ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಸೆಪ್ಟೆಂಬರ್ 28ರಂದು ಪ್ರಶಾಂತ್ ನೀಲ್ ನಿರ್ದೇಶನದ, ಡಾರ್ಲಿಂಗ್ ಪ್ರಭಾಸ್ ಅಭಿನಯದ `ಸಲಾರ್’ ರಿಲೀಸ್ ಆಗ್ಬೇಕಿತ್ತು. ಬಹುನಿರೀಕ್ಷಿತ `ಸಲಾರ್’ ವಲ್ಡ್ ವೈಡ್ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂದುಕೊಂಡ ಸಮಯಕ್ಕೆ ಮುಗಿಯದ ಕಾರಣ ಸಲಾರ್ ಮುಂದೂಡಲಾಗಿದೆ. ದೀಪಾವಳಿ ಹಬ್ಬಕ್ಕೆ `ಸಲಾರ್’ ಸುನಾಮಿ ಗ್ಯಾರಂಟಿ ಎನ್ನುವ ಸುದ್ದಿ ಸುಂಟರಗಾಳಿ ಎಬ್ಬಿಸಿದೆಯಾರೂ ಇನ್ನೂ ಕನ್ಫರ್ಮ್ ಆಗಿಲ್ಲ. ಈ ಮಧ್ಯೆ `ಸಲಾರ್’ ಪಾತ್ರಧಾರಿ ಟಿನ್ನು ಆನಂದ್ ಕೊಟ್ಟಿರುವ ಸ್ಟೇಟ್ಮೆಂಟ್, ಪ್ರಶಾಂತ್ ನೀಲ್ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಕಿರೀಟ ತೊಡಿಸಿ ಸರಪಟಾಕಿ ಹಚ್ಚುವಂತೆ ಮಾಡಿದೆ.
ಏನದು ಸ್ಟೇಟ್ಮೆಂಟ್? ಯಾರದು ಟಿನ್ನು ಆನಂದ್? ಈ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಮೊದಲು ಸಲಾರ್ ಟೀಸರ್ ನ ನಿಮ್ಮ ಕಣ್ಮುಂದೆ ತರಬೇಕು. ಯಸ್, ಟೀಸರ್ ನಲ್ಲಿ `ಹೇ.. ಸಿಂಪಲ್ ಇಂಗ್ಲಿಷ್… ನೋ ಕನ್ಫ್ಯೂಷನ್… ಲಯನ್, ಚೀತಾ, ಟೈಗರ್, ಎಲಿಎಫೆಂಟ್ ವೆರಿ ಡೇಂಜರಸ್.. ಬಟ್ ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್ ದೇರ್ ಈಸ್ ಎ.. ಹೀಗೊಂದು ಡೈಲಾಗ್ ಇದೆ. ಆ ಡೈಲಾಗ್ ಬಿಟ್ಟಿರುವ ಪಾತ್ರಧಾರಿಯೇ ಟಿನ್ನು ಆನಂದ್. ಇವರು ಖಾಸಗಿ ಚಾನಲ್ ಜೊತೆ ಮಾತನಾಡುತ್ತಿರುವಾಗ `ಸಲಾರ್’ ಸಿನಿಮಾ ಪ್ರಸ್ತಾಪ ಆಗಿದೆ. ಆಗ, ಟಿನ್ನು ಆನಂದ್ `ಸಲಾರ್’ ಚಿತ್ರ ಕುರಿತಾಗಿ, ನಿರ್ದೇಶಕ ಪ್ರಶಾಂತ್ ನೀಲ್ ಕುರಿತಾಗಿ ಮಾತನಾಡಿದ್ದಾರೆ.
ನಾನು ಶೂಟಿಂಗ್ ಸೆಟ್ಗೆ ಹೋದಾಗ ಮೊದಲಿಗೆ `ಸಲಾರ್-ಸೀಜ್ ಫೈರ್’ ನಲ್ಲಿ ರಿವೀಲ್ ಆಗಿರುವಂತಹ ಡೈಲಾಗ್ ಚಿತ್ರೀಕರಣ ನಡೀತು. ಡೈಲಾಗ್ ಇಂಗ್ಲೀಷ್ನಲ್ಲಿದ್ದಿದ್ದರಿಂದ ನಾನು ಸ್ವಲ್ಪ ಪಾರ್ಶ್ ಆಗಿಯೇ ಡೈಲಾಗ್ ಹೇಳಿದೆ. ಆಗ ನಾನಿರುವಲ್ಲಿಗೆ ಧಾವಿಸಿ ಬಂದ ನಿರ್ದೇಶಕ ಪ್ರಶಾಂತ್ ನೀಲ್ ಅವರು, ಸರ್ ಆಕ್ಸ್ ಫರ್ಡ್ ಇಂಗ್ಲಿಷ್ ಆ್ಯಕ್ಸೆಂಟ್ನಲ್ಲಿ ಡೈಲಾಗ್ ಹೇಳ್ಬೇಡಿ. ದಯವಿಟ್ಟು ಸಿಂಪಲ್ ಇಂಗ್ಲಿಷ್ನಲ್ಲಿ ಡೈಲಾಗ್ ಬಿಡಿ ಎಂದರು. ಅದಕ್ಕೆ ನಾನು ಮರುಮಾತನಾಡಲಿಲ್ಲ. ಕಾರಣ, ನೀಲ್ ಸಾಹೇಬ್ರು `ಸಲಾರ್’ ಚಿತ್ರದಲ್ಲಿ ಸೃಷ್ಟಿಸಿರೋ ಕ್ಯಾರೆಕ್ಟರ್ ಗೆ ಪರ್ಫೆಕ್ಟ್ ಇಂಗ್ಲೀಷ್ ಗೊತ್ತಿರಲ್ಲ. ಸೋ ಸ್ಟ್ರೀಟ್ ಲ್ಯಾಂಗ್ವೇಜ್ ಬಳಸುವ ಪಾತ್ರ ಅದು. ಹೀಗಿರುವಾಗ ನಾನು ಆಕ್ಸ್ ಫರ್ಡ್ ಇಂಗ್ಲಿಷ್ ಆ್ಯಕ್ಸೆಂಟ್ನಲ್ಲಿ ಮಾತನಾಡಿದರೆ ತಪ್ಪಲ್ಲವಾ? ತಪ್ಪು ಅನ್ನೋದಕ್ಕಿಂತ ಪಾತ್ರ ಏನು ಕೇಳುತ್ತೋ ಅಷ್ಟನ್ನೇ ಕೊಡಬೇಕು. ನಿರ್ದೇಶಕನ ಕಲ್ಪನೆಯ ಪಾತ್ರಕ್ಕೆ ಕಲಾವಿದರಾಗಿ ನಾವು ಜೀವತುಂಬಬೇಕು ಎಂದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಟಿನ್ನು ಆನಂದ್ ಅವರು, `ಸಲಾರ್’ ಸೂತ್ರಧಾರಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ವರ್ಕಿಂಗ್ ಸ್ಟೈಲ್ ಬಗ್ಗೆಯೂ ಮಾತನಾಡಿದ್ದಾರೆ. ಪ್ರಶಾಂತ್ ಎಷ್ಟು ಪರ್ಫೆಕ್ಟ್ ಅಂದರೆ ಅವರ ಕಲ್ಪನೆಯ ಕಥೆ ಸ್ಕ್ರೀನ್ ಮೇಲೆ ಹಾಗೆಯೇ ಬರಬೇಕು. ಒಂದಳತಿ ಆಚೀಚೆ ಆಗುವುದಕ್ಕೂ ನೀಲ್ ಬಿಡುವುದಿಲ್ಲ. ಎದುರಗಡೆ ಇರುವ ಕಲಾವಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಅಥವಾ ಟಿನ್ನು ಆನಂದ್ ಯಾರೇ ಆಗಲಿ ತನ್ನ ಕಥೆಗೆ ಜೀವ ತುಂಬಬೇಕು ಅಷ್ಟೇ. ತಾವು ಕೆತ್ತಿರೋ ಪಾತ್ರಕ್ಕೆ ಕಲಾವಿದರಿಂದ ಉಸಿರು ತುಂಬಿಸುವವರೆಗೂ ನೀಲ್ ನಿದ್ದೆ ಮಾಡುವುದಿಲ್ಲ. ಅಚ್ಚರಿ ಅಂದರೆ, ಸೆಟ್ನಲ್ಲಿ 200 ಜನ ಆರ್ಟಿಸ್ಟ್ ಕೆಲಸ ಮಾಡ್ತಿರ್ಲಿ, ಎಲ್ಲರ ಬಳಿಯೂ ಖುದ್ದಾಗಿ ತಾವೇ ಹೋಗಿ ಕಥೆ ನರೇಟ್ ಮಾಡ್ತಾರೆ. ಈ ಸೀನ್ ಹಿಂಗೆ ಬರಬೇಕು, ಈ ಶಾಟ್ ಹಿಂಗೆ ಇರಬೇಕು. ನೀವು ಈ ಪೊಸಿಷನ್ನಲ್ಲೇ ನಿಲ್ಲಬೇಕು ಅಂತ ಗೈಡ್ ಮಾಡ್ತಾರೆ. ಈ ತರಹ ಡೆಡ್ಲಿ ಡೈರೆಕ್ಟರ್ ಕಾಣಸಿಗೋದು ವಿರಳಾತಿವಿರಳ ಎಂದಿದ್ದಾರೆ ಹಿರಿಯ ನಟ ಟಿನ್ನು ಆನಂದ್.

ಟಿನ್ನು ಆನಂದ್ ಹಿಂದಿ ಚಿತ್ರರಂಗದ ಖ್ಯಾತ ನಟ, ಬರಹಗಾರ, ನಿರ್ದೇಶಕ. 77 ವರ್ಷದ ಟಿನ್ನು ಆನಂದ್ ಬಾಲಿವುಡ್ನ ಹಿರಿಯ ರೈಟರ್ ಆಗಿದ್ದ ಇಂದರ್ ರಾಜ್ ಅವರ ಮಗ. ಸತ್ಯಜಿತ್ ರೇಯಂತಹ ದಿಗ್ಗಜ ನಿರ್ದೇಶಕರ ಬಳಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ ಟಿನ್ನು ಆನಂದ್, 1979ರಲ್ಲಿ ‘ದುನಿಯಾ ಮೇರಿ ಜೆಬ್ಮೇ’ ಎನ್ನುವ ಚಿತ್ರದೊಂದಿಗೆ ನಿರ್ದೇಶಕರಾದ್ರು. ಈ ಚಿತ್ರದಲ್ಲಿ ರಿಷಿ ಕಪೂರ್ & ಶಶಿ ಕಪೂರ್ ನಾಯಕರಾಗಿ ನಟಿಸಿದ್ದರು. ಈವರೆಗೂ ಒಟ್ಟು 8 ಸಿನಿಮಾಗಳನ್ನು ಟಿನ್ನು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಹಿಂದಿ, ತಮಿಳು, ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟನೆಯೂ ಮಾಡಿದ್ದಾರೆ. 1987ರಲ್ಲಿ ತೆರೆಗೆ ಬಂದ ಕನ್ನಡದ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ಕೊಲೆಗಾರನ ಪಾತ್ರವನ್ನು ಟಿನ್ನು ಆನಂದ್ ನಿಭಾಯಿಸಿದ್ದರು. 1995ರಲ್ಲಿ ಕನ್ನಡದ ‘ಎಮರ್ಜೆನ್ಸಿ’ ಚಿತ್ರದಲ್ಲೂ ಟಿನ್ನು ಆನಂದ್ ಅಭಿನಯಿಸಿದ್ದರು. ಅಷ್ಟೇ ಅಲ್ಲ ಶಾರುಖ್ ಖಾನ್ ನಟನೆಯ ಚಮತ್ಕಾರ್, ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿರೀಸ್, ಅಮೀರ್ ಖಾನ್ ನಟನೆಯ ಗಜಿನಿ ಸೇರಿದಂತೆ ಬಹುತೇಕ ಬಾಲಿವುಡ್ನ ಸ್ಟಾರ್ ಕಲಾವಿದರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇನ್ನು ಪ್ರಭಾಸ್ ಅವರ ‘ಸಾಹೋ’ ಚಿತ್ರದಲ್ಲೂ ಟಿನ್ನು ಆನಂದ್ ನಟಿಸಿದ್ದರು. ಇದೀಗ ಪ್ರಭಾಸ್ & ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಲಾರ್ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದು, ಇವ್ರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಗರುಡ ರಾಮ್, ಮಧುಗುರುಸ್ವಾಮಿ, ಪ್ರಮೋದ್ ಸೇರಿದಂತೆ ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ದೀಪಾವಳಿ ಹಬ್ಬಕ್ಕೆ ಪಿಕ್ಚರ್ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಅಂದ್ಹಾಗೇ,ಸಲಾರ್-ಸೀಜ್ ಫೈರ್ ಬಹುಭಾಷೆಯಲ್ಲಿ ತಯ್ಯಾರಾಗಿದೆ. ಕೆಜಿಎಫ್ ಕಾಂತಾರ ನಂತರ ಹೊಂಬಾಳೆ ನಿರ್ಮಾಣದ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗುತ್ತಿದೆ. ಇನ್ಯಾವುದೇ ಅಡೆತಡೆ ಇಲ್ಲದೇ ಹೋದರೆ ದೀಪಾವಳಿಗೆ ಗ್ರ್ಯಾಂಡ್ ಎಂಟ್ರಿಕೊಡಲಿದೆ. ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವಲ್ರ್ಡ್ ಕಬ್ಜ ಮಾಡುವ ಶಕ್ತಿಯಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 200 ರಿಂದ 250 ಕೋಟಿಯಲ್ಲಿ ಕ್ಯಾಪ್ಚರ್ ಆಗಿರೋ ಸಲಾರ್ ಹೇಗಿರಬಹುದು ಜಸ್ಟ್ ವೇಯ್ಟ್ ಅಂಡ್ ವಾಚ್.





