ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

’ತೋತಾಪುರಿ-2’ ಬಿಡುಗಡೆಗೆ ಮುಹೂರ್ತ ಫಿಕ್ಸ್ !ಸೆ. 29ಕ್ಕೆ ಸಿನಿಮಾ ತೆರೆಗೆ

Vishalakshi Pby Vishalakshi P
26/09/2023
in Majja Special
Reading Time: 1 min read
’ತೋತಾಪುರಿ-2’ ಬಿಡುಗಡೆಗೆ ಮುಹೂರ್ತ ಫಿಕ್ಸ್ !ಸೆ. 29ಕ್ಕೆ ಸಿನಿಮಾ ತೆರೆಗೆ

ಈ ಹಿಂದೆ ‘ಗೋವಿಂದಾಯ ನಮಃ’, ‘ಶಿವಲಿಂಗ’ ಮೊದಲಾದ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದ ಕೆ. ಎ. ಸುರೇಶ್ ನಿರ್ಮಾಣದ ‘ತೋತಾಪುರಿ -2’ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಸೆಪ್ಟೆಂಬರ್ 29 ರ ಶುಕ್ರವಾರ ‘ತೋತಾಪುರಿ -2’ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಕಳೆದ ವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ‘ತೋತಾಪುರಿ’ ಚಿತ್ರದ ಸೀಕ್ವೇನ್ಸ್ ಇದಾಗಿದ್ದು, ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ‘ಸುರೇಶ್ ಆರ್ಟ್ಸ್, ಮೋಲನಿ ಫ್ಲಿಕ್ಸ್ ಸ್ಟುಡಿಯೋಸ್’ ಲಾಂಚನದಲ್ಲಿ ಕೆ. ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ.

‘ತೋತಾಪುರಿ-2’ ಸಿನಿಮಾದಲ್ಲಿ ಜಗ್ಗೇಶ್ ಜೊತೆಗೆ ನಟ ರಾಕ್ಷಸ ಡಾಲಿ ಧನಂಜಯ್ ಕೂಡ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಈ ಸಿನಿಮಾದಲ್ಲೂ ಮುಂದುವರಿದಿವೆ. ಚಿತ್ರಕ್ಕೆ ನಿರಂಜನ ಬಾಬು ಛಾಯಾಗ್ರಹಣ, ಅರುಣ್ ಆಂಡ್ರ್ಯೂ ಸಂಗೀತ ಸಂಯೋಜನೆಯಿದೆ. ಉತ್ತಮ ಮನರಂಜನೆಯ ಜೊತೆ ಸದಭಿರುಚಿಯ ಹಾಸ್ಯ ‘ತೋತಾಪುರಿ-2’ ಚಿತ್ರದ ಹೈಲೈಟ್ ಎಂದು ಹೇಳಿಕೊಳ್ಳುತ್ತಿದೆ ಚಿತ್ರತಂಡ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಹಾಲಿವುಡ್ ಆ್ಯಕ್ಷನ್ ಕಿಂಗ್ ಭೇಟಿಯಾದ `ಕೆಜಿಎಫ್’ ಕಿಂಗ್! ಬಯಲಾಯ್ತು ಕಲಾಶ್ನಿಕೋವ್ ರಹಸ್ಯ!

ಹಾಲಿವುಡ್ ಆ್ಯಕ್ಷನ್ ಕಿಂಗ್ ಭೇಟಿಯಾದ `ಕೆಜಿಎಫ್' ಕಿಂಗ್! ಬಯಲಾಯ್ತು ಕಲಾಶ್ನಿಕೋವ್ ರಹಸ್ಯ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.