ಮಂಗಳವಾರ, ಜುಲೈ 21, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಬಣ್ಣದ ಲೋಕಕ್ಕೆ ಎಂಟ್ರಿಕೊಡಲು `ಭೀಮ’ ಪುತ್ರಿಯರ ತಯ್ಯಾರಿ! ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ದುನಿಯಾ ವಿಜಯ್ ರೆಡಿ!

Vishalakshi Pby Vishalakshi P
23/09/2023
in Majja Special
Reading Time: 1 min read
ಬಣ್ಣದ ಲೋಕಕ್ಕೆ ಎಂಟ್ರಿಕೊಡಲು `ಭೀಮ’ ಪುತ್ರಿಯರ ತಯ್ಯಾರಿ! ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ದುನಿಯಾ ವಿಜಯ್ ರೆಡಿ!

ಸ್ಯಾಂಡಲ್‍ವುಡ್ ಸ್ಟಾರ್ ನಟ-ನಟಿಯರ ಮಕ್ಕಳು ಒಬ್ಬೊಬ್ಬರಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ, ಕನಸಿನ ರಾಣಿ ಮಾಲಾಶ್ರೀಯವರ ಮಗಳು ಆರಾಧನಾ ಈಗಾಗಲೇ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಡಲು ಸಜ್ಜಾಗುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಗಾಯಕಿಯಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದು, ದುನಿಯಾ ವಿಜಯ್ ಅವರ ಇಬ್ಬರು ಮುದ್ದಿನ ಮಕ್ಕಳು ಸಿನಿದುನಿಯಾಗೆ ಲಗ್ಗೆ ಇಡಲು ತಯ್ಯಾರಿ ನಡೆಸಿದ್ದಾರೆ. ಮಕ್ಕಳ ಬಣ್ಣದ ಲೋಕದ ಪಯಣದ ಬಗ್ಗೆ ಸ್ವತಃ ವಿಜಯ್ ಅವರೇ ಹೇಳಿಕೊಂಡಿದ್ದಾರೆ. ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿರುವ ಸ್ಯಾಂಡಲ್‍ವುಡ್ ಸಲಗ, ತಮ್ಮಿಬ್ಬರು ಹೆಣ್ಣುಮಕ್ಕಳನ್ನು ಬೆಳ್ಳಿತೆರೆಗೆ ಪರಿಚಯಿಸುವ ಬಗ್ಗೆ ಎಕ್ಸ್ ಕ್ಲೂಸೀವ್ ಆಗಿ ಮಾತನಾಡಿದ್ದಾರೆ.

ಸ್ಯಾಂಡಲ್‍ವುಡ್ ಅಂಗಳದಲ್ಲಿ ಕರಿಚಿರತೆ ಅಂತಾನೇ ಫೇಮಸ್ ಆಗಿರುವ ವಿಜಯ್, ಒಂಟಿ ಸಲಗದಂತೆ ಹೋರಾಡಿ ಸಿನಿದುನಿಯಾದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿರುವುದು ಕಣ್ಣಮುಂದಿರುವ ಸತ್ಯ. ಫೈಟರ್ ಆಗಿ ಇಂಡಸ್ಟ್ರಿಗೆ ಬಂದು ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಗಳಿಗೆ  ಟಕ್ಕರ್ ಕೊಡುವ ಲೆವಲ್‍ಗೆ ಬೆಳೆದು ನಿಂತಿದ್ದಾರೆ. ಭರ್ತಿ ಹದಿನೈದು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಸಕ್ಸಸ್-ಫೇಲ್ಯೂರ್ ಎರಡನ್ನೂ ನೋಡಿರುವ ವಿಜಯ್, `ಸಲಗ’ ಸಿನಿಮಾಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಕ್ಯಾಪ್ಟನ್ ಆಗಿ ಗೆದ್ದುಬೀಗಿದರು. ನಟನಾಗಿ, ನಿರ್ದೇಶಕನಾಗಿ ಗೆಲುವಿನ ಗದ್ದುಗೆ ಏರಿ ಗಹಗಹಿಸಿದರು. ಈಗ `ಭೀಮ’ನಾಗಿ ಬೆಳ್ಳಿಭೂಮಿ ಮೇಲೆ ಆರ್ಭಟಿಸಲು ರೆಡಿಯಾಗಿದ್ದಾರೆ. ಈಗಾಗಲೇ ಟೀಸರ್, ಹಾಗೂ ಬ್ಯಾಡ್‍ಬಾಯ್ ಹಾಡಿನ ಮೂಲಕ ಹವಾ ಎಬ್ಬಿಸಿದ್ದಾರೆ. ಈಗ ತಮ್ಮ ಇಬ್ಬರು ಮುದ್ದಿನ ಹೆಣ್ಣುಮಕ್ಕಳನ್ನು ಕನ್ನಡ ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಮಾಡಿಸುವ ಕುರಿತಾಗಿ ಮಾತನಾಡಿದ್ದಾರೆ.

ನಟ ದುನಿಯಾ ವಿಜಯ್ ಅವರಿಗೆ ಮೂರು ಜನ ಮಕ್ಕಳಿದ್ದಾರೆ. ಮೋನಿಕಾ ಮತ್ತು ಮೋನಿಷಾ ಇಬ್ಬರು ಹೆಣ್ಣುಮಕ್ಕಳು, ಕುಲಪುತ್ರ ಸಾಮ್ರಾಟ್. ಮಗನನ್ನು ಇಂಡಸ್ಟ್ರಿಗೆ ಲಾಂಚ್ ಮಾಡಬೇಕು ಅಂತ ಸಾಕಷ್ಟು ತಯ್ಯಾರಿ ಮಾಡಿಕೊಂಡಿದ್ದರು. `ಕುಸ್ತಿ’ ಅಂತ ಟೈಟಲ್ ಇಟ್ಟು ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ. `ಸಲಗ’ ಸಿನಿಮಾ ಮೂಲಕ ವಿಜಯ್ ನಿರ್ದೇಶನಕ್ಕೆ ಕೈ ಹಾಕಿದ್ದರಿಂದ ಪುತ್ರ ಸಾಮ್ರಾಟ್ ಲಾಂಚ್ ತಡ ಆಯ್ತು. ಈಗ ಮಗನ ಜೊತೆಗೆ ಹೆಣ್ಣುಮಕ್ಕಳನ್ನು ಬಣ್ಣದ ಲೋಕಕ್ಕೆ ಪರಿಚಯಿಸಲು ರೆಡಿಯಾಗಿದ್ದಾರೆ. ಮೂವರು ಮಕ್ಕಳಿಗೂ ಕಲೆಯ ಮೇಲೆ ಅಪಾರ ಆಸಕ್ತಿಯಿದ್ದು ಅದಕ್ಕೆ ಪೂರ್ವಭಾವಿಯಾಗಿ ತಯ್ಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಪ್ಪ ಹೀರೋ ಅನ್ನೋ ಲೇಬಲ್ ಮೇಲೆ ಲಾಂಚ್ ಆಗ ಬಯಸದ ಭೀಮನ ಪುತ್ರ ಹಾಗೂ ಪುತ್ರಿಯರಿಬ್ಬರು ಕಲಾವಿದರಾಗಿ ಕಣಕ್ಕಿಳಿಯಲು ಏನೆಲ್ಲಾ ಕ್ವಾಲಿಟೀಸ್ ಬೇಕೋ ಅದೆಲ್ಲವನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ವಿಜಯ್ ಅವರ ದೊಡ್ಡ ಮಗಳು ಮೋನಿಕಾ, ಮುಂಬೈಗೆ ಹೋಗಿ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಆ್ಯಕ್ಟಿಂಗ್ ತರಭೇತಿ ಪಡೆದುಕೊಂಡು ಬಂದಿದ್ದಾರೆ. ಸದ್ಯ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು ನಟನಾವೃತ್ತಿಯನ್ನು ಆರಂಭಿಸುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕಿರಿಮಗಳು ಮೋನಿಷಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್‍ಗೆ ಹೊರಟು ನಿಂತಿದ್ದಾರೆ. ಆದರೆ, ನೆಟ್ಟಿಗರು ವಿಜಯ್ ಕಿರಿಮಗಳು ಮೋನಿಷಾಗೆ ಇಂಡಸ್ಟ್ರಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ನೀವು ಯಾವ ಹೀರೋಯಿನ್‍ಗೂ ಕಮ್ಮಿಯಿಲ್ಲ, ಆದಷ್ಟು ಬೇಗ ಸಿನಿಮಾ ಲೋಕಕ್ಕೆ ಬನ್ನಿ ಅಂತ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ವಿಜಯ್ ಕಿರಿಮಗಳು ಮೋನಿಷಾಗೆ ಯಾಕಿಷ್ಟು ಡಿಮ್ಯಾಂಡ್ ಅಂತೀರಾ? ಆಕೆ ನೋಡಲಿಕ್ಕೆ ತುಂಬಾ ಸುಂದರವಾಗಿದ್ದಾಳೆ. ಹೈಟು-ಪರ್ಸನಾಲಿಟಿ-ಬ್ಯೂಟಿ ಎಲ್ಲದರಲ್ಲೂ ಫರ್ಪೆಕ್ಟ್ ಆಗಿರುವ ಮೋನಿಷಾ, ಒಂದೇ ಏಟಿಗೆ ನೋಡುಗರನ್ನು ಕ್ಲೀನ್ ಬೋಲ್ಡ್ ಮಾಡ್ತಾಳೆ. ತನ್ನ ಫ್ಯಾಷನ್ ಸೆನ್ಸ್ ನಿಂದ, ಹೈಪರ್ ಆಕ್ಟೀವ್ ನೆಸ್‍ನಿಂದ ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡುವ ಮೋನಿಷಾ, ಇತ್ತೀಚಿಗೆ ತಮ್ಮ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ್ದಳು. ನೆಟ್ಟಿಗರ ಹೃದಯಕ್ಕೆ ಲಗ್ಗೆ ಇಟ್ಟು ಕಥಕ್ಕಳಿ ಆಡಿದ್ದಲ್ಲದೇ, ಡ್ರೀಮ್ ಗರ್ಲ್, ಬಾರ್ಬಿಡಾಲ್, ಹೊಸ ಕ್ರಷ್, ನಯಾ ಮಾಡೆಲ್, ಅಪ್‍ಕಮ್ಮಿಂಗ್ ಹೀರೋಯಿನ್ ಅಂತೆಲ್ಲಾ ನೆಟಿಜನ್ಸ್ ಕಡೆಯಿಂದ ಹೊಗಳಿಸಿಕೊಂಡಿದ್ದಳು.

ಈ ಬಗ್ಗೆ ಖುಷಿಯಿಂದಲೇ ಪ್ರತಿಕ್ರಿಯಿಸಿರುವ ನಟ ದುನಿಯಾ ವಿಜಯ್, ಕಿರಿಮಗಳ ಸಿನಿಮಾ ಜರ್ನಿ ಬಗ್ಗೆ ಈಗ್ಲೇ ನಾನು ಏನು ಹೇಳೋದಿಲ್ಲ. ಯಾಕಂದ್ರೆ, ಮೊದಲು ಆಕೆಯ ವಿದ್ಯಾಭ್ಯಾಸ ಮುಗಿಯಲಿ ಅನಂತರ ಚಿತ್ರರಂಗ ಪ್ರವೇಶದ ಬಗ್ಗೆ ಯೋಚನೆ ಮಾಡ್ತೀನಿ. ಸದ್ಯಕ್ಕೆ, ನನ್ನ ದೊಡ್ಡ ಮಗಳು ದೊಡ್ಡಪರದೆ ಮೇಲೆ ಮಿಂಚಲು ತಯಾರಿ ಮಾಡಿಕೊಂಡಿದ್ದಾಳೆ. ಆಕೆಯನ್ನ ಲಾಂಚ್ ಮಾಡಲಿಕ್ಕೆ ನನ್ನ ಬಳಿಯೇ ಒಂದೊಳ್ಳೆ ಸ್ಕ್ರಿಪ್ಟ್ ಇದೆ. ಸಾಧ್ಯವಾದರೆ ನಾನೇ ಡೈರೆಕ್ಷನ್ ಮಾಡ್ತೀನಿ, ಇಲ್ಲಾಂದ್ರೆ ಬೇರೆ ನಿರ್ದೇಶಕರಿಂದ ಆ್ಯಕ್ಷನ್ ಕಟ್ ಹೇಳಿಸ್ತೇನೆ ಎಂದಿದ್ದಾರೆ. ಮಕ್ಕಳನ್ನು ಇಂಡಸ್ಟ್ರಿಗೆ ತರಬೇಕು ಎನ್ನುವ ಆಸೆಯೇನು ನಂಗಿರಲಿಲ್ಲ. ಆದರೆ, ಮಕ್ಕಳು ಕಲಾಲೋಕಕ್ಕೆ ಬರಲು ಆಸಕ್ತಿ ತೋರಿಸುತ್ತಿರುವುದರಿಂದ ಹಾಗೂ ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಅವರಿಗೆ ಸಪೋರ್ಟ್ ಮಾಡುತ್ತಿದ್ದೇನೆ. ಅಷ್ಟಕ್ಕೂ, ನಾನು ಅವರಿಗೆ ದಾರಿ ತೋರಿಸಬಹುದು ಅಷ್ಟೇ. ಆ ದಾರಿಯಲ್ಲಿ ಅವರು ಸರಿಯಾದ ರೀತಿಯಲ್ಲಿ ಸಾಗಿದರೆ ಮಾತ್ರ ಸಕ್ಸಸ್ ಕಾಣಲಿಕ್ಕೆ ಸಾಧ್ಯ. ಹೀಗಾಗಿ, ನಾನು ನನ್ನ ಮಕ್ಕಳಿಗೆ ಮೊದಲೇ ಹೇಳಿದ್ದೇನೆ. ಮಾಡುತ್ತಿರುವ ಕೆಲಸದ ಮೇಲೆ ಶ್ರದ್ದಾಭಕ್ತಿಯಿರಲಿ ಜೊತೆಗೆ ಬದ್ದತೆ ಇರಲಿ ಅಂತ.

ಇನ್ನೂ ವಿಜಯ್ ಮಕ್ಕಳಾದ ಮೋನಿಕಾ ಹಾಗೂ ಮೋನಿಷಾ ಕೂಡ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ನಮ್ಮ ಡ್ಯಾಡಿ ಹೇಳಿದ್ದಾರೆ ಚಿತ್ರರಂಗ ನೀವಂದುಕೊಂಡಷ್ಟು ಸುಲಭ ಇಲ್ಲ ಅಂತ. ಜೊತೆಗೆ ಬೇಕಾದ ತಯಾರಿ ಮಾಡಿಕೊಂಡೇ ಫೀಲ್ಡಿಗಿಳಿಬೇಕು ಅಂತಲೂ ತಿಳಿಸಿದ್ದಾರೆ. ಆಫರ್ಸ್‍ಗಳೇನೋ ಬರುತ್ತಿರುವುದು ನಿಜ. ಆದರೆ, ಸ್ಕ್ರಿಪ್ಟ್ ಕೇಳಿ ಅಪ್ಪನೇ ಅಪ್ರೂವಲ್ ಕೊಡಬೇಕು ಎಂಬುದು ನಮ್ಮಾಸೆ. ಇದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, ನನ್ನ ಮಕ್ಕಳು ಸಿನಿಮಾಗೆ ಬ್ಯಾಕ್‍ಬೋನ್ ಆಗಿರಬೇಕೇ ವಿನಃ ಗ್ಲಾಮ್‍ಡಾಲ್ ಆಗೋದು. ಎರಡ್ಮೂರು ಸಾಂಗ್‍ನಲ್ಲಿ ಬಂದು ಹೋಗೋದು ನಂಗಿಷ್ಟ ಇಲ್ಲ. ಯಾಕಂದ್ರೆ, ಆರಂಭದಲ್ಲಿ ಅಂತಹ ಪಾತ್ರಗಳನ್ನ ಮಾಡಿಕೊಂಡು ಬಂದರೆ, ಎಲ್ಲರೂ ಕೂಡ ಅದೇ ತರಹದ ರೋಲ್‍ಗಳಿಗೆ ಅಪ್ರೋಚ್ ಮಾಡ್ತಾರೆ. ಹೀಗಾಗಿ, ಸ್ಟ್ರಾಂಗ್ ಕ್ಯಾರೆಕ್ಟರ್  ಗಳನ್ನೇ  ಮಾಡಬೇಕು ಅನ್ನೋದು ನನ್ನಾಸೆ ಅಂತಾರೇ. ಮಾತು ಮುಂದುವರೆಸಿ, ನಾನು ಎಲ್ಲವನ್ನೂ ಸಂಪಾದಿಸಿದ್ದು ಕಠಿಣ ಹಾದಿಯಲ್ಲಿಯೇ. ಹೀಗಾಗಿ, ನನ್ನ ಮಕ್ಕಳಿಗೆ ಅಂತಹ ಕಷ್ಟ ಬೇಡ. ಆದರೆ, ಅವರು ಡೆಬ್ಯೂ ಚಿತ್ರದಲ್ಲೇ ಅವರ ತಾಕತ್ತನ್ನ ಪ್ರೂ ಮಾಡಬೇಕು. ಕನ್ನಡಿಗರ ಮನಸ್ಸು ಗೆದ್ದು ಸೈ ಎನಿಸಿಕೊಳ್ಳಬೇಕು ಎಂದಿದ್ದಾರೆ.

ಅಂದ್ಹಾಗೇ, ನಮ್ಮಪ್ಪ ಫ್ರೆಂಡ್ಲೀ ಫಾದರ್, ಹೀಗಾಗಿ ನಾವು ಎಲ್ಲಾ ವಿಚಾರಗಳನ್ನು ಅಪ್ಪನೊಟ್ಟಿಗೆ ಶೇರ್ ಮಾಡಿಕೊಳ್ಳುತ್ತೇವೆ. ಲೇಟ್ ನೈಟ್ ಪಾರ್ಟಿಗೆ ಡ್ಯಾಡಿ ಅಲೋ ಮಾಡಲ್ಲ ಆದರೆ ಅವರೇ ನಮ್ಮನ್ನ ಔಟಿಂಗ್ ಕರಕೊಂಡು ಹೋಗ್ತಾರೆ. ಬೇಕಾದೆಲ್ಲವನ್ನೂ ಕೊಡಿಸುತ್ತಾರೆ. ಫಿಟ್ನೆಸ್ ಮೆಂಟೇನ್ ಮಾಡಲಿಕ್ಕೆ ಜೊತೆಗೆ ವರ್ಕೌಟ್‍ಗೆ ಕರೆದುಕೊಂಡು ಹೋಗ್ತಾರೆ. ಮಾರ್ನಿಂಗ್ ಟಿಫನ್ ನಿಂದ ಹಿಡಿದು ನೈಟ್ ಡಿನ್ನರ್ ವರೆಗೆ  ಏನು ತಿನ್ನಬೇಕು, ಏನು ತಿನ್ನಬಾರದು ಎಲ್ಲವನ್ನೂ ಗೈಡ್ ಮಾಡ್ತಾರೆ ಅಂತ ಮೋನಿಕಾ ಹಾಗೂ ಮೋನಿಷಾ ಇಬ್ಬರು ಅಪ್ಪನ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಎನಿವೇ, ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲೇ ತಮ್ಮ ಸೌಂದರ್ಯದಿಂದ ನೆಟ್ಟಿಗರ ಕಣ್ಣುಕುಕ್ಕಿರುವ ಮೋನಿಷಾ ಹಾಗೂ ಮೋನಿಕಾ, ಬೆಳ್ಳಿಪರದೆಗೆ ಲಗ್ಗೆ ಇಟ್ಟರೆ ಅಂದ-ಚೆಂದದ ಜೊತೆಗೆ ಅಭಿನಯದಿಂದಲೂ ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ ಬಿಡಿ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ವಿಜಯ ರಾಘವೇಂದ್ರ ನಟನೆಯ ಸಸ್ಪೆನ್ಸ್-ಥ್ರಿಲ್ಲರ್ ‘ಮರೀಚಿ’ ತೆರೆಗೆ ಬರಲು ಸಿದ್ಧ

ವಿಜಯ ರಾಘವೇಂದ್ರ ನಟನೆಯ ಸಸ್ಪೆನ್ಸ್-ಥ್ರಿಲ್ಲರ್ ‘ಮರೀಚಿ’ ತೆರೆಗೆ ಬರಲು ಸಿದ್ಧ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.