ಬಾಲಿವುಡ್ ಕಿಂಗ್ ಖಾನ್ ಹಾಗೂ ಇಳಯದಳಪತಿ ವಿಜಯ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಈ ಎರಡು ಪವರ್ ಹೌಸ್ ಒಂದೇ ಫ್ರೇಮ್ ನಲ್ಲಿ ಸೆರೆಯಾದ್ರೆ ಹೇಗೆ? ಒಟ್ಟೊಟ್ಟಿಗೆ ಬಿರುಗಾಳಿ, ಸುಂಟರಗಾಳಿ ಕನ್ಫರ್ಮ್..ಶಾರುಖ್-ವಿಜಯ್.. ಇವರಿಬ್ಬರ ಬೊಂಬಾಟ್ ಆಕ್ಟಿಂಗ್ ಜೊತೆಯಾದ್ರೆ ಖಂಡಿತ ವಂಡರ್ ಫ್ಲಸ್ ಥಂಡರ್ ಸಿನಿಮಾ ಆಗೋದು ಖಚಿತ.. ಹಾಗಿದ್ರೆ ಇಂಡಿಯನ್ ಸಿನಿ ಇಂಡಸ್ಟ್ರೀಯ ಡೆಡ್ಲಿ ಕಾಂಬೋ ಕೈ ಜೋಡಿಸಿರೋದು ಖಚಿತವಾ? ಯಸ್, ಬೀಸ್ಟ್ ಹೀರೋ ಹಾಗೂ ಬಾಲಿವುಡ್ ಬಾದ್ ಷಾ ಸಂಗಮವಾಗ್ತಿರುವ ಸಮಾಚಾರವನ್ನು ತಳ್ಳಿಹಾಕುವ ಪ್ರಶ್ನೆಯೇ ಇಲ್ಲ. ಜವಾನ್ ಸಿನಿಮಾ ಬಿಡುಗಡೆ ಸನ್ನಿಹದಲ್ಲಿಯೇ ಇಂತಹದೊಂದು ಸುದ್ದಿ ಹರಿದಾಡಿತ್ತು..ಮಿಸ್ಟರ್ ಕಿಂಗ್ ಖಾನ್ ಚಿತ್ರದಲ್ಲಿ ವಿಜಯ್ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೆ ಜವಾನ್ ನೋಡಿಬಂದಿದ್ದ ದಳಪತಿ ಫ್ಯಾನ್ಸ್ ಗೆ ನಿರಾಸೆಯಾಗಿತ್ತು. ಆ ನಿರಾಸೆಯನ್ನು ತಣಿಸಿ ವಿಜಯ್ ಫ್ಯಾನ್ಸ್ ಮನ ಕುಣಿಸುವ ಹೊಸ ಸಮಾಚಾರ ಅಟ್ಲಿ ಅಖಾಡದಿಂದ ಹೊರಬಿದ್ದಿದೆ.

ವಿಜಯ್ ಫೇವರಿಟಿ ಡೈರೆಕ್ಟರ್ ಗಳಲ್ಲಿ ಒಬ್ರು ಈ ಅಟ್ಲಿ ಕುಮಾರ್. ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಲಗ್ಗೆ ಇಟ್ಟು ಮೊದಲ ಹೆಜ್ಜೆಯಲ್ಲಿ ಗೆಲುವಿನ ಮುದ್ರೆ ಒತ್ತಿರುವ ಈ ಡೈರೆಕ್ಟರ್ ಈಗ ಮತ್ತೊಂದು ಸಾಹಸಕ್ಕೆ ಸೈ ಎಂದಿದ್ದಾರೆ. ಕಿಂಗ್ ಖಾನ್ ಗೆ ಒಂದೊಳ್ಳೆ ಸಿನ್ಮಾ ಮಾಡಿ ಕೋಟಿ ಕೋಟಿ ದೋಚಿಕೊಂಡು ಲೇಡಿಸೂಪರ್ ಸ್ಟಾರ್ ನಯನ್ ತಾರಾರನ್ನು ಬಾಲಿವುಡ್ ಗೆ ಪರಿಚಯಿಸಿರುವ ಅಟ್ಲಿ ಕ್ರೇಜ್ ಕಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಜೋರಾಗಿದೆ. ಬಿಟೌನ್ ಬಡಾ ಪ್ರೊಡ್ಯೂಸರ್ ನಮಗೊಂದು ಸಿನ್ಮಾ ಮಾಡಿಕೊಂಡಿ ಅಂತಾ ಅಟ್ಲಿ ಮನೆ ಬಾಗಿಲು ತಟ್ತಿದ್ದಾರಂತೆ. ಸೋಲೇ ಕಾಣದ ಈ ಡೈರೆಕ್ಟರ್ ಈಗ ಬಾಲಿವುಡ್ ಹಾಗೂ ಕಾಲಿವುಡ್ ಎರಡನ್ನು ಒಂದುಮಾಡುವ ಮಗದೊಂದು ಪ್ರಯತ್ನಕ್ಕೆ ಕೈಹಾಕ್ತಿದ್ದಾರೆ.

ಯಸ್..ಜವಾನ್ ಬೆಳ್ಳಿಭೂಮಿಯಲ್ಲಿ ಝಗಮಗ ಜಮಾಯಿಸಿದೆ. ಶಾರುಖ್ ಖಾನ್ ಅಕೌಂಟ್ ಗೆ ಮತ್ತೊಂದು ಹಿಟ್ ಸೇರ್ಪಡೆಯಾಗಿದೆ. 1000 ಕೋಟಿ ಕ್ಲಬ್ ಸೇರಿದ ಈ ಚಿತ್ರದ ಬಳಿಕ ಅಟ್ಲಿ ಕುಮಾರ್ ಮಲ್ಟಿಸ್ಟಾರ್ಸ್ ಸಿನಿಮಾ ಮಾಡುವ ತಯಾರಿಯಲಿದ್ದಾರೆ. ಅದಕ್ಕಾಗಿಯೇ ಕಥೆ ಎಣೆಯುವಲ್ಲಿ ಮಗ್ನರಾಗಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದ್ರಲ್ಲಿ ತಮ್ಮ ಮುಂದಿನ ಚಿತ್ರ ಮಲ್ಟಿಸ್ಟಾರ್ಸ್ ಅಂತಾ ಅವ್ರೇ ಹೇಳಿಕೊಂಡಿದ್ದರು. ಪಾರ್ಟಿಯೊಂದ್ರಲ್ಲಿ ಭೇಟಿಯಾಗಿದ್ದ ವಿಜಯ್ ಹಾಗೂ ಶಾರುಖ್ ಅಟ್ಲಿ ಚಿತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಇವರಿಬ್ಬರನ್ನು ಹಾಕಿಕೊಂಡು ಸಿನ್ಮಾ ಮಾಡಲು ತಾವು ಎಕ್ಸೈಟ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಟ್ಲಿ ಡೈರೆಕ್ಷನ್, ಮಾಸ್ಟರ್ ಮತ್ತು ಬಾದ್ ಷಾ ಇವರ ರೇಜು ಪ್ಲಸ್ ಗೇಜ್ ಗೊತ್ತಿರುವ ಸಿನಿಮಾಮಂದಿ, ಈ ಮೂವರು ಒಂದಾದ್ರೆ ಹಳೆ ರೆಕಾರ್ಡ್ ಏನಾಗಬಹುದು? ಗಲ್ಲಾಪೆಟ್ಟಿಗೆ ಅದೆಷ್ಟು ಕೋಟಿ ಹೊತ್ಕೊಂಡು ಕುಣಿಯಬಹುದು ಅಂತ ಲೆಕ್ಕಚ್ಚಾರ ಹಾಕುತ್ತಿದ್ದಾರೆ. ಇವರಿಬ್ಬರ ಸ್ಟಾರ್ ನಟರ ಫ್ಯಾನ್ಸ್ ಸರಪಟಾಕಿ ಹಚ್ಚಿ ಸಂಭ್ರಮಿಸುವ ಕ್ಷಣ ದೂರವಿಲ್ಲ ಅನ್ನುತ್ತಿದ್ದಾರೆ. ಗಾಸಿಪ್ ಲೋಕದಲ್ಲಿ ಹರಿದಾಡ್ತಿರುವ ಈ ಸುದ್ದಿ ನಿಜವಾಗಲಿ ಕಿಂಗ್ ಖಾನ್ ಜೊತೆ ಜೊತೆಗೆ ದಳಪತಿ ಕಣಕ್ಕಿಳಿಯಲಿ ಅಂತ ಬೇಡಿಕೊಳ್ಳುತ್ತಿದ್ದಾರೆ. ಈಗಂತೂ ಸೌತ್ ಹಾಗೂ ನಾರ್ತ್ ಇಂಡಸ್ಟ್ರೀ ಎಂಬ ಬ್ಯಾರಿಯರ್ಸ್ ಪುಡಿಪುಡಿಯಾಗಿದೆ. ಇಂತಹ ಹೊತ್ತಿಲ್ಲ ಮಾಸ್ಟರ್ ಹಾಗೂ ಬಾದ್ ಜೊತೆಯಾದ್ರೆ ನಿಜಕ್ಕೂ ಅದ್ಭುತ ಮೂವೀ ಸೃಷ್ಟಿಯಾಗೋದ್ರಲ್ಲಿ ನೋ ಡೌಟ್..ಏನಂತೀರಾ?





