ಹೊಸಬರೇ ಸೇರಿ ಮಾಡಿರುವ ‘ನೇತ್ರಂ’ ಸಿನಿಮಾ ಈಗ ಬಿಡುಗಡೆ ಹಂತಕ್ಕೆೆ ಬಂದಿದೆ. ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ‘ನೇತ್ರಂ’ ಚಿತ್ರ ಇದೇ ನವೆಂಬರ್ 17ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಯುವ ನಟ ದಕ್ಷ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಮಕ್ದುಮ್ ಪಟೇಲ್, ಶೇಕ್ ಸಬೀರ್ ಜಂಟಿಯಾಗಿ ನಿರ್ಮಿಸುತ್ತಿರುವ ‘ನೇತ್ರಂ’ ಸಿನಿಮಾವನ್ನು ಬಿಲ್ಲೂರ ಸುರೇಶ್ ನಿರ್ದೇಶಿಸಿದ್ದಾರೆ. ಸಿನಿಮಾದ ಹೆಸರೇ ಹೇಳುವಂತೆ, ‘ನೇತ್ರಂ’ ಕಣ್ಣುಗಳ ಮಹತ್ವ ಸಾರುವ ಅಂಶದ ಜೊತೆಗೆ ಸಸ್ಪೆೆನ್ಸ್-ಥ್ರಿಲ್ಲರ್ ಜಾನರ್ನಲ್ಲಿ ಸಾಗುವ ಸಿನಿಮಾ. ಮಡಿಕೇರಿ, ಬೆಂಗಳೂರು, ಚಿಂತಾಮಣಿ ಸುತ್ತಮುತ್ತ ‘ನೇತ್ರಂ’ ಚಿತ್ರೀಕರಣ ಮಾಡಲಾಗಿದೆ. ‘ನೇತ್ರಂ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿದ್ದು, ಒಟ್ಟು ಮೂರು ಹಾಡುಗಳು ಹಾಗೂ ಭರ್ಜರಿ ಆ್ಯಕ್ಷನ್ ದೃಶ್ಯಗಳಿದ್ದು, ಸೆನ್ಸಾರ್ ನಿಂದ ಚಿತ್ರಕ್ಕೆೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ನಾಯಕ ನಟ ದಕ್ಷ ಅವರಿಗೆ ಧನುಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ.





