ಸೋಮವಾರ, ಜುಲೈ 20, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕನ್ನಡ ರಾಜ್ಯೋತ್ಸವಕ್ಕೆ ಧಮಾಕೇಧಾರ್ ಸಮಾಚಾರ ಕೊಡಲಿದ್ದಾರಾ ರಾಕಿಭಾಯ್?

Vishalakshi Pby Vishalakshi P
27/10/2023
in Majja Special
Reading Time: 1 min read
ಕನ್ನಡ ರಾಜ್ಯೋತ್ಸವಕ್ಕೆ  ಧಮಾಕೇಧಾರ್ ಸಮಾಚಾರ ಕೊಡಲಿದ್ದಾರಾ ರಾಕಿಭಾಯ್?

Soon..Very Soon..Sooner…ಹೀಗೆನ್ನೂತಲ್ಲೇ ಭರ್ತಿ ಒಂದೂವರೆ ವರ್ಷಗಳ ಕಾಲ ಕಲಾರಸಿರಕನ್ನು ಒಂಟಿಕಾಲಿನಲ್ಲಿ ನಿಲ್ಲಿಸಿರುವ ಸೆಲ್ಫ್ ಮೇಡ್ ಸೂಪರ್ ಸ್ಟಾರ್ ಅದಿನೆಂಥಾ ಸಿನಿಮಾ ಅನೌನ್ಸ್ ಮಾಡಬಹುದು ಅಂತ ಕುತೂಹಲದಿಂದಲೇ ಎದುರುನೋಡ್ತಿದೆ. ಇಲ್ಲಿವರೆಗೆ ಯಶ್ 19 ಬಗ್ಗೆ ಬರೀ ಅಂತೇ ಕಂತೇ ಸುದ್ದಿಗಳು ಹರಿದಾಡ್ತಿವೆ. ಆದ್ರೀಗ ಹೊರಬಿದ್ದಿರುವ ತಾಜಾ ಸಮಾಚಾರ ಟ್ವಿಟರ್ ಪ್ರಪಂಚದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಸರದಾರ ಕನ್ನಡ ಕಲಾರಸಿಕರಿಗೆ ಕನ್ನಡಮ್ಮನ ದಿನದಂದೇ ಸಿಹಿ ಸುದ್ದಿ ಹಂಚಲಿದ್ದಾರೆ ಎಂಬ ವಿಷಯ ಹರಿದಾಡ್ತಿದೆ.

ಯಶ್-19′ ಸಿನಿಮಾ ಬಗ್ಗೆ ಧಮಾಕೇದಾರ್ ಖಬರ್ ರಿವೀಲ್ ಆಗಿದೆ. ಹಾಗಾದ್ರೆ ಸಿನಿಮಾ ಯಾವಾಗ ಶುರು ? ಈ ಕುತೂಹಲದ ಪ್ರಶ್ನೆಗೆ ಕೆಜಿಎಫ್-2 ಮೊದಲ ವರ್ಷದ ಆ್ಯನಿವರ್ಸರಿ ಇಂದ ಹಿಡಿದು ಇಲ್ಲಿತನಕ ಉತ್ತರ ಸಿಕ್ಕಿಲ್ಲ. ಯುಗಾದಿ, ವರಮಹಾಲಕ್ಷ್ಮಿ, ಗೌರಿ ಗಣೇಶ, ದಸರಾ ಹೀಗೆ ಮೂರು ಮೂರು ಹಬ್ಬಗಳು ಮುಗಿದವು. ಆದರೆ, `ಯಶ್-19′ ಯಾವಾಗ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಈಗ ಕನ್ನಡ ರಾಜ್ಯೋತ್ಸವಕ್ಕೆ ಸರ್ಪೈಸ್ ಕೊಡಬಹುದು? ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಬಹುದೆನ್ನುವ ನಿರೀಕ್ಷೆಯಂತೂ ಎಲ್ಲರಲ್ಲೂ ಇದೆ.

`ಯಶ್-19′ ಸಿನಿಮಾಗೆ ಕನ್ನಡದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುವ ಬಗ್ಗೆ ಸುದ್ದಿಯಾಗಿತ್ತು. ಈಗಲೂ ಈ ಸುದ್ದಿ ಚಾಲ್ತಿಯಲ್ಲಿದೆ. ಇದಕ್ಕೀಗ ಅಪ್ ಡೇಟ್ ಎನ್ನುವಂತೆ ಮಗದೊಂದು ಬ್ಲಾಕ್ ಬಸ್ಟರ್ ಮ್ಯಾಟರ್ ಹೊರಬಿದ್ದಿದೆ. ಕೆವಿಎನ್ ಜೊತೆ ಕೆಜಿಎಫ್ ಕಿಂಗ್ ಕೈ ಜೋಡಿಸಿದ್ದು, ನಟನೆಯ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡುತ್ತಿದ್ದಾರಂತೆ. ಸಹ ನಿರ್ಮಾಪಕನಾಗಿ ತಮ್ಮ ಅಪ್ ಕಮ್ಮಿಂಗ್  ಪ್ರಾಜೆಕ್ಟ್ ಗೆ ಬಂಡವಾಳ ಸುರಿಯಲು ಮುಂದಾಗಿದ್ದಾರಂತೆ. ಹೀಗೊಂದು ಸುದ್ದಿ ಸಿನಿದುನಿಯಾದಲ್ಲಿ ಚಾಯ್ ಪೇ ಚರ್ಚೆಯಾಗಿದೆ.

ನ್ಯಾಷನಲ್ ಹೀರೋ ರಾಕಿಗೆ, ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಗೀತು ಮೋಹನ್ ದಾಸ್`ಯಶ್-19′ ಆ್ಯಕ್ಷನ್ ಕಟ್ ಹೇಳ್ತಾರೆನ್ನುವ ಸುದ್ದಿ ಸೌತ್ ಅಂಗಳದೆಲೆಲ್ಲಾ ಸುತ್ತಾಡಿ ಈಗ ಪ್ಯಾನ್ ವರ್ಲ್ಡ್ ತಲುಪಿದೆ. ನಿರೀಕ್ಷೆ ಆಕಾಶ ಮುಟ್ಟಿದ್ದು, ಮುಗಿಲು ಕೂಡ ರಾಕಿಂಗ್ ಪ್ರಾಜೆಕ್ಟ್ ನ ಎದುರುನೋಡ್ತಿದೆ. ಕನ್ನಡ ರಾಜ್ಯೋತ್ಸವಕ್ಕೆ ಯಶ್ ಹೊಸ ತಮ್ಮ ಜಗದಗಲದ ಕನಸ್ಸನ್ನು ತೆರೆದಿಡಲಿದ್ದಾರೆ ಎನ್ನಲಾಗ್ತಿದೆ. ಅದಕ್ಕಾಗಿ ರಾಕಿಭಾಯ್ ರೂಪಾಂತರಗೊಂಡಿರುವ ಕುರುಹು ಕಾಣ್ತಿದೆ. ಮೊನ್ನೆ ದಸರಾ ಹಬ್ಬದ ಅಂಗವಾಗಿ ಪತ್ನಿ ಪಕ್ಕ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದ ಅಣ್ತಮ್ಮಾ ಸಣ್ಣಗೆ ಆದಂತೆ ಕಾಣಿಸ್ತಿದ್ದಾರೆ. ಒಂದ್ ವೇಳೆ ರಾಜ್ಯೋತ್ಸವಕ್ಕೆ ರಾಕಿ ಧಮಾಕೇಧಾರ್ ಸಮಾಚಾರ ಕೊಟ್ರೆ ಆ ದಿನವೇ ಟೈಟಲ್ ಹಾಗೂ ಟೀಸರ್ ಎರಡನ್ನು ಪ್ರೇಕ್ಷಕ ಪ್ರಭುವಿಗೆ ಉಣಬಡಿಸ್ತಾರಾ ಅಥವಾ ಟೈಟಲ್ ಮೊದ್ಲೂ ಆ ನಂತ್ರ ಟೀಸರ್ ಬಿಡ್ತಾರಾ ಎಲ್ಲದಕ್ಕೂ ಯಶ್ ಅವರೇ ಉತ್ತರಿಸಬೇಕಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
`ಸಪ್ತ ಸಾಗರದಾಚೆ ಎಲ್ಲೋ’ ಸೈಡ್- ಬಿ ಟೀಸರ್ ಔಟ್! ನವೆಂಬರ್ 17ಕ್ಕೆ ಸಿನಿಮಾ ರಿಲೀಸ್

`ಸಪ್ತ ಸಾಗರದಾಚೆ ಎಲ್ಲೋ' ಸೈಡ್- ಬಿ ಟೀಸರ್ ಔಟ್! ನವೆಂಬರ್ 17ಕ್ಕೆ ಸಿನಿಮಾ ರಿಲೀಸ್

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.