ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶೋ ಮ್ಯಾನ್ ಪ್ರೇಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅನ್ನೋ ಸುದ್ದಿ ಹಳೆಯದೇ. ಸದ್ಯದ ತಾಜಾ ಸಮಾಚಾರ ಏನಪ್ಪ ಅಂದರೆ ಕರಿಯ ಕಾಂಬೋ ಪಿಕ್ಚರ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಇರ್ತಾರೆ ಅನ್ನೋದು. ಯಸ್, ಹೀಗೊಂದು ಸುದ್ದಿ ಟಿಟೌನ್ ಅಂಗಳದಿಂದ ಸೀದಾ ಗಾಂಧಿನಗರಕ್ಕೆ ಬಂದು ಮುಟ್ಟಿದೆ. ಇತ್ತೀಚೆಗಷ್ಟೇ ಪ್ರೇಮ್ ಸಾಹೇಬ್ರು ಹೈದ್ರಬಾದ್‌ಗೆ ಹೋಗಿ ಮೆಗಾಸ್ಟಾರ್‌ನ ಮೀಟ್ ಮಾಡಿದ್ದಾರಂತೆ. ದರ್ಶನ್ ಜೊತೆಗೆ ಮಾಡ್ತಿರೋ ಸಿನಿಮಾದ ಬಗ್ಗೆ ಮಾತುಕತೆ ನಡೆಸಿ ಸ್ಪೆಷಲ್ ರೋಲ್‌ಗೆ ಅಪ್ರೋಚ್ ಮಾಡಿದ್ದಾರಂತೆ. ಅಟ್ ದಿ ಸೇಮ್ ಟೈಮ್ ಕಥೆ ಕೂಡ ನರೇಟ್ ಮಾಡಿದ್ದು, ಚಿರು ಅವರಿಂದ ಪಾಸಿಟೀವ್ ರೆಸ್ಪಾನ್ಸ್ ಸಿಕ್ಕಿದೆಯಂತೆ. ಒಂದ್ವೇಳೆ ಮೆಗಾಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆಗಿದ್ದಲ್ಲಿ 22 ವರ್ಷಗಳ ನಂತರ ಕನ್ನಡಕ್ಕೆ ಕಂಬ್ಯಾಕ್ ಆದಂತಾಗುತ್ತೆ
ಹೌದು, 1996ರಲ್ಲಿ ಚಿರಂಜೀವಿ ಕ್ರೇಜಿಸ್ಟಾರ್ ರವಿಚಂದ್ರನ್ ನಿದೇಶಿಸಿ ನಟಿಸಿದ್ದ ʻಸಿಪಾಯಿʼ ಸಿನಿಮಾದಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದರು. ಈ ಚಿತ್ರದ ʻಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿʼ ಹಾಡು ಇವತ್ತಿಗೂ ಎವರ್ ಗ್ರೀನ್ ಸಾಂಗ್ ಆಗಿ ಉಳಿದಿದೆ. ಇದೀಗ, ಶೋ ಮ್ಯಾನ್ ಪ್ರೇಮ್ ಸಾಹೇಬ್ರು ಮತ್ತೊಮ್ಮೆ ಚಿರಂಜೀವಿನಾ ಚಂದನವನಕ್ಕೆ ಕರೆತರುವ ಪ್ರಯತ್ನ ಮಾಡ್ತಿದ್ದಾರಂತೆ. ಕರಿಯ ನಂತರ ಮತ್ತೊಮ್ಮೆ ದಾಸನ ಜೊತೆ ಕೈ ಜೋಡಿಸಿರೋ ಪ್ರೇಮ್, ತೆಲುಗು ಸೂಪರ್ ಸ್ಟಾರ್ ಚಿರುಗೋಸ್ಕರ ಸ್ಪೆಷಲ್ ಕ್ಯಾರೆಕ್ಟರ್ ಡಿಸೈನ್ ಮಾಡಿದ್ದಾರೆನ್ನಲಾಗ್ತಿದೆ. ಸದ್ಯ, ಧ್ರುವ ಸರ್ಜಾ ಜೊತೆ ಕೆಡಿ ಸಿನಿಮಾ ಮಾಡ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಚಿತ್ರೀಕರಣ ಭರದಿಂದ ಸಾಗ್ತಿದೆ. ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ತ್, ಶಿಲ್ಪಾಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಬಿಗ್ ಸ್ಟಾರ್ಸ್ ಗಳ ದಂಡೇ ಸಿನಿಮಾದಲ್ಲಿದೆ. ಈ ಸಿನಿಮಾ ರಿಲೀಸ್ ನಂತರ ದಚ್ಚು- ಪ್ರೇಮ್ ಜುಗಲ್ ಬಂಧಿಯ ಚಿತ್ರ ಸೆಟ್ಟೇರಲಿದೆ. 2024 ಜೂನ್ ಅಷ್ಟರಲ್ಲಿ ಕರಿಯ ಕಾಂಬೋ ಚಿತ್ರಕ್ಕೆ ಕಿಕ್ ಸ್ಟಾರ್ಟ್ ಸಿಗಲಿದೆ ಎನ್ನುವ ಸಮಾಚಾರ ಹರಿದಾಡ್ತಿದೆ.

ಪ್ರೇಮ್ ಡೈರೆಕ್ಷನ್ ಸಿನಿಮಾಗೂ ಮೊದಲೇ ದಾಸ, ಮಿಲನ ಪ್ರಕಾಶ್ ನಿದೇಶನದ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಆ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಈ ಹಿಂದೆ ದರ್ಶನ್ ಹಾಗೂ ಮಿಲನ ಪ್ರಕಾಶ್ ತಾರಕ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದು, ಅಭಿಮಾನಿ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ. ಹೀಗಿರುವಾಗಲೇ ಜೋಗಿ ಪ್ರೇಮ್ ಹಾಗೂ ದಚ್ಚು ಜುಗಲ್ ಬಂಧಿ ಬಗ್ಗೆ ಚರ್ಚೆಯಾಗ್ತಿದೆ. ಮೆಗಾಸ್ಟಾರ್ ಹೆಸರು ಕೂಡ ಕೇಳಿಬಂದಿದ್ದು ಮೈಲೇಜ್ ಇನ್ನೂ ಜಾಸ್ತಿಯಾಗ್ತಿದೆ. ಅಂದ್ಹಾಗೇ, ಜೋಗಿ ಪ್ರೇಮ್ ಸಿನಿಮಾ ಮಾಡುತ್ತಾರೆ ಎಂದಾಗ ಸುದ್ದಿಗೇನೂ ಬರವಿರುವುದಿಲ್ಲ. ಹೆಸರಾಂತ ನಟರ ಹೆಸರುಗಳು ಕೇಳಿ ಬರುವುದು ಸಹಜ. ಆ ನಟರು ಬರುತ್ತಾರೋ ಇಲ್ಲವೋ ಬೇರೆ ಮಾತು, ಒಂದಷ್ಟು ಸುದ್ದಿಯಂತೂ ಆಗುತ್ತದೆ. ಇದು ಹಾಗೇನಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಆದರೆ, ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಬಂಡವಾಳ ಹೂಡ್ತಿರೋದ್ರಿಂದ ಮೆಗಾಸ್ಟಾರ್ ಎಂಟ್ರಿ ಸುದ್ದಿನಾ ಅಲ್ಲಗಳೆಯುವಂತಿಲ್ಲ.
ಇದೀಗ ದಚ್ಚು ಕಾಟೇರ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕೆಲವೇ ಕೆಲವು ಗಂಟೆಗಳಲ್ಲಿ ಒಡೆಯನ ಬಹುನಿರೀಕ್ಷಿತ ʻಕಾಟೇರʼ ಚಿತ್ರ ಕರುನಾಡಿನ ಅಂಗಳದಲ್ಲಿ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಸೆಟ್ಟೇರಿದಾಗಿನಿಂದನೂ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ʻಕಾಟೇರʼ ರಿಲೀಸ್ ಗೂ ಮುನ್ನ ಹಲವು ದಾಖಲೆಗಳನ್ನ ಬರೆದಿದೆ. ಟಿಕೆಟ್ ಬುಕ್ಕಿಂಗ್ ಶುರುವಾಗಿ ಕೇವಲ 72 ಗಂಟೆಗಳಲ್ಲಿ ಬರೋಬ್ಬರಿ 50 ಸಾವಿರ ಟಿಕೆಟ್ ಸೇಲ್ ಆಗಿದ್ದು ಒಂದು ರೆಕಾರ್ಡ್ ಆದರೆ, ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿ 48 ಗಂಟೆಗಳಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿರೋದು ಮಗದೊಂದು ದಾಖಲೆ. ಇಂತಿಪ್ಪ ರೆಕಾರ್ಡ್ ಬ್ರೇಕಿಂಗ್ ಕಾಟೇರ ಕಣಕ್ಕಿಳಿಯೋದಕ್ಕೆ ಕೆಲವು ಗಂಟೆಗಳು ಬಾಕಿಯಿದ್ದು, ದಚ್ಚು ಭಕ್ತರು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳು ಕಣ್ಣರಳಿಸಿದ್ದಾರೆ. ಬೆಳ್ಳಿಭೂಮಿ ಮೇಲೆ ಕಾಟೇರನಾಗಿ ಬಾಕ್ಸ್ ಆಫೀಸ್ ಸುಲ್ತಾನನ ಆರ್ಭಟ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ಸೀ






