ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಮೈ ಹೀರೋ’ ಚಿತ್ರದ ಚಿತ್ರೀಕರಣ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ಹದಿನೈದು ದಿನಗಳ ಕಾಲ ನಡೆದಿದೆ. ಇದರೊಂದಿಗೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಇನ್ನೊಂದು ವಿಶೇಷವೆಂದರೆ, ಕನ್ನಡದ ಈ ಸಿನಿಮಾದಲ್ಲಿ ಹಾಲಿವುಡ್ ನ ಖ್ಯಾತ ತಂತ್ರಜ್ಞರು ಕೂಡ ಕೆಲಸ ಮಾಡಿತ್ತಿದ್ದಾರೆ. ಹಾಲಿವುಡ್‍ನ ಖ್ಯಾತ ನಟರಾದ ಎರಿಕ್ ರಾಬರ್ಟ್ಸ್, ಜಿಲಾಲಿ ರೆಜ್ ಕಲ್ಲಾಹ್ ಮತ್ತಿತರ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಮೈ ಹೀರೋ’ ಸಿನಿಮಾದಲ್ಲಿ ಮಾಸ್ಟರ್ ವೇದಿಕ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಬಡತನದಲ್ಲಿ ಬೆಳೆದ ಬಾಲಕನೊಬ್ಬ ಹೇಗೆ ಜಗತ್ತು ಗುರುತಿಸುವಂತೆ ಸಾಧನೆ ಮಾಡುತ್ತಾನೆ ಎಂಬುದರ ಸುತ್ತ ಸಿನಿಮಾದ ಕಥಾಹಂದರ ಸಾಗುತ್ತದೆ.
‘ಮೈ ಹೀರೋ’ ಚಿತ್ರಕ್ಕೆ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್. ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ. ಸಂಕಲನವಿದೆ.





