ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರ ಬಿಡುಗಡೆಯ ಹಂತಕ್ಕೆೆ ಬಂದಿದೆ. ಈಗಾಗಲೇ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದು, ‘ಗರಡಿ’ ಸಿನಿಮಾ ಇದೇ ನವೆಂಬರ್ 10 ರಂದು ವರ್ಲ್ಡ್‌ವೈಡ್ ಬಿಡುಗಡೆಯಾಗುತ್ತಿದೆ.

ಇನ್ನು ‘ಗರಡಿ’ ಸಿನಿಮಾ ಈ ಬಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆೆ ಕಾರಣ ‘ರಿಲಯನ್ಸ್ ಎಂಟರ್‌ಟೈನ್ಮೆೆಂಟ್’ ಹೌದು, ಬಿ. ಸಿ. ಪಾಟೀಲ್ ಅವರ ‘ಕೌರವ ಪ್ರೊಡಕ್ಷನ್ಸ್’ನ ನಿರ್ಮಾಣದ ಸಿನಿಮಾಕ್ಕೆ ‘ರಿಲಯನ್ಸ್ ಎಂಟರ್ಟೈನ್ಮೆಂಟ್ಸ್’ ಸಂಸ್ಥೆ ಕೈ ಜೋಡಿಸಿದ್ದು, ‘ಗರಡಿ’ ಸಿನಿಮಾದ ವಿತರಣಾ ಹಕ್ಕನ್ನು ಪಡೆದಿದೆ. ಹೀಗಾಗಿ ‘ಗರಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ‘ಹೊಡಿರಲೆ ಹಲಗಿ…’ ಎಂಬ ಈ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಸ್ಟೆೆಪ್ ಹಾಕಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವರ್ಷದ ಹಿಟ್ ಸಾಂಗ್ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಇತ್ತೀಚೆಗೆ ‘ಗರಡಿ’ ಸಿನಿಮಾದ ಟೈಟಲ್ ಟ್ರ್ಯಾಕ್ ಕೂಡ ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ‘ಗರಡಿ’ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ, ಸೋನಾಲ್ ಮಾಂತೇರೊ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಮಾಜಿ ಸಚಿವ ಬಿ. ಸಿ. ಪಾಟೀಲ್ ‘ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಟ ದರ್ಶನ್ ‘ಗರಡಿ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.





