Deepika Padukone: ನಟ ಸಲ್ಮಾನ್ ಖಾನ್(Salman Khan)ಸಿಕಂದರ್ ಮೂಲಕ ರಂಜಿಸಲು ಬರ್ತಿರೋದು ಗೊತ್ತೇ ಇದೆ. ಆದರೆ ಈ ಚಿತ್ರಕ್ಕೆ ನಾಯಕಿ ಯಾರು ಅನ್ನೋದೇ ಎಲ್ಲರ ಪ್ರಶ್ನೆಯಾಗಿತತು. ಬಿಟೌನ್ ಅಂಗಳದಲ್ಲಿ ಡಿಪ್ಪಿ ಅಲಿಯಾಸ್ ದೀಪಿಕಾ(Deepika Padukone) ಹೆಸರು ಕೇಳಿ ಬಂದಿತ್ತು ಆದ್ರೀಗ ಆ ಸುದ್ದಿ ಸುಳ್ಳಾಗಿದೆ. ಕನ್ನಡತಿ ರಶ್ಮಿಕಾ ಮಂದಣ್ಣ(Rashmika Mandanna) ಸಿಕಂದರ್ ಚೆಲುವೆಯಾಗಿದ್ದಾಳೆ.
‘ಘಜಿನಿ’ ಖ್ಯಾತಿಯ ಮುರುಗದಾಸ್(Murugadoss) ಜೊತೆ ‘ಸಿಕಂದರ್’(Sikandar) ಕಥೆ ಹೇಳಲು ಸಲ್ಲು ಬಾಯ್ ರೆಡಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಜೊತೆ ಸ್ಕ್ರೀನ್ ಶೇರ್ ಮಾಡುವ ನಟಿ ಯಾರು ಎನ್ನುವತ್ತ ಎಲ್ಲರ ಗಮನ ಹರಿದಿತ್ತು. ಅದಕ್ಕೆ ಉತ್ತರವನ್ನು ರಶ್ಮಿಕಾ(Rashmika Mandanna) ನೀಡಿ ಎಲ್ಲರನ್ನು ಥ್ರಿಲ್ ಆಗಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖುಷಿಯ ವಿಚಾರ ಹಂಚಿಕೊಂಡಿರುವ ಅನಿಮಲ್ ಬ್ಯೂಟಿ ಸಿಕಂದರ್ ಚೆಲುವೆ ನಾನೇ ಎಂದಿದ್ದಾರೆ. ಈ ಸಿನಿಮಾದ ಭಾಗವಾಗಿರೋದಕ್ಕೆ ನನಗೆ ತುಂಬಾ ಗೌರವವಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನ್ಯಾಶನಲ್ ಕ್ರಶ್ ಗೆಲುವಿನ ನಾಗಲೋಟ ಮತ್ತೆ ಮುಂದುವರೆದಿದೆ.
ಭಜರಂಗಿ ಭಾಯ್‌ಜಾನ್ ಸಲ್ಮಾನ್ ಖಾನ್(Salman Khan) ಸೋಲಿನ ಸುಳಿಯಲ್ಲಿದ್ದಾರೆ, ಗೆಲುವಿನ ಸಿಂಚನ ತಂದುಕೊಡುವತ್ತ ಮುರುಗದಾಸ್ ಪವರ್ ಪ್ಯಾಕ್ಡ್ ಆಕ್ಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸಜೀದ್ ನಾದಿಯಾ ವಾಲ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಭಾರತ ಹಾಗೂ ಯೂರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದ್ದು, ‘ಸಿಕಂದರ್’(Sikandar) ಚಿತ್ರ 2025 ರಂಜಾನ್‌ಗೆ ತೆರೆ ಕಾಣಲಿದೆ.