ಬಹುನಿರೀಕ್ಷಿತ ಸೈಮಾ ಹಬ್ಬಕ್ಕೆ ತೆರೆಬಿದ್ದಿದೆ. ದಕ್ಷಿಣ ಭಾರತೀಯ ಚಿತ್ರರಂಗ ಒಟ್ಟಾಗಿ ಸೇರಿ ಸಂಭ್ರಮಿಸುವ ಹಬ್ಬ ಇದಾಗಿದ್ದು, ಈ ಭಾರಿ ದುಬೈನ ವಲ್ರ್ಡ್ ಟ್ರೇಡ್ ಸೆಂಟರ್‍ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 15 ಮತ್ತು 16ರಂದು ಹಮ್ಮಿಕೊಂಡಿರುವ ಸೈಮಾ ಸಂಭ್ರಮದಲ್ಲಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಸಮಾಗಮಗೊಂಡಿದೆ. ಜಗಮಗಿಸೋ ವೇದಿಕೆಯಲ್ಲಿ ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ತಾರೆಯರು- ತಂತ್ರಜ್ಞರು ಮಿಂಚು ಹರಿಸಿದರು. ಅವರಲ್ಲಿ ಹಲವರು ಗೆದ್ದು ಬೀಗಿ ಗೋಲ್ಡನ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ. ಇದು 11ನೇ ವರ್ಷದ ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವಾಗಿದ್ದು, 2022ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಹಾಗಾದ್ರೆ ಯಾರೆಲ್ಲಾ ಪ್ರಶಸ್ತಿಗೆ ಭಾಜನರಾದರು ಎಂಬುದರ ಪಟ್ಟಿಯನ್ನ ನೋಡೋದಾದರೆ

ಈ ಭಾರಿ ಸ್ಯಾಂಡಲ್‍ವುಡ್‍ನ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಭಾಜನರಾಗಿದ್ದಾರೆ. ಕೆಜಿಎಫ್-2 ಚಿತ್ರದ ನಟನೆಗಾಗಿ ಇವರಿಬ್ಬರಿಗೆ ಬೆಸ್ಟ್ ಆ್ಯಕ್ಟರ್ & ಆ್ಯಕ್ಟ್ರೆಸ್ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಶ್ರೀನಿಧಿ ಶೆಟ್ಟಿ ಸೈಮಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು. ಆದರೆ, ಯಶ್‍ಭಾಯ್ ಸೈಮಾ ಫಂಕ್ಷನ್‍ಗೆ ಗೈರಾಗಿದ್ದರು. ಅದಕ್ಕೆ ಕಾರಣ ಏನೆಂಬುದು ತಿಳಿದಿಲ್ಲವಾದರೂ, ಗೌರಿ-ಗಣೇಶ ಹಬ್ಬಕ್ಕೆ ಯಶ್-19 ಸಿನಿಮಾ ಅನೌನ್ಸ್ ಮಾಡುವ ಸುದ್ದಿಯಿದೆ. ಬಹುಷಃ ಈ ಚಿತ್ರದ ಅಧಿಕೃತ ಘೋಷಣೆಯ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ರಾಕಿಭಾಯ್ ಸೈಮಾ ಪ್ರೋಗ್ರಾಂನ ಮಿಸ್ ಮಾಡಿದರು ಅನ್ಸುತ್ತೆ.

ಇನ್ನೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಸಪ್ತಮಿಗೌಡಗೆ ಸೈಮಾ ಕ್ರಿಟಿಕ್ ವಿಭಾಗದಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಬ್ಲ್ಯಾಕ್ ಸ್ಯೂಟ್‍ನಲ್ಲಿ ಸೈಮಾ ವೇದಿಕೆಗೆ ಕಿಚ್ಚು ಹಚ್ಚಿದ ಶೆಟ್ರು ಗೋಲ್ಡನ್ ಬ್ಯೂಟಿ ಕೈಹಿಡಿದರು. ವೈಟ್ ಗೌನ್‍ನಲ್ಲಿ ನಯಾ ಕಳೆಹೊತ್ತು ಬಂದ ಸಪ್ತಮಿ ಸೈಮಾ ಬೆಸ್ಟ್ ಕ್ರಿಟಿಕ್ ಆ್ಯಕ್ಟ್ರೆಸ್ ಅವಾರ್ಡ್ ಕೈಲಿಡಿದು ಸಂಭ್ರಮಿಸಿದರು.

ಸೈಮಾ 2023 ಪ್ರಶಸ್ತಿ ಪುರಸ್ಕೃತರು
ಅತ್ಯುತ್ತಮ ನಟ – ಯಶ್ (ಚಿತ್ರ: ಕೆಜಿಎಫ್ – ಚಾಪ್ಟರ್ 2)
ಅತ್ಯುತ್ತಮ ನಟಿ – ಶ್ರೀನಿಧಿ ಶೆಟ್ಟಿ (ಚಿತ್ರ: ಕೆಜಿಎಫ್ – ಚಾಪ್ಟರ್ 2)
ಅತ್ಯುತ್ತಮ ಛಾಯಾಗ್ರಹಣ – ಭುವನ್ ಗೌಡ ಚಿತ್ರ- ಕೆಜಿಎಫ್ ಚಾಪ್ಟರ್-2
ಅತ್ಯುತ್ತಮ ನಿರ್ದೇಶಕ – ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) -ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) – ಸಪ್ತಮಿ ಗೌಡ (ಚಿತ್ರ: ಕಾಂತಾರ)

ಅತ್ಯುತ್ತಮ ಸಂಗೀತ ನಿರ್ದೇಶನ – ಅಜನೀಶ್ ಲೋಕನಾಥ್ (ಚಿತ್ರ: ಕಾಂತಾರ)

ಅತ್ಯುತ್ತಮ ಗಾಯಕ – ವಿಜಯ್ ಪ್ರಕಾಶ್ (ಹಾಡು: ಸಿಂಗಾರ ಸಿರಿಯೇ) (ಚಿತ್ರ: ಕಾಂತಾರ)
ಅತ್ಯುತ್ತಮ ಗೀತರಚನೆಕಾರ – ಪ್ರಮೋದ್ ಮರವಂತೆ (ಹಾಡು: ಸಿಂಗಾರ ಸಿರಿಯೇ) (ಚಿತ್ರ: ಕಾಂತಾರ)
ಅತ್ಯುತ್ತಮ ಹಾಸ್ಯ ನಟ – ಪ್ರಕಾಶ್ ತುಮಿನಾಡ್ (ಚಿತ್ರ: ಕಾಂತಾರ)
ಅತ್ಯುತ್ತಮ ಖಳ ನಟ – ಅಚ್ಯುತ್ ಕುಮಾರ್ (ಚಿತ್ರ: ಕಾಂತಾರ)
ವಿಶೇಷ ಮೆಚ್ಚುಗೆ ಪ್ರಶಸ್ತಿ – ಮುಕೇಶ್ ಲಕ್ಷ್ಮಣ್ (ಚಿತ್ರ: ಕಾಂತಾರ)

ವಿಶೇಷ ಮೆಚ್ಚುಗೆ ಪ್ರಶಸ್ತಿ – ಪಾಥ್ ಬ್ರೇಕಿಂಗ್ ಸ್ಟೋರಿ – ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)
ವಿಶೇಷ ಮೆಚ್ಚುಗೆ ಪ್ರಶಸ್ತಿ – ಅತ್ಯುತ್ತಮ ನಟ – ರಕ್ಷಿತ್ ಶೆಟ್ಟಿ (ಚಿತ್ರ: 777 ಚಾರ್ಲಿ)
ಅತ್ಯುತ್ತಮ ಚಿತ್ರ – 777 ಚಾರ್ಲಿ (ನಿರ್ಮಾಣ: ಪರಂವಃ ಸ್ಟುಡಿಯೋಸ್)
ಅತ್ಯುತ್ತಮ ಪೋಷಕ ನಟ – ದಿಗಂತ್ ಮಂಚಾಲೆ (ಚಿತ್ರ: ಗಾಳಿಪಟ 2)

ಅತ್ಯುತ್ತಮ ಪೋಷಕ ನಟಿ – ಶುಭಾ ರಕ್ಷಾ (ಚಿತ್ರ: ಹೋಮ್ ಮಿನಿಸ್ಟರ್)
ಅತ್ಯುತ್ತಮ ಗಾಯಕಿ – ಸುನಿಧಿ ಚೌಹಾಣ್ (ಹಾಡು- ರಾ ರಾ ರಕ್ಕಮ್ಮ) (ಚಿತ್ರ: ವಿಕ್ರಾಂತ್ ರೋಣ)
ಅತ್ಯುತ್ತಮ ಉದಯೋನ್ಮುಖ ನಟಿ – ನೀತಾ ಅಶೋಕ್ (ಚಿತ್ರ: ವಿಕ್ರಾಂತ್ ರೋಣ)
ಅತ್ಯುತ್ತಮ ಉದಯೋನ್ಮುಖ ನಟ – ಪೃಥ್ವಿ ಶಾಮನೂರು (ಚಿತ್ರ: ಪದವಿ ಪೂರ್ವ)
ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕರು – ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ (ಚಿತ್ರ: ಡೊಳ್ಳು)
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕರು – ಸಾಗರ್ ಪುರಾಣಿಕ್ (ಚಿತ್ರ: ಡೊಳ್ಳು)






