ಬಜಾರ್ ನಲ್ಲಿ ಸುದ್ದಿಯಲ್ಲಿರುವುದಕ್ಕೆ, ಟಾಕ್ ಆಫ್ ದಿ ಟೌನ್ ಎನಿಸಿಕೊಳ್ಳುವುದಕ್ಕೆ ಕೆಲವು ನಟ-ನಟಿಯರು ಇನ್ನಿಲ್ಲದ ಕಸರತ್ತು ನಡೆಸ್ತಾರೆ. ಆದರೆ, ಚಮಕ್ ಚೆಲುವೆ ರಶ್ಮಿಕಾ ಮಾತ್ರ ಏನು ಮಾಡದೆಯೂ ಸುದ್ದಿಯಲ್ಲಿರ್ತಾರೆ. ಎವರಿಡೇ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾ, ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಇವತ್ತು ಮುತ್ತಿನ ವಿಚಾರಕ್ಕೆ ಸುದ್ದಿಮನೆಗೆ ಬಂದಿದ್ದಾರೆ. ಆ್ಯಕ್ಟ್ ಮಾಡೋದಕ್ಕೆ ಒಂದು ಚಾರ್ಜ್, ಲಿಪ್ ಲಾಕ್ ಮಾಡೋಕೆ ಇನ್ನೊಂದು ಚಾರ್ಜ್ ಮಾಡ್ತಾರೆನ್ನುವ ಕಾರಣಕ್ಕೆ ನ್ಯಾಷನಲ್ ಕ್ರಷ್ ರಶ್ಮಿಕಾ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದ್ದಾರೆ.
ಹೌದು, ಹೀಗೊಂದು ಸುದ್ದಿ ಬಾಲಿವುಡ್ನಿಂದ ಹೊರಟು ಟಾಲಿವುಡ್ಗೆ ಎಂಟ್ರಿಕೊಟ್ಟು ಈಗ ಸ್ಯಾಂಡಲ್ವುಡ್ಗೂ ಬಂದು ಮುಟ್ಟಿದೆ. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ಸ್ ಗಳಿದ್ದರೆ, ನಟರ ತುಟಿಗೆ ತುಟಿ ಸೇರಿಸುವ ಸನ್ನಿವೇಶಗಳು ಬಂದರೆ ಅದಕ್ಕೆ ಸಾನ್ವಿ ಬೇರೆ ಚಾರ್ಜ್ ಮಾಡ್ತಾರಂತೆ. ಸಿನಿಮಾದ ಸಂಭಾವನೆ ಜೊತೆಗೆ ಲಿಪ್ಲಾಕ್ ಸಂಭಾವನೆಯನ್ನು ಸೇರಿಸಿ ಲಿಲ್ಲಿ ಕೈಗೆ ಕೊಡಬೇಕಂತೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಅದೆಷ್ಟು ಉರುಳಿದೆಯೋ? ಇಲ್ಲವೋ ಗೊತ್ತಿಲ್ಲ. ಬಟ್ ಈ ಸುದ್ದಿ ಮಾತ್ರ ಗಾಸಿಪ್ ಲೋಕದಲ್ಲಿ `ರಾ ರಾ ಸಾಮಿ’ ಹಾಡಿಗೆ ಸಖತ್ ಸ್ಟೆಪ್ ಹಾಕ್ತಿದೆ.
ಅಷ್ಟಕ್ಕೂ, ಹೀಗ್ಯಾಕೆ ಲಿಲ್ಲಿಯ ಲಿಪ್ಲಾಕ್ ಮನಿ ಮ್ಯಾಟ್ರು ಅಂದರೆ? ಅದಕ್ಕೆ ಕಾರಣ `ಅನಿಮಲ್’ ಸಿನಿಮಾ. ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ತಿರೋ ಮೊದಲ ಚಿತ್ರ. ಫಸ್ಟ್ ಲುಕ್ನಿಂದಲೇ ಸಿನಿಮಾ ಪ್ರೇಮಿಗಳು ಹುಚ್ಚೇಳುವಂತೆ ಮಾಡಿದ್ದ ಈ ಜೋಡಿ, `ಹುವಾ ಮೈನ್’ ಹಾಡಿನಲ್ಲಿ ಲಿಪ್ ಲಾಕ್ ಮಾಡಿ ಕಿಕ್ಕೇರಿಸಿದ್ದರು. ರೊಮ್ಯಾಂಟಿಕ್ ಹಾಡಿಗಾಗಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಲ್ಲದೇ, ಮೂರ್ನಾಲ್ಕು ಭಾರಿ ತುಟಿಗೆ ತುಟಿ ಸೇರಿಸಿ ಪಡ್ಡೆಹೈಕ್ಳು ಕುಂತಕುಂತಲ್ಲೇ ಬೆವರುವಂತೆ ಮಾಡಿದ್ದರು. ಇದೀಗ ಆ ಕಿಸ್ಸಿಂಗ್ ಸೀನ್ಗಾಗಿ ಕಿರಿಕ್ ಚೆಲುವೆ ಎಕ್ಸ್ಟ್ರಾ ಚಾರ್ಜ್ ಮಾಡಿರುವ ಸುದ್ದಿ ಕೆಲ ಪ್ರೊಡ್ಯೂಸರ್ ಗಳು ಬೆವರುವಂತೆ ಮಾಡಿದೆ.
ಹೌದು, ರಣಬೀರ್ ಜೊತೆಗೆ ಮುತ್ತಿನ ಮಳೆ ಸುರಿಸೋದಕ್ಕೆ ಶ್ರೀವಲ್ಲಿ ಸೆಪರೇಟ್ ಚಾರ್ಜ್ ಮಾಡಿದ್ದಾರಂತೆ. ನಟನೆಗಾಗಿ ಪಡೆದ ಸಂಭಾವನೆಯನ್ನು ಹೊರತುಪಡಿಸಿ ಎಕ್ಸ್ಟ್ರಾ 20 ಲಕ್ಷ ಹಣವನ್ನ ವ್ಯಾನಿಟಿಗೆ ಬ್ಯಾಗ್ಗೆ ಹಾಕಿಕೊಂಡಿದ್ದಾರಂತೆ. ಈ ಸುದ್ದಿ ನಿಜಾನಾ? ಇದಕ್ಕೆ ಶ್ರೀವಲ್ಲಿ ಏನಂತಾರೋ ಗೊತ್ತಿಲ್ಲ. ಆದರೆ, ಲಿಲ್ಲಿ ಅಭಿಮಾನಿಗಳು ಮಾತ್ರ ಅದ್ರಲ್ಲೇನ್ ತಪ್ಪಿದೆ? ಕಥೆ ಡಿಮ್ಯಾಂಡ್ ಮಾಡಿ ಮುತ್ತು ಕೇಳಿದರೆ, ನಮ್ಮ ನಾಯಕಿ ಮನಿ ಕೇಳೋದ್ರಲ್ಲಿ ಏನ್ ತಪ್ಪು ಎನ್ನುತ್ತಾ? ಕಿರಿಕ್ ಬ್ಯೂಟಿ ಕಾಲೆಳೆದವರಿಗೆ ಸೋಷಿಯಲ್ ಮೀಡಿಯಾ ಮೂಲಕ ಕೌಂಟರ್ ಕೊಡ್ತಿದ್ದಾರೆ. ಕರ್ನಾಟಕದಿಂದ ಹೋಗಿ ಬಾಲಿವುಡ್ನಂಥಾ ಬಾಲಿವುಡ್ನಲ್ಲಿ ಸೌಂಡ್ ಮಾಡುತ್ತಿದ್ದಾರೆ ಅದಕ್ಕೆ ಹೆಮ್ಮೆ ಪಡಿ ಎನ್ನುತ್ತಿದ್ದಾರೆ.
ಅಪ್ಕೋರ್ಸ್ ಕನ್ನಡತಿ ರಶ್ಮಿಕಾ ನ್ಯಾಷನಲ್ ಕ್ರಷ್ ಆಗಿ ಬೆಳೆದು ನಿಂತಿದ್ದರ ಬಗ್ಗೆ ಹೆಮ್ಮೆಯಿದೆ. ಸ್ಟಾರ್ ನಾಯಕಿಯರನ್ನೆಲ್ಲಾ ಸೈಡಿಗೆ ಸರಿಸಿ ನಂ 1 ನಾಯಕಿ ಪಟ್ಟಕ್ಕೇರಿದ ಕಿರಿಕ್ ಚೆಲುವೆ ಮೇಲೆ ನಮ್ಮ ಕನ್ನಡತಿಯೆಂಬ ಅಭಿಮಾನವೂ ಇದೆ. ಆದರೆ, ಒಮ್ಮೊಮ್ಮೆ ಯೋಚನೆ ಮಾಡದೇ ಆಕೆ ಕೊಡುವ ಹೇಳಿಕೆಗಳು ಕನ್ನಡಿಗರನ್ನ ಕೆರಳಿಸುತ್ತವೆ. ಕೂರ್ಗ್ ಬ್ಯೂಟಿನಾ ಕನ್ನಡದಿಂದ ಬಹಿಷ್ಕಾರ ಹಾಕ್ಬೇಕು ಎನ್ನುವ ನಿರ್ಧಾರಕ್ಕೂ ತಂದು ನಿಲ್ಲಿಸುತ್ತವೆ. ಅದೇನೇ ಇರಲಿ ಸದ್ಯಕ್ಕೆ ಸಾನ್ವಿ ಜೋಸೆಫ್ ಕಾಂಟ್ರವರ್ಸಿಯಿಂದ ದೂರ ಉಳಿದಿದ್ದಾರೆ. ಪುಷ್ಪ-2, ಅನಿಮಲ್, ರೈನ್ ಬೋ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಲೋ ಅಂತ ಟಾಲಿವುಡ್ಗೆ ಹೋಗಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಂತೆ ಬಾಲಿವುಡ್ನಲ್ಲೂ ಬೇಡಿಕೆ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಫೈನಲೀ ಮಿಲಿಯನ್ ಡಾಲರ್ ಪ್ರಶ್ನೆ ಅಂದರೆ, ಸಾನ್ವಿ ಕರಿಯರ್ ಗೆ ವಿಜಯ್ ದೇವರಕೊಂಡ ಜೊತೆಗಿನ ಕಿಸ್ಸಿಂಗ್ ಸೀನ್ ಕೊಟ್ಟ ಮೈಲೇಜ್, ಚಾಕಲೇಟ್ ಬಾಯ್ ರಣಬೀರ್ ಕಪೂರ್ ಜೊತೆಗಿನ ಲಿಪ್ಲಾಕ್ ಸೀನ್ ಕೊಡುತ್ತಾ ಅನ್ನೋದು. ಇದಕ್ಕೆ ಉತ್ತರ ಬೇಕು ಅಂದರೆ ಡಿಸೆಂಬರ್ 1 ರವರೆಗೂ ಕಾಯಬೇಕು. ಯಾಕಂದ್ರೆ, ಅಂದು `ಅನಿಮಲ್’ ಸಿನಿಮಾ ವಲ್ರ್ಡ್ ವೈಡ್ ರಿಲೀಸ್ ಆಗ್ತಿದೆ. ಗೀತಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ರೌಡಿಬಾಯ್ ತುಟಿಗೆ ತುಟಿ ಅಂಟಿಸಿದ್ದ ಶ್ರೀವಲ್ಲಿ, ಫಸ್ಟ್ ಟೈಮ್ ರಾಕ್ ಸ್ಟಾರ್ ರಣಬೀರ್ ಗೆ ಲಿಪ್ ಕಿಸ್ ಹೊಡೆದಿರುವುದು ಸಿನಿಮಾ ಪ್ರೇಮಿಗಳಿಗೆ ಕುತೂಹಲ ಕೆರಳಿಸಿದೆ. ಸ್ಕ್ರೀನ್ ಮೇಲೆ ರಶ್ಮಿಕಾ ಹಾಗೂ ರಣಬೀರ್ ಜೋಡಿ ಫ್ರೆಶ್ ಎನಿಸ್ತಿದೆ. ಹಾಲುಗಲ್ಲದ ಈ ಕ್ಯೂಟ್ ಜೋಡಿನಾ ಕಣ್ತುಂಬಿಕೊಳ್ಳುವ ಕಾತುರ ಟೀಸರ್ ನೋಡಿದ್ಮೇಲೆ ದುಪ್ಪಟ್ಟಾಗಿದ್ದು, ಇವರಿಬ್ಬರ ಕೆಮಿಸ್ಟ್ರಿ ಸಖತ್ತಾಗೇ ವರ್ಕೌಟ್ ಆಗುವ ಸೂಚನೆ ಸಿಗ್ತಾಯಿದೆ, ಒಂದ್ವೇಳೆ ಕ್ಲಿಕ್ ಆದರೆ, ನ್ಯಾಷನಲ್ ಕ್ರಷ್ ಬಿಟೌನ್ನಲ್ಲಿ ಫಿಕ್ಸ್ ಆಗೋದ್ರಲ್ಲಿ ನೋ ಡೌಟ್





