`ಸಲಾರ್’ ಸುನಾಮಿಗೆ ಕೌಂಟ್‍ಡೌನ್ ಶುರುವಾದ ಬೆನ್ನಲ್ಲೇ ಒಂದೊಂದು ಸುದ್ದಿಗಳು ಅಲೆಯಂತೆ ದುನಿಯಾ ದಡಕ್ಕೆ ಬಂದು ಸೇರುತ್ತಿವೆ. ಡಿಸೆಂಬರ್ 1ರಂದು `ಸಲಾರ್’ ಟ್ರೇಲರ್ ಜ್ವಾಲಾಮುಖಿಯಂತೆ ಸಿಡಿಯಲಿದೆ ಎನ್ನುವ ಸುದ್ದಿ ಸ್ಪೋಟಗೊಂಡ ಬೆನ್ನಲ್ಲೇ ಸಾಗರ ಸಮುದ್ರ ಬೆವರುವಂತಹ ಸುದ್ದಿ ಲೀಕ್ ಆಗಿದೆ. ಸಲಾರ್ ಮುಂದೆ ಗದರ್ ಚೆಲುವೆ ಸೀರೆ ಎತ್ಕೊಂಡು ಕುಣಿಯೋ ಬಡಾ ಖಬರ್ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ.
ಸಲಾರ್ ರಿಲೀಸ್ ಡೇಟ್ ಫಿಕ್ಸಾಗಿ ಆಯ್ತು ಇನ್ಯಾವ ಶೂಟಿಂಗ್‍ರೀ? ಹೀಗೊಂದು ಕೊಶ್ಚನ್ ರೈಸ್ ಆಗಿರುತ್ತೆ. ಆ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ `ಸಲಾರ್’ ಸಿನಿಮಾದ ಸ್ಪೆಷಲ್ ಸಾಂಗ್ ಶೂಟಿಂಗ್ ಬ್ಯಾಲೆನ್ಸ್ ಕಥೆನಾ ನಿಮ್ಮ ಮುಂದೆ ಹರವಿಡ್ಬೇಕು. ಹೌದು, ಹೈವೊಲ್ಟೇಜ್ `ಸಲಾರ್’ಗೆ ಕಿಚ್ಚು ಹಚ್ಚುವಂತಹ ಐಟಂ ಸಾಂಗ್ ಚಿತ್ರೀಕರಣ ಇನ್ನೂ ಬಾಕಿಯಿದೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್‍ಗೆ ವಿಪರೀತ ಮಂಡಿನೋವು ಕಾಣಿಸಿಕೊಂಡಿದ್ದರಿಂದ, ಡಾಕ್ಟ್ರು ಸರ್ಜರಿ ಆಗ್ಲೇಬೇಕು ಅಂತ ಹೇಳಿದ್ದರಿಂದ ಪ್ರಭಾಸ್ ಗಾರು ಫ್ಲೈಟ್ ಹತ್ಕೊಂಡು ಯುರೋಪ್‍ಗೆ ಹೊರಟುಬಿಟ್ಟರು. ಇತ್ತ ನೀಲ್ ಸಾಹೇಬ್ರು ಬಾಹುಬಲಿ ವಾಪಾಸ್ ಬಂದಾಗ ಡ್ಯಾನ್ಸ್ ನಂಬರ್ ಕ್ಯಾಪ್ಚರ್ ಮಾಡಿಕೊಂಡ್ರಾಯ್ತು ಅಂತ ಪೋಸ್ಟ್ ಪ್ರೊಡಕ್ಷನ್ ವರ್ಕ್‍ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಯೂರೋಪ್‍ನಿಂದ ಹೈದ್ರಬಾದ್‍ಗೆ ವಾಪಾಸ್ ಆಗಿದ್ದಾರೆ.

ಹೌದು, ಕಳೆದ ಎರಡು ದಿನದ ಹಿಂದೆ ಪ್ರಭಾಸ್ ಯುರೋಪ್‍ನಿಂದ ಮುತ್ತಿನ ನಗರಿಗೆ ಬಂದಿಳಿದಿದ್ದಾರೆ. ಮೊಣಕಾಲಿಗೆ ಸರ್ಜರಿ ಮಾಡಿಸಿಕೊಂಡು ಎರಡು ತಿಂಗಳು ಕಳೆದ್ಮೇಲೆ ಇಂಡಿಯಾಗೆ ವಾಪಾಸ್ ಆಗಿದ್ದಾರೆ. ಆದರೆ, ಮಂಡಿನೋವು ಸಂಪೂರ್ಣವಾಗಿ ಗುಣವಾಗದ ಕಾರಣ ಕುಂಟುತ್ತಲೇ ಏರ್ ಪೋರ್ಟ್‍ನಿಂದ ಹೊರನಡೆದಿದ್ದಾರೆ. ಇದು ಅಮರೇಂದ್ರ ಬಾಹುಬಲಿಯ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿತ್ತು. ನಮ್ಮ ಬಾಸ್ ಇನ್ನೂ ಗುಣಮುಖರಾಗಿಲ್ಲವಲ್ಲ ಅಂತ ಬೇಸರಗೊಳ್ಳುವಂತಾಗಿತ್ತು. ಇದೀಗ, ಅವ್ರೆಲ್ಲರೂ ಹುಚ್ಚೆದ್ದು ಕುಣಿಯುವಂತಹ ಸುದ್ದಿ ಹೊರಬಿದ್ದಿದೆ. ಮಿರ್ಚಿ ಹೀರೋ ಮುಂದೆ ಕುಣಿಯೋದಕ್ಕೆ ಮುಂಬೈ ಬೆಡಗಿ ಫ್ಲೈಟ್ ಏರಿ ಹೈದ್ರಾಬಾದ್‍ಗೆ ಬಂದಿಳಿದಿದ್ದಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ `ಸಲಾರ್’ ಸ್ಪೆಷಲ್ ಸಾಂಗ್ ಶೂಟಿಂಗ್ ಶುರುವಾಗಿದ್ದು, ಡಾರ್ಲಿಂಗ್ ಜೊತೆ ಗದರ್ ಬ್ಯೂಟಿ ಸಿಮ್ರತ್ ಕೌರ್ ಡ್ಯುಯೆಟ್ ಹಾಡಿದ್ದಾಳಂತೆ. ಈ ಬಗ್ಗೆ ಟಿಟೌನ್ ಅಂಗಳದಿಂದ ಅದೊಂದು ಸುದ್ದಿ ಹೊರಬಿದ್ದಿದೆ. ಅಂದ್ಹಾಗೇ, ಸಿಮ್ರತ್ ಕೌರ್ ಟಿಟೌನ್‍ನಿಂದ ಕರಿಯರ್ ಶುರು ಮಾಡಿದ್ದು. `ಪ್ರೇಮತೋ ಮೀ ಕಾರ್ತಿಕ್’, `ಬಂಗಾರ್ ರಾಜು’ ಸಿನಿಮಾಗೆ ಬಣ್ಣ ಹಚ್ಚಿದ್ದರು. ಅನಂತರ ಸನ್ನಿಡಿಯೋಲ್ ಜೊತೆ ಗದರ್ ಸಿನಿಮಾದಲ್ಲಿ ಕಾಣಿಸಿಕೊಂಡು ಶೈನ್ ಆದರು. ಈಗ `ಸಲಾರ್’ ಅಖಾಡಕ್ಕೆ ಸ್ಪೆಷಲ್ ಎಂಟ್ರಿಕೊಟ್ಟಿದ್ದಾರೆ. ಬಿಲ್ಲ ಜೊತೆ ನಡುಬಗ್ಗಿಸಿ ನಯಾ ಹವಾ ಕ್ರಿಯೇಟ್ ಮಾಡೋದಕ್ಕೆ ಹೊರಟಿದ್ದಾರೆ.
ಮಂಡಿನೋವು ಸರ್ಜರಿ ಮಾಡಿಸಿಕೊಂಡು ಮುತ್ತಿನ ನಗರಿಗೆ ವಾಪಾಸ್ ಆದ ಪ್ರಭಾಸ್ `ಸಲಾರ್’ ಸ್ಪೆಷಲ್ ಸಾಂಗ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. ಮೊಣಕಾಲು ನೋವಿನ ನಡುವೆಯೂ ಸಿಮ್ರತ್ ಕೌರ್ ಸೊಂಟ ಇಡ್ಕೊಂಡು ನಾಲ್ಕು ಸ್ಟೆಪ್ ಹಾಕಿದ್ದಾರಂತೆ. ಅಷ್ಟಕ್ಕೂ, ಈ ಸುದ್ದಿ ನಿಜವಾಗಿದ್ದರೆ ಇದು ಡಾರ್ಲಿಂಗ್ ಸಿನಿಮಾ ಕಮಿಟ್‍ಮೆಂಟ್‍ಗೆ ಸಾಕ್ಷಿಯಾಗುತ್ತೆ. ನೋವಿನ ನಡುವೆಯೂ ಅಖಾಡಕ್ಕಿಳಿದು ಅಭಿನಯಿಸಿದ್ದು ಅವರ ಬದ್ದತೆಯನ್ನ ಎತ್ತಿಹಿಡಿಯುತ್ತೆ. ಇನ್ನೇನು ಸಲಾರ್ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿರೋದರಿಂದ ಆದಷ್ಟು ಬೇಗ ಬಾಕಿ ಉಳಿದಿರೋ ಸೀನ್ಸ್ ಮುಗಿಸಿಕೊಂಡು ಪ್ರಮೋಷನ್ ಶುರು ಮಾಡಬೇಕು. ಬೆಂಗಳೂರು, ಹೈದ್ರಬಾದ್, ಚೆನ್ನೈ, ಮುಂಬೈ, ಕೊಚ್ಚಿನ್ ಅಂತ ಸುತ್ತಾಡಿ `ಸಲಾರ್’ ಪ್ರಚಾರ ಮಾಡಬೇಕಿದೆ. ಹೀಗಾಗಿ, ಯುರೋಪ್‍ನಿಂದ ಕಂಬ್ಯಾಕ್ ಆದ ತಕ್ಷಣ ಪ್ರಭಾಸ್ ಕಣಕ್ಕಿಳಿದಿದ್ದಾರಂತೆ.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೇ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ಎರಡು ಭಾಗದಲ್ಲಿ ತಯಾರಾಗಿದೆ. ಇದೇ ಡಿಸೆಂಬರ್ 22ರಂದು ಸಲಾರ್ ಮೊದಲ ಭಾಗ ವಲ್ರ್ಡ್ ವೈಡ್ ತೆರೆಗೆ ಬರ್ತಿದೆ. ಸುಮಾರು 250 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರೋ `ಸಲಾರ್’ ಚಿತ್ರದಲ್ಲಿ ಸೌತ್-ನಾರ್ತ್ ನಟ-ನಟಿಯರ ಸಮಾಗಮವಾಗಿದೆ. ಮಾಸ್ಟರ್ ಮೈಂಡ್ ನೀಲ್ ಸಾಹೇಬ್ರು ಕೆಜಿಎಫ್ ಯೂನಿವರ್ಸ್ ಕಾನ್ಸೆಪ್ಟ್‍ನಲ್ಲಿ `ಸಲಾರ್’ ಕಟ್ಟಿಕೊಟ್ಟಿದ್ದಾರೆನ್ನುವ ಸುದ್ದಿಯಿದೆ. ಕೆಜಿಎಫ್ ಕಿಂಗ್ ರಾಕಿಭಾಯ್, ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಸಮಾಗಮವಾಗ್ತಿದೆ ಎನ್ನುವ ಬೆಂಕಿ ಖಬರ್ ಈಗಾಗಲೇ ಎಲ್ಲರನ್ನೂ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮೋಸ್ಟ್ ವೈಲೆಂಟ್ ಮೆನ್ ಆಗಮನವಾಗ್ತಿದೆ. ಜುರಾಸಿಕ್ ಪಾರ್ಕ್‍ನಲ್ಲಿರೋ ಲಯನ್, ಚೀತಾ, ಟೈಗರ್‍ಗಿಂತ ಸಲಾರ್ ಉರುಫ್ ಡೈನೋಸಾರ್ ಎಷ್ಟು ಡೇಂಜರಸ್ ಅನ್ನೋದು ಡಿಸೆಂಬರ್ 01ರಂದು ಟ್ರೇಲರ್ ನೋಡಿದರೆ ಗೊತ್ತಾಗುತ್ತೆ. ಆದರೆ, ನಮ್ಮ ಸಲಾರ್ ಕಿಂಗ್ ಖಾನ್ `ಡಂಕಿ’ ಗಿಂತ ಎಷ್ಟ್ರು ಸ್ಟ್ರಾಂಗ್ ಅನ್ನೋದು ಗೊತ್ತಾಗಬೇಕಂದ್ರೆ ಕ್ರಿಸ್ ಮಸ್ ಹಬ್ಬದವರೆಗೆ ಕಾಯಲೇಬೇಕು.





