ಬಾಲಿವುಡ್ ಸ್ವೀಟೆಸ್ಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಹೊಸಬಾಳಿಗೆ ಹೆಜ್ಜೆ ಹಾಕಿ ಐದು ವರ್ಷ ಕಳೆದಿವೆ. ಹೀಗ್ಯಾಕೆ ಈ ವಿಷ್ಯ ಅಂತೀರಾ? ಈ ಜೋಡಿಯ ಮದುವೆ ಸಮಾರಂಭದ ಅಪರೂಪದ ಕ್ಷಣಗಳು ಈಗ ರಿವೀಲ್ ಆಗಿವೆ. ಕಾಫಿ ವಿತ್ ಕರಣ್ ಶೋನಲ್ಲಿ ಡಿಪ್ಪಿ ರಣ್ವೀರ್ ಮದುವೆಯ ಬಂಧದ ಲವ್ಲಿ ಮೂವೆಂಟ್ ತೆರೆದಿಡಲಾಗಿದ್ದು, ಆ ವಿಡಿಯೋ ತುಣುಕು ಸೋಷಿಯಲ್ ಜಗತ್ತಿನಲ್ಲಿ ಹಲ್ ಚಲ್ ಎಬ್ಬಿಸಿದೆ.
ದೀಪಿಕಾ ಹಾಗೂ ರಣವೀರ್ ಗಂಡ ಹೆಂಡ್ತಿ ಅನ್ನೋದಕ್ಕಿಂತ ಸ್ನೇಹಿತರಾಗಿಯೇ ಕಾಣಿಸಿಕೊಳ್ಳುವ ಅಪರೂಪದ ಜೋಡಿ..ಇಟಲಿಯಲ್ಲಿ ಧಾಮ್ ಧೂಮ್ ಅಂತಾ ಹಸೆಮಣೆ ಏರಿದ್ದ ಈ ಕ್ಯೂಟ್ ಕಪಲ್ ಸಂಬಂಧದ ಬಗ್ಗೆ ದೀಪಿಕಾ ತಾಯಿಗೆ ಅಷ್ಟೊಂದು ಒಲವಿರಲಿಲ್ಲವಂತೆ. ಆದ್ರೆ ನಿಧಾನವಾಗಿ ಆ ಕುಟುಂಬಕ್ಕೆ ಹತ್ತಿರವಾದ್ರು. ತಮ್ಮದು ಬೋರಿಂಗ್ ಫ್ಯಾಮಿಲಿ.. ನಮ್ಮ ಕುಟುಂಬಕ್ಕೆ ಉತ್ಸಾಹ ತುಂಬಿದ್ದೇ ಅಳಿಯನ ಕುಟುಂಬ ಅಂತಾರೇ ದೀಪಿಕಾ ತಂದೆ ಖ್ಯಾತ ಬ್ಯಾಡ್ಮಿಟನ್ ಪ್ರಕಾಶ್ ಪಡುಕೋಣೆ..

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನ ಅಪರೂಪದ ಕ್ಷಣ..ಆ ಕ್ಷಣವನ್ನೂ ದೀಪಿಕಾ ರಣ್ವೀರ್ ತಮ್ಮ ಕನಸ್ಸಿನಂತೇ ಸಂಭ್ರಮಿಸಿದ್ದಾರೆ,. ನಾ ಭೂತೋ ನಾ ಭವಿಷ್ಯತಿ ಎಂಬ ಹಾಗೇ ಏಳು ಹೆಜ್ಜೆ ಇಟ್ಟಿದ್ದಾರೆ. ವೃತ್ತಿ ಬದುಕಿನಲ್ಲಿಯೂ ಬ್ಯುಸಿಯಾಗಿರುವ ಈ ಜೋಡಿ ಮತ್ತೊಮ್ಮೆ ತೆರೆಮೇಲೆ ಮೋಡಿ ಮಾಡಲಿ ಎನ್ನುತ್ತಿದ್ದಾರೆ ಫ್ಯಾನ್ಸ್.





