ಬುಧವಾರ, ಜುಲೈ 22, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಗ್ಯಾಂಗ್‍ಸ್ಟರ್’ ಸಿನಿಮಾ ನಿರ್ಮಿಸಿದ ಗಟ್ಟಿಗಿತ್ತಿ ರೂಪಾ ರಾವ್!

Vishalakshi Pby Vishalakshi P
07/11/2023
in Majja Special
Reading Time: 1 min read
`ಗ್ಯಾಂಗ್‍ಸ್ಟರ್’ ಸಿನಿಮಾ ನಿರ್ಮಿಸಿದ ಗಟ್ಟಿಗಿತ್ತಿ ರೂಪಾ ರಾವ್!

ಈ ಹಿಂದೆ `ಗಂಟುಮೂಟೆ’ ಎಂಬ ಚಿತ್ರದ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ರೂಪಾ ರಾವ್. ಕನ್ನಡದಲ್ಲಿ ನಿರ್ದೇಶಕಿಯರ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ, ಅದನ್ನು ರೂಪಾ ರಾವ್ ಸಮರ್ಥವಾಗಿ ತುಂಬುತ್ತಾರೆಂಬ ಭರವಸೆಯೂ ಮೂಡಿಕೊಂಡಿತ್ತು. ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಮೂಡಿಕೊಂಡಿರುವಾಗಲೇ, ರೂಪಾ ರಾವ್ `ಕೆಂಡ’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಅವತರಿಸಿದ್ದಾರೆ. ಈಗಾಗಲೇ ನಾನಾ ದಿಕ್ಕುಗಳಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಮೂಲಕ ಒಂದು ಅಭೂತಪೂರ್ವವಾದ ದಾಖಲೆಯನ್ನೂ ಕೂಡಾ ತಮ್ಮ ಹೆಸರಿಗೆ ಜಮೆಯಾಗಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಕೆಂಡ ಚಿತ್ರದ ಒಂದಷ್ಟು ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿತ್ತು. ಆ ಪಾತ್ರಗಳು ಮೂಡಿ ಬಂದಿದ್ದ ಪರಿಯನ್ನು ಕಂಡಿದ್ದ ಪ್ರೇಕ್ಷಕರೆಲ್ಲರೊಳಗೂ ಕೆಂಡದ ಬಗೆಗೊಂದು ಕೌತುಕ ನಿಗಿನಿಗಿಸಲಾರಂಭಿಸಿದೆ. ಅಷ್ಟರಮಟ್ಟಿಗೆ ನಿರ್ದೇಶಕ ಸಹದೇವ್ ಕೆಲವಡಿ ಮತ್ತು ತಂಡ ಆರಂಭಿಕ ಹಂತದ ಗೆಲುವು ದಾಖಲಿಸಿದೆ. ಅಷ್ಟಕ್ಕೂ ಈ ಹಿಂದೆ ಗಂಟುಮೂಟೆ ಚಿತ್ರವನ್ನು ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಒಲಟ್ಟುಗೂಡಿ ನಿರ್ಮಾಣ ಮಾಡಿದ್ದರು. ನಿರ್ದೇಶಕರಾಗಬೇಕೆಂಬ ಬಯಕೆ ಹೊಂದಿದ್ದ ಸಹದೇವ್ ಮಾಡಿಕೊಂಡಿದ್ದ ಕಥೆ ಆರಂಭಿಕವಾಗಿಯೇ ರೂಪಾರನ್ನು ಸೆಳೆದಿತ್ತಂತೆ. ಒಂದಷ್ಟು ವರ್ಷಗಳ ಕಾಲ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದರಿಂದಾಗಿ, ಸಹದೇವ್ ಆ ಕಥೆಗೆ ಯಾವ ಸ್ವರೂಪದಲ್ಲಿ ದೃಷ್ಯರೂಪ ಕೊಡಬಹುದೆಂಬ ಸ್ಪಷ್ಟ ಅಂದಾಜೂ ಕೂಡಾ ರೂಪಾ ಅವರಿಗಿತ್ತು. ಆ ಕಾರಣದಿಂದಲೇ ಕೆಂಡ ನಿರ್ಮಾಣ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ.

ಚಿತ್ರರಂಗವೆಂಬುದು ಪುರುಷರ ಪಾರುಪಥ್ಯವೇ ಅಧಿಕವಾಗಿರುವ ಕ್ಷೇತ್ರ. ಅದರಲ್ಲಿ ನಿರ್ದೇಶಕಿಯಾಗಿ ನೆಲೆ ಕಂಡುಕೊಳ್ಳುವುದೇ ಸವಾಲು. ಅಂಥಾದ್ದರಲ್ಲೀಗ ರೂಪಾ ರಾವ್ ನಿರ್ಮಾಪಕಿಯಾಗಿಯೂ ಅವತರಿಸಿದ್ದಾರೆ. ಅದೂ ಕೂಡಾ ಒಂದು ಪಕ್ಕಾ ಗ್ಯಾಂಗ್ ಸ್ಟರ್ ಕಥೆಯ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಈ ಬಗೆಯ ಚಿತ್ರವನ್ನು ನಿರ್ಮಾಣ ಮಾಡಿದ ಮೊದಲ ನಿರ್ಮಾಪಕಿ ಎಂಬ ದಾಖಲೆ ರೂಪಾ ರಾವ್ ಅವರ ಮುಡಿಗೇರಿಕೊಂಡಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೇ ಇಂಥಾದ್ದೊಂದು ಪಲ್ಲಟದ ಮೊದಲ ರೂವಾರಿಯಾಗಿ ರೂಪಾ ರಾವ್ ಗುರುತಿಸಿಕೊಳ್ಳುತ್ತಾರೆ.

ಇಂಥಾ ಹಲವಾರು ವಿಶೇಷತೆಗಳನ್ನು ಹೊಂದಿರುವ ಕೆಂಡ ಚಿತ್ರದ ಕೆಲಸ ಕಾರ್ಯಗಳೀಗ ಭರದಿಂದ ಸಾಗುತ್ತಿವೆ. ಸದ್ಯದಲ್ಲಿಯೇ ಟೀಸರ್ ಲಾಂಚ್ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಈಗಾಗಲೇ ಕೆಂಡ ಹಲವಾರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರೂಪಾ ರಾವ್, ಸಣ್ಣ ಗ್ಯಾಪಿನಲ್ಲಿ `ಆಸ್ಮಿನ್’ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದು ಇಷ್ಟರಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ಕೆಂಡ ಬಿಡುಗಡೆಯಾದ ಬೆನ್ನಲ್ಲಿಯೇ ರೂಪಾ ರಾವ್ ನಿರ್ದೇಶನದ ಬಿಗ್ ಬಜೆಟ್ಟಿನ ಚಿತ್ರ ಚಾಲೂ ಆಗಲಿದೆಯಂತೆ

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅಂದು ಸೆಟ್‍ ಬಾಯ್ ಆಗಿದ್ದ ಅರುಣ್ ಈಗ ಡೈರೆಕ್ಟರ್!

ಅಂದು ಸೆಟ್‍ ಬಾಯ್ ಆಗಿದ್ದ ಅರುಣ್ ಈಗ ಡೈರೆಕ್ಟರ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.