ಈ ಗಿಜಿಗುಡುವ ಸಂದಣಿಯಿಂದ ತಲೆ ತಪ್ಪಿಸಿಕೊಂಡು ದೂರ ಎಲ್ಲೋ ಹೊರಟು ಬಿಡುಬೇಕು… ಹೀಗೊಂದು ಆಸೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಆವರಿಸಿಕೊಂಡಿರುತ್ತೆ. ಈಗಿನ ವಾತಾವರಣದಲ್ಲಂತೂ ದುಡ್ಡು ಕಾಸು ಸಂಪಾದಿಸುವ ಗುರಿಯಾಚೆಗೆ ಇಂಥಾದ್ದೊಂದು ಸೆಳೆತ ಬಹುತೇಕರನ್ನು ಆವರಿಸಿಕೊಂಡಿರುತ್ತೆ. ಹೀಗೆ ಬಯಸೀ ಬಯಸಿ ದಕ್ಕಿಸಿಕೊಳ್ಳುವಂಥಾ ದಿವ್ಯ ಏಕಾಂತ ನೀಡುವ ಅನುಭೂತಿಯೇ ಬೇರೆ. ಅದು ಅನೇಕ ಸೃಜನಶೀಲ ಸೃಷ್ಟಿಗೆ ಕಾರಣವಾಗೋದೂ ಇದೆ. ಈ ಜಗತ್ತಿನ ಸಾಕಷ್ಟು ಸೃಜನಶೀಲತೆ ಅರಳಿಕೊಂಡಿದ್ದು ಕೂಡಾ ಇಂಥಾದ್ದೊಂದು ಏಕಾಂತದಲ್ಲಿಯೇ. ಆದರೆ ಬಹುಕಾಲ ಇಂಥಾ ಏಕಾಂತವನ್ನು ಸಂಭಾಳಿಸಿಕೊಂಡು ಹೋಗೋ ಕಲೆ ಕೆಲವೇ ಕೆಲ ಮಂದಿಗೆ ಮಾತ್ರವೇ ಸಿದ್ಧಿಸಿರುತ್ತೆ. ಒಂದು ವೇಳೆ ನೀವು ಬಯಸದೆಯೂ ಇಂಥಾ ಏಕಾಂತ ದಕ್ಕಿಬಿಟ್ಟರೆ ಅದು ಒಂಟಿತನವಾಗಿ ಜೀವ ತಿನ್ನೋದಕ್ಕೆ ಹೆಚ್ಚೇನೂ ಕಾಲ ಬೇಕಾಗೋದಿಲ್ಲ. ಹಾಗೆ ಉಸಿರುಗಟ್ಟಿಸುವ ಏಕಾಂತದಲ್ಲಿ ಅವುಡುಗಚ್ಚಿ ಬದುಕೋರಂದ್ರೆ ಥರಹೇವಾರಿ ಮಾನಸಿಕ ಕಾಯಿಲೆಗಳಿಗೆ ವಿಪರೀತ ಪ್ರೀತಿ!
ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ. ಇದೇ ಜಗತ್ತಿನಲ್ಲಿ ಹೇಗಾದರೂ ಮಾಡಿ ಒಂಟಿತನದಿಂದ ಕಳಚಿಕೊಳ್ಳಲು ಹಾತೊರೆಯುವ ಮನಸುಗಳೂ ಇದ್ದಾವೆ. ಆ ಕ್ಷಣಕ್ಕೆ ಮಾತಾಡಲೊಂದು ಜೀವಕ್ಕಾಗಿ ಹಂಬಲಿಸುತ್ತಾ, ಒಂಟಿತನದ ಬಂಧಕ್ಕೆ ಸಿಕ್ಕು ಉಸಿರು ಚೆಲ್ಲಿದ ಸಹಸ್ರಾರು ಮಂದಿ ಈ ಜಗತ್ತಿನಲ್ಲಿದ್ದಾರೆ. ಈ ಒಂಟಿತನವೆಂಬುದು ಸರಹದ್ದು ಮೀರಿದರೆ ಅಷ್ಟೊಂದು ಡೇಂಜರಸ್ ಅವತಾರವೆತ್ತುತ್ತೆ.
ಸಂಶೋಧನೆಗಳು ಹೇಳೋದೇನು?
ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಂಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ಞಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ. ನಾನಾ ಮಾನಸಿಕ ಸಮಸ್ಯೆಗಳ ಮೂಲ ಹುಡುಕುವ ನಿಟ್ಟಿನಲ್ಲಿ ಪ್ರತೀ ಕ್ಷಣವೂ ಒಂದಷ್ಟು ಅಧ್ಯಯನಗಳು ನಡೆಯುತ್ತಿರುತ್ತವೆ.
ಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು ಅನಾವರಣಗೊಳಿಸಿವೆ. ಒಂದಷ್ಟು ಮಂದಿ ಸಂಶೋಧಕರು ಏಕಾಂತದ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದರು. ಅದರ ವಿವಿಧ ಹಂತಗಳನ್ನು ಅಭ್ಯಸಿಸಿದ್ದರು. ಆ ಸಂದರ್ಭದಲ್ಲಿ ಏಕಾಂತವೆಂಬುದು ಹೆಚ್ಚು ದಿನಗಳ ಕಾಲ ನಿರಂತರವಾಗಿದ್ದರೆ ಅದರಿಂದ ಅನಾಹುತಗಳೇ ಜಾಸ್ತಿ ಸಂಭವಿಸ್ತವೆ ಎಂಬ ವಿಚಾರವನ್ನ ಮನಗಂಡಿದ್ದಾರೆ. ಅತಿಯಾದ ಏಕಾಂತ ಅದೆಷ್ಟು ಡೇಂಜರ್ ಅಂದ್ರೆ, ಅದು ಪ್ರತೀ ದಿನ ಹದಿನೈದು ಸಿಗರೇಟು ನಮ್ಮ ಆರೋಗ್ಯವನ್ನು ಘಾಸಿಗೊಳಿಸಬಹುದಾದಷ್ಟೇ ಮನಸು ದೇಹಗಳ ಮೇಲೆ ಪ್ರಭಾವ ಬೀರುತ್ತೆ. ಏಕಾಂತ ಬಯಸುವವರು ಅದರ ಈ ಮಗ್ಗುಲನ್ನೂ ಅರಿತುಕೊಂಡು ಎಚ್ಚರಿಕೆಯಿಂದಿದ್ದರೊಳಿತು.
ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ.
ನಾವೆಲ್ಲ ಕಾಸೊಂದಿದ್ರೆ ಎಲ್ಲವನ್ನೂ ಜೈಸಿಕೊಳ್ಳಬಹುದೆಂದು ಅಂದುಕೊಂಡಿರುತ್ತೇವೆ. ಆದರೆ, ಕಾಸಿನಿಂದ ಖರೀದಿಸಲು ಸಾಧ್ಯವಿಲ್ಲದ ಅದೆಷ್ಟೋ ಅಂಶಗಳು ಈ ಜಗತ್ತಿನಲ್ಲಿವೆ. ಅದರಲ್ಲಿ ಸಮಾಧಾನ ಮತ್ತು ನೆಮ್ಮದಿಯೂ ಸೇರಿಕೊಂಡಿದೆ. ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ.
ಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು ಅನಾವರಣಗೊಳಿಸಿದೆ. ಒಂದಷ್ಟು ಮಂದಿ ಸಂಶೋಧಕರು ಏಕಾಂತದ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದರು. ಅದರ ವಿವಿಧ ಹಂತಗಳನ್ನು ಅಭ್ಯಸಿಸಿದ್ದರು. ಆ ಸಂದರ್ಭದಲ್ಲಿ ಏಕಾಂತವೆಂಬುದು ಹೆಚ್ಚು ದಿನಗಳ ಕಾಲ ನಿರಂತರವಾಗಿದ್ದರೆ ಅದರಿಂದ ಅನಾಹುತಗಳೇ ಜಾಸ್ತಿ ಸಂಭವಿಸ್ತವೆ ಎಂಬ ವಿಚಾರವನ್ನ ಮನಗಂಡಿದ್ದಾರೆ. ಅತಿಯಾದ ಏಕಾಂತ ಅದೆಷ್ಟು ಡೇಂಜರ್ ಅಂದ್ರೆ, ಅದು ಪ್ರತೀ ದಿನ ಹದಿನೈದು ಸಿಗರೇಟು ನಮ್ಮ ಆರೋಗ್ಯವನ್ನು ಘಾಸಿಗೊಳಿಸಬಹುದಾದಷ್ಟೇ ಮನಸು ದೇಹಗಳ ಮೇಲೆ ಪ್ರಭಾವ ಬೀರುತ್ತೆ. ಏಕಾಂತ ಬಯಸುವವರು ಅದರ ಈ ಮಗ್ಗುಲನ್ನೂ ಅರಿತುಕೊಂಡು ಎಚ್ಚರಿಕೆಯಿಂದಿದ್ದರೊಳಿತು.
ಮಧುಮೇಹ ಕಂಟಕ!
ಹಾಗಾದ್ರೆ, ಒಂಟಿತನ ಅನ್ನೋದು ತೀರಾ ಒತ್ತಡ ಹುಟ್ಟಿಸಿದಾಗ ನಾನಾ ಮಾನಸಿಕಮಾನಸಿಕ ಕಾಯಿಲೆಗಳು ಅಮರಿಕೊಳ್ಳುತ್ತವೆಂಬುದು ಪಕ್ಕಾ. ಆದರೆ, ಇಂಥಾ ಒಂಟಿತನ, ಅದರಿಂದ ಸೃಷ್ಟಿಯಾಗೋ ಒತ್ತಡ ಒಂದಷ್ಟು ಘನ ಗಂಭೀರವಾದ ದೈಹಿಕ ಕಾಯಿಲೆಗಳಿಗೂ ಕೂಡಾ ಕಾರಣವಾಗುತ್ತವೆ. ಈಗಾಗಲೇ ಸುದೀರ್ಘ ಕಾಲ ನಡೆದಿರುವಂಥ ಒಂದು ಅಧ್ಯಯನ ವೊಂದು ಈ ವಿಚಾರವನ್ನು ಸ್ಪಷ್ಟ ಪಡಿಸಿದೆ. ಸುದೀರ್ಘ ಕಾಲ ಕಾಡುವ ಒಂಟಿತನವೆಂಬುದು ಅನೇಕ ದೈಹಿಕ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ. ಒಂಟಿತನ ಎಂಬುದು ಅನೇಕ ದೈಹಿಕ ಕಾಯಿಲೆಗಳ ಮೂಲ ಅಂತ ಈಗಾಗಲೇ ನಾನಾ ತಜ್ಞರು ಹೇಳಿದ್ದಾರೆ. ಇದರ ಪ್ರಾಯೋಗಿಕ ವರದಿ ನಿಜಕ್ಕೂ ಮೈ ನಡುಗಿಸುವಂತಿದೆ.
ಒಂಟಿತನ ಎಂಬುದು ನೋಡ ನೋಡುತ್ತಲೇ ಸ್ವ ಮರುಕವಾಗಿ ಬದಲಾಗುತ್ತದೆ. ಇಂಥಾ ಸ್ಥಿತಿಯೇ ಒಳಗೊಳಗೇ ವ್ಯಕ್ತಿಯೋರ್ವ ಕುದಿಯುವಂತೆ ಮಾಡಿ ಬಿಡುತ್ತದೆ. ಈ ಹಂತದಲ್ಲಿ ಇಂಥಾ ಮನುಷ್ಯರನ್ನು ಬಳಿ ಸೆಳೆದು ಮಾತಾಡಿಸೋ ಮನಸುಗಳಿದ್ದರೆ ಹೆಚ್ಚಿನ ಅವಘಡಗಳೇನೂ ಸಂಭವಿಸೋದಿಲ್ಲ. ತಕ್ಷಣವೇ ಒಂದಷ್ಟು ಕೌನ್ಸೆಲಿಂಗ್ ಕೊಡಿಸಿ, ಅಗತ್ಯ ಬಿದ್ದರಷ್ಟೇ ಔಷಧಿಯ ವ್ಯವಸ್ಥಥೆ ಮಾಡಿದರೆ ಶೀಘ್ರದಲ್ಲಿಯೇ ಮತ್ತೆ ಮೊದಲಿನಂತಾಗೋದು ಕಷ್ಟವೇನಲ್ಲ. ಆದರೆ ಅದು ಹಾಗೆಯೇ ಮುಂದುವರೆದರೆ ನಾನಾ ದೈಹಿಕ ಕಾಯಿಲೆಗಳೂ ಮುತ್ತಿಕೊಳ್ಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಟೈಪ್೨ ಮಧುಮೇಹ ಅಮರಿಕೊಳ್ಳೋದು ಪಕ್ಕಾ ಅಂಥಾ ವೈದ್ಯಕೀಯ ಸಂಶೋಧನೆಗಳು ಋಜುವಾತುಗೊಳಿಸಿವೆ.
ಬೇಗನೆ ವಯಸ್ಸಾಗುತ್ತೆ!
ಧೂಮಪಾನ ಎಂಬೋ ಚಟ ನಾನಾ ರೀತಿಯ ದೈಹಿಕ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆಂಬುದು ಗೊತ್ತಿರುವ ವಿಚಾರವೇ. ಈ ಧೂಮಪಾನದಿಂದ ಬಹು ಬೇಗನೆ ವಯಸ್ಸಾದಂತೆ ಮುಖ ಭಾವ ಬದಲಾಗುತ್ತದೆಂದು ಸಂಶೋಧನೆಗಳು ಹೇಳುತ್ತವೆ. ಇದರಿಂದ ಬರಬಹುದಾದ ನಾನಾ ಕಾಯಿಲೆಗಳ ಬಗೆಗಂತೂ ಲೆಕ್ಕವಿಡಲು ಸಾಧ್ಯವಾಗದಷ್ಟು ಸಂಶೋಧನೆಗಳು ನಡೆದಿವೆ. ಆದರೆ, ಧೂಮಪಾನಕ್ಕೆ ಬೇಗನೆ ವಯಸ್ಸಾದಂತೆ ಕಾಣುವಂತೆ ಚರ್ಮವನ್ನು ಸುಕ್ಕುಗಟ್ಟಿಸುವ ಶಕ್ತಿ ಇದೆ ಅನ್ನೋದು ಮಾತ್ರ ಜನಜನಿತವಾಗಿದೆ. ವಿಚಿತ್ರವೆಂದರೆ, ಈ ಒಂಟಿತನ ಅನ್ನೋದು ಆ ವಿಚಾರದಲ್ಲಿ ಸಿಗರೇಟಿಗಿಂತಲೂ ಡೇಂಜರಸ್. ಹೀಗಂತ ಸದರಿ ಸಂಶೋಧನೆಯೇ ಸಾಠರಿ ಹೇಳುತ್ತಿದೆ.
ಯುಎಸ್ ಜರ್ನಲ್ ನಲ್ಲೊಂದು ಸಂಶೋಧನಾ ವರದಿ ಪ್ರಕಟವಾಗಿದೆ. ಅದರನ್ವಯ ಹೇಳೋದಾದರೆ ವಯಸ್ಸಾಗುವ ಪ್ರಕ್ರಿಯೆಗೆ ದೈಹಿಕ ಬದಲಾವಣೆಗಳು ಮಾತ್ರವೇ ಕಾರಣವಾಗೋದಿಲ್ಲ. ಯಾವುದೇ ಚಿಂತೆ ಇಲ್ಲದೆ ಪ್ರೀತಿ ಪಾತ್ರರೊಂದಿಗೆ ನಗು ನಗುತ್ತಾ ಇರುವವರೆಲ್ಲ ಅದೆಷ್ಟು ವರ್ಷ ಕಳೆದರೂ ಯೌವನವನ್ನು ಕ್ರಯ ಪಡೆದವರಂತೆ ಓಡಾಡಿಕೊಂಡಿರುತ್ತಾರೆ. ಅವ್ರಗೆ ಅಷ್ಟು ವಯಸ್ಸಾಗಿದೆ ಅಂದ್ರೆ ನಂಬೋಕೇ ಆಗೋದಿಲ್ಲ ಎಂಬಂಥಾ ಮಾತುಗಳನ್ನು ನಾವೆಲ್ಲ ಆಗಾಗ ಕೇಳಿಸಿಕೊಂಡಿತ್ತೇವೆ. ವಿಚಿತ್ರ ಅಂದ್ರೆ, ಒಂಟಿತನದ ಬಾಧೆಯಿಂದ ಬಳಲುತ್ತಿರುವವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ಈ ಕಾರಣದಿಂದಲೇ ಮತ್ತಷ್ಟು ತಲೆ ಕೆಡಿಸಿಕೊಂಡು ಬೇಗನೆ ಸಾಜವಿಗೆ ಹತ್ತಿರವಾದರೂ ಅಚ್ಚರಿಯೇನಿಲ್ಲ.
ಒಂಟಿತನ ಎಂಬುದು ಎಲ್ಲ ಕಡೆಯಿಂದಲೂ ಇರಿಯುವ ಮುಳ್ಳಿನ ಹಾಗೆ. ಯಾಕೆಂದರೆ, ಒಂಟಿತನವೇ ನಾನಾ ಭಾವ ತುಮುಲಗಳನ್ನು, ತೊಳಲಾಟಗಳನ್ನು ತಂದೊಡ್ಡುತ್ತದೆ. ಪ್ರಧಾನವಾಗಿ ಒಂದಷ್ಟು ಕಾಲ; ಪ್ರಯಾಸ ಪಟ್ಟು ಒಂಟಿಯಾಗಿರುವವರು ಬೇರೆ ದಾರಿ ಕಾಣದೆ, ಕೊರಗುತ್ತಾ ಖಿನ್ನತೆಗೀಡಾಗುತ್ತಾರೆ. ಖಿನ್ನತೆ ಎಂಬುದು ಯಾವುದಕ್ಕೂ ತಾನು ಅರ್ಹನಮಲ್ಲ ಎಂಬಂಥಾ ಲೋಕ ನಿಂದಿತ ಭಾವವನ್ನು ತುಂಬಿ ಬಿಡುತ್ತದೆ. ಇಂಥಾ ಭಾವವಿರುವ ಮನಸಲ್ಲಿ ಆತ್ಮವಿಶ್ವಾಸದ ಸಣ್ಣ ಗೆರೆ ಕೂಡಾ ಮೂಡಲು ಸಾಧ್ಯವಿಲ್ಲ. ಆತ್ಮ ವಿಶ್ವಾಸ ಅಂತೊಂದಿದ್ದರೆ ಎಂಥಾ ಸಮಸ್ಯೆಗಳನ್ನಾದರೂ ಸಲೀಸಾಗಿ ದಾಟಿಕೊಳ್ಳುವ ದಾರಿನ ತೋರಿಸುತ್ತೆ. ಆದರೆ ಖಿನ್ನತೆ ಆವರಿಸಿ ಬಿಟ್ಟರೆ ಬೇಗನೆ ಅದು ಮುಪ್ಪಿನತ್ತ ದೂಡಿ ಬಿಡುತ್ತದೆ. ಇಂಥಾ ಹಂತ ತಲುಪಿಕೊಂಡರೆ ಮತ್ತೆ ಮೊದಲಿನಂತಾಗೋದು ತುಸು ಕಷ್ಟ.
ಸಹಜೀವನ ಸೂಕ್ತ
ಎಲ್ಲರೊಂದಿಗಿರುವ ಅವಕಾಶ ಸಿಕ್ಕವರಿಗೆ ಸುಲಭವಾಗಿ ಅದರ ಬೆಲೆ ಅರ್ಥವಾಗೋದೇ ಇಲ್ಲ. ಯಾಕಂದ್ರೆ ಅಲ್ಲಿ ಗೆರೆಗಳಿರುತ್ತವೆ. ಗೆರೆ ದಾಟಲು ಪ್ರಯತತ್ನಿಸಿದಾಗೆಲ್ಲ ತಿದ್ದಿ ಬುದ್ಧಿ ಹೇಳೋ ಜೀವಗಳಿರುತ್ತವೆ. ಆದರೆ ಕೆಲ ಮಂದಿಗೆ ಒಂದು ಹಂತದಲ್ಲಿ ಅದೆಲ್ಲವೂ ಸಂಕೋಲೆ ಅಂತನ್ನಿಸೋ ಸಾಧ್ಯತೆಯೇ ಹೆಚ್ಚು. ಹೀಗೊಂದು ಮನಃಸ್ಥಿತಿ ಮೂಡಿಕೊಂಡ ನಂತರ ಎಲ್ಲವನ್ನು ಮೀರಿಕೊಂಡು ಒಂಟಿಯಾಗಿರಲು ಅನೇಕರು ಹಾತೊರೆಯುತ್ತಾರೆ. ನಿಮಗೆ ಅಚ್ಚರಿಯಾಗಬಹುದುಇ. ಮನೆ ಮಂದಿಯೆಲ್ಲ ಓಡಾಡುತ್ತಿರುವಾಗ ಯಾವುಜದೋ ರೂಮು ಹೊಕ್ಕು ಬಾಗಿಲು ಜಡಿದುಕೊಂಡು ಕೂರೋದು ಏಕಾಂತವಷ್ಟೆ. ಅದು ಒಂಟಿತನವಾಗಲೂ ಬಹುದು.
ಹಾಗೆ ಮನೆಯಲ್ಲಿ ರೂಮಿನ ಬಂಧಿಯಾದಾಗ ನಮಗೆ ಯಾವ ವ್ಯವತ್ಯಾಸವೂ ಕಾಣಿಸೋದಿಲ್ಲ. ಅದಕ್ಕೆ ಕಾರಣ ಹೊರಗೆ ಅಡ್ಡಾಡುತ್ತಿರೋ ನಮ್ಮವರೇ ಕಾರಣ. ಒಂದು ವೇಳೇ ಯಾರೂ ಇಲ್ಲದೆ ರೂಮಿನಲ್ಲಿ ಕುಂತಾಗ ಕ್ರಮೇಣ ಕಾಡಬಹುದಾದ ಅನಾಥ ಪ್ರಜ್ಞೆಯೇ ಅಸಲೀ ಒಂಟಿತನ. ಅದು ಎಲ್ಲ ರೋಗಗಳ ಪಾಲಿಗೂ ಕೂಡಾ ಹುಲುಸಾದ ಹುಲ್ಲುಗಾವಲಿದ್ದಂತೆ. ಇಂಥಾ ಒಂಟಿತನದ ಕುಲುಮೆಯಲ್ಲಿ ಬೇಯುತ್ತಾ ಹೇಳ ಹೆಸರಿಲ್ಲದೆ ಉಸಿರು ನಿಲ್ಲಿಸಿದವರಿದ್ದಾರೆ. ಮೇಲೆದ್ದು ನಕ್ಕವರೂ ಇದ್ದಾರೆ. ಆದರೆ ಸಹಜೀವನ ಅನ್ನೋದು ಕರುಣಿಸುವಷ್ಟು ಆರೋಗ್ಯ ಮತ್ತು ನೆಮ್ಮದಿಯನ್ನು ಈ ಜಗತ್ತಿನ ಮತ್ಯಾವುದೂ ಸೃಷ್ಟಲು ಸಾಧ್ಯವಿಲ್ಲ ಅಂತಲೂ ಕೆಲ ಸಂಶೋಧನೆಗಳು ಋಜುವಾತು ಪಡಿಸಿವೆ.
ಕೋವಿಡ್ ಕೊಡುಗೆ
ಇದೀಗ ಕೊರೋನ ವೈರಸ್ಸಿನ ನಾನಾ ಅಡ್ಡ ಪರಿಣಾಮಗಳಿಂದ ಜಗತ್ತಿನ ಬಹುಪಾಲು ಮಂದಿ ರೌರವ ನರಕ ಅನುಭವಿಸುತ್ತಿದ್ದಾರೆ. ಅದ್ಯಾವುದೋ ವೈರಸ್ಸು ಬಂತು. ವರ್ಷಗಟ್ಟಲೆ ಇದ್ದು ಹೋಯ್ತು. ಆದರೆ, ಅದು ಈ ಜಗತ್ತಿನ ಮನುಷ್ಯರ ಮೇಲೆ ಮಾಡಿರುವ ಮನೋ ದೈಹಿಕ ಪ್ರಹಾರ ಮಾತ್ರ ಅಕ್ಷರಶಃ ಬೆಚ್ಚಿ ಬೀಳಿಸುವಂತಿದೆ. ಒಂದು ಅಧ್ಯಯನದ ಪ್ರಕಾರ ಈ ಜಗತ್ತು ಆಧುನಿಕ ಕಾಲದಲ್ಲಿ ಕೋವಿಡ್ ಕಾಲದಷ್ಟು ಒಂಟಿತನದ ಆಘಾತವನ್ನು ಮತ್ತತೆಂದೂ ಕಂಡಿರಲಿಲ್ಲ. ಈ ಕಾಲದಲ್ಲಿ ಮಂದಿ ಅನಿವಾರ್ಯವಾಗಿ ಸಿಕ್ಕ ಸಿಕ್ಕಲ್ಲಿ ಬಂಧಿಗಳಾಗಿದ್ದರು. ಅನೇಕರಿಗೆ ತಮ್ಮಿಷ್ಟದ ಜೀವಗಳ ಸತ್ತರೂ ಕಳೇಬರ ನೋಡುವ ಭಾಗ್ಯವೂ ಸಿಕ್ಕಿರಲಿಲ್ಲ.
ಹೀಗೆ ಪ್ರೀತಿ ಪಾತ್ರರನ್ನು ಕಳೆದುಕೊಂಡುಯ ಮುಂದೇನಾಗುತ್ತದೋ ಎಂಬ ಭಯದಲ್ಲಿ ಬದುಕವಾಗ ಒಂಟಿತನ ಎಂಬುದು ತುಂಬಾ ಕ್ರೂರವಾಗಿ ಕಾಣಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಕೊರೋನಾ ಕಾಲದಿಂಣದೀಚೆಗೆ ಒಂಟಿತನದ ಬಾಧೆ ಮತ್ತಷ್ಟು ಕ್ರೂರ ಸ್ವರೂಪ ಪಡೆದುಕೊಂಡಿದೆ. ಪ್ರಧಾನವಾಗಿ ಈ ಸಂದರ್ಭದಲ್ಲಿ ಎಲ್ಲರೂ ಧ್ವೀಪಗಳಂತಾಗಿದ್ದರು. ಕಚೇರಿಗೆ ಹೋದರೆ ಕಲೆತು ಬದುಕುತ್ತಿದ್ದವರೆಲ್ಲ ಒಂಟಿ ತನದಿಂದ ನರಳಿದ್ದರು. ಖಾಸಗಿಯಾಗಿ ಅದೆಂಥಾದ್ದೇ ಯಾತನೆ ಇದ್ದರೂ ಸ್ನೇಹಿತರು, ಸಹೋದ್ಯೋಗಿಗಳ ಬಳಿ ಹೇಳಿಕೊಂಡ್ರೆ ಮನಸು ನಿರಾಳವಾಗುತ್ತೆ. ಆದ್ರೆ ಕೊರೋನಾ ಕಾಲದಲ್ಲಿ ಅದು ಸಾಧ್ಯವಿರಲಿಲ್ಲ. ಅದರ ಫಲವಾಗಿ ಅದೆಷ್ಟೋ ಮಂದು ಮಾನಸಿಕ ಯಾತನೆಗೀಡಾಗಿದ್ದಾರೆ. ಕೊರೋನಾ ಕಾಲದಿಂದ ಒಂಟಿತನವೆಂಬುದು ಮತ್ತಷ್ಟು ಡೇಂಜರಸ್ ಸ್ವರೂಪ ಪಡೆದುಕೊಂಡಿದೆಯಂತೆ.