ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ ‘ಆಡೇ ನಮ್ ಗಾಡ್’ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಒಂದೊಳ್ಳೆ ಸಂದೇಶದೊಂದಿಗೆ ಹಾಸ್ಯಮಯವಾಗಿ ಕಥೆ ಹೆಣೆದಿದ್ದಾರೆ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್. ಪ್ರೊ. ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ‘ಆಡೇ ನಮ್ ಗಾಡ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
‘ರಾಮ ರಾಮ ರೇ’ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ್ ‘ಆಡೇ ನಮ್ ಗಾಡ್’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ‘ಆಡೇ ನಮ್ ಗಾಡ್’ ಇವತ್ತಿನ ಟ್ರೆಂಡ್ ಗೆ ಸರಿಯಾಗುವಂತಹ ಸಿನಿಮಾ ಇದು. ಇವತ್ತಿನ ಆಡಿಯನ್ಸ್ ಗೆ ಕಥೆ ಇಷ್ಟವಾಗುತ್ತದೆ. ಗಂಭೀರವಾದ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳಿದ್ದೇವೆ. ಹೊಸ ಹುಡುಗರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇವರು ಏನು ಮಾಡಿದ್ದಾರೆ ಎಂಬ ಕುತೂಹಲಕ್ಕಾಗಿ ಜನ ಬಂದು ನೋಡಬೇಕು ಎಂಬುದು ನಿರ್ದೇಶಕ ಪಿ. ಎಚ್. ವಿಶ್ವನಾಥ್ ಮಾತು.

ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಬಿ.ಬಿ.ಆರ್ ಫಿಲಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ನಿರ್ಮಾಣ ಮಾಡಿದ್ದಾರೆ.
ಸದ್ಯ ಟ್ರೇಲರ್ ಮೂಲಕ ಹೊರಬಂದಿರುವ ‘ಆಡೇ ನಮ್ ಗಾಡ್’ ಸಿನಿಮಾ ಇದೇ ಅ. 6ರಂದು ತೆರೆಗೆ ಬರುತ್ತಿದೆ.





