ಸ್ವೀಟಿ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿ ಅಭಿನಯದ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರ ಇದೇ ಸೆಪ್ಟೆಂಬರ್ 07ರಂದು ಬಹುಭಾಷೆಯಲ್ಲಿ ತೆರೆಕಂಡಿತ್ತು. ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ರೊಮ್ಯಾಂಟಿಕ್ ಡ್ರಾಮಾಗೆ ಪ್ರೇಕ್ಷಕರಿಂದ ಪಾಸಿಟೀವ್ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು, ಸ್ವೀಟಿ ಹಾಗೂ ನವೀನ್ ಜೋಡಿ ಸಿನಿಮಾ ಪ್ರೇಮಿಗಳಿಗೆ ಕಿಕ್ ಕೊಡ್ತಿದೆ. ಬಾಕ್ಸ್ ಆಫೀಸ್‍ನಲ್ಲಿ ಅಂದುಕೊಂಡ ಮಟ್ಟಿಗೆ ಕಲೆಕ್ಷನ್ ಆಗ್ತಿಲ್ಲವಾದ್ರೂ, ನಿಧಾನವಾಗಿ ಚಿತ್ರಪ್ರೇಮಿಗಳು ಥಿಯೇಟರ್ ನತ್ತ ಮುಖಮಾಡುವಂತೆ ಮಾಡ್ತಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಹೆಣ್ಣುಮಕ್ಕಳಿಗಾಗಿ ಸ್ಪೆಷಲ್ ಶೋ ಅರೇಂಜ್ ಮಾಡಿದೆ
Heartfelt thank you to all our incredible audience for the massive response and love you showered upon #MissShettyMrPolishetty ❤️
As a small token of our love, here's a special surprise for all you incredible women! 🙌🏻
Special morning shows for all the lovely ladies will be… pic.twitter.com/ViQ8PkInum
— UV Creations (@UV_Creations) September 12, 2023
ಹೌದು, ಇದೇ ಗುರುವಾರ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸುಮಾರು 18 ಕಡೆ ಒಟ್ಟು 19 ಮಾರ್ನಿಂಗ್ ಶೋಗಳನ್ನ ಏರ್ಪಡಿಸಲಾಗಿದೆ. ಸ್ಪೆಷಲಿ ಲೇಡಿಸ್ ಗೋಸ್ಕರ ಸ್ಕ್ರೀನಿಂಗ್ ಮಾಡಲಾಗ್ತಿದ್ದು, ಎಲ್ಲಾ ಹೆಣ್ಣುಮಕ್ಕಳು ಥಿಯೇಟರ್ ಗೆ ಬಂದು ಸಿನಿಮಾ ನೋಡುವಂತೆ ಸ್ವೀಟಿ ಅನುಷ್ಕಾ ಕೇಳಿಕೊಂಡಿದ್ದಾರೆ. ಇಲ್ಲಿತನಕ ಸಿನಿಮಾ ಪ್ರಚಾರದಿಂದ ಕೊಂಚ ದೂರವೇ ಉಳಿದಿದ್ದ ದೇವಸೇನಾ, ಫಸ್ಟ್ ಟೈಮ್ ಕ್ಯಾಮೆರಾ ಮುಂದೆ ಬಂದು ವಿಡಿಯೋ ಮಾಡಿ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಕೈಹಿಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಮಿಸ್ ಮಾಡದೇ ಎಲ್ಲಾ ಲೇಡೀಸ್ ಬರುವ ಗುರುವಾರದಂದು ಸ್ಪೆಷಲ್ ಶೋನಲ್ಲಿ ಸಿನಿಮಾ ಕಣ್ತುಂಬಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನ ಯುವಿ ಕ್ರಿಯೇಷನ್ಸ್ ಸಂಸ್ಥೆ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದೆ.

ಅಂದ್ಹಾಗೇ, ಸ್ವೀಟಿ ಮೂರು ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ದರ್ಶನ ಕೊಟ್ಟಿದ್ದಾರೆ. ಮುದ್ದಾದ ನೋಟದಿಂದ, ಬೋಲ್ಡ್ ಪಾತ್ರದಿಂದ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಮಾಸ್ಟರ್ ಶೆಫ್ ಆಗಿ ಅನುಷ್ಕಾ ಮಿಂಚಿದರೆ, ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ನವೀನ್ ಕಿಕ್ ಕೊಟ್ಟಿದ್ದಾರೆ. ಆರಂಭದಿಂದಲೂ ಸಿನಿಮಾ ಪ್ರಚಾರದ ಹೊಣೆಯನ್ನ ಹೆಗಲಿಗೆ ಹಾಕ್ಕೊಂಡ ನವೀನ್, ನಾನಾ ಕಡೆಗಳಲ್ಲಿ ಸುತ್ತಾಡಿ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾನ ಪ್ರಮೋಟ್ ಮಾಡಿದರು. ಈಗಲೂ ಅಮೇರಿಕಾಗೆ ಹೋಗಿ ಚಿತ್ರ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ನವೀನ್ ಅವಿರತ ಪರಿಶ್ರಮದ ಫಲ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.
ಇನ್ನೂ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ಬಗ್ಗೆ ಹೇಳೋದಾದರೆ ಮಾಡ್ರನ್ ಡೇಸ್ ರಿಲೇಷನ್‍ಶಿಪ್ ಬಗ್ಗೆ ಈ ಚಿತ್ರ ಮಾತನಾಡುತ್ತೆ.ಜೀವನದ ಬಗ್ಗೆ ಡಿಫರೆಂಟ್ ಆಫ್ ಒಪಿನಿಯನ್ ಇರುವ ಎರಡು ಪಾತ್ರಗಳನ್ನು ನಿರ್ದೇಶಕ ಮಹೇಶ್‍ಬಾಬು ಅದ್ಭುತವಾಗಿ ತೆರೆಮೇಲೆ ತೋರಿಸಿದ್ದಾರೆ. ಹ್ಯೂಮರ್ ಜೊತೆ ಎಮೋಷನ್ ನ ಬ್ಲೆಂಡ್ ಮಾಡಿ ಸಿನಿಮಾ ತಯ್ಯಾರಿಸಿದ್ದಾರೆ. ತುಳಸಿ, ಜಯಸುಧಾ, ಮುರುಳಿ ಶರ್ಮಾ, ಅಭಿನವ್ ಗೌತಮ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿದ್ದಾರೆ. ಯು.ವಿ ಕ್ರಿಯೇಷನ್ ಸಂಸ್ಥೆ ಈ ಸಿನಿಮಾ ನಿರ್ಮಿಸಿದ್ದು, ತೆಲುಗು, ತಮಿಳು, ಕನ್ನಡ, ಮಲೆಯಾಳಂಗೆ ಡಬ್ ಆಗಿ ಪ್ಯಾನ್ ಇಂಡಿಯಾ ತುಂಬೆಲ್ಲಾ ರಿಲೀಸ್ ಆಗಿದೆ. ಬಹುತೇಕ ಕಡೆ ಪಾಸಿಟೀವ್ ರೆಸ್ಪಾನ್ಸ್ ದಕ್ಕಿದೆ.





