ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ʻಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನʼ ಅಂತಿರೋದ್ಯಾಕೆ ಸುಶ್ಮಿತಾ-ಜಗ್ಗಪ್ಪ!

Vishalakshi Pby Vishalakshi P
26/12/2023
in Majja Special
Reading Time: 1 min read
ʻಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನʼ ಅಂತಿರೋದ್ಯಾಕೆ ಸುಶ್ಮಿತಾ-ಜಗ್ಗಪ್ಪ!

ರೀಲ್‌ ಲೈಫ್‌ನಲ್ಲಿ ಜೋಡಿಯಾಗಿ ಮಿಂಚಿ, ರಿಯಲ್‌ ಲೈಫ್‌ನಲ್ಲೂ ಒಂದಾಗಿರುವ ಸುಶ್ಮಿತಾ ಹಾಗೂ ಜಗ್ಗಪ್ಪ ಮತ್ತೆ ರೀಲ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದ ಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನ ಚಿತ್ರದಲ್ಲಿ ಜಗಪ್ಪ, ಸುಶ್ಮಿತ, ಸೀರುಂಡೆ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಹಾಗೂ 2 ಹಾಡುಗಳ ಪ್ರದರ್ಶನ  ನಡೆಯಿತು, ಆನ್ ಲೈನ್ ಆಪ್ ಮೂಲಕ ಜೊತೆಯಾದ ಯುವಜೋಡಿಯ ಸುತ್ತ ನಡೆಯುವ ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವೇಂಪಲ್ಲಿ ಬಾವಾಜಿ ಪೂರ್ಣ ಪ್ರಮಾಣದ ಎಂಟರ್‌ಟೈನರ್ ಕಥಾಹಂದರ ಈ ಚಿತ್ರದಲ್ಲಿದ್ದು, ಈ ಕಥೆಗೆ ಯಾರು ಸೂಟ್ ಆಗ್ತಾರೆ ಅಂತ ಹುಡುಕಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಜಗಪ್ಪ , ಸುಶ್ಮಿತಾ ಸಿಕ್ಕರು. ಇಡೀ ಚಿತ್ರದಲ್ಲಿ ನಗದೇ ಇರೋದಕ್ಕೆ ಗ್ಯಾಪ್ ಕೊಟ್ಟಿಲ್ಲ, ನಗದೇ ಇರುವವರಿಗೆ ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ. ಈ ಚಿತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಅಲ್ಲದೇ ಹಾಡುಗಳನ್ನು ಆನೇಕಲ್‌ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್‌ವೊಂದರಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಈಗಿನ ಯೂಥ್ ಎಲ್ಲದಕ್ಕೂ ಸೋಷಿಯಲ್ ಮೀಡಿಯಾ ನೋಡುತ್ತಾರೆ, ಅದೇ ರೀತಿ‌ ಇದ್ದ ನಾಯಕ ನಾಯಕಿ ಹೇಗೆ ಮದುವೆಯಾಗ್ತಾರೆ ಅಂತ ಸಿನಿಮಾದಲ್ಲಿ ಹೇಳಿದ್ದೇವೆ. ಮನರಂಜನೆಗಾಗಿ ಮಾಡಿದ ಚಿತ್ರವಿದು ಎಂದು ಹೇಳಿದರು, ನಂತರ ನಾಯಕಿ ಸುಶ್ಮಿತಾ ಮಾತನಾಡುತ್ತ ಆರಂಭದಲ್ಲಿ ಹಾಡು ಇದ್ದಿಲ್ಲ, ನಂತರ ಸೇರಿಸಲಾಯಿತು, ಆಡಂಬರ ಅಬ್ಬರ ಇಲ್ಲದ ಫ್ಯಾಮಿಲಿ ಸ್ಟೋರಿಯಿದು ಎಂದರು.

ನಂತರ ನಾಯಕ ಜಗಪ್ಪ ಮಾತನಾಡಿ ಚಿತ್ರದಲ್ಲಿ ಎಲ್ಲ ಪಾತ್ರಗಳೂ ಲೀಡ್ ಆಗಿವೆ, ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತ ಇರುತ್ತೇನೆ, ಆಗ ಆನ್‌ಲೈನ್ ಆಪ್‌ನಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಗಂಡ ಹೆಂಡತಿಯ ಜಗಳದ ಡೈಲಾಗ್‌ಗಳು ಚೆನ್ನಾಗಿ ಬಂದಿವೆ ಎಂದು ಹೇಳಿದರು, ನಾಯಕಿಯ ಸಹೋದರನಾಗಿ ಕಾಣಿಸಿಕೊಂಡಿರುವ ಸೀರುಂಡೆ ರಘು ಮಾತನಾಡಿ ನಾವೆಲ್ಲ ರಿಯಾಲಿಟಿ ಶೋನಿಂದ ಬಂದವರು, ೮ ವರ್ಷಗಳಿಂದಲೂ ಸ್ನೇಹಿತರು ಎಂದು ಹೇಳಿಕೊಂಡರು. ಸಂಗೀತ ನಿರ್ದೇಶಕ ಅರುಣ್ ಪ್ರಸಾದ್ ಮಾತನಾಡುತ್ತ ಬಾವಾಜಿ ನನಗೆ ೮ ವರ್ಷಗಳಿಂದ ಸ್ನೇಹಿತರು, ಉತ್ತಮ ಕಾರ್ಟೂನಿಸ್ಟ್ ಕೂಡ, ಅಡ್ಜಸ್ಟ್ ಮಾಡ್ಕೊಳಿ ಸಾಂಗ್ ನಾನೇ ಬರೆದಿದ್ದೇನೆ ಎಂದು ಹೇಳಿದರು. ನಿರ್ಮಾಪಕ ಕುಮಾರ್ ಮಾತನಾಡಿ ಬಾವಾಜಿ ನನಗೆ ತುಂಬಾ ವರ್ಷಗಳ ಸ್ನೇಹಿತರು, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.

ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಅಲ್ಲದೆ ಆಂಕರ್ ದಯಾನಂದ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವೇಂಪಲ್ಲಿ ಬಾವಾಜೀ ಅವರೇ ಬರೆದಿದ್ದಾರೆ. ಬಾಲು ಅವರ ಕ್ಯಾಮೆರಾವರ್ಕ, ರೋಹಿತ್ ಅವರ ಸಂಕಲನ, ಅಲೆಕ್ಸ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಕ್ರಿಕೆಟರ್ ಪೃಥ್ವಿ ಶಾ ಜೊತೆ  ಕ್ರಿಸ್‍ಮಸ್ ಆಚರಿಸಿದ ನಿಮಿಕಾ ರತ್ನಾಕರ್!

ಕ್ರಿಕೆಟರ್ ಪೃಥ್ವಿ ಶಾ ಜೊತೆ ಕ್ರಿಸ್‍ಮಸ್ ಆಚರಿಸಿದ ನಿಮಿಕಾ ರತ್ನಾಕರ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.