ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಮಲಾರ್ ಬ್ಯೂಟಿ ಸಾಯಿ ಪಲ್ಲವಿ ಮತ್ತೆ ಒಂದಾಗುತ್ತಿದ್ದಾರೆ. ಲವ್ಸ್ಟೋರಿ ಚಿತ್ರದಲ್ಲಿ ಮೊದಲ ಭಾರಿಗೆ ಒಂದಾಗಿ ಮೋಡಿ ಮಾಡಿದ್ದ ಈ ಜೋಡಿ ಮತ್ತೊಮ್ಮೆ ಜೊತೆಯಾಗಲು ರೆಡಿಯಾಗಿದೆ. ಪ್ರೇಮಂ ಹಾಗೂ ಕಾರ್ತಿಕೇಯ ಸೀರಿಸ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಿರ್ದೇಶಕ ಚಂದು ಮೊಂಡೇಟಿ ನಿರ್ದೇಶನದ ಚಿತ್ರದಲ್ಲಿ `ಲವ್ಸ್ಟೋರಿ’ ಕಪಲ್ಸ್ ಜೊತೆಯಾಗುತ್ತಿದ್ದಾರೆ.

ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದು, ಬನ್ನಿ ವಾಸ್ ಅವರು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗೆ ನಾಯಕಿ ಸಾಯಿಪಲ್ಲವಿ ಆನ್ಬೋರ್ಡ್ ಆಗಿರುವ ಕುರಿತು ಗೀತಾ ಆಟ್ರ್ಸ್ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದೆ. ನಿರ್ಮಾಪಕ ಅಲ್ಲು ಅರವಿಂದ್ ಅವರು ಸಾಯಿಪಲ್ಲವಿಗೆ ಚೆಕ್ ನೀಡುತ್ತಿರುವ ಫೋಟೋ ಜೊತೆಗೆ ಫಿಲ್ಮ್ ಟೀಮ್ ಒಟ್ಟಿಗೆ ಸೇರಿ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸರ್ಪೈಸ್ ಕೊಟ್ಟಿದೆ.

ಅಂದ್ಹಾಗೇ, ಚೈ ಹಾಗೂ ಸಾಯಿ ಕಾಂಬಿನೇಷನ್ನಲ್ಲಿ ಬರಲಿರೋ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತಯ್ಯಾರಾಗಲಿದೆ. ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ನಿರ್ಮಿಸುತ್ತಿದ್ದು, ಇತ್ತೀಚೆಗೆ ನಾಯಕ ಚೈತನ್ಯ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಆಂಧ್ರಪ್ರದೇಶದ ಶ್ರೀಕಾಕುಳಂಗೆ ಭೇಟಿಕೊಟ್ಟಿದ್ದರು. ಅಲ್ಲಿ ಮೀನುಗಾರರ ಕುಟುಂಬಗಳ ಜೊತೆ ಕಾಲಕಳೆದು, ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಇದೀಗ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ನಾಯಕಿ ರೌಡಿಬೇಬಿನಾ ತಮ್ಮ ತಂಡಕ್ಕೆ ಬರಮಾಡಿಕೊಂಡಿದ್ದಾರೆ. ನಟಿ ಸಾಯಿಪಲ್ಲವಿ ಚೈತನ್ಯ ಜೊತೆ ಸಿನಿಮಾ ಒಪ್ಪಿಕೊಂಡಿರುವ ಸುದ್ದಿ ಘೋಷಣೆಯಾಗಿದ್ದೇ ತಡ ಅವರ ಅಭಿಮಾನಿಗಳ ಜೊತೆ ಸಿನಿಮಾ ಮಂದಿಯೂ ದಿಲ್ ಖುಷ್ ಆಗಿದ್ದಾರೆ.
Here's the update that y'all have been waiting for ❤️🔥💥
The widely adored and loved lady @Sai_Pallavi92 joins the voyage of #NC23 🌊⛵#ShejoinstheNC23Voyage@chay_akkineni #SaiPallavi @chandoomondeti #BunnyVas @GeethaArts #KarthikTheda pic.twitter.com/6c53tgzdtS
— Sai Pallavi FC™ (@SaipallaviFC) September 19, 2023
ಹೌದು, ಗಾರ್ಗಿ ಸಿನಿಮಾ ನಂತರ ಪ್ರೇಮಂ ಚೆಲುವೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಶಿವಕಾರ್ತಿಕೇಯನ್ 21 ಸಿನಿಮಾಗೆ ಸಹಿ ಹಾಕಿದ್ದಾರೆನ್ನುವ ಸುದ್ದಿ ಹೊರತುಪಡಿಸಿ ಕಳೆದೊಂದು ವರ್ಷದಿಂದ ರೌಡಿಬೇಬಿ ಸದ್ದು ಮಾಡಲೇಯಿಲ್ಲ. ಹೀಗಾಗಿ, ಗಾಸಿಪ್ ಅಂಗಳದಲ್ಲಿ ಗಾರ್ಗಿ ಸುತ್ತ ನೂರೆಂಟು ಅಂತೆಕಂತೆ ಸಮಾಚಾರಗಳು ಹುಟ್ಟಿಕೊಂಡಿದ್ವು. ಮಲಾರ್ ಬ್ಯೂಟಿ ಇನ್ಮೇಲೆ ಮಾಯಲೋಕದ ಕಡೆ ಮುಖ ಮಾಡಲ್ಲ, ಫಿದಾ ಬೆಡಗಿ ಇನ್ಮೇಲೆ ಮುಖಕ್ಕೆ ಬಣ್ಣ ಹಚ್ಚಲ್ಲ ಅಂತೆಲ್ಲಾ ಸುದ್ದಿಯಾಗಿತ್ತು. ಬಣ್ಣದ ಲೋಕಕ್ಕೆ ಪ್ರೇಮಂ ಸುಂದರಿ ಗುಡ್ ಬೈ ಹೇಳಿದ್ದಾರೆ. ಹುಟ್ಟೂರಲ್ಲಿ ಆಸ್ಪತ್ರೆ ನಿರ್ಮಿಸಿ ಡಾಕ್ಟರ್ ವೃತ್ತಿಯನ್ನ ಮುಂದುವರೆಸುತ್ತಾರೆನ್ನುವ ನ್ಯೂಸ್ ಅವರ ಅಭಿಮಾನಿಗಳನ್ನ ಹಾಗೂ ಕೆಲ ನಿರ್ಮಾಪಕರನ್ನ ಚಿಂತೆಗೀಡು ಮಾಡಿತ್ತು. ಫೈನಲೀ, ಇದೆಲ್ಲ ಸುಳ್ಳು ಅನ್ನೋ ಸತ್ಯ ಹೊರಬಿದ್ದಿದೆ. ಚೈತನ್ಯ ನಟನೆಯ 23ನೇ ಚಿತ್ರಕ್ಕೆ ನಾಯಕಿಯಾಗಿ ದಿಬ್ಬಣ ಹೊರಡಲು ರೆಡಿಯಾಗಿರುವ ಸತ್ಯ ಕಣ್ಮುಂದಿದೆ.

ಸಾಯಿ ಪಲ್ಲವಿ ಸಹಜ ಸೌಂದರ್ಯಕ್ಕೆ, ನೈಜ ಅಭಿನಯಕ್ಕೆ ಹೆಸರುವಾಸಿಯಾದವರು. ತಮ್ಮ ಅಮೋಘ ನೃತ್ಯದಿಂದ, ಕ್ಯೂಟ್ ಸ್ಮೈಲ್ನಿಂದ ಸಿನಿಮಾಪ್ರೇಮಿಗಳನ್ನ ಕಟ್ಟಿಹಾಕಿದವರು. ಅಂದ್ಹಾಗೇ, ನಟಿ ಸಾಯಿಪಲ್ಲವಿ ಚಿತ್ರರಂಗಕ್ಕೆ ಬಂದು ಹೆಚ್ಚುಕಮ್ಮಿ ಒಂದು ದಶಕ ಕಳೀತಾಯಿದೆ. ಈ ಒಂದು ದಶಕದಲ್ಲಿ ಒಂದಿಡಿ ಜೀವಮಾನಕ್ಕಾಗುವಷ್ಟು ಜನಪ್ರಿಯತೆನಾ ಗಳಿಸಿಕೊಂಡಿದ್ದಾರೆ. ಬೆಲೆಯೇ ಕಟ್ಟಲಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ತೆಲುಗು, ತಮಿಳು, ಮಲೆಯಾಳಂನಲ್ಲಿ ಕೆಲ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಕಡಿಮೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂತಹ ಪಾತ್ರಗಳಿಗೆ ಜೀವತುಂಬಿದ್ದಾರೆ. ಗಾರ್ಗಿ ನಂತರ ಸ್ಮಾಲ್ ಬ್ರೇಕ್ ಪಡೆದು ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಿದ ರೌಡಿಬೇಬಿ, ಅಮರನಾಥ ಯಾತ್ರೆ ಮುಗಿಸಿಕೊಂಡು ಹುಟ್ಟೂರಿಗೆ ವಾಪಾಸ್ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮುಖಕ್ಕೆ ಮೇಕಪ್ ಹಾಕ್ಕೊಂಡು ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ.





