ಟಾಲಿವುಡ್ ಹೀರೋ ನಾಗ ಚೈತನ್ಯ ಫ್ಯಾನ್ಸ್ ಗೆ ಸರ್ ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ‘ದೂತ’ ವೆಬ್ ಸಿರೀಸ್ ಪ್ರಚಾರದ ಅಂಗವಾಗಿ ಅಭಿಮಾನಿಗಳ ಮನೆಗೆ ಅತಿಥಿಯಾಗಿ ಭೇಟಿಕೊಟ್ಟಿದ್ದು, ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಆ ವಿಡಿಯೋ ಸಖತ್ ವೈರಲ್ ಆಗಿದೆ..
‘ದೂತ’ ಚೈ ನಟನೆಯ ಮೊದಲ ವೆಬ್ ಸೀರೀಸ್. ವಿಕ್ರಮ್ ಕೆ ಕುಮಾರ್ ನಿರ್ದೇಶನದ ಈ ಸಿರೀಸ್ ಕ್ರೈಮ್ ಥ್ರಿಲ್ಲರ್ ಜಾನರ್ ನಲ್ಲಿ ಮೂಡಿಬಂದಿದ್ದು ಸ್ವತಃ ಚೈತನ್ಯ ಎಕ್ಸೈಟೆಡ್ ಆಗಿದ್ದಾರೆ. ಇದುವರೆಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಚೈತನ್ಯಗೂ, ಈ ಸರಣಿಯಲ್ಲಿ ಕಾಣೋ ಚೈಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನಲಾಗ್ತಿದೆ. ಈ ವೆಬ್ ಸರಣಿಯು ಡಿಸೆಂಬರ್ 1 ರಿಂದ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ Amazon Prime OTT ನಲ್ಲಿ ಸ್ಟ್ರೀಮ್ ಆಗಲಿದೆ. ಸದ್ಯ ಈ ಸಿನಿಮಾ ಪ್ರಚಾರದಲ್ಲಿರುವ ನಾಗ ಚೈತನ್ಯ ಇತ್ತೀಚೆಗಷ್ಟೇ ಅಭಿಮಾನಿಗಳ ಮನೆಗೆ ಅತಿಥಿಯಾಗಿ ಸಡನ್ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.





