ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ ‘ಸಪ್ಲೇಯರ್ ಶಂಕರ’ ಸಿನಿಮಾದ ಕೆಲಸಗಳು ಭರದಿಂದ ಸಾಗಿದೆ. ಇತ್ತೀಚೆಗೆ ‘ಸಪ್ಲೇಯರ್ ಶಂಕರ’ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ‘ಮಾಡೊ ಕೆಲಸವ ನೀನು ಮರೆಸಿದೆ…’ ಎಂಬ ಪ್ರೇಮಗೀತೆ ‘ಆನಂದ್ ಆಡಿಯೋ’ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ.

ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರು ಹಾಡಿರುವ ‘ಮಾಡೊ ಕೆಲಸವ ನೀನು ಮರೆಸಿದೆ…’ ಎಂಬ ಈ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಇದೇ ಹಾಡನ್ನು ಚಿತ್ರತಂಡ ತನ್ನ ಪ್ರಮೋಶನ್ಸ್ ಗಾಗಿ ಬಳಸಿಕೊಳ್ಳಲು ಮುಂದಾಗಿದೆ.

ಹೌದು, ‘ಸಪ್ಲೇಯರ್ ಶಂಕರ’ ಸಿನಿಮಾದ ‘ಮಾಡೊ ಕೆಲಸವ ನೀನು ಮರೆಸಿದೆ…’ ಎಂಬ ಗೀತೆಗೆ ಆಸಕ್ತರು ರೀಲ್ಸ್ ಮಾಡಬಹುದು. ಯಾರ ರೀಲ್ಸ್ ಗೆ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಬರುವುದೊ, ಅವರಿಗೆ ಚಿತ್ರತಂಡದಿಂದ I PHONE 15 ಸಿಗಲಿದೆ. ‘ತ್ರಿನೇತ್ರ ಫಿಲಂಸ್’ ಲಾಂಛನದಲ್ಲಿ ಎಂ. ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ‘ಸಪ್ಲೇಯರ್ ಶಂಕರ’ ಸಿನಿಮಾ ಮೂಡಿಬರುತ್ತಿದೆ.





