ಮನುಷ್ಯ ತನಗೆಲ್ಲ ತಿಳಿದಿದೆ ಎಂಬ ಅಹಮ್ಮಿಕೆಯಲ್ಲಿ ಕೆನೆದಾಡುತ್ತಾ ಪ್ರಕೃತಿಯ ಸಮತೋಲನದ ಬುಡಕ್ಕೇ ಕುಡುಗೋಲಿಟ್ಟಿದ್ದಾನೆ. ಎಲ್ಲವನ್ನೂ ಆವಿಷ್ಕಾರ ಮಾಡಿ, ಪ್ರತಿಯೊಂದನ್ನೂ ಸಂಶೋಧನೆಗಳ ಒರೆಗೆ ಹಚ್ಚಿ ಇಲ್ಲಿ ನಿಗೂಢವಾದುದೇನೂ ಉಳಿದಿಲ್ಲ ಎಂಬಂತೆ ಮೆರೆದಾಡುತ್ತಿದ್ದಾನೆ. ಆದರೆ ನಮ್ಮ ಸುತ್ತಲೇ ಅಡಗಿ ಕೂತಿರೋ ಹಲವಾರು ಪ್ರಾಕೃತಿಕ ನಿಗೂಢಗಳು ಮನುಷ್ಯನ ಬುದ್ಧಿವಂತಿಕೆಗೆ ಸವಾಲೆಸೆದು, ಅಡಿಗಡಿಗೆ ಅಣಕಿಸಿ ನಗುತ್ತಿವೆ. ಈ ಕ್ಷಣದ ವರೆಗೂ ಕೂಡಾ ಅಂಥಾ ಅದೆಷ್ಟೋ ನಿಗೂಢಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದುಕೊಂಡಿವೆ. ನಮ್ಮದೇ ದೇಶದ ಭಾಗವಾಗಿರೋ ಅಸ್ಸಾಂನ ಕಾಡುಗಳಲ್ಲಿ ಅವಿತಿರೋದು ಕೂಡಾ ಅಂಥಾದ್ದೇ ನಿಗೂಢ!
ಪಕ್ಷಿ ಅಚ್ಚರಿ
ಅಸ್ಸಾಂ ಅಂದರೇನೇ ವಿಶಿಷ್ಟ ಪ್ರದೇಶ. ಅಲ್ಲಿ ಹೇರಳವಾದ ಸಸ್ಯ ರಾಶಿ ಮತ್ತು ಪ್ರಾಣಿ ಪಕ್ಷಿಗಳ ಸಂಕುಲವಿದೆ. ಇಂಥಾ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರೋ ಊರು ಜತಿಂಗಾ. ಇಲ್ಲಿ ಬಹುವಾಗಿ ಕಾಡಿನಿಂದ ಆವೃತವಾದ ಪ್ರದೇಶಗಳಿದ್ದಾವೆ. ಅದರ ಒಳಗೆಯೇ ಲೆಕ್ಕವಿಡಲಾರದಷ್ಟು ಪ್ರಬೇಧಗಳ ಪಕ್ಷಿಗಳೂ ಇದ್ದಾವೆ. ಅಂಥಾ ಪಕ್ಷಿಗಳೇ ಅಲ್ಲಿನ ನಿಗೂಢ ಘಟನೆಯೊಂದರ ಕೇಂದ್ರ ಬಿಂದುಗಳು. ಯಾಕಂದ್ರೆ, ಪ್ರತೀ ವರ್ಷ ಒಂದು ನಿರ್ದಿಷ್ಟವಾದ ಕಾಲಘಟ್ಟದಲ್ಲಿ ಅಲ್ಲಿನ ಪಕ್ಷಿಗಳೆಲ್ಲ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತವೆಯಂತೆ. ನಂತರ ಮನ ಬಂದಂತೆ ಹಾರಾಡಿ ರೆಂಬೆ ಕೊಂಬೆ ಕಂಬಗಳಿಗೆ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಂತೆ ಸತ್ತು ಬೀಳುತ್ತವಂತೆ.
ಆ ಕಾಲಮಾನದಲ್ಲಿ ಮ್ಲಾನವಾದ ಮಬ್ಬು ಮಬ್ಬು ವಾತಾವರಣ ಅಲ್ಲಿ ಮೇಳೈಸುತ್ತದೆ. ಅದರ ಹಿನ್ನೆಲೆಯಲ್ಲಿ ಢಾಳಾಗಿಯೇ ಮಂಜು ಸುರಿಯಲಾರಂಭಿಸುತ್ತೆ. ಈ ಪ್ರಾಕೃತಿಕ ಬದಲಾವಣೆ ಸಲೀಸಾಗಿಯೇ ಎಲ್ಲರ ಅರಿವಿಗೂ ಬರುತ್ತದೆ. ಇಂಥಾ ಕಾಲದಲ್ಲಿಯೇ ಪಕ್ಷಿಗಳು ಹಿಂಡು ಹಿಂಡಾಗಿ ಕಾಡೊಳಗಿಂದ ಮೇಲೆ ಚಿಮ್ಮುತ್ತವೆ. ನಂತರ ಆ ಮಬ್ಬು ವಾತಾವರಣದಲ್ಲಿ ಕ್ಷೀಣವಾಗಿ ಮಿಂಚುವ ಬೆಳಕಿನ ದಿಕ್ಕಿನತ್ತ ಹುಚ್ಚೆದ್ದು ಹಾರುತ್ತವೆ. ಆ ಭರದಲ್ಲಿ ರೆಂಬೆ ಕೊಂಬೆಗಳು ಮತ್ತು ಕಂಬಗಳಿಗೆ ಡಿಕ್ಕಿ ಹೊಡೆದು ಸಾಯುತ್ತವೆ. ಇದರಿಂದಾಗಿ ಆ ಕಾಲಮಾನದಲ್ಲಿ ಪಕ್ಷಿಗಳ ಮಾರಣಹೋಮವೇ ನಡೆಯುತ್ತೆ. ಇದು ಪ್ರತೀ ವರ್ಷ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಆದರೆ ಅದಕ್ಕೆ ನಿಖರ ಕಾರಣವೂ ಅಷ್ಟೇ ನಿಗೂಢವಾಗುಳಿದೆ.
ಅವಳಿಗಳೂರು!
ಥೇಟು ಝರಾಕ್ಸು ಮಾಡಿದಂಥಾ ಹೋಲಿಕೆಯಿರುವ ಅವಳಿ ಮಕ್ಕಳು ಹುಟ್ಟೋದು ನಮಗೇನು ಅಪರಿಚಿತವಲ್ಲ. ಆದರೆ ಅಂಥಾ ಅವಳಿ ಮಕ್ಕಳು ಹುಟ್ಟೋದು ಅಪರೂಪದಲ್ಲಿಯೇ ಅಪರೂಪ. ಆದ್ದರಿಂದಲೇ ಅವಳಿಗಳ ಬಗೆಗೊಂದು ಕುತೂಹಲ ಬಹುತೇಕರಲ್ಲಿರುತ್ತೆ. ಅದೊಂದು ಪ್ರಾಕೃತಿಕ ಅಚ್ಚರಿ. ಮಾಯೆ ಎಂದರೂ ಅತಿಶಯವೇನಲ್ಲ. ಈ ಅಚ್ಚರಿಯನ್ನೇ ಮೀರಿಸುವಂಥ ಸಯಾಮಿಗಳೂ ಕೂಡಾ ಆಗಾಗ ಸದ್ದು ಮಾಡುತ್ತಿರುತ್ತವೆ. ಆದರೆ ಅಪರೂಪದ ಅವಳಿಗಳಿಂದಲೇ ತುಂಬಿ ತುಳುಕೋ ಊರೊಂದು ನಮ್ಮದೇ ದೇಶದಲ್ಲಿದೆ ಅನ್ನೋದು ಬಹುತೇಕರ ಅರಿವಿಗೆ ಬಂದಿರಲಿಕ್ಕಿಲ್ಲವೇನೋ…
ಅಂಥಾದ್ದೊಂದು ಅಪರೂಪದ ಊರು ದೇವರ ನಾಡೆಂದೇ ಖ್ಯಾತಿವೆತ್ತಿರುವ ಕೇರಳದಲ್ಲಿದೆ. ಆ ಊರು ವೈದ್ಯಕೀಯ ವಿಜ್ಞಾನ ಜಗತ್ತಿನ ಪಾಲಿಗೊಂದು ನಿರಂತರ ಬೆರಗಾಗಿ ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ಈ ಅವಳಿ ಮಕ್ಕಳು ಹುಟ್ಟೋದು ತೀರಾ ವಿರಳ. ಆದರೆ ಕೋದಿನ್ನಿ ಎಂಬ ಊರಿನ ತುಂಬಾ ಅವಳಿಗಳದ್ದೇ ಸಾಮ್ರಾಜ್ಯ. ಅಲ್ಲಿ ಹುಟ್ಟುವ ಬಹುತೇಕ ಮಕ್ಕಳು ಅವಳಿಗಳಾಗಿರುತ್ತವೆ. ಇಲ್ಲಿನ ಶಾಲೆಗಳಲ್ಲಿಯಂತೂ ವ್ಯತ್ಯಾಸ ಕಂಡು ಹಿಡಿಯೋದೇ ಕಷ್ಟ ಎಂಬಷ್ಟು ಹೋಲಿಕೆ ಇರುವ ಅವಳಿ ಮಕ್ಕಳು ತುಂಬಿಕೊಂಡಿರುತ್ತವೆ.
Pಇಂಥಾ ಅಚ್ಚರಿಯನ್ನ ಬಚ್ಚಿಟ್ಟುಕೊಂಡಿರೋ ಕೋದಿನ್ನಿ ಕೋಳಿಕೋಡ್‌ನಿಂದ ಮೂವತೈದು ಕಿಲೋಮೀಟರ್ ದೂರದಲ್ಲಿದೆ. ಈಗೊಂದಷ್ಟು ತಲೆಮಾರುಗಳಿಂದಲೂ ಆ ಊರಿನಲ್ಲಿ ಅವಳಿ ಮಕ್ಕಳು ಜನಿಸುತ್ತಿವೆ. ಹುಡುಕಿದರೆ ಎರಡು ತಲೆಮಾರುಗಳಷ್ಟು ಹಿಂದಿನ ಅವಳಿಗಳೂ ಇಲ್ಲಿ ಸಿಗುತ್ತವೆ. ಈ ಬಗ್ಗೆ ೨೦೦೯ರಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಆಗ ಆ ಹಳ್ಳಿಯಲ್ಲಿ ೨೨೦ ಜೋಡಿ ಅವಳಿಗಳು ಮತ್ತು ಎರಡು ಜೊತೆ ತ್ರಿವಳಿಗಳಿರೋದು ಪತ್ತೆಯಾಗಿತ್ತು. ಈಗಲೂ ಕೋದಿನ್ನಿಯಲ್ಲಿ ಅವಳಿಗಳ ಕರಾಮತ್ತು ಅನೂಚಾನವಾಗಿ ಮುಂದುವರೆಯುತ್ತಲೇ ಇದೆ!
ದೆವ್ವ ಲಿಫ್ಟ್ ಕೇಳುತ್ತೆ!
ಭಾರತದಂಥಾ ಅಗಾದ ವಿಸ್ತಾರದ, ಅಗೋಚರ ರೀತಿ ರಿವಾಜುಗಳಿರೋ ದೇಶದಲ್ಲಿ ಅದಕ್ಕೆ ತಕ್ಕುದಾದ ಒಂದಷ್ಟು ನಂಬಿಕೆಗಳೂ ಬೆಸೆದುಕೊಂಡಿರುತ್ತವೆ. ಅದರಲ್ಲಿ ಒಂದಷ್ಟು ಮೂಢ ನಂಬಿಕೆಯ ಲಿಸ್ಟು ಸೇರಿಕೊಂಡು ಕಣ್ಮರೆಯಾಗಿವೆ ಅನ್ನಲಾಗುತ್ತೆ. ಆದರೆ ಆ ಲಿಸ್ಟಿನಲ್ಲಿರೋ ಎಲ್ಲ ಮೂಢ ನಂಬಿಕೆಗಳೂ ಸಂಪೂರ್ಣವಾಗಿ ನಾಮಾವಶೇಷ ಹೊಂದಿವೆ ಅನ್ನಲಾಗೋದಿಲ್ಲ. ಯಾಕೆಂದರೆ ಒಂದು ವೇಳೆ ಅಂಥವೆಲ್ಲ ಮರೆಯಾಗಿದ್ದೇ ಹೌದಾಗಿದ್ದರೆ ದೆವ್ವ ಭೂತಗಳೆಂಬ ವಿಲಕ್ಷಣ ನಂಬಿಕೆಗಳು ನಮ್ಮೆಲ್ಲರ ಜೀವನದ ಪಥದ ಇಕ್ಕೆಲದಲ್ಲಿ ಈ ಪಾಟಿ ಗಸ್ತು ಹೊಡೆಯುತ್ತಿರಲಿಲ್ಲ!
ಈಗಲೂ ನಮ್ಮಲ್ಲಿ ದೆವ್ವ ಭೂತಗಳ ಹಾಟ್ ಸ್ಪಾಟುಗಳಿದ್ದಾವೆ. ಅದೆಷ್ಟೋ ಕೋಟೆ ಕೊತ್ತಲಗಳು, ಕೆಲ ಪ್ರದೇಶಗಳ ಭೂತ ಬಾಧೆಯಿಂದ ಪಾಳು ಬಿದ್ದಿವೆ. ಇನ್ನೂ ಕೆಲ ಪ್ರದೇಶಗಳು ಆ ಭಯದ ನೆರಳಲ್ಲಿಯೇ ಇದ್ದಾವೆ. ಅಂಥಾ ಪ್ರದೇಶಗಳಲ್ಲಿ ದೆಹಲಿ ಕಂಟೋನ್ಮೆಂಟ್ ಏರಿಯಾ ಕೂಡಾ ಒಂದು. ಈ ಪ್ರದೇಶವನ್ನು ದೆಹಲಿ ಕ್ಯಾಂಟ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ನಿರಾಳವಾಗಿ ಮೈ ಚಾಚಿಕೊಂಡಂತಿರೋ ಒಂದು ರಸ್ತೆ ಇದೆ. ಇದು ಸಖಲ ಮಾಲೀನ್ಯಗಳಿಂದ ಗಬ್ಬೆದ್ದಿರೋ ದೆಹಲಿಯ ಅತೀ ಸ್ವಚ್ಛ ರಸ್ತೆ ಎಂದೂ ಖ್ಯಾತವಾಗಿದೆ. ಆದರೂ ಕೂಡಾ ಈ ರಸ್ತೆಯಲ್ಲಿ ಜನ ಭೀತಿಯಿಂದಲೇ ಸಂಚರಿಸುತ್ತಾರೆ. ರಾತ್ರಿ ಹೊತ್ತು ಅತ್ತ ಸುಳಿಯೋದೆಂದರೂ ಬೆಚ್ಚಿಬಿದ್ದು ಬೆವರಾಡುತ್ತಾರೆ.
ಆ ಭಯಕ್ಕೆ ಕಾರಣವಾಗಿರೋದು ಒಂದು ಹೆಣ್ಣು ದೆವ್ವ ಅಂದರೆ ನಂಬಲೇ ಬೇಕು. ಈ ರಸ್ತೆಯ ಸುತ್ತ ಈ ಭಾಗದಲ್ಲಿ ನಾನಾ ದಂತಕಥೆಗಳು ಹರಡಿಕೊಂಡಿವೆ. ಈ ರಸ್ತೆಯಲ್ಲಿ ಯಾರಾದರೂ ಬೈಕ್ ಸವಾರರು ರಾತ್ರಿ ಹೊತ್ತು ಸಂಚರಿಸಿದರೆ ಬಿಳಿ ಸೀರೆಯುಟ್ಟ ದೆವ್ವ ಪ್ರತ್ಯಕ್ಷವಾಗುತ್ತಂತೆ. ನಂತರ ಅದು ಡ್ರಾಪ್ ಕೇಳುತ್ತಂತೆ. ಒಂದು ವೇಳೆ ಡ್ರಾಪ್ ಕೊಡಲು ನಿರಾಕರಿಸಿ ಮುಂದುವರೆದರೆ ಆ ಸವಾರ ಎಷ್ಟು ವೇಗವಾಗಿ ಬೈಕ್ ಚಲಾಯಿಸಿದರೂ ಅದಕ್ಕಿಂತಲೂ ವೇಗವಾಗಿ ಸಾಗಿ ಬಂದು ಚಮಕ್ಕು ಕೊಟ್ಟು ಕಣ್ಮರೆಯಾಗುತ್ತದೆಯಂತೆ. ಇಂಥಾ ಕಥೆಗಳಿಂದಾಗಿ ಆ ರಸ್ತೆಯತ್ತ ರಾತ್ರಿ ಹೊತ್ತು ಹೊರಳುವ ಸಾಹಸವನ್ನು ಹೆಚ್ಚಿನವರು ಮಾಡೋದಿಲ್ಲ. ಸದ್ಯಕ್ಕೆ ಇದರ ಹಿಂದಿರೋ ವಾಸ್ತವ ಮತ್ತು ಸತ್ಯಾಸತ್ಯತೆಗಳು ಬಯಲಾಗಿಲ್ಲ.

ಪಾರಿವಾಳದ ಕಕ್ಕ
ಪಾರಿವಾಳಗಳು ಎಲ್ಲ ಕಾಲಮಾನದಲ್ಲಿಯೂ ಪರಿಚಿತವಾಗಿದ್ದ, ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಪರಿಚಿತ ಪಕ್ಷಿಗಳು. ಪಾರಿವಾಳ ಈವತ್ತಿಗೂ ಶಾಂತಿಯ ಸಂಕೇತವಾಗಿಯೇ ಬಿಂಬಿಸಿಕೊಂಡಿದೆ. ಕೊಂಚ ಜಾಗ ಸಿಕ್ಕರೆ ಮನುಷ್ಯರಿರೋ ವಾತಾವರಣದಲ್ಲಿಯೇ ಗೂಡು ಕಟ್ಟಿಕೊಂಡು ಬಿಡಾರ ಹೂಡುವ, ಅಲ್ಲಿಯೇ ಸಂತಾನಾಭಿವೃದ್ಧಿಯನ್ನೂ ನಡೆಸಿಬಿಡುವ ಪಾರಿವಾಳಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆಯ ವಾತಾವರಣದಲ್ಲಿ ಅವಿದ್ದರೆ ಖುಷಿಯೇ. ಆದ್ರೆ ಅವುಗಳ ಹಿಕ್ಕೆಯ ಕಾಟವನ್ನ ಮಾತ್ರ ಸಹಿಸೋಕಾಗೋದಿಲ್ಲ ಅನ್ನೋದು ಪಾರಿವಾಳಗಳ ಮೇಲಿರೋ ಕಾಮನ್ ಕಂಪ್ಲೇಂಟು!
ಆದ್ರೆ ಪಾರಿವಾಳಗಳ ಹಿಕ್ಕೆ, ಅರ್ಥಾತ್ ಕಕ್ಕ ನೀವೆಣಿಸಿರುವಷ್ಟು ನಿಕೃಷ್ಟವಲ್ಲ. ನಿಮ್ಮ ಕಣ್ಣಿಗೆ ಅಸಹ್ಯವಾಗಿ ಕಾಣಿಸೋ ಪಾರಿವಾಳದ ಹಿಕ್ಕೆಗೆ ಒಂದು ಕಾಲದಲ್ಲಿ ಅದೆಂಥಾ ಗೌರವ ಇತ್ತನ್ನೋದು ಗೊತ್ತಾದರೆ ಯಾರಿಗೇ ಆದ್ರೂ ಪಾಪಪ್ರಜ್ಞೆ ಕಾಡದಿರೋದಿಲ್ಲ. ಯಾಕಂದ್ರೆ ಹದಿನೆಂಟನೇ ಶತಮಾನದಲ್ಲಿ ಒಬ್ಬ ರಾಜ ಪಾರಿವಾಳದ ಕಕ್ಕವನ್ನು ಅಪಾರವಾಗಿ ಗೌರವಿಸಿದ್ದ. ಆತನಿಗೆ ಯಾವ ಪರಿ ಗೌರವ ಇತ್ತೆಂದರೆ, ಪಾರಿವಾಳದ ಹಿಕ್ಕೆಯನ್ನು ರಾಜ ಸಂಪತ್ತೆಂದು ಘೋಷಣೆ ಮಾಡಿ ಬಿಟ್ಟಿದ್ದ!
ಒಂದು ಸಂಸ್ಥಾನದ ರಾಜನೇ ಈ ಪರಿಯಾಗಿ ಗೌರವ ಕೊಡಬೇಕೆಂದರೆ ಪಾರಿವಾಳದ ಹಿಕ್ಕೆಗೆ ಎಂಥಾ ಪವರ್ ಇರಬೇಡ. ಹಾಗಾದ್ರೆ ಪಾರಿವಾಳಗಳ ಹಿಕ್ಕೆಯಲ್ಲಿ ಆ ಥರದ ಪವರ್ ಏನಿತ್ತು ಅನ್ನೋ ಪ್ರಶ್ನೆ ಮೂಡಿಕೊಳ್ಳುತ್ತೆ. ಈ ನಿಟ್ಟಿನಲ್ಲಿ ಹೇಳೋದಾದ್ರೆ ಪಾರಿವಾಳದ ಹಿಕ್ಕೆಗಳನ್ನು ಆ ಕಾಲದಲ್ಲಿ ಗನ್ ಪೌಡರ್ ಮಾಡಲು ಬಳಸುತ್ತಿದ್ದರಂತೆ. ಯುದ್ಧ ಕಾಲದಲ್ಲಿ ಅದರ ಅವಶ್ಯಕತೆ ತೀವ್ರವಾಗಿದ್ದರಿಂದ ಪಾರಿವಾಳದ ಹಿಕ್ಕೆಗಳಿಗೆ ಭಾರೀ ಬೇಡಿಕೆ ಬಂದಿತ್ತಂತೆ. ಶತ್ರು ಪಾಳೆಯದ ವಿರುದ್ಧ ಯುದ್ಧ ಸಾರಲು ಬೇಕಾದ ಐಟಮ್ಮಿನ ಕಚ್ಚಾ ವಸ್ತುವಾದ ಪಾರಿವಾಳದ ಹಿಕ್ಕೆಯನ್ನ ಆ ರಾಜ ರಾಜ ಸಂಪತ್ತೆಂದು ಘೋಷಣೆ ಮಾಡಿದ್ದನೆಂಬ ಉಲ್ಲೇಖವಿದೆ!
ಪಾರಿವಾಳಗಳು ಎಲ್ಲ ಕಾಲಮಾನದಲ್ಲಿಯೂ ಪರಿಚಿತವಾಗಿದ್ದ, ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಪರಿಚಿತ ಪಕ್ಷಿಗಳು. ಪಾರಿವಾಳ ಈವತ್ತಿಗೂ ಶಾಂತಿಯ ಸಂಕೇತವಾಗಿಯೇ ಬಿಂಬಿಸಿಕೊಂಡಿದೆ. ಕೊಂಚ ಜಾಗ ಸಿಕ್ಕರೆ ಮನುಷ್ಯರಿರೋ ವಾತಾವರಣದಲ್ಲಿಯೇ ಗೂಡು ಕಟ್ಟಿಕೊಂಡು ಬಿಡಾರ ಹೂಡುವ, ಅಲ್ಲಿಯೇ ಸಂತಾನಾಭಿ ಅಭಿವೃದ್ಧಿಯನ್ನೂ ನಡೆಸಿಬಿಡುವ ಪಾರಿವಾಳಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆಯ ವಾತಾವರಣದಲ್ಲಿ ಅವಿದ್ದರೆ ಖುಷಿಯೇ. ಆದ್ರೆ ಅವುಗಳ ಹಿಕ್ಕೆಯ ಕಾಟವನ್ನ ಮಾತ್ರ ಸಹಿಸೋಕಾಗೋದಿಲ್ಲ ಅನ್ನೋದು ಪಾರಿವಾಳಗಳ ಮೇಲಿರೋ ಕಾಮನ್ ಕಂಪ್ಲೇಂಟು!
ಆದ್ರೆ ಪಾರಿವಾಳಗಳ ಹಿಕ್ಕೆ, ಅರ್ಥಾತ್ ಕಕ್ಕ ನೀವೆಣಿಸಿರುವಷ್ಟು ನಿಕೃಷ್ಟವಲ್ಲ. ನಿಮ್ಮ ಕಣ್ಣಿಗೆ ಅಸಹ್ಯವಾಗಿ ಕಾಣಿಸೋ ಪಾರಿವಾಳದ ಹಿಕ್ಕೆಗೆ ಒಂದು ಕಾಲದಲ್ಲಿ ಅದೆಂಥಾ ಗೌರವ ಇತ್ತನ್ನೋದು ಗೊತ್ತಾದರೆ ಯಾರಿಗೇ ಆದ್ರೂ ಪಾಪಪ್ರಜ್ಞೆ ಕಾಡದಿರೋದಿಲ್ಲ. ಯಾಕಂದ್ರೆ ಹದಿನೆಂಟನೇ ಶತಮಾನದಲ್ಲಿ ಒಬ್ಬ ರಾಜ ಪಾರಿವಾಳದ ಕಕ್ಕವನ್ನು ಅಪಾರವಾಗಿ ಗೌರವಿಸಿದ್ದ. ಆತನಿಗೆ ಯಾವ ಪರಿ ಗೌರವ ಇತ್ತೆಂದರೆ, ಪಾರಿವಾಳದ ಹಿಕ್ಕೆಯನ್ನು ರಾಜ ಸಂಪತ್ತೆಂದು ಘೋಷಣೆ ಮಾಡಿ ಬಿಟ್ಟಿದ್ದ!
ಒಂದು ಸಂಸ್ಥಾನದ ರಾಜನೇ ಈ ಪರಿಯಾಗಿ ಗೌರವ ಕೊಡಬೇಕೆಂದರೆ ಪಾರಿವಾಳದ ಹಿಕ್ಕೆಗೆ ಎಂಥಾ ಪವರ್ ಇರಬೇಡ. ಹಾಗಾದ್ರೆ ಪಾರಿವಾಳಗಳ ಹಿಕ್ಕೆಯಲ್ಲಿ ಆ ಥರದ ಪವರ್ ಏನಿತ್ತು ಅನ್ನೋ ಪ್ರಶ್ನೆ ಮೂಡಿಕೊಳ್ಳುತ್ತೆ. ಈ ನಿಟ್ಟಿನಲ್ಲಿ ಹೇಳೋದಾದ್ರೆ ಪಾರಿವಾಳದ ಹಿಕ್ಕೆಗಳನ್ನು ಆ ಕಾಲದಲ್ಲಿ ಗನ್ ಪೌಡರ್ ಮಾಡಲು ಬಳಸುತ್ತಿದ್ದರಂತೆ. ಯುದ್ಧ ಕಾಲದಲ್ಲಿ ಅದರ ಅವಶ್ಯಕತೆ ತೀವ್ರವಾಗಿದ್ದರಿಂದ ಪಾರಿವಾಳದ ಹಿಕ್ಕೆಗಳಿಗೆ ಭಾರೀ ಬೇಡಿಕೆ ಬಂದಿತ್ತಂತೆ. ಶತ್ರು ಪಾಳೆಯದ ವಿರುದ್ಧ ಯುದ್ಧ ಸಾರಲು ಬೇಕಾದ ಐಟಮ್ಮಿನ ಕಚ್ಚಾ ವಸ್ತುವಾದ ಪಾರಿವಾಳದ ಹಿಕ್ಕೆಯನ್ನ ಆ ರಾಜ ರಾಜ ಸಂಪತ್ತೆಂದು ಘೋಷಣೆ ಮಾಡಿದ್ದನೆಂಬ ಉಲ್ಲೇಖವಿದೆ!
ಕಿವಿಯ ಕೌತುಕ
ಮನುಷ್ಯನ ಬೆಳವಣಿಗೆಗೆ ಒಂದು ವಯೋಮಿತಿ ಇರುತ್ತೆ. ಯೌವನದ ದಿನಗಳಲ್ಲಿಯೇ ಅದರ ಮಿತಿಯೂ ಕೂಡಾ ಮುಗಿದು ಹೋಗುತ್ತೆ. ನಮ್ಮ ಕಣ್ಣಿಗೆ ಕಾಣಿಸುವಂತೆಯೇ ಮೊಳಕಾಲೆತ್ತರವಿದ್ದ ಮಕ್ಕಳು ಆಕಾಶದೆತ್ತರ ಬೆಳೆಯುವಂತೆ ಭಾಸವಾಗುತ್ತೆ. ಆದರೆ ಇಪ್ಪತೈದರ ಆಸುಪಾಸಲ್ಲಿಯೇ ಎಲ್ಲರ ಬೆಳವಣಿಗೆಯೂ ಮುಗಿದು ಎಲ್ಲರ ದೇಹಕ್ಕೂ ಒಂದು ನಿರ್ಧಿಷ್ಟವಾದ ಆಕಾರ ಬಂದು ಬಿಡುತ್ತೆ. ಆದರೆ ಕಿವಿ ಮತ್ತು ಮೂಗುಗಳು ಮಾತ್ರ ಯಾವತ್ತಿಗೂ ಬೆಳವಣಿಗೆ ನಿಲ್ಲಿಸೋದಿಲ್ಲ ಅಂತಲೇ ಬಹುತೇಕರಿಗೆ ಅನ್ನಿಸುತ್ತೆ. ಅದಕ್ಕೆ ಪೂರಕವಾಗಿ ಹಿರಿಯರೆಲ್ಲ ಮೂಗು ಮತ್ತು ಕಿವಿಗಳು ತುಸು ಹೆಚ್ಚು ಗಾತ್ರದಲ್ಲಿರುವಂತೆಯೂ ಅನ್ನಿಸುತ್ತೆ.
ಈ ಹಿನ್ನೆಲೆಯಲ್ಲಿ ಕಿವಿ ಮತ್ತು ಮೂಗುಗಳು ಎಂದಿಗೂ ಬೆಳವಣಿಗೆ ನಿಲ್ಲಿಸೋದಿಲ್ಲ ಎಂಬಂಥ ನಂಬಿಕೆಯೂ ಬಹುತೇಕರಲ್ಲಿದೆ. ಹಾಗಾದ್ರೆ ಅದರಲ್ಲಿ ಎಷ್ಟು ಸತ್ಯವಿದೆ? ನಿಜಕ್ಕೂ ಮೂಗು ಮತ್ತು ಕಿವಿಗಳು ವಯಸ್ಸಾದಂತೆಲ್ಲ ಬೆಳೆಯುತ್ತಲೇ ಇರುತ್ತವಾ ಅನ್ನೋದಕ್ಕೆ ವೈದ್ಯ ವಿಜ್ಞಾನ ರೋಚಕ ಉತ್ತರವನ್ನೇ ನೀಡುತ್ತೆ. ಅದು ಕಿವಿ ಮತ್ತು ಮೂಗು ನಿಜಕ್ಕೂ ಬೆಳೆಯುತ್ತಲೇ ಇರೋದಿಲ್ಲ. ಬದಲಾಗಿ ಅದು ಗುರುತ್ವಾಕರ್ಷಣೆಯ ಪರಿಣಾಮ ಅನ್ನುತ್ತೆ. ಅರೇ ಗುರುತ್ವಾಕರ್ಷಣೆಗೂ ಕಿವಿ ದೊಡ್ಡದಾಗಿ ಬೆಳೆಯೋದಕ್ಕೂ ಎತ್ತಣಿಂದೆತ್ತಣ ಸಂಬಂಧ ಅನ್ನಿಸೋದು ಸಹಜವೇ. ಅದಕ್ಕೂ ಕೂಡಾ ವೈದ್ಯ ವಿಜ್ಞಾನದಲ್ಲಿ ಪರಿಹಾರವಿದೆ.
ಕಿವಿ ಮತ್ತು ಮೂಗುಗಳು ಬೆಳವಣಿಗೆಯಾಗೋದು ಕಾರ್ಟಿಲೇಜ್‌ನಿಂದ. ಆ ಕಾರ್ಟಿಲೇಜ್‌ಗಳು ಒಂದು ಹಂತದಲ್ಲಿ ಬೆಳವಣಿಗೆ ನಿಲ್ಲಿಸುತ್ತವೆ. ಆದರೆ ಕಾರ್ಟಿಲೇಜ್ ವಯಸ್ಸಾದಂತೆ ಒಡೆಯುತ್ತೆ. ಆ ಪ್ರಕ್ರಿಯೆಯೊಂದಿಗೆ ಗ್ರಾವಿಟಿ ಕೆಲಸ ಮಾಡಿ ಕಿವಿ ಮತ್ತು ಮೂಗು ದೊಡ್ಡದಾದಂತೆ ಭಾಸವಾಗುತ್ತೆ. ವಯಸ್ಸಾದಂತೆಲ್ಲ ಮುಖದಲ್ಲಿನ ಮಾಂಸ ಕಸುವು ಕಳೆದುಕೊಂಡು ಜೋಲು ಬೀಳುತ್ತೆ. ಆಗ ಚಿಕ್ಕದಾದ ಮುಖದಲ್ಲಿ ಮೂಗು ಮತ್ತು ಕಿವಿಗಳು ಎದ್ದು ಕಾಣುತ್ತವೆ. ಅದುವೇ ಕಿವಿ ಹಾಗೂ ಮೂಗುಗಳು ಬೆಳೆಯುತ್ತಲೇ ಇರುತ್ತವೆಂಬ ಭ್ರಮ ಮೂಡಿಸುತ್ತದೆಯಂತೆ!
ಚಿಪ್ಪುಹಂದಿಯ ಪವರ್!
ಮನುಷ್ಯ ಈ ಭೂಮಂಡಲದಲ್ಲಿಯೇ ವಿಷಕ್ಕಿಂತಲೂ ಮಾರಕವಾದ ಸ್ವಾರ್ಥ ತುಂಬಿಕೊಂಡಿರೋ ಪ್ರಾಣಿ. ತೀರಾ ಹಸಿವಾಗಬೇಕೆಂದೇನೂ ಇಲ್ಲ; ಬರೀ ಬಾಯಿ ರುಚಿಗೆ, ಮೋಜಿಗೂ ಕೂಡಾ ತನ್ನ ಸುತ್ತಲಿರೋ ಪಾಪದ ಪ್ರಾಣಿಗಳನ್ನ ಕೊಂದು ಕೆಡವುತ್ತಾನೆ. ಅವುಗಳ ಆವಾಸ ಸ್ಥಾನಗಳನ್ನೇ ಸರ್ವನಾಶ ಮಾಡಿ ತಾನು ಮಾತ್ರ ಸುಖ ಸುಪ್ಪತ್ತಿಗೆಯ ಮಹಲು ಮಾಡಿಕೊಂಡು ಮೆರೆಯುತ್ತಾನೆ. ಇಂಥಾ ಸ್ವಾರ್ಥಿಗಳ ಲೋಕದಲ್ಲಿ ಪ್ರಾಣಿ ಪಕ್ಷಿಗಳಿಗೆ ಪ್ರಕೃತಿಯೇ ಒಂದಷ್ಟು ರಕ್ಷಾ ಕವಚಗಳನ್ನು ಕೊಡ ಮಾಡಿದೆ. ಅದಿಲ್ಲದೇ ಹೋಗಿದ್ದರೆ ಸೂಕ್ಷ್ಮಾಣು ಜೀವಿಗಳು ಮಾತ್ರವೇ ಉಳಿದುಕೊಳ್ಳುತ್ತಿದ್ದವೋ ಏನೋ…
ಪ್ರಕೃತಿ ಪ್ರತೀ ಜೀವಿಗಳಿಗೂ ಕೂಡಾ ಅಪಾಯಗಳಿಂದ ಪಾರಾಗೋ ಸೂಕ್ಷ್ಮತೆಯನ್ನ ದಯಪಾಲಿಸಿದೆ. ಕೆಲ ಜೀವಿಗಳಿಗೆ ಪ್ರಕೃತಿಯ ದಯೆಯಿಂದಲೇ ರಕ್ಷಾ ಕವಚಗಳೇ ಸಿಕ್ಕಿವೆ. ಆ ಸಾಲಿನಲ್ಲಿ ಉದಾಹರಿಸಬಹುದಾದ ಪ್ರಾಣಿ ಚಿಪ್ಪುಹಂದಿ. ಮೇಲು ನೋಟಕ್ಕೆ ಇದೊಂದು ಮಂದ ಚಲನೆಯ ಪ್ರಾಣಿ. ಅದರ ದೇಹರಚನೆಯೇ ಒಂದು ವಿಸ್ಮಯದಂತೆ ಕಾಣಿಸುತ್ತೆ. ತನಗೆ ಸಣ್ಣ ಅಪಾಯವಾಗುತ್ತೆ ಅನ್ನೋ ಸುಳಿವು ಸಿಕ್ಕಾಕ್ಷಣವೇ ಅದು ಚಿಪ್ಪಿನೊಳಗೆ ಸೇರಿಕೊಂಡು ಉಂಡೆಯಂತಾಗುತ್ತೆ. ಆ ನಂತರ ಅದರ ಮೇಲೆ ಪ್ರಹಾರ ನಡೆಸಿದರೂ ಅದಕ್ಕೇನೂ ಆಗೋದಿಲ್ಲ. ಅಷ್ಟು ಗಟ್ಟಿಯಾಗಿರುತ್ತೆ ಆ ಚಿಪ್ಪಿನ ಕವಚ.
ಆ ಚಿಪ್ಪು ಎಷ್ಟು ಗಟ್ಟಿಯಾಗಿರುತ್ತೆ ಅನ್ನೋದನ್ನ ಊಹಿಸಲೂ ಸಾಧ್ಯವಿಲ್ಲ. ಆದರೆ ಟೆಕ್ಸಾಸ್‌ನಲ್ಲಿ ನಡೆದೊಂದು ಘಟನೆ ಮಾತ್ರ ಅದರ ಸಾಮರ್ಥ್ಯಕ್ಕೆ ಕೈಗನ್ನಡಿಯಂತಿದೆ. ಅಲ್ಲಿನ ರೈತನೊಬ್ಬನ ಹೊಲಕ್ಕೆ ಚಿಪ್ಪು ಹಂದಿ ಆಗಾಗ ಬರುತ್ತಿತ್ತಂತೆ. ಕಡೆಗೂ ಬೇಟೆಗಾರನನ್ನ ಕರೆಸಿ ಅದಕ್ಕೊಂದು ಗತಿ ಕಾಣಿಸೋ ನಿರ್ಧಾರಕ್ಕೆ ಆ ರೈತ ಬಂದಿದ್ದ. ಹಾಗೆ ಬಂದು ಹೊಂಚು ಹಾಕಿ ಕುಳಿತ ಬೇಟೆಗಾರ ಕೋವಿಯಿಂದ ಶೂಟ್ ಮಾಡಿದ್ದ. ಆದರೆ ಆ ಬುಲೆಟ್ಟು ಹಂದಿಯ ಚಿಪ್ಪಿಗೆ ಬಡಿದು ವಾಪಾಸು ಚಿಮ್ಮಿ ಬೇಟೆಗಾರನ ದವಡೆಯನ್ನ ಛಿದ್ರಗೊಳಿಸಿತ್ತಂತೆ. ಆ ನಂತರ ಅದೆಷ್ಟೋ ಕಾಲ ಆಸ್ಪತ್ರೆಯಲ್ಲಿದ್ದು ಆ ಬೇಟೆಗಾರ ಚೇತರಿಸಿಕೊಂಡಿದ್ದನಂತೆ!