ಮಾಸ್ ಮಹರಾಜ ರವಿತೇಜಾರ ಮುಂದಿನ ಸಿನಿಮಾಗೆ ನ್ಯಾಷನಲ್ ಕ್ರಷ್ ರಶ್ಮಿಕಾ ನಾಯಕಿ ಎನ್ನುವ ಸುದ್ದಿ ಹೊರಬಿದ್ದಿದೆ. ಶ್ರೀಲೀಲಾ ಜಾಗಕ್ಕೆ ಶ್ರೀವಲ್ಲಿನಾ ಕರೆತಂದಿದ್ದಾರೆನ್ನುವ ಸುದ್ದಿ ತೆಲುಗು ಫಿಲ್ಮ್‍ನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಹಾಗಾದ್ರೆ, ಈ ಸುದ್ದಿ ನಿಜಾನಾ? ಯಾವ್ ಸಿನಿಮಾ? ಏನ್ ಕಥೆ? ಇದೆಲ್ಲದರ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ

ರಶ್ಮಿಕಾ ನೋಡ ನೋಡುತ್ತಲೇ ಉತ್ತುಂಗಕ್ಕೇರಿದ ಕನ್ನಡತಿ. ಸ್ಟಾರ್ ನಾಯಕಿಯರಿಗೆ ಟಕ್ಕರ್ ಕೊಟ್ಟು ನಂ1 ನಾಯಕಿಯಾಗಿ ಬೆಳೆದು ನಿಂತ ಛಲಗಾತಿ. ಸೌತ್-ನಾರ್ತ್ ಸೂಪರ್ ಸ್ಟಾರ್ ಗಳಿಗೆ ಜೊತೆಯಾಗಿ ಬೇಡಿಕೆ ಹೆಚ್ಚಿಸಿಕೊಂಡ ಈ ಕೂರ್ಗ್ ಬ್ಯೂಟಿ, ಕಳೆದ ಏಳು ವರ್ಷಗಳಿಂದ ಬೆಳ್ಳಿತೆರೆಯನ್ನ ರೂಲ್ ಮಾಡುತ್ತಿದ್ದಾರೆ. ಸ್ಟಾರ್‍ಡಂ ಕ್ರಿಯೇಟ್ ಮಾಡ್ಕೊಂಡು ತಮ್ಮದೇ ಕ್ರೇಜ್ ಸೃಷ್ಟಿಸಿಕೊಂಡು ಇವತ್ತು ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಬಾಲಿವುಡ್ ಸಿನಿಮಾಗಳು ಅಷ್ಟೇನು ಕೈ ಹಿಡಿಯಲಿಲ್ಲ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಂತಹ ನೇಮು-ಫೇಮು ಬಿಟೌನ್ ಅಂಗಳದಲ್ಲಿ ದಕ್ಕಲಿಲ್ಲ. ಹೀಗಾಗಿ, ರಶ್ಮಿಕಾ ಡಿಮ್ಯಾಂಡ್ ಕಡಿಮೆಯಾಯ್ತು? ಕಿರಿಕ್ ಬ್ಯೂಟಿ ಕ್ರೇಜ್ ಇಳಿದೋಯ್ತು? ಶ್ರೀವಲ್ಲಿ ಮಾರ್ಕೆಟ್ ಬಿದ್ದೋಯ್ತು ? ಹೀಗಂತ ಮಾತನಾಡಲಿಕ್ಕೆ ಶುರು ಮಾಡಿದ್ದರು. ಆದ್ರೀಗ, ಪೊಗರು ಬ್ಯೂಟಿಯ ಮುಂದಿನ ಸಿನಿಮಾ ಬಗ್ಗೆ ಪೊಗದಸ್ತಾದ ಖಬರ್ ಹೊರಬಿದ್ದಿದೆ. ಮಾಸ್ ಮಹರಾಜ ರವಿತೇಜಾಗೆ ಜೊತೆಯಾಗುತ್ತಿರುವ ಸುದ್ದಿ ಸಂಚಲನ ಮೂಡಿಸಿದೆ.
ಹೌದು, ಪವರ್‍ಹೌಸ್ ಪರ್ಫಾಮರ್ ರವಿತೇಜಾಗೆ ರಶ್ಮಿಕಾ ಜೋಡಿಯಾಗುತ್ತಿದ್ದಾರಂತೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ ತೆಲುಗು ಫಿಲ್ಮ್ ನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮಾಸ್ ಮಹರಾಜನ ಜೊತೆ ಧಮಾಕ ಸೃಷ್ಟಿಸಿದ್ದ ಬೆಡಗಿ ಶ್ರೀಲೀಲಾರನ್ನ ಕರೆತರುವ ಪ್ರಯತ್ನ ನಡೆದಿತ್ತಾದ್ರೂ ಕಿಸ್ ಬ್ಯೂಟಿ ಕಾಲ್‍ಶೀಟ್ ಸಿಕ್ಕಿಲ್ಲವಂತೆ. ಆಕೆ ಸ್ಟಾರ್ ನಟರುಗಳ ಜೊತೆ ಬ್ಯಾಕ್ ಟು ಬ್ಯಾಕ್ ಬ್ಯುಸಿಯಾಗಿರುವುದರಿಂದ ಶ್ರೀಲೀಲಾ ಜಾಗಕ್ಕೆ ಶ್ರೀವಲ್ಲಿನೇ ಕರೆತಂದಿದ್ದಾರೆನ್ನುವ ಸುದ್ದಿ ಹಲ್‍ಚಲ್ ಎಬ್ಬಿಸಿದೆ. ಇದೇ ಮೊದಲ ಭಾರಿಗೆ ಬೆಳ್ಳಿತೆರೆ ಮೇಲೆ ಒಂದಾಗುತ್ತಿರುವ ಈ ಜೋಡಿಗೆ ನಿರ್ದೇಶಕ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡ್ತಿದೆ.
#RT4GM ❤🔥Lets do it again @megopichand ✌️@MythriOfficial pic.twitter.com/dEmxkvxShi
— Ravi Teja (@RaviTeja_offl) July 9, 2023
ಕಿಕ್ ಹೀರೋ ರವಿತೇಜಾ ಹಾಗೂ ಗೋಪಿಚಂದ್ ಮಲಿನೇನಿ ಅವ್ರದ್ದು ಕ್ರೇಜಿ ಕಾಂಬಿನೇಷನ್ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಡಾನ್ ಸೀನು, ಬಲ್ಪು, ಕ್ರ್ಯಾಕ್ ಹೀಗೆ ಮೂರು ಹ್ಯಾಟ್ರಿಕ್ ಸಿನಿಮಾ ಕೊಟ್ಟಿರೋ ಈ ಸಕ್ಸಸ್‍ಫುಲ್ ಜೋಡಿ ನಾಲ್ಕನೇ ಭಾರಿಗೆ ಒಂದಾಗಿದೆ. ಆ್ಯಕ್ಷನ್ ಪ್ಯಾಕ್ಡ್ ಡ್ರಾಮ ಚಿತ್ರದ ಮೂಲಕ ಈ ಡೆಡ್ಲಿ ಜೋಡಿಯ ಸಮಾಗಮವಾಗ್ತಿದ್ದು ಸಿನಿದುನಿಯಾದಲ್ಲಿ ನಿರೀಕ್ಷೆ ಹೆಚ್ಚಿದೆ. ಸದ್ಯಕ್ಕೆ `ಆರ್ ಟಿ 4 ಜಿ ಎಮ್’ ಅಂತ ಟೆಂಟೆಟೀವ್ ಟೈಟಲ್‍ನಲ್ಲಿ ಸಿನಿಮಾ ಲಾಂಚ್ ಮಾಡಲಾಗಿದೆ. ಪ್ರಿಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿಕೊಂಡಿರುವ ನಿರ್ದೇಶಕರು, ದಸರಾ ಹಬ್ಬಕ್ಕೆ ಶೂಟಿಂಗ್ ಶುರು ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದಾರೆ. ಎಸ್ ತಮನ್ ಸಂಗೀತ ಸಿನಿಮಾಗಿದ್ದು, ಬ್ಲಾಕ್‍ಬಸ್ಟರ್ ಹಾಡುಗಳ ನಿರೀಕ್ಷೆಯಲ್ಲಿದ್ದಾರೆ ಮಾಸ್ ಮಹರಾಜನ ಫ್ಯಾನ್ಸ್. ಅಂದ್ಹಾಗೇ, ರವಿತೇಜ `ಟೈಗರ್ ನಾಗೇಶ್ವರ್ ರಾವ್’ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಈಗಲ್ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ. ಇನ್ನೂ ನಟಿ ರಶ್ಮಿಕಾ ಸದ್ಯ ಪುಷ್ಪ ಪಾರ್ಟ್-2 ನಲ್ಲಿ ತೊಡಗಿಸಿಕೊಂಡಿದ್ದಾರೆ. ಅನಿಮಲ್ ಹಾಗೂ ರೈನ್ ಬೋ ಚಿತ್ರಗಳು ಕೂಡ ಬಿಡುಗಡೆಗೆ ತಯ್ಯಾರಾಗಿ ನಿಂತಿವೆ.





