ಬುಧವಾರ, ಜುಲೈ 22, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಮಾರ್ಟಿನ್‍’ಗೆ ಮುಹೂರ್ತ ಫಿಕ್ಸ್… ಬೆಳ್ಳಿಭೂಮಿ ಮೇಲೆ ಬೆಂಕಿಚೆಂಡು ಧಗಧಗ !

Vishalakshi Pby Vishalakshi P
16/11/2023
in Majja Special
Reading Time: 1 min read
`ಮಾರ್ಟಿನ್‍’ಗೆ ಮುಹೂರ್ತ ಫಿಕ್ಸ್… ಬೆಳ್ಳಿಭೂಮಿ ಮೇಲೆ ಬೆಂಕಿಚೆಂಡು ಧಗಧಗ !

ಕನ್ನಡದ ಮೋಸ್ಟ್ ಎಕ್ಸ್ ಪೆಕ್ಡೆಡ್ ಸಿನಿಮಾಗಳ ಪೈಕಿ ಮಾರ್ಟಿನ್ ಮೊದಲ ಸಾಲಲ್ಲಿ ನಿಂತಿದೆ. ಕನ್ನಡಿಗರನ್ನ ಮಾತ್ರವಲ್ಲ ಅಖಂಡ ಸಿನಿಮಾ ಪ್ರೇಮಿಗಳನ್ನು ಕಣ್ಣರಳಿಸಿ ಕಾಯುವಂತೆ ಮಾಡಿರೋ ಮಾರ್ಟಿನ್ ಗೆ ಮುಹೂರ್ತ ಫಿಕ್ಸಾಗಿದೆ. ಯಸ್ ಮಾರ್ಟಿನ್  ಬಿಡುಗಡೆ ಯಾವಾಗಪ್ಪ ಅಂತ ಕಾಯುತಿರೋ ಆಕ್ಷನ್ ಪ್ರಿನ್ಸ್ ಭಕ್ತಗಣಕ್ಕೆ ಹೊಸ ಸುದ್ದಿ ಸಿಕ್ಕಿದೆ.  ಲೇಟ್ ಆದ್ರೂ ಧೂಮ್ ಧಾಮ್ ಅಂತ ಚಿತ್ರಮಂದಿರಗಳಿಗೆ ಎಂಟ್ರಿ ಕೊಡೋಕೆ ಮಾರ್ಟಿನ್ ಸಜ್ಜಾಗಿದ್ದಾನೆ. 

ಪೊಗರು ಹುಡುಗ ಧ್ರುವ ಸರ್ಜಾ ಕೆರಿಯರ್ ಗೆ ಪ್ಯಾನ್ ಇಂಡಿಯನ್ ಟಚ್ ಕೊಡೋಕೆ ಮಾರ್ಟಿನ್ ಬರ್ತಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮಾರ್ಟಿನ್ ಮಾರ್ಚ್ ವೇಳೆಗೆ ಕಂಪ್ಲೀಟ್ ಶೂಟ್ ಮುಗಿಸಿ ಬರುತ್ತೆ. ಮಾರ್ಟಿನ್ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡದೇ ಹೋದ್ರು, ಮಾರ್ಚ್ ನಲ್ಲೇ ಮಾರ್ಟಿನ್ ಆಗಮನ ನಿಗದಿಯಾಗಿದೆ. ನಿರ್ಮಾಪಕ ಉದಯ್ ಮೆಹತಾ ಬಿಡುಗಡೆಗೆ ರೈಟ್ ಟೈಮ್ ಬರಲಿ, ನಾವ್ ರೆಡಿ ಅಂತ ರಿಲೀಸ್ ನಿರೀಕ್ಷೆಗಳನ್ನು ಡಬಲ್ ಮಾಡುತ್ತಿದ್ದಾರೆ.

ಅದ್ದೂರಿ ಕಾಂಬಿನೇಷನ್‍ನಲ್ಲಿ ಬರುತ್ತಿರುವ `ಮಾರ್ಟಿನ್’ ಸಿನಿಮಾ ಭರ್ಜರಿಯಾಗೇ ತಯ್ಯಾರಾಗುತ್ತಿದೆ. ಮಾರ್ಟಿನ್ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿರುವ ಇಟಲಿ ಬೆಡಗಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಜೊತೆ ವೈಭವಿ ಶಾಂಡಿಲ್ಯ, ಸುಕೃತ ವಾಗ್ಲೆ, ಅನ್ವೇಶಿ ಜೈನ್, ನವಾಬ್ ಷಾ, ರೋಹಿತ್ ಪಾಠಕ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮಣಿಶರ್ಮಾ ಸಂಗೀತ ಸಿನಿಮಾಗಿದ್ದು, ರವಿಬಸ್ರೂರ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ರಾಮ್-ಲಕ್ಷ್ಮಣ್ ಹಾಗೂ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ.

 

ಎ.ಪಿ ಅರ್ಜುನ್ ನಿರ್ದೇಶನ, ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಮೂಡಿಬರ್ತಿರೋ ಈ ಚಿತ್ರದ ಮೇಲೆ ನಿರೀಕ್ಷೆ ತುಸು ಜಾಸ್ತಿನೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ವಿದೇಶಿ ಮೂಲದ ಖ್ಯಾತ ಬಾಡಿಬಿಲ್ಡರ್ಗಳ ಜೊತೆ ಧ್ರುವ ಹೊಡೆದಾಡಿದ್ದಾರೆ. ಅಷ್ಟಕ್ಕೂ, ಧ್ರುವ ಗ್ಯಾಂಗ್ ಸ್ಟರ್ರಾ ಅಥವಾ ಸೋಲ್ಜರ್ರಾ? ಈ ಕುತೂಹಲವನ್ನ ಬಿಟ್ಟುಕೊಡದ ಎ.ಪಿ ಅರ್ಜುನ್ `ಮಾರ್ಟಿನ್’ಗಾಗಿ ಇಂಡಿಯಾದ ಜೊತೆಗೆ ಪಾಕ್ ಕೂಡ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್‍ನಲ್ಲಿ  `ಮಾರ್ಟಿನ್’ ಅಖಾಡಕ್ಕಿಳಿಯೋದು ಪಕ್ಕಾ .  ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಮೇನಿಯಾ ಶುರುವಾಗೋದು ಸತ್ಯ

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ `ಮನು’ ಎಲ್ಲರಂತಲ್ಲ….ಪ್ರೀತಿ ವಿಚಾರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಜಕ್ಕೂ ಕರ್ಣ!

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ `ಮನು' ಎಲ್ಲರಂತಲ್ಲ....ಪ್ರೀತಿ ವಿಚಾರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಜಕ್ಕೂ ಕರ್ಣ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.