-ಈ ಜಗತ್ತಲ್ಲಿ ಇಂಥಾದ್ದೆಲ್ಲ ನಡೆಯುತ್ತಾ?
-ಇದು ಗಾಬರಿ ಹುಟ್ಟಿಸೋ: ಅಚ್ಚರಿ ಮೂಡಿಸೋ ಮ್ಯಾಟರ್!
‘ಜೇನಿನಗೂಡು ನಾವೆಲ್ಲಾ..ಬೇಯಾದರೆ ಜೇನಿಲ್ಲಾ..’ ಎಂಬ ಹಾಡನ್ನು ತಿದ್ದಿಕೊಂಡು… ‘ಹಾಡು ಹಕ್ಕಿಗಳು ನಾವು ಬೇರೆಯಾದರೆ ಗೂಡಿಲ್ಲಾ…’ ಎಂದು ಬೃಹತ್ ಗೂಡಿನ ಫ್ಲಾಟ್ ನಿರ್ಮಿಸಿಕೊಳ್ಳುತ್ತಿರುವ ಸುದ್ದಿಯಿದು… ಹಾಡುಹಕ್ಕಿಗೆ ಬೇಕು ಗೂಡು, ಗೂಡು ಕಟ್ಟಲು ಮರಬೇಕು. ಮರಗಳೇ ಅಪರೂಪ. ಮನುಷ್ಯರನ್ನು ಕಂಡಿರುವ ಹಾಡುಹಕ್ಕಿಗಳು ಇದೀಗ ಥೇಟ್ ನಮ್ಮನ್ನು ಕಾಪಿ ಹೊಡೆಯುತ್ತಿವೆ. ನಾವು ಫ್ಲಾಟ್‌ಗಳನ್ನು ನಿರ್ಮಿಸಿಕೊಳ್ಳುವಂತೆ ಈ ಹಕ್ಕಿಗಳು ಬಹುಗೂಡು ಸಂಸ್ಕೃತಿಯನ್ನು ಅನುಸರಿಸುತ್ತಿವೆ. ೧೦ ಅಡಿ ಅಗಲ, ೨೦ ಅಡಿ ಎತ್ತರದವರೆಗೆ ಸೂರು ಕಟ್ಟುತ್ತವೆ. ಸುಮಾರು ೧ ಟನ್‌ಗಳ ಭಾರವಿದೆ. ದೂರದ ಸ್ಥಳಗಳಿಂದ ಕಡ್ಡಿ, ಹುಲ್ಲುಗಳನ್ನು ತಂದು, ಮರದಲ್ಲಿ ಬೆಸೆದು ಗೂಡು ಕಟ್ಟಿ ಸಂಸಾರ ಮಾಡುತ್ತಿವೆ. ಈ ಬೃಹತ್ ಗೂಡಿನ ಸಮುಚ್ಚದಲ್ಲಿ ಕನಿಷ್ಠವೆಂದರೂ ಒಂದರಿಂದ ಒಂದೂವರೆ ಸಾವಿರ ಹಕ್ಕಿಗಳು ಸಂಸಾರ ನಡೆಸುತ್ತಿವೆ!
ಹಕ್ಕಿಗಳ ಅಪಾರ್ಟ್‌ಮೆಂಟ್!












