ಹಳ್ಳಿ ಜನರ ಜೀವನ ಶೈಲಿ ಮತ್ತು ಸಂಬಂಧಗಳನ್ನು ಹೇಳುತ್ತಿರುವ ಹೊಸಬರ ಚಿತ್ರ ಗಾಳಿಗುಡ್ಡ. ಈ ಸಿನೆಮಾದ ನಿರ್ದೇಶಕರು ರಘು ಅಥರ್ವ ಇದು ಇವರ ಚೊಚ್ಚಲ ನಿರ್ದೇಶನದ ಸಿನೆಮಾ. ಕಾಡಿನ ತಪ್ಪಲಿನಲ್ಲಿರುವ ಒಂದು ಹಳ್ಳಿಯಲ್ಲಿ ನಡೆಯುವ ಕಥೆಯಾದ ಈ ಗಾಳಿಗುಡ್ಡ ಸಿನೆಮಾದ ಚಿತ್ರೀಕರಣ ಕುದುರೆಮುಖ ಮತ್ತು ಕಳಸ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.
ಅತ್ಯುತ್ತಮ ತಂತ್ರಜ್ಞರಿಂದ ಕೂಡಿರುವ ಈ ಗಾಳಿಗುಡ್ಡ ಚಿತ್ರದಿಂದ ಮಲಯಾಳಂ ಸಿನೆಮಾಗಳಾದ ಹೋಂ ಮತ್ತು ಕಾತನಾರ್ ಗೆ ಸಂಗೀತ ನಿರ್ದೇಶನ ಮಾಡಿರುವ ರಾಹುಲ್ ಸುಬ್ರಹ್ಮಣ್ಯಂ ಮೊಟ್ಟಮೊದಲ ಬಾರಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗಾಳಿಗುಡ್ಡ ತಂಡ ಈಗ ಚಿತ್ರೀಕರಣಕ್ಕೆ ಸಜ್ಜಾಗಿದೆ.





