ಭಾನುವಾರ, ಜುಲೈ 26, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಕನ್ನಡ ರಾಜ್ಯೋತ್ಸವ’ದಂದು ರಾಕಿ ಉತ್ಸವ! ಕೆಜಿಎಫ್-2 ರಿರಿಲೀಸ್!

Vishalakshi Pby Vishalakshi P
31/10/2023
in Majja Special
Reading Time: 1 min read
`ಕನ್ನಡ ರಾಜ್ಯೋತ್ಸವ’ದಂದು ರಾಕಿ ಉತ್ಸವ! ಕೆಜಿಎಫ್-2 ರಿರಿಲೀಸ್!

ಕಾಯುವಿಕೆಗೆ ಬ್ರೇಕ್ ಬಿದ್ದಿಲ್ಲ..ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡ್ತಾರೋ ಗೊತ್ತಿಲ್ಲ..ಎದುರು ಸಿಕ್ಕಗಾಲೆಲ್ಲ ತೂರಿ ಬರುವ ಪ್ರಶ್ನೆಗೆ ಸಿದ್ಧ ಉತ್ತರ ಜಸ್ಟ್ ವೇಟ್ ಅಂಡ್ ವಾಚ್..ಕೆಜಿಎಫ್ ಎರಡನೇ ಅಧ್ಯಾಯದ ದರ್ಶನವಾಗಿ ಒಂದೂವರೆ ವರ್ಷ ಕಳೆದು ಹೋಗ್ಬಿಟ್ಟಿದೆ.  ಒಂದೂವರೆ ವರ್ಷ ಉರುಳಿದ್ರೂ ರಾಕಿಭಾಯ್ ಸೈಲೆಂಟ್..ಫ್ಯಾನ್ಸ್ ಫೂಲ್ ವೈಲೆಂಟ್..ಬಾಸ್ ಎಷ್ಟು ದಿನ ಕಾಯೋದು..? ಏನಾದ್ರೂ ಸಣ್ಣ ಅಪ್ ಡೇಟ್ ಆದ್ರೂ ಕೊಡಿ..ಹೂ ಹೂ..ಅಣ್ತಮ್ಮಾ ತುಟಿಕ್ ಪಿಟಿಕ್ ಅನ್ನುತ್ತಿಲ್ಲ..

ಯಶ್ 19 ಜಪ ತಪ ಮುಂದುವರೆದಿದೆ. ಸೆಲ್ಫ್ ಮೇಡ್ ಷಹಜಾನ್ ಗುಟ್ಟಾಗಿ ಹೊಸ ಸಿನಿಮಾ ತಯಾರಿಯಲಿದ್ದಾರೆ. ಆಫ್ ಕೋರ್ಸ್ ಮಾಡಿಕೊಳ್ಳಲೇಬೇಕು..ಬಟ್ ಇಷ್ಟು ತಡನಾ? ರಾಕಿಭಾಯ್ ತಲೆಯಲ್ಲಿ ಓಡ್ತಿರೋವುದು ಅಂತಹದಾದ್ರೂ ಏನು? ಗೊತ್ತಿಲ್ಲ. ಯಶ್ ಗುರಿ ಜಗದಗಲದಷ್ಟಿದೆ. ಪ್ಯಾನ್ ಇಂಡಿಯಾ ಗೆದ್ದಿರುವ ಪಡುವರಹಳ್ಳಿ ಹೈದನಿಗೆ ಪ್ಯಾನ್ ವರ್ಲ್ಡ್ ನೆಕ್ಸ್ಟ್ ಟಾರ್ಗೆಟ್..ಆ ಗುರಿ ಮುಟ್ಬೇಕು ಅಂದ್ರೆ ಹೆಚ್ಚಿಗೆ ಸಮಯ ಬೇಕು..ನಿಮ್ಮ ಕಾಯುವಿಕೆಗೆ..ನಿರೀಕ್ಷೆಗೆ ತಕ್ಕದಾದ ಬೊಂಬಾಟ್ ಬಾಡೂಟವನ್ನೇ ಅಣ್ತಮ್ಮಾ ಬಡಿಸ್ತಾರೆ. ಕಥೆ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಹಗಲು ರಾತ್ರಿ ಮುಂದಿನ ಸಿನಿಮಾ ಕೃಷಿಯಲ್ಲಿ ನಿರತರಾಗಿದ್ದಾರೆ.


ಯಶ್ ಜನ್ಮದಿನಕ್ಕೆ ಬಹಿರಂಗ ಪತ್ರ ಬರೆದು ತಮ್ಮ ಜಗದಗಲದ ನಿರೀಕ್ಷೆ ಈಡೇರಿಕೆಗಾಗಿ ಸಮಯಬೇಕೆಂದು ಅಭಿಮಾನಿಗಳಲ್ಲಿ ಸ್ವೀಟ್ ಮನವಿ ಮಾಡಿಕೊಂಡಿದ್ದರು. ಆದಷ್ಟು ಬೇಗ ನಿಮ್ಮ ಮುಂದೆ ಇರ್ತಿನಿ ಅಂತಾನೂ ಪ್ರಾಮಿಸ್ ಮಾಡಿದ್ದರು. ಗೌರಿ ಗಣೇಶ ದಸರಾ ಹೀಗೆ ಹಬ್ಬ ಹರಿದಿನಗಳು ಬಂದು ಹೋದ್ವು..ಯಶ್ ಮಾತ್ರ ದಿವ್ಯಮೌನ..ಇನ್ಯಾವಾಗ ಯಶ್19 ಅನ್ನುವಾಗಲೇ ಕನ್ನಡಾಂಬೆಯ ದಿನದಂದೇ ರಾಕಿಭಾಯ್ ಹೊಸ ಹೆಜ್ಜೆ ಮೊಳಗಲಿದೆ ಎಂಬ ಸುದ್ದಿ ಹರಿದಾಡ್ತಿದೆ. ಇದು ಸತ್ಯವೋ ಮಿಥ್ಯವೋ ಗೊತ್ತಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ಅಣ್ತಮ್ಮನ ಮುಂದಿನ ಸಿನಿಮಾ ಘೋಷಣೆಯಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಆ ದಿನ ರಾಕಿ ಎಂಟ್ರಿ ಖಚಿತ..


ಯಶ್ 19 ಸಿನಿಮಾ ಕನ್ನಡ ದಿನದಂದು ರಿವೀಲ್ ಆಗಲಿದೆ. ಈ ದಿನವೇ ತಮ್ಮ ಜಗದಗಲದ ಕನಸ್ಸನ್ನು ಜಗತ್ತಿನ ಮುಂದೆ ತೆರೆದಿಡಲಿದ್ದಾರೆ ಎಂಬ ನಿರೀಕ್ಷೆ ಗರಿಗೆದರಿದೆ. ಸೆಲ್ಫ್ ಮೇಡ್ ಷಹಜಾನ ಕನ್ನಡ ರಾಜ್ಯೋತ್ಸವದಂದೇ ಹೊಸ ಸಿನಿಮಾ ಘೋಷಿಸಲಿದ್ದಾರೆ ಎಂದುಕೊಳ್ಳೋಣಾ. ಅದು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ ಸುಮ್ಮನಾಗುವ ಮಾತಾ..ನೋ ನೋ..ಮೀಡಿಯಾಗಳೆಲ್ಲವನ್ನೂ ಕರೆದು ತನ್ನ ಮುಂದಿನ ಗುರಿ ಇದೆ ಅಂತಾ ಸಾರಿ ಸಾರಿ ಹೇಳ್ತಾರೆ. ಆ ರೀತಿಯ ಬಜ್ ಸದ್ಯಕ್ಕಂತೂ ಕ್ರಿಯೇಟ್ ಆಗಿಲ್ಲ. ಹಾಗಿದ್ರೆ ಕನ್ನಡದ ಕಂದ ರಾಕಿಭಾಯ್ ಕನ್ನಡ ರಾಜ್ಯೋತ್ಸವದಂದು ಎಂಟ್ರಿ ಕೊಡ್ತಿರುವ ಕಥಾನಕ ಬೇರೆ..

ರಾಜ್ಯೋತ್ಸದವ ವಿಶೇಷವಾಗಿ ನವೆಂಬರ್ 1, ಅಂದರೆ ನಾಳೆ ಕೆಜಿಎಫ್-2 ಸಿನಿಮಾ ಪ್ರದರ್ಶನವಾಗಲಿದೆ. ಕೆಲ ಚಿತ್ರಮಂದಿರದಲ್ಲಿ ತೂಫಾನ್ ಎಬ್ಬಿಸಲಿದ್ದಾರೆ ರಾಕಿ..ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನರಾಚಿ ಸಾಮ್ರಾಜ್ಯ ತೆರೆದುಕೊಳ್ಳಲಿದೆ. ಬೆಂಗಳೂರಿನ ಸ್ವಾಗತ್ ಪೂರ್ಣಿಮಾ, ಶ್ರೀಬಾಲಾಜಿ ಥಿಯೇಟರ್ ಸೇರಿದಂತೆ ಹಲವೆಡೆ ಕೋಲರ್ ಗೋಲ್ಡ್ ಫೀಲ್ಡ್ ಬಿಡುಗಡೆಯಾಗ್ತಿದೆ. ಇನ್ನೇನೂ ಬೇಕು ರಾಕಿಭಕ್ತಗಣ ಸಂಭ್ರಮಿಸೋದಿಕ್ಕೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಫ್ಯಾನ್ಸ್ ಮುಗಿಬಿದ್ದು ಟಿಕೆಟ್ ಖರೀದಿಸ್ತಿದ್ದಾರೆ.


ಯಶ್ ಹಾಗೂ ಪ್ರಶಾಂತ್ ನೀಲ್ ಸಂಗಮದಲ್ಲಿ ಮೂಡಿಬಂದಿದೆ ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸ್ ಕೊಳ್ಳೆ ಹೊಡೆದು ನಯಾ ದಾಖಲೆ ಸೃಷ್ಟಿಸಿತ್ತು. 1200 ಕೋಟಿ ಕಲೆಕ್ಷನ್ ಮಾಡಿ ಹೊಂಬಾಳೆ ಒಡೆಯ ವಿಜಯ್ ಕಿರಗಂದೂರು ಜೇಬು ತುಂಬಿಸಿದ್ದ ಈ ಚಿತ್ರ ಕನ್ನಡದ ಮಾಸ್ಟರ್ ಪೀಸ್ ಎಂಬ ಖ್ಯಾತಿ ಪಡೆದಿದೆ. ಇದೇ ಚಿತ್ರವಾಗಿ ಕನ್ನಡ ರಾಜ್ಯೋತ್ಸದವ ಸ್ಪೆಷಲ್ ಆಗಿ ಕನ್ನಡಿಗರ ಮುಂದೆ ಬರ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ನ.3ಕ್ಕೆ ತೆರೆಗೆ ಬರ್ತಿದೆ ಮಹಾಲಕ್ಷ್ಮಿ ಕಂಬ್ಯಾಕ್ ಚಿತ್ರ!

ನ.3ಕ್ಕೆ ತೆರೆಗೆ ಬರ್ತಿದೆ ಮಹಾಲಕ್ಷ್ಮಿ ಕಂಬ್ಯಾಕ್ ಚಿತ್ರ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.