲಿದ್ದಾರಂತೆ ಕಿಂಗ್‍ಖಾನ್?

ಡಾರ್ಲಿಂಗ್ ಪ್ರಭಾಸ್ ಅಭಿನಯದ ಹೈವೋಲ್ಟೇಜ್ `ಸಲಾರ್’ ಹಾಗೂ ಕಿಂಗ್ ಖಾನ್ ಶಾರುಖ್ ನಟನೆಯ ಮೋಸ್ಟ್ ಅವೈಟೆಡ್ `ಡಂಕಿ’ ಒಂದೇ ದಿನ ಅಖಾಡಕ್ಕಿಳಿಯುವ ವಿಚಾರವಾಗಿ ಸಂಚಲನ ಮೂಡಿಸಿದ್ವು. ಆದರೆ, ಏಕಾಏಕಿ `ಡಂಕಿ’ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತು. ಕಿಂಗ್ ಖಾನ್ ಶಾರುಖ್ ರೆಬೆಲ್‍ಸ್ಟಾರ್ ಪ್ರಭಾಸ್ ಎದುರು ಕಣಕ್ಕಿಳಿಯುತ್ತಿಲ್ಲ. `ಸಲಾರ್’ ಎದುರು ಬಾದ್ ಷಾ `ಡಂಕಿ’ ಬಿಡುಗಡೆಯಾಗುತ್ತಿಲ್ಲ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾ ತುಂಬೆಲ್ಲಾ ರಾರಾಜಿಸಿತು. ಇದನ್ನು ನೋಡಿದ ನೀಲ್ ಫ್ಯಾನ್ಸ್ ಪ್ಲಸ್ ಪ್ರಭಾಸ್ ಫ್ಯಾನ್ಸ್, `ಸಲಾರ್-ಸೀಜ್ ಫೈರ್’ ಖದರ್ ನೋಡಿ ಕಿಂಗ್ ಖಾನ್ ಬೆಚ್ಚಿಬಿದ್ದಿರೋದು ಗ್ಯಾರಂಟಿ. ಅಮರೇಂದ್ರ ಬಾಹುಬಲಿ ವಿರುದ್ದ ತೊಡೆತಟ್ಟಿ ಅಖಾಡಕ್ಕೆ ಇಳಿಯುವ ಮೊದಲೇ ಬಾಜೀಘರ್ ಹೀರೋ ಢರ್ ಹೊಡೆದಿರೋದು ಪಕ್ಕಾ ಅಂತ ಕೇಕೆಹೊಡೆಯೋದಕ್ಕೆ ಶುರುಮಾಡಿಬಿಟ್ಟರು. ಬಹುಷಃ ಆ ಕೂಗು ಕಿಂಗ್ ಖಾನ್ ಆಪ್ತವಲಯದಿಂದ ಬಾದ್‍ಷಾಗೆ ಮುಟ್ಟಿತೋ ಏನೋ ಗೊತ್ತಿಲ್ಲ ಕೆಲವೇ ಕೆಲವು ಗಂಟೆಗಳಲ್ಲಿ ಪ್ರಖ್ಯಾತ ಸಿನಿಮಾ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡೇಬಿಟ್ಟರು.

 

ಯಸ್, ಬ್ರೇಕಿಂಗ್ ನ್ಯೂಸ್ ಅಂತ ಒಂದು ಪೋಸ್ಟರ್ ಹಂಚಿಕೊಂಡ ತರಣ್ ಆದರ್ಶ್, `ಡಂಕಿ ಸಿನಿಮಾ ಪೋಸ್ಟ್ ಪೋನ್ ಆಗಿಲ್ಲ. ಫಿಕ್ಸಾದ ಡೇಟ್‍ಗೆ ಡಂಕಿ ಬರೋದು ನಿಜ. ಅತೀ ಶೀಘ್ರದಲ್ಲೇ ಟೀಸರ್ ರಿಲೀಸ್ ಆಗಲಿದೆ’ ಎಂದಿದ್ದಾರೆ. ಅಲ್ಲಿಗೆ `ಡಂಕಿ’ ಅಖಾಡಕ್ಕಿಳಿಯೋದು ಫಿಕ್ಸಾ? ಈ ಕ್ಷಣಕ್ಕೂ ನಾವು ಕೂಡ ಹೌದು ಎಂದಷ್ಟೇ ಉತ್ತರಿಸಬಹುದು. ಆದರೆ, ನಿಗದಿಯಾದ ದಿನಾಂಕದಂದು ಬಾದ್‍ಷಾ ಮೈಕೊಡವಿಕೊಂಡು ಕಣಕ್ಕಿಳಿಯುತ್ತಾರಾ? ಇಲ್ಲವಾ? ಹೀಗೊಂದು ಡೌಟ್ ಮಾತ್ರ ಕೆಲವರಲ್ಲಿ ಇದ್ದೇ ಇರುತ್ತೆ. ಯಾಕಂದ್ರೆ, ಈ ಹಿಂದೆ ಕಿಂಗ್ ಖಾನ್ `ಕೆಜಿಎಫ್’ ಎದುರು ತಮ್ಮ `ಜೀರೋ’ ಚಿತ್ರ ರಿಲೀಸ್ ಮಾಡಿ ಸೋಲುಂಡಿದ್ದರು. ಸಿನಿಮಾ ರಂಗದ ಸಹವಾಸವೇ ಬೇಡ ಅಂತ ನಾಲ್ಕು ವರ್ಷ ಗ್ಯಾಪ್ ಕೂಡ ತಗೊಂಡಿದ್ದರು. ಕೊನೆಗೆ ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಪಡೆದುಕೊಳ್ಳುತ್ತೇನೆ ಅಂತ ಸಿಡಿದೆದ್ದ ಶಾರುಖ್ ಖಾನ್, ಪಠಾಣ್ ಮೂಲಕ ಫೀಲ್ಡಿಗಿಳಿದಿದ್ದು, ಆಲ್ವೇಸ್ ಕಿಂಗ್ ಅಂತ ಪ್ರೂ ಮಾಡಿದ್ದು ಕಣ್ಣಮುಂದಿರುವ ಸತ್ಯ. ಸೋಲಿಗೆ ಸೆಡ್ಡು ಹೊಡೆದು ಗೆಲ್ಲೋಕೆ, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಳ್ಳೋಕೆ ಪಠಾಣ್‍ನಂತೆ ಜವಾನ್ ಕೂಡ ಸಾಥ್ ಕೊಟ್ಟಿದ್ದು ಅಷ್ಟೇ ಸತ್ಯ. ಸದ್ಯ, ಎಲ್ಲರ ಚಿತ್ತ ಡಂಕಿ ಮೇಲಿದೆ. ಬಾದ್ ಷಾ ಹ್ಯಾಟ್ರಿಕ್ ಬಾರಿಸ್ತಾರಾ ಎನ್ನುವ ಕುತೂಹಲ ಎಲ್ಲರನ್ನೂ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಹೀಗಿರುವಾಗ ಡಿಡಿಎಲ್‍ಜೆ ಹೀರೋ ರಿಸ್ಕ್ ತೆಗೆದುಕೊಳ್ತಾರಾ? `ಸಲಾರ್’ಗೆ ಹೆದರಿ ಹಿಂದೆ ಸರಿಯೋ ಮಾತೇಯಿಲ್ಲ ಅಂತ ನೇರಾ ಹಣಾಹಣಿಗೆ ಸಜ್ಜಾಗ್ತಾರಾ? ಸದ್ಯಕ್ಕೀಗ ಇದು ಮಿಲಿಯನ್ ಡಾಲರ್ ಪ್ರಶ್ನೆ.

ಅಂದ್ಹಾಗೇ, ಸಲಾರ್ ಮತ್ತು ಡಂಕಿ ಎರಡು ಕೂಡ ಬಹುನಿರೀಕ್ಷಿತ ಸಿನಿಮಾಗಳೇ. ಇಬ್ಬರು ಸೂಪರ್ ಸ್ಟಾರ್ಸ್, ಇಬ್ಬರ ಸಿನಿಮಾಗಳು ಬಿಗ್ ಬಜೆಟ್ಟಿನಲ್ಲಿಯೇ ತಯ್ಯಾರಾಗಿವೆ. ಬಾಹುಬಲಿ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ರೀಚ್ ಆಗಿರೋದ್ರಿಂದ ಅಲ್ಲಿನ ಫ್ಯಾನ್ಸ್ ಕೂಡ ಕಾತುರರಾಗಿದ್ದಾರೆ. ಕೆಜಿಎಫ್ ಕ್ಯಾಪ್ಟನ್ ಸೃಷ್ಟಿಸಿರೋ `ಸಲಾರ್’ ನೋಡಲು ಒಂಟಿಕಾಲಲ್ಲಿ ನಿಂತಿದ್ದಾರೆ. ಅದೇ ರೀತಿ, ಡಂಕಿ ಚಿತ್ರಕ್ಕೂ ಪ್ಯಾನ್ ಇಂಡಿಯಾ ಪ್ರೇಕ್ಷಕರು ಎದುರುನೋಡ್ತಿದ್ದಾರೆ. ಇದೇ ವರ್ಷ ಪಠಾಣ್, ಜವಾನ್‍ನಂತಹ ಬ್ಲಾಕ್‍ಬಸ್ಟರ್ ಹಿಟ್ ಕೊಟ್ಟಿರೋ ಬಾದ್‍ಷಾ `ಡಂಕಿ’ ಚಿತ್ರದಲ್ಲಿ ಮತ್ಯಾವ ಮೋಡಿ ಮಾಡಲಿದ್ದಾರೆಂದು ಕಾಯ್ತಿದ್ದಾರೆ. ಮುನ್ನಭಾಯ್ ಎಂಬಿಬಿಎಸ್, ತ್ರಿಈಡಿಯಟ್ಸ್, ಪಿಕೆ, ಸಂಜು ಖ್ಯಾತಿಯ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಕೈಚಳಕ `ಡಂಕಿ’ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಈ ಚಿತ್ರ ಕಿಂಗ್ ಖಾನ್ ಕೈ ಹಿಡಿಯುತ್ತಾ? ಪಠಾಣ್, ಜವಾನ್‍ನಂತೆ ಸೂಪರ್ ಹಿಟ್ಟಾಗಿ ಹ್ಯಾಟ್ರಿಕ್ ಗೆಲುವನ್ನ ತಂದುಕೊಡುತ್ತಾ? ಹೀಗೊಂದು ಕುತೂಹಲದ ಜೊತೆಗೆ `ಸಲಾರ್’ ಸಿನಿಮಾ ಪ್ರಭಾಸ್‍ನ ಕೈಹಿಡಿಯುತ್ತಾ? ಸೋಲಿನ ಸುಳಿಯಿಂದ ಮೇಲಕ್ಕೆತ್ತಿ ಮೆರೆಸುತ್ತಾ? ಪ್ರಶ್ನೆ ಇದ್ದೇ ಇದೆ.

ಸಲಾರ್ ವರ್ಸಸ್ ಡಂಕಿ..ಒಂದೇ ದಿನ ದಿಬ್ಬಣ ಹೊರಟ್ರೆ ಖಂಡಿತ ಲಾಸು ಫಿಕ್ಸು..ಇದು ಎರಡು ಸಿನಿಮಾಗಳ ಕಲೆಕ್ಷನ್ ಮೇಲೆ ಹೊಡೆತ ಬಿಳುತ್ತೆ. ಯಾವ ಸಿನಿಮಾ ಚೆನ್ನಾಗಿದೆಯೋ ಆ ಸಿನಿಮಾ ಅಂತಿಮವಾಗಿ ಗೆದ್ದೇ ಗೆಲ್ಲುತ್ತೇ..ಇಲ್ಲಿ ಸಲಾರ್ ಹೆಚ್ಚು ಡಂಕಿ ಕಡಿಮೆ ಅನ್ನೋ ಮಾತೇ ಇಲ್ಲ. ಸಲಾರ್ ಪಾತ್ರಧಾರ ಡಾರ್ಲಿಂಗ್, ಡಂಕಿ ಪಾತ್ರಧಾರ ಶಾರುಖ್ ಖಾನ್ ಗೆ ಅವರದ್ದೇ ಆದ ದೊಡ್ಡ ಅಭಿಮಾನಿ ಪಡೆ ಇದೆ. ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್ಸ್ ಗಳೇ..ಡಂಕಿ ಸೂತ್ರಧಾರ ರಾಜ್ ಕುಮಾರ್ ಹಿರಾನಿ, ಸಲಾರ್ ಸೂತ್ರಧಾರ ಪ್ರಶಾಂತ್ ನೀಲ್ ತಾಕತ್ತನ್ನು ತಳ್ಳಿ ಹಾಕುವ ಮಾತೇ ಇಲ್ಲ. ಈ ಇಬ್ಬರು ಸೋಲೇ ಕಾಣದ ನಿರ್ದೇಶಕರು..ಇಂತಹ ನಿರ್ದೇಶಕರು. ಅಂತಹ ಸ್ಟಾರ್ಸ್..ಏನಾಗಲಿದೆ ಬಾಕ್ಸಾಫೀಸ್ ರಿಸಲ್ಟ್..ಗೊತ್ತಿಲ್ಲ. ಆದರೆ, ಬಿಗ್ ಸ್ಕ್ರೀನ್ ಮಾತ್ರ ಡೈನೋಸರ್ ವರ್ಸಸ್ ಡಂಕಿ ಫೈಟ್‍ಗೆ ಬಿಗ್‍ಸ್ಕ್ರೀನ್ ರೆಡಿಯಾಗಿ ನಿಂತಿದೆ. ಗೆದ್ದವರಿಗೆ ಮುತ್ತಿನ ಹಾರ ಹಾಕಲು ಬಾಕ್ಸ್ ಆಫೀಸ್ ರೇಷ್ಮೆ ಪಂಚೆಯುಟ್ಟು ಮದುಮಗನಂತೆ ತಯಾರಾಗುತ್ತಿದೆ. ನೋಡೋಣ ಡಿಸೆಂಬರ್ 22ರಂದು ಏನಾಗಲಿದೆ ಅಂತ

View this post on Instagram

 

A post shared by Rajkumar Hirani (@hirani.rajkumar)

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಸಖಿಯೆ ಎಂದ ದೀಕ್ಷಿತ್ ಶೆಟ್ಟಿ..’ಬ್ಲಿಂಕ್’ ಸಿನಿಮಾದ ಮೆಲೋಡಿ ಹಾಡು ರಿಲೀಸ್!

ಸಖಿಯೆ ಎಂದ ದೀಕ್ಷಿತ್ ಶೆಟ್ಟಿ..’ಬ್ಲಿಂಕ್’ ಸಿನಿಮಾದ ಮೆಲೋಡಿ ಹಾಡು ರಿಲೀಸ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.