ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

3 ದಿನಕ್ಕೆʻಸಲಾರ್‌ʼ 400 ಕೋಟಿ ಗಳಿಕೆ… 1000 ಕೋಟಿ ಬಾಕ್ಸ್‌ ಆಫೀಸ್‌ ಟಾರ್ಗೆಟ್‌!

Vishalakshi Pby Vishalakshi P
26/12/2023
in Majja Special
Reading Time: 1 min read
3 ದಿನಕ್ಕೆʻಸಲಾರ್‌ʼ 400 ಕೋಟಿ ಗಳಿಕೆ… 1000 ಕೋಟಿ ಬಾಕ್ಸ್‌ ಆಫೀಸ್‌ ಟಾರ್ಗೆಟ್‌!

ಸಲಾರ್ ಸುನಾಮಿಗೆ ರೆಕಾರ್ಡ್ ಗಳೆಲ್ಲಾ ಧೂಳಿಪಟವಾಗ್ತಿವೆ. ಬಾಕ್ಸಾಫೀಸ್ ನಲ್ಲಿ ರೆಬಲ್ ಸ್ಟಾರ್ ರುಧ್ರತಾಂಡವ ಮುಂದುವರೆದಿದೆ. ಮೊದಲ ದಿನವೇ ಪ್ರಚಂಡ ಗಳಿಕೆ ಕಂಡ ಸಲಾರ್ 1000 ಕೋಟಿ ಕ್ಲಬ್ ಸೇರುವ ಓಟದಲ್ಲಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಾದ ಪಠಾಣ್, ಜವಾನ್, ಜೈಲರ್, ಅನಿಮಲ್, ಲಿಯೋ, ದಾಖಲೆಗಳನ್ನೂ ಅಳಿಸಿ ಹಾಕ್ತಾ, ಉತ್ತರದಿಂದ ದಕ್ಷಿಣದವರೆಗೆ ದಂಡಯಾತ್ರೆ ಮಾಡ್ತಿರುವ ಪ್ರಭಾಸ್ ಆರ್ಭಟವನ್ನು ಕಟ್ಟಿಹಾಕುವವರೇ ಇಲ್ಲ.

ಡಾರ್ಲಿಂಗ್ ಗೆ ಮರೀಚಿಕೆಯಾಗಿದ್ದ ಗೆಲುವು ಮರಳಿ ದಕ್ಕಿದೆ. ಸೋಲಿನ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದ್ದ ಮಿರ್ಚಿ ಬಾಯ್ ಗೆ ಸಕ್ಸಸ್ ಕೈ ಹಿಡಿದಿದೆ. ಸಲಾರ್ ಸಿನಿಮಾ ಪ್ರಭಾಸ್ ನ ಹಳೆಯ ಫಾರ್ಮ್ ಗೆ ಮರಳುವಂತೆ ಮಾಡಿವೆ. ಸೋತ ಜಾಗದಲ್ಲೇ ಗೆದ್ದು ಗಹಗಹಿಸೋದಕ್ಕೆ ಪ್ರಶಾಂತ್ ನೀಲ್ ಸಾಥ್ ಕೊಟ್ಟಿದ್ದಾರೆ. ಬಾಹುಬಲಿ ಈಸ್ ಬ್ಯಾಕ್ ಅನ್ನೋದನ್ನ ಪ್ರೂ ಮಾಡೋದಕ್ಕೆ ಸಲಾರ್ ಸಹಕರಿಸಿದೆ. ಮರೆಯಾಗಿದ್ದ ಅದೃಷ್ಟ ಅನ್ನೋ ಅಶ್ವಮೇಧ ಕುದುರೆಯನ್ನ ವಾಪಾಸ್ ತಂದು ಕಟ್ಟಾಕಿದೆ ಸಲಾರ್ ಸಿನಿಮಾ. ಸಲಾರ್ ನಿರ್ಮಿಸಿದ್ದು ಕನ್ನಡದ ನಿರ್ಮಾಣ ಸಂಸ್ಥೆಯಾದರೂ, ಹೀರೋ ತೆಲುಗಿನವರು. ಹೀಗಾಗಿಯೇ ಕನ್ನಡದಲ್ಲಿ ಡಬ್‌ ಆಗಿದ್ದ ಪ್ಯಾನ್‌ ಇಂಡಿಯಾ ಸಿನಿಮಾ ಸಲಾರ್‌, ಕರ್ನಾಟಕದಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ರಿಲೀಸ್‌ ಆಗಿತ್ತು. ಕರ್ನಾಟಕದಲ್ಲಿ ತೆಲುಗು ಭಾಷಿಕರು ಹೆಚ್ಚು. ಕರ್ನಾಟಕದ ಸುಮಾರು 10 ಜಿಲ್ಲೆಗಳಲ್ಲಿ ತೆಲುಗಿನ ಪ್ರಭಾವ ಇದೆ. ಆದ್ರೆ ಸಲಾರ್‌ ಕನ್ನಡದಲ್ಲಿಯೇ ಮೋಡಿ ಮಾಡಿರುವುದು ವಿಶೇಷ.

ಸಲಾರ್‌ ಚಿತ್ರವನ್ನು ಹೊಂಬಾಳೆಯವರು ಕನ್ನಡದಲ್ಲಿ ಶಾಸ್ತ್ರಕ್ಕೆಂದು ಮಾಡಿರಲಿಲ್ಲ. ಸುಮಾರು 500+ ಸ್ಕ್ರೀನ್‌ʻಗಳಲ್ಲಿ ರಿಲೀಸ್‌ ಮಾಡಿದ್ದರು. ತೆಲುಗಿನ ವರ್ಷನ್‌ ಕೂಡಾ ಇತ್ತಾದರೂ, ಕನ್ನಡಕ್ಕೆ ಈ ಬಾರಿ ಹೆಚ್ಚಿನ ಬಂಗಾರದ ಬೇಡಿಕೆ ಬಂದಿದೆ. ಹೀಗಾಗಿಯೇ ಎರಡನೇ ದಿನಕ್ಕೆ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡದ ಸಲಾರ್‌ ಆರ್ಭಟಿಸುತ್ತಿದೆ. ಮತ್ತೆ ನೂರು ಸ್ಕ್ರೀನ್‌ ಸೇರಿದ್ದು, ಕನ್ನಡದವರು ಕನ್ನಡದಲ್ಲಿಯೇ ಸಲಾರ್‌ ನೋಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಲಾರ್‌ ಸತತ ಮೂರು ದಿನ 10 ಕೋಟಿಗೂ ಹೆಚ್ಚು ಬಿಸಿನೆಸ್‌ ಮಾಡಿದೆ. ಪ್ರಭಾಸ್‌ ಈಗ ತೆಲುಗಿನಲ್ಲಷ್ಟೇ ಅಲ್ಲ, ಕನ್ನಡದಲ್ಲಿಯೂ ಹೀರೋ ಆಗಿ ಹೊರಹೊಮ್ಮಿದ್ಧಾರೆ. ಪ್ರಶಾಂತ್‌ ನೀಲ್‌ ಮತ್ತು ಹೊಂಬಾಳೆ ಕಾಂಬಿನೇಷನ್‌ ಮತ್ತೆ ಮೋಡಿ ಮಾಡಿದೆ. ಅಂದಹಾಗೆ ಇದು ಕನ್ನಡದವರ ಸಿನಿಮಾ. ನಿರ್ಮಾಣ ಮಾಡಿರುವುದು ಕನ್ನಡದ ಹೊಂಬಾಳೆ. ನಿರ್ದೇಶನ ಮಾಡಿರುವುದು ಕನ್ನಡಿಗ ಪ್ರಶಾಂತ್ ನೀಲ್. ಛಾಯಾಗ್ರಹಣ ಮಾಡಿರುವುದು ಭುವನ್‍ ಗೌಡ, ಸಂಗೀತ ನಿರ್ದೇಶನ ರವಿ ಬಸ್ರೂರು ಅವರದ್ದು. ಹಾಗೆಯೇ ಕಲಾ ನಿರ್ದೇಶಕರಾಗಿರುವುದು ಶಿವಕುಮಾರ್. ಇನ್ನು ಸಿನಿಮಾದಲ್ಲಿ ಡೈನಮಿಕ್‌ ಸ್ಟಾರ್‌ ದೇವರಾಜ್‌, ಪ್ರೀಮಿಯರ್‌ ಪದ್ಮಿನಿ ಖ್ಯಾತಿಯ ಪ್ರಮೋದ್‌, ಗುಳ್ಟು, ಕ್ಷೇತ್ರಪತಿ ಖ್ಯಾತಿಯ ನವೀನ್‌ ಶಂಕರ್‌, ಮಧು ಗುರುಸ್ವಾಮಿ, ಭಜರಂಗಿ ಲೋಕಿ, ಪ್ರಮೋದ್, ನವೀನ್ ಶಂಕರ್, ರವಿ ಭಟ್, ದೇವರಾಜ್, ವಜ್ರಂಗ್ ಶೆಟ್ಟಿ, ‘ಗರುಡ’ ರಾಮ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಸಲಾರ್ ಮೂರೇ ದಿನಕ್ಕೆ 400 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಶಾರುಖ್ ಖಾನ್ ಡಂಕಿಗೆ ಡಿಚ್ಚಿ ಹೊಡೆದು ಪ್ರಭಾಸ್ ಬಾಕ್ಸಾಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಸಲಾರ್ ಸುಂಟರಗಾಳಿ ಎಬ್ಬಿಸ್ತಿರುವ ಹೊತ್ತಲ್ಲೇ ಹೊಂಬಾಳೆ ಮೇಕಿಂಗ್ ಝಲಕ್ ಹರಿಬಿಟ್ಟು ಥ್ರಿಲ್ ಹೆಚ್ಚಿಸಿದೆ. 1 ನಿಮಿಷ 32 ಸೆಕೆಂಡ್ ಇರುವ ಸಲಾರ್ ಸೀಸ್ ಫೈಯರ್ ಮೇಕಿಂಗ್ ತುಣುಕು ರಿವೀಲ್ ಆಗಿದೆ. ಸಲಾರ್ ನಂತಹ ಅದ್ಧೂರಿ ಸಿನಿಮಾದ ಹಿಂದೆ ಅದೆಷ್ಟು ದೊಡ್ಡ ಪರಿಶ್ರಮವಿದೆ ಅನ್ನೋದನ್ನು ಮೇಕಿಂಗ್ ನಲ್ಲಿ ತೋರಿಸಲಾಗಿದೆ. ಸ್ಟಾರ್ ಕಾಸ್ಟ್, ಕ್ಯಾಮೆರಾ, ಸೆಟ್, ಡೈರೆಕ್ಟರ್ ಹೀಗೆ ಸಲಾರ್ ತೆರೆಹಿಂದೆ ಹಾಗೂ ತೆರೆಮುಂದೆ ಕೆಲಸ ಮಾಡಿದ ಕೈಗಳ ಪರಿಚಯ ಮಾಡಲಾಗಿದೆ. ಪ್ರಶಾಂತ್ ಡೈರೆಕ್ಷನ್ ಸ್ಟೈಲ್ ಹೇಗಿರುತ್ತದೆ ಅನ್ನೋದನ್ನು ನೀವು ಈ ಮೇಕಿಂಗ್ ವಿಡಿಯೋದಲ್ಲೇ ನೋಡ್ಕೊಬಹುದು.

ಬಾಕ್ಸಾಫೀಸ್ ದುನಿಯಾವನ್ನೇ ಕಬ್ಜ ಮಾಡಿ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು ಎಂಬ ಲೆವೆಲ್ ಪಡೆದಿರುವ ಸಲಾರ್ ಕಿಚ್ಚು ಧಗಧಗಿಸ್ತಿದೆ. ಪ್ರಭಾಸ್ ಕಂಬ್ಯಾಕ್ ಯಾವಾಗ ಅನ್ನುತ್ತಿದ್ದವರು ಸಲಾರ್ ನೋಡಿ ಇದಪ್ಪ ಕಂಬ್ಯಾಕ್ ಸಿನಿಮಾ..ನೀಲ್ ಡೈರೆಕ್ಷನ್ ಸ್ಟೈಲೇ ಸ್ಟೈಲ್ ಗುರು ಅಂತಾ ಕೊಂಡಾಡ್ತಿದ್ದಾರೆ. ಸಲಾರ್ ಗೆದ್ದಾಗಿದೆ. ನೀಲ್ ಮುಂದಿನ ಆಯ್ಕೆ ಏನಾಗಲಿದೆ. ಯಂಗ್ ಟೈಗರ್ ಜೊತೆ ಕೈ ಜೋಡಿಸ್ತಾರಾ ಇಲ್ಲ ಸಲಾರ್ ಪಾರ್ಟ್-2ಗೆ ಮುನ್ನುಡಿ ಬರೆಯುತ್ತಾರಾ ಅಥವಾ ಮೆಗಾಸ್ಟಾರ್ ಚಿರಂಜೀವಿ ಸುಪುತ್ರ ಮೆಗಾ ಪ್ರಿನ್ಸ್ ರಾಮ್ ಚರಣ್ ಗೆ ಆಕ್ಷನ್ ಕಟ್ ಹೇಳ್ತಾರಾ..ಕೆಜಿಎಫ್ ಅಧಿಪತಿ ಮುಂದೆ ಸಾಲು ಸಾಲು ಆಯ್ಕೆಗಳಿವೆ..ಬಟ್ ನೀಲ್ ಗುರಿ ಯಾವಾ ಕಡೆ ಅನ್ನೋದನ್ನು ಕಾದುನೋಡ್ಬೇಕು.

 

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಪ್ರಿಯಾಂಕ ಕಾಮತ್‌-ಅಮಿತ್‌ ನಾಯಕ್‌ ಅದ್ದೂರಿ ಮದುವೆ ಸಂಭ್ರಮ!

ಪ್ರಿಯಾಂಕ ಕಾಮತ್‌-ಅಮಿತ್‌ ನಾಯಕ್‌ ಅದ್ದೂರಿ ಮದುವೆ ಸಂಭ್ರಮ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.