ಹೆಡ್ಡಿಂಗ್ ನೋಡಿದ್ಮೇಲೆ ಕನ್‍ಫ್ಯೂಶನ್ ಶುರುವಾಗುತ್ತೆ. ಶೆಟ್ರು ಕಾಂತಾರ ಪ್ರೀಕ್ವೆಲ್‍ನ ಪಕ್ಕಕ್ಕಿಟ್ಟುಬಿಟ್ಟರಾ? ಹೀಗೊಂದು ಸಂಶಯವೂ ಮೂಡುತ್ತೆ. ಅಟ್ ದಿ ಸೇಮ್ ಟೈಮ್ `ಆದಿ ಶಂಕರಾಚಾರ್ಯರ’ ಅವತಾರವೆತ್ತಲಿದ್ದಾರೆನ್ನುವ ಕಥನ ಕುತೂಹಲ ಕೆರಳಿಸಿತ್ತೆ. ಡಿವೈನ್ ಸ್ಟಾರ್ ಭಕ್ತರು ಮಾತ್ರವಲ್ಲ ಶಂಕರಾಚಾರ್ಯರ ಆರಾಧಕರು ಸೇರಿ ಸಂಭ್ರಮಿಸುವಂತೆ ಮಾಡುತ್ತೆ. ಅಷ್ಟಕ್ಕೂ, ಈ ಅಚ್ಚರಿಯ ಸುದ್ದಿ ಹಿಂದಿನ ಅಸಲಿಯತ್ತೇನು? ಎಲ್ಲಿಗೆ ಬಂತು ಕಾಂತಾರ ಪ್ರೀಕ್ವೆಲ್? ಆ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ

ಕನ್ನಡಿಗರು ಮಾತ್ರವಲ್ಲ ಪರಭಾಷಿಗರು ಹಾಗೂ ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಎದುರುನೋಡ್ತಿರುವ ಸಿನಿಮಾಗಳ ಪೈಕಿ `ಕಾಂತಾರ-2′ ಕೂಡ ಒಂದು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಲಿರುವ ಈ ಚಿತ್ರಕ್ಕಾಗಿ ಆಲ್ ಓವರ್ ಇಂಡಿಯಾದ ಸಿನಿಮಾ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಕಾಂತಾರ ಪ್ರೀಕ್ವೆಲ್ ಕಥೆಗಾಗಿ ಕಣ್ಣರಳಿಸಿದ್ದಾರೆ. ಕಾಡುಬೆಟ್ಟು ಶಿವಪ್ಪನ ಲುಕ್ಕು-ಗೆಟಪ್ಪನ್ನ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಹೀಗಿರುವಾಗಲೇ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ `ಆದಿ ಶಂಕರಾಚಾರ್ಯರ’ ಅವತಾರವೆತ್ತಲ್ಲಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ. ಮುಂಬೈ ಅಂಗಳದಲ್ಲಿ ಈ ಬಗ್ಗೆ ಜೋರು ಚರ್ಚೆಯಾಗ್ತಿದೆ.

ಹಾಗಾದ್ರೆ? ಕಾಂತಾರ ಪಾರ್ಟ್-2 ಕಥೆ ಏನು? ಈ ಸಿನಿಮಾ ಸದ್ಯಕಿಲ್ವಾ? ಟೇಕಾಫ್ ಆಗ್ತಿಲ್ಲವಾ? ಓ ಅದಕ್ಕೇನಾ ಒಂದು ವರ್ಷವಾದರೂ ಅನೌನ್ಸ್ ಮಾಡದೇ ಇರೋದು? ಅಲ್ಲಾ, ಮೊನ್ ಮೊನ್ನೆ ಶೆಟ್ರು ಹೇಳಿದ್ರು ಸ್ಟೋರಿ ಎಲ್ಲಾ ರೆಡಿಯಿದೆ ಇನ್ನೇನು ಶೂಟಿಂಗ್ ಹೋಗ್ಬೇಕು ಅಂತ. ನೀವು ನೋಡಿದ್ರೆ ಡಿವೈನ್ ಸ್ಟಾರ್ `ಆದಿ ಶಂಕರಾಚಾರ್ಯ’ರ ಅವತಾರವೆತ್ತಲ್ಲಿದ್ದಾರೆ ಎನ್ನುವ ಸುದ್ದಿ ಹೇಳ್ತಿದ್ರಿ? ಹೀಗೆ ನಮಗೆ ಮರುಪ್ರಶ್ನೆ ಹಾಕೋದು ಸಹಜ. ಅದೆಲ್ಲದಕ್ಕೂ ಉತ್ತರ ಕೊಡಬೇಕು ಅಂದರೆ ಅಸಲಿಯತ್ತನ್ನ ಹರವಿಡಬೇಕು. `ಆದಿ ಶಂಕರಾಚಾರ್ಯ’ರ ಜೀವನಗಾಥೆಯನ್ನ ಬೆಳ್ಳಿತೆರೆಗೆ ತರಲು ಹೊರಟಿರುವ ಬಾಲಿವುಡ್ ನಿರ್ದೇಶಕರನ್ನ, ಹಿಂದೊಮ್ಮೆ ನಮ್ಮ ಶೆಟ್ರು ಭೇಟಿಯಾಗಿದ್ದರು ಎನ್ನುವ ಸುದ್ದಿಯನ್ನ ನಿಮ್ಮೆಲ್ಲರಿಗೂ ತಿಳಿಸಬೇಕು.
ಹೌದು, ಕಳೆದ ಕೆಲ ತಿಂಗಳ ಹಿಂದೆ ನಮ್ಮ ಶೆಟ್ರು ಮುಂಬೈಗೆ ಹೋಗಿದ್ದರು. ಅಲ್ಲಿ ಬಾಲಿವುಡ್‍ನ ದಿ ಗ್ರೇಟ್ ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಅವ್ರನ್ನ ಭೇಟಿ ಮಾಡಿ ಬಂದಿದ್ದರು. ಅವತ್ತೇ ಮುಂಬೈ ಪಾಪರಾಜಿಗಳು ಶೆಟ್ರ ಫೋಟೋ, ವಿಡಿಯೋ ಸೆರೆಹಿಡಿದು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಅಂದಿನಿಂದ ಸೌತ್-ನಾರ್ತ್ ಅಂಗಳದ ತುಂಬೆಲ್ಲಾ ಗೋವಾರಿಕರ್ ಹಾಗೂ ಡಿವೈನ್ ಸ್ಟಾರ್ ಜುಗಲ್ ಬಂಧಿಯದ್ದೇ ಸದ್ದುಸುದ್ದಿ. ಆ ಸುದ್ದಿಗೀಗ ಪುಷ್ಟಿ ಸಿಕ್ಕಂತಾಗಿದೆ, ಜನಪ್ರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದು `ಆದಿ ಗುರು ಶಂಕರಾಚಾರ್ಯರ’ ಕುರಿತಾದ ಚಿತ್ರ ಎಂಬುದೇ ವಿಶೇಷ.
ಲಗಾನ್, ಸ್ವದೇಶ್, ಜೋದಾ ಅಕ್ಬರ್, ಮೊಹೆಂಜೋದಾರೋ, ಪಾಣಿಪತ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನ ಭಾರತೀಯ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿರುವ ನಿರ್ದೇಶಕ ಅಶುತೋಷ್ ಗೋವಾರಿಕರ್, ಈಗ `ಆದಿ ಗುರು ಶಂಕರಾಚಾರ್ಯರ’ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ `ಶಂಕರ್’ ಅಂತ ಹೆಸರಿಟ್ಟು ಅಧಿಕೃತವಾಗಿ ಸಿನಿಮಾ ಘೋಷಿಸಿರುವ ಗೋವಾರಿಕರ್, ಶಂಕರಾಚಾರ್ಯರ ಜೀವನ ಮತ್ತು ಲೋಕಜ್ಞಾನವನ್ನು ಸಿನಿಮೀಯ ನಿರೂಪಣೆ ಮೂಲಕ ಇಡೀ ಜಗತ್ತಿಗೆ ತೋರಿಸುವುದಕ್ಕೆ ಸಜ್ಜಾಗಿದ್ದಾರೆ. ಇವತ್ತಿನ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ `ಶಂಕರ್’ ಚಿತ್ರ ಅದ್ದೂರಿಯಾಗಿ ಮೂಡಿಬರಲಿದ್ದು. ಆಚಾರ್ಯ ಶಂಕರ್ ಸ್ಯಾನ್ಸ್ ಕ್ರಿಟ್ ಏಕ್ತಾ ನ್ಯಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಶುತೋಷ್ ಗೋವಾರಿಕರ್ ಪ್ರೊಡಕ್ಷನ್ ಹೌಸ್ ಈ ಸಿನಿಮಾವನ್ನ ತೆರೆಗೆ ತರಲಿದೆ.
ಹಾಗಾದ್ರೆ, ಶಂಕರಾಚಾರ್ಯರ ಪಾತ್ರವನ್ನ ಮಾಡ್ತಿರುವುದು ನಮ್ಮ ಡಿವೈನ್ ಸ್ಟಾರಾ? ಹೀಗೊಂದು ಕುತೂಹಲ ನಿಮ್ಮೆಲ್ಲರನ್ನೂ ಕಾಡುತ್ತೆ. ಆದರೆ, ಆ ನಿಮ್ಮ ಕುತೂಹಲ ತಣಿಸುವುದಕ್ಕೆ ನಮ್ಮ ಬಳಿಯೂ ಉತ್ತರವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನಿರ್ದೇಶಕರಾದ ಅಶುತೋಷ್ ಗೋವಾರಿಕರ್, ಶಂಕರಾಚಾರ್ಯರ ಪಾತ್ರ ಮಾಡ್ತಿರುವವರ್ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಿಂದೂ ಧರ್ಮ ಪುನರೋತ್ಥಾನದ ಮೂಲ ಪುರುಷ ಶಂಕರಾಚಾರ್ಯರ ಪಾತ್ರಕ್ಕೆ ದೈವಮಾನವ ಡಿವೈನ್ ಸ್ಟಾರ್ ಗಿಂತ ಬೇರೊಬ್ಬರು ಬೇಕಿಲ್ಲವೆಂದು ಗೋವಾರಿಕರ್ ನಿರ್ಧರಿಸಿದ್ದರಾ? ಅದಕ್ಕಾಗಿಯೇ ಶೆಟ್ರನ್ನ ಮುಂಬೈನ ತಮ್ಮ ಆಫೀಸ್‍ಗೆ ಕರೆಸಿಕೊಂಡಿದ್ದರಾ? ಈ ಎಲ್ಲಾ ಪ್ರಶ್ನೆಗಳು ಸದ್ಯಕ್ಕೆ ಪ್ರಶ್ನೆಗಳಾಗಿಯೇ ಉಳಿದಿವೆ. ಹೀಗಾಗಿ, ಖುದ್ದು ಅವರೇ ಅನೌನ್ಸ್ ಮಾಡುವವರೆಗೂ ನಾವೆಲ್ಲರೂ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ಲೆಬೇಕು. ಆದರೆ, ತೀರಾ ಇತ್ತೀಚೆಗೆ ಲಗಾನ್ ನಿರ್ದೇಶಕರನ್ನ ನಮ್ಮ ಡಿವೈನ್ ಸ್ಟಾರ್ ಭೇಟಿ ಮಾಡಿ ಬಂದಿರುವುದರಿಂದ, ಶಂಕರಾಚಾರ್ಯರ ಪಾತ್ರವನ್ನ ಶೆಟ್ರೆ ನಿಭಾಯಿಸಬಹುದೆಂದು ಊಹಿಸಿಕೊಳ್ಳಬಹುದು. ಒಂದ್ವೇಳೆ ನಿಮ್ಮಗಳ ಈ ಕಲ್ಪನೆ ಸುಳ್ಳಾದರೆ `ಶಂಕರ್’ ಸಿನಿಮಾಗೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯಲಿಕ್ಕಾದ್ರೂ ಬಾಲಿವುಡ್ ಡೈರೆಕ್ಟರ್ ಗೆ ರಿಷಬ್ ನೆರವಾಗಿರುತ್ತಾರೆ. ಯಾಕಂದ್ರೆ, ನೆಲಮೂಲದ ಕಥೆಯನ್ನ ಕಾಂತಾರ ಮೂಲಕ ಇಡೀ ಜಗತ್ತಿಗೆ ಸಾರಿ ಸೈ ಎನಿಸಿಕೊಂಡವರು. ಹೀಗಾಗಿ, ಅದ್ವೈತ ಚಿಂತನೆಯ ಮೂಲಕ ಲೋಕ ಬೆಳಗಿದ ಮಹಾನ್ ಶಕ್ತಿಯ ಕಥೆಯನ್ನ ಬೆಳ್ಳಿತೆರೆಗೆ ತರುವಲ್ಲಿ ಗೋವಾರಿಕರ್ ಜೊತೆ ಡಿವೈನ್ ಸ್ಟಾರ್ ಕೈ ಜೋಡಿಸಿರುತ್ತಾರೆ ಎಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ

ಸದ್ಯ ಶೆಟ್ರು ಕಾಂತಾರ ಪಾರ್ಟ್-2ನಲ್ಲಿ ಬ್ಯುಸಿ ಇದ್ದಾರೆ. ಪ್ರಿಪ್ರೊಡಕ್ಷನ್ ವರ್ಕ್ ನಲ್ಲಿ ಇಷ್ಟು ದಿನ ತೊಡಗಿಸಿಕೊಂಡಿದ್ದ ಶೂಟಿಂಗ್ ಹೊರಡಲು ಪ್ಲ್ಯಾನ್ ರೂಪಿಸಿದ್ದಾರೆ. ನಿನ್ನೆ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮಾವೇಶದಲ್ಲಿ ಮಾತನಾಡಿದ ಶೆಟ್ರು, ಇನ್ನೊಂದು ವರ್ಷ ನನ್ನ ಯಾವುದೇ ಕಾರ್ಯಕ್ರಮಗಳಿಗೆ ಕರಿಬೇಡಿ ಬರೋದಕ್ಕೆ ಆಗುವುದಿಲ್ಲ. ಯಾಕಂದ್ರೆ, ಕಾಂತಾರ ಪ್ರಿಕ್ವೆಲ್ ಶೂಟಿಂಗ್ ಶುರು ಮಾಡ್ತಿದ್ದೇನೆ. ‘ಶೂಟಿಂಗ್ ಮುಗಿದ ಮೇಲೆ ಮತ್ತೆ ಕಾರ್ಯಕ್ರಮಗಳಲ್ಲಿ ಸಿಗುತ್ತೇನೆ ಎಂದಿದ್ದಾರೆ.ಅಲ್ಲಿಗೆ ಶೀಘ್ರದಲ್ಲೇ ಶೆಟ್ರು ಕಣಕ್ಕಿಳಿಯುತ್ತಾರೆ. ಹೈ ಸ್ಪೀಡ್‍ನಲ್ಲಿ ಶೂಟಿಂಗ್ ಮಾಡಿ ಮುಗಿಸ್ತಾರೆ. ಅನಂತರ ಮುಂದೇನು ಎನ್ನುವ ಪ್ರಶ್ನೆಗೆ `ಶಂಕರ್’ ಸಿನಿಮಾ ಕಣ್ಮುಂದೆಯೇ ಇದೆ. ಅಷ್ಟಕ್ಕೂ, ಶೆಟ್ರು ಅಶುತೋಷ್ ಗೋವಾರಿಕರ್ ನಿರ್ದೇಶನದ `ಶಂಕರ್’ಗಾಗಿ ತೆರೆಹಿಂದೆ ಕೆಲಸ ಮಾಡಿದ್ದಾರಾ? ಅಥವಾ ಮುಖಕ್ಕೆ ಬಣ್ಣ ಹಚ್ಚಿಕೊಂಡು ಶಂಕರಾಚಾರ್ಯರ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಗೊತ್ತಿಲ್ಲ. ಒಂದ್ವೇಳೆ `ಶಂಕರ್’ ಸಿನಿಮಾಗೆ ಮೇಕಪ್ ಹಚ್ಚಿದ್ದರೆ ಅಲ್ಲೊಂದು ಅದ್ಭುತವಂತೂ ಸೃಷ್ಟಿಯಾಗುತ್ತೆ. ಚರಿತ್ರೆಯ ಪುಟಗಳಲ್ಲಿ `ಶಂಕರ್’ ಸಿನಿಮಾ ದಾಖಲಾಗುತ್ತೆ ಎನ್ನುತ್ತಿದ್ದಾರೆ ಅವರಿಬ್ಬರ ಫ್ಯಾನ್ಸ್. ಹಂಗಾಗಲೀ ಅನ್ನೋದೇ ನಮ್ಮ ಆಸೆ.





