ತಗ್ಗಿ ಬಗ್ಗಿ ನಡೆಯೋ ಹುಡುಗ್ರನ್ನೇ ನೋಡಿ ಬೇಜಾರಾಗಿತ್ತು..ಬಹಳ ವರ್ಷದ ನಂತರ ಖಡತ್ ಕತ್ತೀನ ನೋಡ್ದೆ ಎಂಬ ಮಾಸ್ ಡೈಲಾಗ್ ಮೂಲಕ ಕೈವ ಪ್ರಪಂಚ ತೆರೆದುಕೊಂಡಿದೆ. ಬೆಲ್ ಬಾಟಂ ಡೈರೆಕ್ಟರ್ ಜಯತೀರ್ಥ, ಖಡಕ್ ಡೈಲಾಗ್ ಮೂಲಕ ಪುಟ್ಟ ಟೀಸರಿನಲ್ಲಿ 1983ರ ಬೆಂಗಳೂರಿನ ದರ್ಶನ ಮಾಡಿಸಿದ್ದಾರೆ. ಏಕೆಂದರೆ ಆ ಚಿತ್ರ ಇರುವುದೇ 1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ನಡೆದ ಒಂದು ದುರಂತದ ಸುತ್ತ. ತಿಗಳರ ಪೇಟೆಯಲ್ಲಿ ನಡೆದ ಆ ಘಟನೆ ಯಾವುದು ಎಂಬ ಕುತೂಹಲದ ನಡುವೆಯೇ ಕರಗದ ಕಥೆಯೂ ಬರುತ್ತದೆ.
ಬಜಾರ್ ಪೋರ ಧನ್ವೀರ್ ಹೀರೋ..ಶೋಕ್ದಾರ್ ಗೆ ಮೇಘಾ ಶೆಟ್ಟಿ ನಾಯಕಿ. ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿರುವ ಧನ್ವೀರ್ ಬೆಲ್ ಬಾಟಂ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈವಾ ಸಿನಿಮಾದಲ್ಲಿ ದಿನಕರ್ ತೂಗುದೀಪ್ ಕೂಡಾ ನಟಿಸಿರುವುದು ವಿಶೇಷ. ದಿನಕರ್ ಅವರಂತೂ ಥೇಟು ಅಪ್ಪ ತೂಗುದೀಪ ಶ್ರೀನಿವಾಸ್ ಅವರಂತೆಯೇ ಕಾಣಿಸ್ತಾರೆ. ಜಯರಾಂ ಕಾರ್ತಿಕ್ ಊರೂಫ್ ಜೆಕೆ, ನಂದ ಗೋಪಾಲ್, ಉಗ್ರಂ ಮಂಜು ಮೊದಲಾದವರು ನಟಿಸಿರುವ ಚಿತ್ರಕ್ಕೆ ರವೀಂದ್ರ ನಿರ್ಮಾಪಕರು. ಅಜನೀಶ್ ಲೋಕನಾಥ್ ಸಂಗೀತ ಕೈವಾ ಶ್ರೀಮಂತಿಕೆ ಹೆಚ್ಚಿಸಿದೆ.





