ಒಟಿಟಿ ವೇದಿಕೆಗಳು ಕನ್ನಡ ಚಿತ್ರರಂಗಕ್ಕೆ ಮುುಕ್ತವಾಗಿಲ್ಲ ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಆರೋಪಿಸಿದ್ದಾರೆ. ಗೋವಾದಲ್ಲಿ ಆಯೋಜಿಸಲಾಗಿರುವ 54ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಅವರು, ಒಟಿಟಿಗಳ ತಾರತಮ್ಯ ನೀತಿಯನ್ನು ಖಂಡಿಸಿದರು.

ಒಟಿಟಿ ವೇದಿಕೆಗಳು ಕನ್ನಡ ಚಿತ್ರರಂಗಕ್ಕೆ ಮುಕ್ತವಾಗಿಲ್ಲ. ಇದೊಂದು ತುಂಬ ಕೆಟ್ಟ ಸಂಕೇತವಾಗಿದೆ. ಕನ್ನಡದಲ್ಲಿ ಚಂದಾದಾರರು ಇಲ್ಲ. ಈ ಕುರಿತು ನೋಡುತ್ತೇವೆ ಎನ್ನುತ್ತಿವೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಕನ್ನಡದಲ್ಲಿ ಎರಡು ನಿರ್ಮಾಣ ಸಂಸ್ಥೆಗಳು ಸಕ್ರಿಯವಾಗಿದ್ದವು. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋ ಮತ್ತು ನನ್ನ ರಿಷಬ್ ಶೆಟ್ಟಿ ಫಿಲ್ಮ್ ನಿರಂತರಾಗಿ ಕೆಲಸ ಮಾಡುತ್ತಿದ್ದವು. ಇವುಗಳ ಹೊರತಾಗಿಯೂ ಕೆಲವು ನಿರ್ಮಾಣ ಸಂಸ್ಥೆಗಳು ಚಿತ್ರಗಳನ್ನು ತಯಾರಿಸುತ್ತಿದ್ದವು. ನಾವು ನಿರಂತರವಾಗಿ ಫಿಲ್ಮ್ ಫೆಸ್ಟಿವಲ್ ಮಾಡುತ್ತಿದ್ದೇವೆ. ಆದರೂ, ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ರಿಷಬ್ ಶೆಟ್ಟಿ ಆರೋಪಿಸಿದರು.

ಇದೇ ವೇಳೆ, ಐಎಫ್‌ಎಫ್ಐ ಮತ್ತು ಅದರ ಪ್ರಾಯೋಜಕರಿಗೆ ಮನವಿ ಮಾಡಿಕೊಂಡು ರಿಷಬ್ ಶೆಟ್ಟಿ ಅವರು ಕನ್ನಡ ಚಿತ್ರಗಳಿಗೆ ಮನ್ನಣೆ ನೀಡಿ ಎಂದು ಹೇಳಿದರು. ಒಟಿಟಿಗಳ ತಾರತಮ್ಯ ನೀತಿಯಲ್ಲಿ ಹಿನ್ನೆಲೆಯಲ್ಲಿ ನಾನು ಐಎಫ್ಎಫ್ಐ ಮತ್ತು ಅದರ ಪ್ರಾಯೋಜಕರಿಗೆ ನಮ್ಮ ಚಲನಚಿತ್ರಗಳಿಗೆ ಮನ್ನಣೆ ನೀಡುವಂತೆ ವಿನಂತಿಸಲು ಬಯಸುತ್ತೇನೆ. ಥಿಯೇಟರ್‌ಗಳಲ್ಲಿ ಕಡಿಮೆ ಮಾನ್ಯತೆ ಹೊಂದಿರುವ ಚಲನಚಿತ್ರಗಳು ಸಹ ಸ್ವಲ್ಪ ಮನ್ನಣೆಯನ್ನು ಪಡೆಯಬೇಕು ಮತ್ತು ಅವುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತೆಗೆದುಕೊಳ್ಳಬೇಕು ಎಂದು ರಿಷಬ್ ಶೆಟ್ಟಿ ಹೇಳಿದರು.





