ಮದುವೆ ಆದ್ಮೇಲೆ ನಟಿಮಣಿಯರ ಡಿಮ್ಯಾಂಡ್ ಕಡಿಮೆಯಾಗುತ್ತೆ, ಅವಕಾಶಗಳು ಕೈ ಜಾರುತ್ತವೆ ಎಂಬ ಮಾತು ಬಣ್ಣದ ಲೋಕದಲ್ಲಿದೆ. ಅದು ನಿಜವೇ..ಬಟ್ ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ಬದುಕಿನಲ್ಲಿ ಅದು ಎಲ್ಲವೂ ಅದಲು ಬದಲು.. ವಿಘ್ನೇಶ್ ಜೊತೆ ಸಪ್ತಪದಿ ತುಳಿದ್ಮೇಲೆ ಸೂಪರ್ ಬ್ಯೂಟಿಗೆ ಬೇಜಾನ್ ಲಕ್ ಕುದುರುತ್ತಿದೆ. ಸೌತ್ ಇಂಡಸ್ಟ್ರೀಯಿಂದ ಬಾಲಿವುಡ್ ಗೆ ಹಾರಿ, ಶಾರುಖ್ ಖಾನ್ ಜೊತೆ ಮಿರ ಮಿರ ಮಿಂಚಿದ ನಯನ್ ತಾರಾ ಗಂಡ ಮಕ್ಳು ಮನೆ ಮನಿ ಅಂತಾ ನಮ್ಮ ಸಂಸಾರ ಆನಂದ ಸಾಗರ ಅಂತಾ ಹಾಡುತ್ತಲೇ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಇಂತಹ ಹೊತ್ತಲ್ಲೇ ಚೆನ್ನೈನ ಈ ಚೆಲ್ವಿ ಹೊಸ ಹೆಜ್ಜೆ ಇಡೋದಿಕ್ಕೆ ರೆಡಿಯಾದ್ರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ ಅದೊಂದು ಫೋಟೋ
ಸೌತ್ ಇಂಡಸ್ಟ್ರೀಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಟಾಪ್ ಒನ್ ಅಂದ್ರೆ ಅದು ನಯನ್ ತಾರಾನೇ. ಒಂದು ಸಿನಿಮಾಗೆ 12 ಕೋಟಿ ಪರ್ಸ್ ಗೆ ಇಳಿಸಿಕೊಳ್ಳುವ ಈ ಸುಂದ್ರಿಗೆ 2 ದಶಕಗಳ ಸಿನಿಮಾ ಅನುಭವಿದೆ. ಬರೀ ಗ್ಲಾಮರ್ ರೋಲ್ ಮಾತ್ರವಲ್ಲ, ಮಹಿಳಾ ಪ್ರಧಾನ ಸಿನ್ಮಾಗಳಿಂದಲೇ ಹೆಚ್ಚು ಗಮನಸೆಳೆದಾಕೆ ನಯನ್ ತಾರಾ. ಎಲ್ಲದಕ್ಕಿಂತಲೂ ಮದ್ವೆ ಬಳಿಕವೂ ಕ್ರೇಜ್ ಕಾಪಾಡಿಕೊಂಡಿರುವ ಈ ಸೂಪರ್ ಬ್ಯೂಟಿ ಡೈರೆಕ್ಷನ್ ಕಡೆ ಮುಖ ಮಾಡಲಿದ್ದಾರೆ ಎನ್ನುತ್ತಿದೆ ಆಕೆ ಹಂಚಿಕೊಂಡಿರುವ ಪಟ.

ಇತ್ತೀಚೆಗಷ್ಟೇ ನಯನ್ ತಾರಾ ಕ್ಯಾಮೆರಾ ಹಿಂದೆ ನಿಂತು, ದೃಶ್ಯವೊಂದನ್ನು ಸೆರೆಹಿಡಿಯುತ್ತಿರುವ ಫೋಟೋವನ್ನು ಸೋಷಿಯಲ್ ಸಮುದ್ರದಲ್ಲಿ ಹರಿಬಿಟ್ಟಿದ್ದಾರೆ. ಅದಕ್ಕೊಂದು ಹೊಸ ಆರಂಭದ ಮ್ಯಾಜಿಕ್ ನಂಬಿ ಎಂಬ ಚೆಂದದ ಕ್ಯಾಪ್ಚರ್ ಕೊಟ್ಟಿದ್ದಾರೆ. ಮದ್ವೆ ಬಳಿಕ ನಯನ್ ತಾರಾ ಸಿನಿಮಾ ಬದುಕಿನ ಮತ್ತೊಂದು ಮಜಲಿಗೆ ಸಜ್ಜಾದ್ರಾ? ಡೈರೆಕ್ಟರ್ ಕ್ಯಾಪ್ ತೊಡಲು ರೆಡಿಯಾದ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. 40ರ ಹಾಸುಪಾಸಿನಲ್ಲಿ ನಿಂತಿರುವ ಸೌತ್ ಚಿತ್ರರಂಗದ ಲೇಡಿಸೂಪರ್ ಸ್ಟಾರ್ ನಿರ್ದೇಶಕಿದತ್ತ ಹೆಜ್ಜೆ ಇಟ್ರೆ ಆಕೆಯ ಫ್ಯಾನ್ಸ್ ಗೆ ಖುಷಿನೇ..ನಟಿಯಾಗಿ ಛಾಪೂ ಮೂಡಿಸಿರುವ ನಯನ್ ನಿರ್ದೇಶಕಿಯಾಗಿ ನೆಲೆಯೂರುವಂತಾಗಲಿ. ಆಕೆಗೆ ಡೈರೆಕ್ಷನ್ ಕಲೆ ಸಿದ್ದಿಸೋದಕ್ಕೆ ಮನೆಯಲ್ಲಿಯೇ ಗುರುಗಳಿದ್ದಾರೆ. ಪತಿ ವಿಘ್ನೇಶ್ ನಿರ್ದೇಶಕನಾಗಿ ಹೆಸ್ರು ಮಾಡಿರುವಾಗ ಇನ್ನೇನೂ..ತಿರುಪತಿ ತಿಮ್ಮಪ್ಪನ ಮೇಲೆ ಭಾರ ಹಾಕಿ ಬಾರಮ್ಮ ಡೈರೆಕ್ಷನ್ ಅಖಾಡಕ್ಕೆ ಇಳಿಯಮ್ಮ ಅಂತಿದೆ ಬಣ್ಣದ ಲೋಕ.






