ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ರಿಲೀಸ್ ಡೇಟ್ ಫಿಕ್ಸಾಗುತ್ತಿದ್ದಂತೆ ಧಮಾಕೇದಾರ್ ಸಮಾಚಾರಗಳು ಒಂದೊಂದಾಗಿ ಹೊರಬರುತ್ತಿವೆ. ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ರಾಕಿಭಾಯ್ ಧಗಧಗಿಸಿದ್ದಾರೆ, ಯಂಗ್ ಟೈಗರ್ ಜೂನಿಯರ್ ಎನ್‍ಟಿಆರ್ `ಸಲಾರ್’ಗೆ ಸಾಥ್ ಕೊಟ್ಟಿದ್ದಾರೆನ್ನುವ ಸುದ್ದಿ ಸಂಚಲನದ ನಡುವೆ ಸ್ಯಾಂಡಲ್‍ವುಡ್ ಸಿಂಹ ಘರ್ಜನೆಯ ಸಮಾಚಾರವೂ ಕೇಳಿಬಂದಿದೆ. ಇಡೀ ಜಗತ್ತು ರಾಜಕೃಷ್ಣಪ್ಪ ಭೈರ್ಯನನ್ನು ಒಪ್ಪಿಕೊಂಡಂತೆ, `ಸಲಾರ್’ ಹೀರೋನ ಅಪ್ಪಿಕೊಳ್ಳಬೇಕು ಅಂತ ಪಣತೊಟ್ಟಿರೋ ನೀಲ್ ಸಾಹೇಬ್ರು ಕೆಜಿಎಫ್ ಕಮಲ್‍ಗೆ ರೆಡ್‍ಕಾರ್ಪೆಟ್ ಹಾಕಿದ್ದಾರಂತೆ. `ಸಲಾರ್’ ಅಖಾಡದಲ್ಲಿ ಘರ್ಜಿಸುವುದಕ್ಕೆ ಸ್ಯಾಂಡಲ್‍ವುಡ್ ಸಿಂಹನಿಗೆ ಅವಕಾಶ ಮಾಡಿಕೊಟ್ಟಿದ್ದಾರಂತೆ. ಕೆಜಿಎಫ್ ನಂತರ ಬಂಪರ್ ಆಫರ್ ಗಿಟ್ಟಿಸಿಕೊಂಡ ಕಮಲ್ ಉರುಫ್ ವಸಿಷ್ಟ ಸಿಂಹ `ಸಲಾರ್’ ಹೀರೋಗೆ ಪವರ್ ತುಂಬಿದ್ದಾರಂತೆ. ತಮ್ಮ ಕಂಚಿನ ಕಂಠಕ್ಕೆ ಕಿಚ್ಚು ಹಚ್ಚಿಕೊಂಡು ಪ್ರಭಾಸ್ ಪಾತ್ರಕ್ಕೆ ಧ್ವನಿ ನೀಡಿದ್ದಾರಂತೆ. ಸದ್ಯ ಈ ಸುದ್ದಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಚಾಯ್ ಪೇ ಚರ್ಚೆಯಾಗಿದೆ. `ಸಲಾರ್’ ಅಖಾಡದಲ್ಲಿ ಸ್ಯಾಂಡಲ್ವುಡ್ ಸಿಂಹ ಘರ್ಜನೆ ಜೋರಾಗಿದ್ದು, `ಜೇಮ್ಸ್’ ವಿಲನ್ ವಜ್ರಂಗ್ ಶೆಟ್ಟಿ ಕೂಡ ಧಗಧಗಿಸಿದ್ದಾರೆನ್ನುವ ಸುದ್ದಿ ಸ್ಪೋಟಗೊಂಡಿದೆ.

ಯಸ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ `ಜೇಮ್ಸ್’ ಸಿನಿಮಾದಲ್ಲಿ ಖಳನಾಯಕನಾಗಿ ಖದರ್ ತೋರಿಸಿದ್ದ ವಜ್ರಂಗ್ ಶೆಟ್ಟಿ, `ಸಲಾರ್’ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಸೆಣಸಾಡಿದ್ದಾರಂತೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಅದೆಷ್ಟು ಹುರುಳಿದೆಯೋ ಗೊತ್ತಿಲ್ಲ. ಆದರೆ, ಪ್ರಮೋದ್ ಅಲಿಯಾಸ್ ಪಂಜು, ಕೆಜಿಎಫ್ ಖ್ಯಾತಿಯ ಗರುಡ ರಾಮ್, ಮಧುಗುರುಸ್ವಾಮಿ ಜೊತೆಗೆ ವಜ್ರಂಗ್ ಶೆಟ್ಟಿ ಕೂಡ ಧಗಧಗಿಸಿದ್ದಾರೆನ್ನುವ ನ್ಯೂಸ್ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಪೃಥ್ವಿರಾಜ್ ಸುಕುಮಾರನ್, ಶ್ರುತಿಹಾಸನ್, ಟಿನ್ನು ಆನಂದ್, ಜಗಪತಿ ಬಾಬು, ಶ್ರೀಯಾರೆಡ್ಡಿ, ಈಶ್ವರಿ ರಾವ್ ಸೇರಿದಂತೆ ಸ್ಟಾರ್ ನಟ-ನಟಿಯರ ಸಮಾಗಮ ಇಲ್ಲಾಗಿದೆ. ಬಿಗ್ ಸ್ಟಾರ್ ಕಾಸ್ಟ್, ಬಿಗ್ ಬಜೆಟ್ಟಿನ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್, ಯಂಗ್ ಟೈಗರ್ ಎಂಟ್ರಿಯಾಗಿದೆಯಾ? `ಸಲಾರ್’ ಮೂಲಕ ಕೆಜಿಎಫ್ ಯೂನಿವರ್ಸ್ ಕಾನ್ಸೆಪ್ಟ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆಯಾ? ಮಾರ್ವಲ್ ಮಾಧರಿ ಮೂಲಕ ನೀಲ್ ಹಾಲಿವುಡ್ ಲೋಕವನ್ನ ಥಂಡಾ ಹೊಡೆಸಲಿದ್ದಾರಾ? ಇದು ಸದ್ಯಕ್ಕಿರುವ ಕುತೂಹಲ
ಇನ್ನೂ ಸಲಾರ್….ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿ ಕಾಯ್ತಿರೋ ಸಿನಿಮಾ. ಅಮರೇಂದ್ರ ಬಾಹುಬಲಿ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಕೆಜಿಎಫ್ ಸೃಷ್ಟಿಕರ್ತ ಕೆತ್ತಿರೋ ಹೊಸ ಲೋಕ ಎನ್ನುವ ಕಾರಣಕ್ಕೆ ಸಲಾರ್ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿ ಬೆಚ್ಚಿಬಿದ್ದು ದಢಕ್ಕನೇ ಎದ್ದುಕೂತಿರೋ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಟ್ರೇಲರ್ ಗಾಗಿ ಕಣ್ಣರಳಿಸಿದೆ. ದೀಪಾವಳಿ ಹಬ್ಬಕ್ಕೆ ಬೆಂಕಿನುಂಡೆಯಂತಹ ಟ್ರೇಲರ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಟೀಸರ್ ಆಲ್ ಇಂಡಿಯಾ ಸಿನಿಮಾಗಳ ರೆಕಾರ್ಡ್‍ನ ಬ್ರೇಕ್ ಮಾಡಿ ಯೂಟ್ಯೂಬ್‍ನಲ್ಲಿ ಹೊಸ ದಾಖಲೆ ಬರೆದಿದೆ. `ಸಲಾರ್’ ಟ್ರೈಲರ್ ಹೇಗಿರಬಹುದು ಎನ್ನುವ ಕ್ಯೂರಿಯಾಸಿಟಿಯೇ ಕಲಾಭಿಮಾನಿಗಳನ್ನು ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯುವಂತೆ ಮಾಡಿದೆ.

4k ಐಮ್ಯಾಕ್ಸ್ ಸಿನಿಮ್ಯಾಟಿಕ್ ವರ್ಷನ್ ನಲ್ಲಿ, ಡಿಸಿಟಿ ಥೀಮ್ ನಲ್ಲಿ ಸಲಾರ್ ಕ್ಯಾಪ್ಚರ್ ಮಾಡಲಾಗಿದೆ. ರವಿಬಸ್ರೂರ್ ಮ್ಯೂಸಿಕ್, ಭವನ್ ಗೌಡ ಸಿನಿಮಾಟೋಗ್ರಫಿ, ಶಿವಕುಮಾರ್ ಕಲಾನಿರ್ದೇಶನದಲ್ಲಿ ನೀಲ್ ಸಾಹೇಬ್ರು ಹೊಸ ಪ್ರಪಂಚ ಕಟ್ಟಿದ್ದಾರೆ. ಹೊಂಬಾಳೆ ಮಾಲೀಕರು ನೀರಿನಂತೆ ಹಣ ಚೆಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರ್ ದಿ ಫಸ್ಟ್ ಟೈಮ್ ಪ್ರಭಾಸ್ ಹಾಗೂ ಕಿಂಗ್ ಖಾನ್ ಶಾರುಖ್ ಮುಖಾಮುಖಿಯಾಗ್ತಿದ್ದಾರೆ. ಭರ್ತಿ 250 ಕೋಟಿ ಸುರಿದು ಕೆಂಡದಂತಹ ಸಿನಿಮಾ ಮಾಡಿರುವ ಹೊಂಬಾಳೆ ಮಾಲೀಕರು ಡಿಸೆಂಬರ್ 22ರಂದು ಕಿಂಗ್ ಖಾನ್ ಡಂಕಿ ಮುಂದೆ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಕೆಜಿಎಫ್ ಮುಂದೆ ಕಿಂಗ್ ಖಾನ್ ಜೀರೋ ಚಿತ್ರ ಮಕಾಡೆ ಮಲಗಿತ್ತು. ಇದೀಗ ಮತ್ತೊಮ್ಮೆ ಹೊಂಬಾಳೆ ಮಾಲೀಕರ ಸಲಾರ್ ಎದುರು ಬಾಕ್ಸ್ ಆಫೀಸ್ ಕಿಂಗ್ ಶಾರುಖ್ ಡಂಕಿ ಸೆಣಸಬೇಕಿದೆ. ಬಾಹುಬಲಿ ಬಂತರ ಸಾಲು ಸಾಲು ಸೋಲುಂಡಿರೋ ಪ್ರಭಾಸ್ ಬಾಲಿವುಡ್ ಬಾದ್‍ಷಾನ ಬೆಳ್ಳಿಭೂಮಿ ಅಂಗಳದಲ್ಲಿ ಬಗ್ಗುಬಡಿತಾರಾ? ಬಾಕ್ಸ್ ಆಫೀಸ್‍ನಲ್ಲಿ ಕಿಂಗ್ ಖಾನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ? ಡಿಸೆಂಬರ್ 22ರವರೆಗೆ ಕಾದುನೋಡಬೇಕು.





