ಒಂದೊಂದು ದೃಶ್ಯವೂ ಭಯಾನಕ..ರೋಚಕ..ಇದು ಅಸಲಿ ಕೆಜಿಎಫ್ ಸಾಮ್ರಾಜ್ಯದ ಕಥಾನಕ..ಪ್ರಶಾಂತ್ ನೀಲ್ ಪ್ರೇಕ್ಷಕರ ಎದುರು ತಂದುನಿಲ್ಲಿಸಿದ್ದು ಕಾಲ್ಪನಿಕ ಕೆಜಿಎಫ್ ಕಥೆ..ಆದ್ರೆ ಪಾ.ರಂಜಿತ್ ನಿಮ್ಮ ಮುಂದೆ ಅರ್ಪಿಸಲು ಹೊರಟಿರೋದು ನಿಜವಾದ ಕೆಜಿಎಫ್ ಕಥೆ..ಅದರ ಹೆಸ್ರೆ ತಂಗಲಾನ್.. ಪ್ರತಿ ಸಿನಿಮಾದಲ್ಲೊಂದು ಸಾಮಾಜಿಕ ಸಂದೇಶಗಳನ್ನು ಇಟ್ಕೊಂಡು ಕಥೆ ಹೇಳುವ ಪಾ ರಂಜಿತ್ ಈ ಬಾರಿ ನಮ್ಮ ಮಣ್ಣಿನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಅದಕ್ಕೆ ತಂಗಲಾನ್ ಅಂತಾ ಹೆಸರಿಟ್ಟಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸಿರುವ ಚಿಯಾನ್ ಪಾ ರಂಜಿತ್ ಕಥೆಯ ನಾಯಕ..ಮೇಕಿಂಗ್ ವಿಡಿಯೋ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ ತಂಗಲಾನ್ ಅಂಗಳದಿಂದ ಜಬರ್ದಸ್ತ್ ಆಗಿರುವ ಟೀಸರ್ ರಿಲೀಸ್ ಆಗಿದೆ.
ತಂಗಲಾನ್ 1 ನಿಮಿಷ 32 ಇರುವ ಟೀಸರ್ ನೋಡಿದ್ರೆ ಎದೆ ಝಲ್ ಎನಿಸುತ್ತಿದೆ. ಪ್ರಶಾಂತ್ ನೀಲ್ ಓಂಕಾರ ಹಾಕಿದ್ದ ಕೆಜಿಎಫ್ ಸಿನಿಮಾಗಿಂತಲೂ ರಗಡ್ ಆಗಿ, Raw and Rustic ಆಗಿ ಮೂಡಿಬಂದಿರುವ ಝಲಕ್ ಯೂಟ್ಯೂಬ್ ಪ್ರಪಂಚದಲ್ಲಿ ಹಲ್ ಎಲ್ ಎಬ್ಬಿಸ್ತಿದೆ. ಕೋಲಾರ ಚಿನ್ನದ ಗಣಿಯಲ್ಲಿ ಅದೆಷ್ಟೋ ಕಥೆಗಳು ಹುದುಗಿ ಹೋಗಿವೆ. ಚಿನ್ನ ತೆಗೆಯುವತ್ತಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಅಷ್ಟಕ್ಕೂ ಕೋಲಾರ ಚಿನ್ನದ ಗಣಿ ಸೃಷ್ಟಿಯಾಗಿದ್ದೇಗೆ? ಅಲ್ಲಿ ಮೊದಲಿಗೆ ನಿಕ್ಷೇಪ ಕಂಡು ಹಿಡಿದಿದ್ದು ಯಾರು? ಕಾರ್ಮಿಕರನ್ನು ಬಳಿಸಿಕೊಂಡು ಬ್ರಿಟಿಷರು ಹೇಗೆ ಚಿನ್ನ ತೆಗೆಯುತ್ತಾರೆ? ಒಂದೇ ವಾಕ್ಯದಲ್ಲಿ ಹೇಳ್ಬೇಕು ಅಂದ್ರೆ ಕೋಲಾರ ಚಿನ್ನದ ಗಣಿ ಕಾರ್ಮಿಕರ ಸುತ್ತ ತಂಗಲಾನ್ ಸಿನಿಮಾ ಸಾಗುತ್ತದೆ. ತಂಗಲಾನ್ ಸಿನಿಮಾದ ಕಥೆ ಏನೂ ಅನ್ನೋ ಹಿಂಟ್ ಈಗಾಗಲೇ ನಿಮಗೆ ಸಿಕ್ಕಿದೆ. ಆದರೆ ತಮಿಳು ಕಾರ್ಮಿಕರ ಮೇಲೇನೆ ಇಡೀ ಸಿನಿಮಾ ಇದ್ದಂತೆ ಕಾಣುತ್ತದೆ.

ಕೆಜಿಎಫ್ ಕಥೆಯನ್ನ ಇಟ್ಟುಕೊಂಡೇ ಕಮರ್ಷಿಯಲ್ ಚೌಕಟ್ಟಿನಲ್ಲಿ ಡೈರೆಕ್ಟರ್ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಮಾಡಿದ್ದರು. ಅಲ್ಲಿ ರಾಕಿಭಾಯ್ ನರಾಚಿ ಸಾಮ್ರಾಜ್ಯದ ಒಡೆಯನಾಗೋದು ಹೇಗೆ? ತನ್ನ ತಾಯಿ ಕನಸನ್ನು ಈಡೇರಿಸಲು ಏನೆಲ್ಲಾ ಮಾಡ್ತಾರೆ ಎಂಬದನ್ನು ಕಟ್ಟಿಕೊಡಲಾಗಿತ್ತು. ಆದ್ರೆ ಪಾ.ರಂಜಿತ್ ತಂಗಲಾನ್ ಕಥೆಯಲ್ಲಿ ಬಂಗಾರದ ಮಗನಾಗಿ ಚಿಯಾನ್ ತನ್ನ ಪರಿವಾರವನ್ನು ಹೇಗೆ ರಕ್ಷಿಸ್ತಾನೆ ಅನ್ನೋದನ್ನು ನೋಡಬಹುದು. ಕನ್ನಡದ ಕೆಜಿಎಫ್ ಚಿತ್ರಕ್ಕಾಗಿಯೇ ರಾಕಿಂಗ್ ಸ್ಟಾರ್ ಯಶ್, ಗಡ್ಡಬಿಟ್ಟು ಕಂಪ್ಲೀಟ್ ಲುಕ್ ಬದಲಾಗಿದ್ದರು. ಅದೇ ರೀತಿ ತಮಿಳಿನ ಈ ತಂಗಲಾನ್ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಬದಲಾಗಿದ್ದಾರೆ. ಹಾಲಿವುಡ್‌ನ ಅಪೋಕ್ಯಾಲಿಪ್ಟೋ ಸಿನಿಮಾದ ಕಾಡು ಜನರ ರೀತಿಯ ಲುಕ್‌ನಲ್ಲಿಯೇ ಚಿಯಾನ್ ಕಾಣಿಸುತ್ತಾರೆ. ತುಂಡು ಪಂಚೆಯುಟ್ಟು, ಗಡ್ಡ ಬಿಟ್ಟು ರಗಡ್ ಲುಕ್ ನಲ್ಲಿ ರಾಕ್ಷಸಂತೆ ಚಿಯಾನ್ ಅಬ್ಬರಿಸಿದ್ದಾರೆ.
ಕನ್ನಡದ ಕೆಜಿಎಫ್ ಸರಣಿ ಸಿನಿಮಾ ಕಾಲ್ಪನಿಕ ಕಥೆ. ಈ ಎರಡು ಚಿತ್ರಗಳು ಗಲ್ಲಾಪೆಟ್ಟಿಗೆ ಊಡೀಸ್ ಮಾಡಿದ್ದವು..ಯಶ್ ಆಕ್ಟಿಂಗ್, ನೀಲ್ ಟೇಕಿಂಗ್ ಹೊಂಬಾಳೆ ಫಂಡಿಂಗ್..ಎಲ್ಲವೂ ಮ್ಯಾಜಿಕ್ ಮಾಡಿತ್ತು. ಕೆಜಿಎಫ್ ಗಿಂತಲೂ ಭಿನ್ನ-ವಿಭಿನ್ನವಾಗಿದೆ ತಂಗಲಾನ್ ಸಿನಿಮಾ..ಸ್ವಾತಂತ್ರ ಪೂರ್ವದ ಕಥೆ ಇದಾಗಿದ್ದು, ಸಮುದಾಯದ ಸಂಘರ್ಷ, ಕಾರ್ಮಿಕರ ಹೋರಾಟದ ಕಥೆಯಾಗಿರುವ ಈ ಚಿತ್ರವನ್ನು ಕೆಜಿಎಫ್ ಗಣಿ, ಹೊಗೆನೇಕಲ್ ಹಾಗೂ ಮಧುರೆ ಸೇರಿದಂತೆ ಸಾಕಷ್ಟು ಲೋಕೇಷನ್ ಗಳಲ್ಲಿ ಚಿತ್ರೀಕರಿಸಲಾಗಿದೆ. ಬಹಳ ಅದ್ಧೂರಿಯಾಗಿ ಮೂಡಿಬಂದಿರುವ ತಂಗಲಾನ್ ಸಿನಿಮಾದಲ್ಲಿ ಚಿಯಾನ್ ನಾಯಕನಾಗಿ ನಟಿಸಿದ್ದು, ಪಾರ್ವತಿ ತಿರುವೊತ್ತೋ, ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ಪಶುಪತಿ, ಹರಿಕೃಷ್ಣನ್, ಅನ್ಬುದುರೈ, ಪ್ರೀತಿ ಕರಣ್, ಮುತ್ತುಕುಮಾರ್ ತಾರಾಬಳಗದಲ್ಲಿದ್ದಾರೆ. ಜಿವಿ ಪ್ರಕಾಶ್ ಮ್ಯೂಸಿಕ್ ಹಾಗೂ ಕಿಶೋರ್ ಕ್ಯಾಮೆರಾ ವರ್ಕ್ ತಂಗಲಾನ್ ಸಿನಿಮಾದ ತೂಕ ಹೆಚ್ಚಿಸಿದೆ. 2 ಡಿ ಹಾಗೂ 3ಡಿಯಲ್ಲಿ ತಂಗಲಾನ್ ಸಿನಿಮಾ ಪ್ರೇಕ್ಷಕೆ ಎದುರು ಬರಲಿದೆ. ಈ ಚಿತ್ರಕ್ಕಾಗಿ ಪಾ.ರಂಜಿತ್ ಬಹಳಷ್ಟು ಸಂಶೋಧನೆ ನಡೆಸಿ ಕಥೆ ರೂಪಿಸಿ ದೃಶ್ಯರೂಪಕ್ಕೆ ಇಳಿಸಿದ್ದಾರೆ. ಫಳ ಫಳ ಒಳೆಯುವ ಬಂಗಾರದ ಹಿಂದಿನ ರಕ್ತಚರಿತ್ರೆ ಕಥೆಯನ್ನು ಕಬಾಲಿ ಡೈರೆಕ್ಟರ್ ಹಾಗೂ ಚಿಯಾನ್ ವಿಕ್ರಮ್ ನಿಮ್ಮ ಮುಂದೆ ಹರಡಲಿದ್ದಾರೆ. ಕೋಲಾರ ಚಿನ್ನದ ಗಣಿಯ ಕಾರ್ಮಿಕರ ನೋವಿನ ತಂಗಲಾನ್ ಸಿನಿಮಾ ಗಣರಾಜ್ಯೋತ್ಸವದಂದು ನಿಮ್ಮ ಎದುರು ತೆರೆದುಕೊಳ್ಳಲಿದೆ.





