‘ಅಧ್ಯಕ್ಷ’ ಸಿನಿಮಾದಲ್ಲಿ ನಟ ಶರಣ್ ಮತ್ತು ಚಿಕ್ಕಣ್ಣ ಕಟ್ಟಿದ್ದ ‘ಚಿ. ತು. ಯುವಕರ ಸಂಘ’ದ ಬಗ್ಗೆ ಸಿನಿಮಾ ನೋಡಿದವರಿಗೆ ಗೊತ್ತಿರುತ್ತದೆ. ಇದೀಗ ಅದೇ ‘ಚಿ. ತು. ಯುವಕರ ಸಂಘ’ ಹೆಸರಿಟ್ಟುಕೊಂಡು, ‘ಅಧ್ಯಕ್ಷ’ ಫ್ಲೇವರ್ ನಲ್ಲಿ ಪಕ್ಕಾ ಹಳ್ಳಿ ನಾಟಿ ಸ್ಟೈಲ್ ನಲ್ಲಿ ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಪ್ಯಾಕೇಜ್ ರೆಡಿಯಾಗಿದೆ.
ಇತ್ತೀಚೆಗಷ್ಟೇ ರಿಲೀಸ್ ಆಗಿರುವ ‘ಚಿ. ತು. ಯುವಕರ ಸಂಘ’ ಟೀಸರ್ ಯುಟ್ಯೂಬ್ ನಲ್ಲಿ 5 ಲಕ್ಷ ವೀವ್ಸ್ ಜೊತೆಗೆ ಅತ್ಯುತ್ತಮ ಕಮೆಂಟ್ ಗಳನ್ನ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದಷ್ಟು ಭರವಸೆ ಮೂಡಿಸುತ್ತಿರುವ ‘ಚಿ. ತು. ಯುವಕರ ಸಂಘ’ ಸಿನಿಮಾವನ್ನು ಶಿವು ರಾಮನಗರ ನಿರ್ದೇಶನ ಮಾಡಿದ್ದು, ‘ಕಮರೊಟ್ಟು ಚೆಕ್ ಪೋಸ್ಟ್’ ಖ್ಯಾತಿಯ ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ. ‘ಐ ಲವ್ ಯೂ’ ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ.
‘ಚಿ. ತು. ಯುವಕರ ಸಂಘ’ ಸಿನಿಮಾದಲ್ಲಿ ನಾಯಕನಾಗಿ ಸನತ್ ಕಾಣಿಸಿಕೊಂಡಿದ್ದು, ವರ್ಣಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಸಿದ್ದಾರೆ. ತುಕಾಲಿ ಸಂತು,ಮಹಂತೇಶ್, ಸಲ್ಮಾನ್, ಕುರಿ ಪ್ರತಾಪ್, ಗಿರಿ, ಬಲರಾಜವಾಡಿ, ಬಿರಾದಾರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

ಟೀಸರ್ ನಲ್ಲಿ ಈ ಎಲ್ಲಾ ಪಾತ್ರದಾರಿಗಳನ್ನ ಜೋಗಿ ಪ್ರೇಮ್ ಪರಿಚಯಿಸಿದ್ದು, ಇತ್ತೀಚೆಗೆ ಟೀಸರ್ ನೋಡಿದ ನಟ ಶರಣ್ ‘ಅಧ್ಯಕ್ಷ’ ಫ್ಲೇವರ್ ಇರುವ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸದ್ಯ ಟೀಸರ್ ನಿಂದ ಸದ್ದು ಸುದ್ದಿ ಮಾಡುತ್ತಿರುವ ‘ಚಿ. ತು. ಯುವಕರ ಸಂಘ’ ಸಿನಿಮಾದ ಹಾಡುಗಳು ನವೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.





